Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ತಾಲೂಕಿನ ಆಜ್ರಿ ಗ್ರಾಮದ ನಿವಾಸಿ ಸುಶೀಲಾ (48) ಅವರು ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗ್ಗೆ8 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ಮನೆಯವರೊಂದಿಗೆ ಇದ್ದ ಅವರು ಮಧ್ಯಾಹ್ನ ಊಟ ಮುಗಿಸಿ ತಾನು ಸಂಘದಲ್ಲಿ ಸಾಲ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ನಂತರ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಘದಲ್ಲಿ ಮಾಡಿರುವ ಸಾಲ ತೀರಿಸಲಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಕೃತ್ಯ ಎಸಗಿದ್ದಾರೆ ಎಂದು ಪುತ್ರ ಪ್ರಶಾಂತ್ ದೂರು ನೀಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ರಸ್ತೆ ದಾಟುತ್ತಿದ್ದ ಗಿಳಿಯಾರು ನಿವಾಸಿ ಗಣಪ ದೇವಾಡಿಗ (68) ಅವರು ಬಸ್ಸು ಢಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಇಲ್ಲಿನ ಪಶು ಆಸ್ಪತ್ರೆ ಎದುರು ಇತ್ತೀಚಿಗೆ ಸಂಭವಿಸಿದೆ. ಅವರು ಸಂಜೆ ಕೆಲಸ ಮುಗಿಸಿ ಮನೆಗೆ ಹೋಗಲೆಂದು ರಸ್ತೆ ದಾಟುತ್ತಿದ್ದ ವೇಳೆ ಕುಂದಾಪುರದಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಬಸ್ಸು ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ‌ ‌ಗಾಯಗೊಂಡಿದ್ದ ‌ ಅವರನ್ನು ಸ್ಥಳೀಯರು ತಕ್ಷಣ ಕೋಟ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದರು. ಮೃತರು ಕೃಷಿಕರಾಗಿದ್ದು, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಗ್ರಾಮದ ಬಪ್ಪೆಹಕ್ಲುವಿನ ಜನಾರ್ದನ ಎಂಬುವವರ ಮನೆಗೆ ಮಾರ್ಚ್‌ 10ರ ರಾತ್ರಿ ಯಾರೂ ಇಲ್ಲದೇ ವೇಳೆ ಬಾಗಿಲು ಮುರಿದು ನುಗ್ಗಿ ಕೊಠಡಿಯ ಕಪಾಟಿನಲ್ಲಿರಿಸಿದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಅಭರಣಗಳನ್ನು ನಗದು ಹಣ ಮತ್ತು ಲ್ಯಾಪ್‌ಟಾಪ್‌ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆ ಕಳವಾಗಿರುವ ಬಗ್ಗೆ  ಜನಾರ್ದನರವರು ಬೈಂದೂರು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಂತೆ ಬೈಂದೂರು ವೃತ್ತ ನಿರೀಕ್ಷಕರಾದ ಸವಿತೃತೇಜ, ಬೈಂದೂರು ಠಾಣೆಯ ಪಿಎಸೈ ತಿಮ್ಮೇಶ್‌  ಬಿ.ಎನ್‌ ಮತ್ತು ನವೀನ ಪಿ. ಬೋರ್ಕರ್  ಹಾಗೂ ಸಿಬ್ಬಂದಿಗಳಾದ ಚಿದಾನಂದ, ಮಾಳಪ್ಪ, ಪರಯ್ಯ ಮಠಪತಿ , ನವೀನ್‌, ರವೀಂದ್ರ,  ಅಶೋಕ ರಾಥೋಡ್‌, ಶಂಕರ  ಮತ್ತು ಚಂದ್ರರವರ ತಂಡ  ಮಾರ್ಚ್‌ 30ರಂದು ಈ ಕೃತ್ಯದಲ್ಲಿ  ಭಾಗಿಯಾಗಿರುವ  ಆರೋಪಿಗಳಾದ ಯತಿರಾಜ್‌, ಉಪ್ಪುಂದ, ಮಹೇಶ್‌ ಯಳಜಿತ್‌ ಹಾಗೂ ಕಾರ್ತಿಕ್‌ ನಾಗೂರು ಎಂಬವರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳು ಕಳವು ಮಾಡಿರುವ ಚಿನ್ನಾಭರಣ, ಲ್ಯಾಪ್‌ಟಾಪ್‌ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿರುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಈ ಪ್ರಯುಕ್ತ ಪಂಚಾಂಗ ಶ್ರವಣ ಕಾರ್ಯ ಜರುಗಿತು. ಸಂಸ್ಥೆಯ ಸಂಸ್ಕೃತ ಅಧ್ಯಾಪಕರಾದ ರಾಮಕೃಷ್ಣ ಉಡುಪರು ಪಂಚಾಗ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ಕಾಲವೇ ಎಲ್ಲವನ್ನು ನಡೆಸಿಕೊಂಡು