Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ಸಮೂಹ ವಿದ್ಯಾಸಂಸ್ಥೆಗಳ ಅಡಿಯಲ್ಲಿ ಬರುವ ವಿದ್ಯಾ ಅಕಾಡೆಮಿ ಶಾಲೆಯಲ್ಲಿ ಪೋಷಕರಿಗಾಗಿ ಓರಿಯಂಟೇಷನ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಪೋಷಕರಿಗೆ ಮಕ್ಕಳ ಬೆಳೆವಣಿಗೆ, ಭಾವನಾತ್ಮಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಸ್ಪಷ್ಟ ಅರಿವನ್ನು ನೀಡುವ ಗುರಿಯನ್ನು ಹೊಂದಿತ್ತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಾನಸಿಕ ಆರೋಗ್ಯ ಸಲಹೆಗಾರರಾಗಿ ಸೇವೆ ನೀಡುತ್ತಿರುವ ಗಿರೀಶ್ ಎಂ. ಎನ್. ಅವರು ಭಾಗವಹಿಸಿದ್ದರು. ಅವರು ಮಕ್ಕಳಲ್ಲಿ ಕಂಡುಬರುವ ಆತ್ಮವಿಶ್ವಾಸದ ಕೊರತೆ, ಒತ್ತಡ, ತಂತ್ರಜ್ಞಾನದ ಇತಿಮಿತಿಯ ಬಳಕೆ ಮುಂತಾದ ಸಮಸ್ಯೆಗಳ ಬಗ್ಗೆ ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದರು. ಪೋಷಕರು ಮಕ್ಕಳ ಭಾವನೆಗಳನ್ನು ಗುರುತಿಸುವುದು, ಸಹಾನುಭೂತಿಯಿಂದ ವರ್ತಿಸುವುದು ಮತ್ತು ಉತ್ತಮ ಮಾರ್ಗದರ್ಶನ ನೀಡುವುದು ಹೇಗೆ ಎಂಬುದರ ಕುರಿತು ಉದಾಹರಣೆಗಳ ಸಹಿತ ಸಲಹೆಗಳನ್ನು ನೀಡಿದರು. ಐಎಂಜೆ ಇನ್ಸ್ಟಿಟ್ಯೂಷನ್ಸ್‌ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಅವರು ಮಾತನಾಡಿ, ಇಂದಿನ ಪೋಷಕರಿಗೆ ಇಂತಹ ಸಂವಾದಗಳು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಉತ್ತಮ ಶಿಕ್ಷಣ ಮತ್ತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಂಗಳೂರು ಐಎಂಎ ಯ ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಐಎಂಎ ಯ ನಿಯೋಜಿತ ರಾಜ್ಯ ಉಪಾಧ್ಯಕ್ಷರೂ ಆಗಿರುವ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಸಮಾಜಮುಖಿ ವೈದ್ಯಕೀಯ ಸೇವೆ, ಸಮುದಾಯ ಸೇವೆ ಹಾಗೂ ಸಾಮಾಜಿಕ ಸಂಘಟನೆಗಾಗಿ ಈ ಬಾರಿ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರ ಲಭಿಸಿದೆ. ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರ ಘಟಕದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಡಾ. ಬಿ ಸಿ ರಾಯ್ ಸ್ಮಾರಕ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರವನ್ನು ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ , ಇಂಡಿಯಾ ದ ಸಬಾಂಗಣದಲ್ಲಿ ಜರುಗಿದ ಸಭೆಯಲ್ಲಿ ನೀಡಿ ಗೌರವಿಸಲಾಯಿತು. ಕೇಂದ್ರ ಸೈನ್ಸ್ ಅಂಡ್ ಟೆಕ್ನಾಲಜಿ ಸಚಿವರೂ, ಸ್ವತಃ ಹಿರಿಯ ಐಎಂಎ ನಾಯಕರೂ, ವೈದ್ಯರೂ, ವೈದ್ಯಕೀಯ ಶಿಕ್ಷಕರೂ ಆಗಿರುವ ಡಾ. ಜಿತೇಂದ್ರ ಸಿಂಗ್, ದೆಹಲಿಯ ಶಾಸಕರೂ, ಖುದ್ದು ದೆಹಲಿಯ ತಜ್ಞ ಖ್ಯಾತ ಹಿರಿಯ ಯೂರಾಲಜಿಸ್ಟ್, ಹಿರಿಯ ಐಎಂಎ ನಾಯಕರೂ ಆಗಿರುವ ಡಾ. ಅನಿಲ್ ಗೋಯಲ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗಿಳಿಯಾರು ಕುಶಲ ಹೆಗಡೆ ರೋಟರಿ ಭವನದಲ್ಲಿ 2025 – 26ನೇ ಸಾಲಿನ ಕುಂದಾಪುರದ ರೋಟರಿ ಕ್ಲಬ್ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ನೆರವೇರಿತು. ರೊ. ನಾಗರಾಜ್ ಶೆಟ್ಟಿ ಅವರು ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಪದಪ್ರದಾನ ಅಧಿಕಾರಿಯಾಗಿ ರೋಟರಿ ಜಿಲ್ಲೆ 3182 ಇದರ ವಲಯ 1ರ ಸಹಾಯಕ ಗವರ್ನರ್ ಪಿ.ಎಚ್.ಎಫ್. ರೊ. ಐ ನಾರಾಯಣ್ ಅವರು ನೆರವೇರಿಸಿಕೊಟ್ಟರು. ಮುಖ್ಯ ಅತಿಥಿಗಳಾದಂತಹ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ನಿಜ ಜೀವನದ ಸ್ವಾರಸ್ಯವನ್ನು ರೋಟರಿಯೊಂದಿಗೆ ಕೈ ಜೋಡಿಸಿ ಅತ್ಯುತ್ತಮವಾದಂತಹ ಮಾತುಗಳನ್ನಾಡಿದರು. ನಿರ್ಗಮನ ಅಧ್ಯಕ್ಷರಾದಂತಹ ರೊ.ಲಿಯಾಕತ್ ಅಲಿ ಅವರು ಸ್ವಾಗತ ಭಾಷಣವನ್ನು ಮಾಡಿ ಶುಭ ಹಾರೈಸಿದರು. ನಿರ್ಗಮನ ಕಾರ್ಯದರ್ಶಿಯಾದಂತಹ ಸಚ್ಚಿದಾನಂದ ಅವರು 2024- 25ನೇ ಸಾಲಿನ ವರದಿಯನ್ನು ವಾಚಿಸಿದರು . ವಲಯ ಸೇನಾನಿ ಪಿ. ಎಚ್. ಎಫ್. ರೊ. ಅಬ್ದುಲ್ ಬಶೀರ್ ಅವರು ಶುಭ ಹಾರೈಸಿದರು. ಕ್ಲಬ್‌ನ ಕಾರ್ಯದರ್ಶಿ ರೊ. ಸರ್ವೋದಯ ಪೂಜಾರಿ ಧನ್ಯವಾದ ಗೈದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ ಜಿಲ್ಲೆ ಇವರ ವತಿಯಿಂದ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧೀನ ಕಚೇರಿಗಳ ಮೂಲಕ ಪ್ರಸಕ್ತ ಸಾಲಿನಲ್ಲಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಜಿಲ್ಲೆಯ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ಅರ್ಹ ಬೀದಿ ನಾಟಕ ತಂಡಗಳು ಮತ್ತು ಜಾನಪದ ಸಂಗೀತ ಕಲಾ ತಂಡಗಳು ಆಗಸ್ಟ್ 01 ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯನ್ನು ಅಥವಾ ಕಚೇರಿಯ ಸೂಚನಾ ಫಲಕವನ್ನು ವೀಕ್ಷಿಸಬಹುದಾಗಿದೆ. ಕಲಾ ತಂಡಗಳ ಆಯ್ಕೆ ಮಾಡಲು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, 2025 ರ ಆಗಸ್ಟ್ 12 ರಂದು ಬೆಳಿಗ್ಗೆ 11 ಗಂಟೆಗೆ ಆಯ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: “ಜೀವನದ‌ ಆಧಾರಸ್ತಂಭ ಕಟ್ಟಲು ಮುಖ್ಯವಾಗುವ ಪಿ.ಯು.