Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋಟ ಸಮುದಾಯ ಆಸ್ಪತ್ರೆ ಕೆಳದರ್ಜೆ ಇಳಿಸುವ ಸರ್ಕಾರದ ತಂತ್ರ. ಕೋಟದಲ್ಲಿ ಜನಾಕ್ರೋಶ
    ಊರ್ಮನೆ ಸಮಾಚಾರ

    ಕೋಟ ಸಮುದಾಯ ಆಸ್ಪತ್ರೆ ಕೆಳದರ್ಜೆ ಇಳಿಸುವ ಸರ್ಕಾರದ ತಂತ್ರ. ಕೋಟದಲ್ಲಿ ಜನಾಕ್ರೋಶ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಹೆರಿಗೆ ತಜ್ಞರನ್ನು ಸೇರಿದಂತೆ ಹಲವು ವಿಭಾಗದ ವೈದ್ಯರನ್ನು ಬೇರೆಡೆಗೆ ಸ್ಥಳಾಂತರದ ರಾಜ್ಯ ಸರಕಾರದ ನಿಲುವಿನ ವಿರುದ್ಧ  ಕೋಟದ ಸಮುದಾಯ ಆರೋಗ್ಯ ಕೇಂದ್ರದ ಎದುರು ಕೋಟದ ಸಮಸ್ತ ನಾಗರಿಕರು ಬೃಹತ್ ಪ್ರತಿಭಟನೆ ಹಮ್ಮಕೊಂಡ ಘಟನೆ ಮಂಗಳವಾರ ನಡೆಯಿತು.

    Click Here

    Call us

    Click Here

    ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಪ್ರತಿಭಟನೆಗೆ ಚಾಲನೆ ನೀಡಿ ರ್ಯಾಲಿ ಮೂಲಕ ಕೋಟ ಸಮಯದಾಯ ಆರೋಗ್ಯ ಕೇಂದ್ರ ತಲುಪಿತು.

    ಈ ವೇಳೆ ಮಾತನಾಡಿ ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮೀಣ ಹಳ್ಳಿ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ದೂರದ ಊರಿನ ರೋಗಿಗಳು ಸಹ ಇಲ್ಲಿ ಬಂದು ಪ್ರಯೋಜನ ಪಡೆಯುತ್ತಿದ್ದಾರೆ,ಕೋಟ ಗ್ರಾಮಪಂಚಾಯತ್ ಈ ಆಸ್ಪತ್ರೆ ಬೇಕಾದ ಸಹಕಾರವನ್ನು ನೀಡುತ್ತಿದ್ದು ರಾಜ್ಯ ಸರಕಾರ ಕೈಗೊಂಡ ಈ ನಿಲುವು ಗ್ರಾಮೀಣ ಹಳ್ಳಿಜನರ ಸೇವೆ ಕತ್ತರಿ ಹಾಕುವ ಕಾರ್ಯ ಎಸೆಗಿದೆ ಇದು ಸರಿಯಲ್ಲ ಸರಕಾರ ಈ ಆದೇಶ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾ ಸಭೆಯ ಸಂಯೋಜಕ ದಿನೇಶ್ ಗಾಣಿಗ ಮಾತನಾಡಿ ರಾಜ್ಯ ಸರಕಾರ ಸಮಯದಾಯ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಗೊಳಿಸುವುದನ್ನು ಬಿಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಲಿಗೆ ಸೇರಿಸುವ ಹುನ್ನಾರದ ವಿರುದ್ಧ ಕಿಡಿಕಾರಿದರು. ಅಲ್ಲದೆ ಶೀಘ್ರದಲ್ಲಿ ಈ ಆದೇಶ ವಾಪಾಸ್ ಪಡೆಯಿರಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದರ ವಿರುದ್ಧ ದೊಡ್ಡ ರೀತಿಯಲ್ಲಿ ಜನ ಸಿಡಿದೇಳಲಿದ್ದಾರೆ ಎಂದು ಎಚ್ಚರಿಸಿದರು.