ಹೋಗುತ್ತದೆ. ’ಲಲಾಟಲಿಖಿತಾ ರೇಖಾ ಪರಿಮಾರ್ಷ್ಟುನ ಶಕ್ಯತೇ’ ಎಂಬಂತೆ ಭಗವಂತನು ತನ್ನಿಷ್ಟದಂತೆ ಜಗತ್ತನ್ನು ನಡೆಸಿಕೊಂಡು ಹೋಗುತ್ತಾನೆ. ಅವನ ಆಟದ ಬೊಂಬೆಗಳು ನಾವು. ಅವನ ಇಚ್ಛೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲಾರದು ಎಂಬೆಲ್ಲ ಮಾತುಗಳು ಕಾಲಪುರುಷನ ಮಹತ್ವವನ್ನು ತಿಳಿಸುತ್ತವೆ. ವೇದಗಳ ಅರ್ಥವನ್ನರಿಯಬೇಕಾದರೆ ವೇದಾಂಗಗಳ ಜ್ಞಾನ ಅಗತ್ಯ. ಅವುಗಳಲ್ಲಿ ಒಂದು ಜ್ಯೋತಿಶ್ಶಾಸ್ತ್ರ. ಆಕಾಶದಲ್ಲಿರುವ ನಕ್ಷತ್ರ ಗ್ರಹಗಳ ಚಲನವಲನಗಳ ಲೆಕ್ಕಾಚಾರದಂತೆ ದಿನದ ಸ್ಪಷ್ಟ ಮಾಹಿತಿಗಳೇ ಪಂಚಾಂಗ. ಭಾರತೀಯ ಪರಂಪರೆಯಂತೆ ವರ್ಷದ ಬದಲಾವಣೆಯನ್ನು ಯುಗಾದಿ ಶಬ್ದದಿಂದ ಕರೆದು ಆಚರಿಸಿಕೊಂಡು ಬಂದಿದ್ದೇವೆ. ಪ್ರಕೃತಿಯೂ ಕೂಡ ಹೊಸತನವನ್ನು ಕಾಣುವ ಸಮಯವಾದ್ದರಿಂದ ಇದು ಮಹತ್ವವನ್ನು ಪಡೆದುಕೊಂಡಿದೆ. ಸಿಂಹಾವಲೋಕನ ಎಷ್ಟು ಮುಖ್ಯವೋ ಅದೇ ರೀತಿ ಮುಂದಿನ ಗುರಿಗಳ, ಮಾರ್ಗಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ ಚಾಂದ್ರಮಾನ ಯುಗಾದಿ ಆಚರಣೆಯನ್ನು ಬಿಜೂರು ಗ್ರಾಮದ ಶ್ರೀ ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು. ಪಂಚಾಂಗ ಶ್ರವಣ ಮಾಡಿ ಯುಗಾದಿಯ ಆಚರಣೆಯ ಕುರಿತು ವಿಶೇಷ ಉಪನ್ಯಾನ ನೀಡಿದ ವೇದಮೂರ್ತಿ ವೆಂಕಟೇಶ ಶಾಸ್ತ್ರೀ ಅರೆಹೊಳೆ ಅವರನ್ನು ಸನ್ಮಾನಿಸಲಾಯಿತು. ವಲಯದ ಮಹಿಳಾ ವೇದಿಕೆಯ ಸದಸ್ಯರು ವಿಷ್ಣುಸಹಶ್ರನಾಮ ಪಠಿಸಿದರು. ವಲಯಾಧ್ಯಕ್ಷ ಯು. ಸಂದೇಶ ಭಟ್, ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ವೇದಮೂರ್ತಿ ಗುರುರಾಜ್ ಭಟ್, ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಭಟ್, ಗೌರವಾಧ್ಯಕ್ಷ ಕೆ. ಅರುಣ್ ಕುಮಾರ್ ಶಾನುಭಾಗ್, ಮಾಜಿ ಅಧ್ಯಕ್ಷರಾದ ದೀಟಿ ಸೀತಾರಾಮ ಮಯ್ಯ, ವಿಶ್ವೇಶ್ವರ ಅಡಿಗ ಬಿಜೂರು, ವೇದಮೂರ್ತಿ ತಿರುಮಲೇಶ ಭಟ್, ಮಹಿಳಾ ವೇದಿಕೆಯ ಕಾರ್ಯದರ್ಶಿ ವಿದ್ಯಾ ಅಡಿಗ, ಕೋಶಾಧ್ಯಕ್ಷ ಯೋಗೀಶ್ ಕಾರಂತ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ 2025-26 ನೇ ಸಾಲಿಗೆ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ನೀರಾವರಿ ಪಂಪುಸೆಟ್ಟುಗಳ ವಿದ್ಯುದ್ದೀಕರಣಕ್ಕೆ (ವಿದ್ಯುತ್ ಮಾರ್ಗಗಳನ್ನು ಮೆಸ್ಕಾಂ ವತಿಯಿಂದ ನಿರ್ಮಿಸಲು) ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳು ಆರ್.ಟಿ.ಸಿ ಹಾಗೂ ಜಾತಿ ಪ್ರಮಾಣ ಪತ್ರದೊಂದಿಗೆ ಹತ್ತಿರದ ಉಪವಿಭಾಗದಲ್ಲಿ ಒಂದು ತಿಂಗಳ ಒಳಗಾಗಿ ಅರ್ಜಿ ನೋಂದಾಯಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಮಯ 1997 ರ ಕಲಂ 25 ರನ್ವಯ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಗೆ ಸೇರಿದ ದೇವಸ್ಥಾನಗಳಾದ ಉಡುಪಿ ತಾಲೂಕಿನ ಆದಿಉಡುಪಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನ, ತೆಂಕನಿಡಿಯೂರು ಗ್ರಾಮದ ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಪುತ್ತೂರು ಗ್ರಾಮದ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಶ್ರೀ ಗುಹೇಶ್ವರ ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಸಲ್ಲಿಸಲು ಮರು ಪ್ರಕಟಣೆ ಹೊರಡಿಸಲಾಗಿದೆ. ಕನಿಷ್ಠ 