    ಡಿ.ಎಚ್.ಓ ವಿರುದ್ಧ ಹರಿಹಾಯ್ದ ಗ್ರಾಮಸ್ಥರು
    ಪ್ರತಿಭಟನೆ ಪ್ರಾರಂಭಗೊಂಡು ಮೂರು ತಾಸಿನ ನಂತರ ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು ಹುಬ್ಬಳ್ಳಿಯ ವಿರುದ್ಧ ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರ ಪೂಜಾರಿ ಸೇರಿದಂತೆ ಹಲವು ಪ್ರತಿಭಟನಾಕಾರರು ಹರಿಹಾಯ್ದರು

    Click here

    Click here

    Click here

    Click Here

    Call us

    Call us

    ಡಿ.ಎಚ್.ಓ ಏಕಾಗಿ ಪ್ರತಿಭಟನೆ ಮಾಡುತ್ತಿರಿ ವೈದ್ಯರನ್ನು ಬೇರೆಡೆ ಸ್ಥಳಾಂತರಿಸುವ ಆದೇಶ ನಿಮ್ಮಲಿ‌ದೆಯಾ ಎಂದು ಖಾರವಾಗಿ ಪ್ರತಿಭಟನಾಕಾರರನ್ನು ಪ್ರಶ್ನಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ನಿಮ್ಮಗೆ ಪ್ರತಿಭಟನಾ ಸ್ಥಳಕ್ಕೆ ಬರುವುದಕ್ಕೆ ಸಮಯ ನೀಡಿದ್ದೇವೆ ಆದರೆ ವಿಳಂಬವಾಗಿ ಬಂದಿದ್ದಿರಿ ಇದು ಎಷ್ಟು ಸರಿ ಜನರ ತಾಳ್ಮೆ ಪರೀಕ್ಷಿಸಬೇಡಿ ಹೆರಿಗೆ ವೈದ್ಯರನ್ನು ಇಲ್ಲಿಂದ ಸ್ಥಳಾಂತರಿಸುವ ಸರಕಾರಕ್ಕೆ ನಿಮ್ಮ ವರದಿ ನೀಡಿ ಇಲ್ಲಿಂದ ಯಾವ ವೈದ್ಯರನ್ನು ಸ್ಥಳಾಂತರಿಸದಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

    ಪ್ರತಿಭಟನೆ ಅವಶ್ಯಕತೆ ಇರುವುದಿಲ್ಲ ಸರಕಾರ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಅಧಿಕೃತ ಆದೇಶ ನೀಡಿಲ್ಲ ಇಲ್ಲಿ ಹೆರಿಗೆ ,ಮಕ್ಕಳ ತಜ್ಞ,ಅರವಳಿಕೆ ತಜ್ಞರನ್ನು ಬೇರೆಡೆಗೆ ವರ್ಗಾವಣೆ ನಮ್ಮ ಮುಂದಿಲ್ಲ ಇದ್ದರೂ ಅವರ ಜಾಗಕ್ಕೆ  ಬೇರೆಯವರನ್ನು ಹಾಕಲಾಗುತ್ತದೆ. ಆರೋಗ್ಯ ಇಲಾಖೆ ಜನರ ಪರವಾಗಿ ಕಾರ್ಯನಿರ್ವಹಿಸಲಿದೆ ಇಲ್ಲಿ ಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಲಾಗುವುದು ಎಂದು ಉತ್ತರಿಸಿದರು.

    ಪ್ರತಿಭಟನಾ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ರಾಜು ಬೆಟ್ಟಿನಮನೆ, ಶಾಮಣ್ಣ ತೆಕ್ಕಟ್ಟೆ, ಟಿ. ಮಂಜುನಾಥ್ ಗಿಳಿಯಾರು, ಕೋಟ ಪಂಚಾಯತ್ ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್, ಕೋಟ ಸಿ.ಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ನಾಗರಾಜ್ ಗಾಣಿಗ ಸಾಲಿಗ್ರಾಮ, ಕೆ.ವಿ ರಮೇಶ್ ರಾವ್ ಮಾತನಾಡಿದರು.

    ಪ್ರಮುಖರಾದ ಕೋಟತಟ್ಟು ಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್, ಮಾಜಿ ತಾ.ಪಂ ಸದಸ್ಯೆ ಲಲಿತಾ, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ವನೀತಾ ಎಸ್. ಆಚಾರ್, ತಿಮ್ಮ ಕಾಂಚನ್, ಪ್ರಸಾದ್ ಬಿಲ್ಲವ, ಸುರೇಶ್ ಗಿಳಿಯಾರು, ಅಜಿತ್ ಶೆಟ್ಟಿ ವಡ್ಡರ್ಸೆ, ಸುರೇಶ್ ಸಮತಾ, ಕುಮಾರ್ ಕೋಟ, ರತ್ನಾಕರ್ ಬಾರಿಕೆರೆ ಮತ್ತಿತರರು ಇದ್ದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026

    ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    21/05/2026

    ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ

    21/05/2026
    Leave A Reply Cancel Reply

    19 − 13 =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.