25 ವರ್ಷ ಮೇಲ್ಪಟ್ಟ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ/ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಮೂನೆ-1(ಬಿ) (22 ನೇ ನಿಯಮ) ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 17 ರ ಒಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಬ್ರಹ್ಮಾವರ ತಾಲೂಕು ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಮಾರಾಟಕ್ಕೆ ಯೋಗ್ಯವಿರುವ ಉತ್ತಮ ಗುಣಮಟ್ಟದ ತೆಂಗು ಸಸಿಗಳು ಲಭ್ಯವಿದ್ದು, ಆಸಕ್ತ ರೈತರುಗಳು ಹಾಗೂ ಸಂಘ ಸಂಸ್ಥೆಯವರು ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರದ ಅಧಿಕಾರಿ ಅಥವಾ ಉಡುಪಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕ ಎಲ್. ಹೇಮಂತ ಕುಮಾರ್ ಅವರನ್ನು ಸಂಪರ್ಕಿಸಿ, ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ಅಧಿಕಾರಿ ಪವಿತ್ರ ರಾಜೇಶ್ ಮೊಬೈಲ್ ಸಂಖ್ಯೆ: 9008284192 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಆತಿಥ್ಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ  24ನೇ ಅಂತರ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದರು.  ಏಕಾದಶಾನನ ಏಕಾಂತ ನಾಟಕ ಹಾಗೂ ಮರ ಮತ್ತು ಮಗು ಕಿರುಪ್ರಹಸನ ಎರಡೂ ಪ್ರಥಮ ಪ್ರಶಸ್ತಿಯನ್ನು ಪಡೆದವು. ಜನಪದ ವಾದ್ಯಮೇಳ ದ್ವಿತೀಯ ಸ್ಥಾನ ಪಡೆದರೆ, ಜನಪದ ನೃತ್ಯ ದಲ್ಲಿ ತೃತೀಯ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ 140ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸಿದ್ದವು. ಶಶಿರಾಜ್ ರಾವ್ ಕಾವೂರು ರಚಿಸಿದ ಏಕಾದಶಾನನವನ್ನು ಜೀವನ್ ರಾಂ. ಸುಳ್ಯ ನಿರ್ದೇಶಿಸಿದ್ದರು. ಮಗು ಮತ್ತು ಮರ ಕಿರು ಪ್ರಹಸನವನ್ನು ರಾಜೇಂದ್ರ ಪ್ರಸಾದ್ ಮಂಡ್ಯ ಹಾಗೂ ಪ್ರಶಾಂತ್ ಕೋಟ ನಿರ್ದೇಶಿಸಿದ್ದರು. ಸಾತ್ವಿಕ್ ನೆಲ್ಲಿತೀರ್ಥ ಮತ್ತು ಮಧುಸೂದನ(ನೀನಾಸಂ) ಕೊಡಗು ರಂಗವಿನ್ಯಾಸ ಮಾಡಿದ್ದರು. ಎರಡೂ ನಾಟಕಗಳಿಗೆ  ಆಳ್ವಾಸ್ ಪಿ.ಯು.ವಿದ್ಯಾರ್ಥಿ, ಸುಳ್ಯ ರಂಗಮನೆಯ ಮನುಜ ನೇಹಿಗ ಸಂಗೀತ ನೀಡಿದ್ದರು. ವಿಜೇತ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳಿಂದ ಬೈಂದೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2025-26 ನೇ ಶೈಕ್ಷಣಿಕ ಸಾಲಿನಲ್ಲಿ 6 ನೇ ತರಗತಿಗೆ ಉಚಿತ ಪ್ರವೇಶಾತಿಗಾಗಿ ಸೇವಾಸಿಂಧು ಪೋರ್ಟಲ್  https://sevasindhuservices.karnataka.gov.in/ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 10 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ: 8277799990, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಮಣಿಪಾಲ ಉಡುಪಿ ದೂ.ಸಂಖ್ಯೆ: 0820-2573596 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ ದೂ.ಸಂಖ್ಯೆ: 0820-2574596 ಹಾಗೂ ಕಾರ್ಕಳ ದೂ.ಸಂಖ್ಯೆ: 08258-231101 ಮತ್ತು ಕುಂದಾಪುರ ದೂ.ಸಂಖ್ಯೆ: 08254-230370 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Read More