ಸಿ‌ ಹಂತ ವಿದ್ಯಾರ್ಥಿಗಳೆದರು ಹಲವು ಕ್ಷೇತ್ರಗಳನ್ನು ತೆರೆದಿಡುತ್ತದೆ. ಸಾಂಸ್ಕ್ರತಿಕ ಮತ್ತು ಆಟೋಟಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರೂ, ಭವಿಷ್ಯದಲ್ಲಿ ಯಾವುದೇ ಉದ್ಯೋಗಕ್ಕೆ ಹೋದ ಮೇಲೆ ಶಿಕ್ಷಣದ ಹಿನ್ನೆಲೆ ಇದ್ದರೆ ಮಾತ್ರ ಯಶಸ್ಸು ಪಡೆಯಬಹುದು” ಎಂದು ಕಿರುತೆರೆ ನಟಿ, ರಿಯಾಲಿಟಿ ಶೋ ಮಜಾಭಾರತ, ರಾಜಾ ರಾಣಿ‌ ಖ್ಯಾತಿಯ ಪ್ರಿಯಾಂಕಾ ಕಾಮತ್ ಹೇಳಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನವಸಂಕೇತ್- ಫ್ರೆಷರ್ಸ್ ಫಿಯೆಸ್ಟಾ ವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾಕ್ತನ ವಿದ್ಯಾರ್ಥಿ‌ ಅಮಿತ್ ನಾಯಕ್ ಅವರು ಆರ್. ಎನ್. ಎಸ್. ಕಾಲೇಜು ತನ್ನನ್ನು ರೂಪಿಸಿದ ಬಗೆಯನ್ನು ಸ್ಮರಿಸಿಕೊಂಡರು. ಇನ್ನೋರ್ವ ಮುಖ್ಯ ಅತಿಥಿ ಗಾಯಕಿ ರಂಜನಾ ರಾಘವೇಂದ್ರ ಪ್ರಭು ಅವರು ಎಳೆ ವಯಸ್ಸಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಪ್ರಭಾವಕ್ಕೆ ಒಳಗಾಗಿ ಸಮಾಜಘಾತುಕ ಕಾರ್ಯಗಳತ್ತ ಸೆಳೆಯಲ್ಪಡಬಾರದೆಂದು ಕರೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ‌ ಸೀತಾರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿಯಲ್ಲಿ 500 ಕೋಟಿ ಉಚಿತ ಪ್ರಯಾಣ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೈಂದೂರಿನಲ್ಲಿಯೂ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು. ಬೈಂದೂರು ತಹಶಿಲ್ದಾರರ ಕಛೇರಿ ಎದುರು ಜರುಗಿದ ಕಾರ್ಯಕ್ರಮದಲ್ಲಿ ಬೈಂದೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಬಸ್‌ನ ಚಾಲಕ ಮತ್ತು ನಿರ್ವಾಹಕರನ್ನು ಗೌರವಿಸಲಾಯಿತು. ಬೈಂದೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮೋಹನ್ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಕಾರ್ಯದರ್ಶಿ ಜಗದೀಶ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎಸ್. ರಾಜು ಪೂಜಾರಿ, ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ನಾಗರಾಜ್ ಗಾಣಿಗ ಬಂಕೇಶ್ವರ, ಸದಾಶಿವ ಪಡುವರಿ, ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೂರ್ಯಕಾಂತಿ ಪಡುವರಿ, ಯುವ ಕಾಂಗ್ರೆಸ್ ಅಧ್ಯಕ್ಷ ಭರತ್ ದೇವಾಡಿಗ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಬ್ಬೀರ್ ಬೈಂದೂರು, ರೈತ ಘಟಕ ವೀರಭದ್ರ ಗಾಣಿಗ, ಗ್ಯಾರಂಟಿ ಸಮಿತಿ ಸದಸ್ಯರು, ವಿವಿಧ ಘಟಕಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು  ವಿ ರೀಚ್ ಅಕಾಡೆಮಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಂಪನಿ ಸೆಕ್ರೆಟರಿ ಮತ್ತು ಚಾಟಡ್ ಅಕೌಂಟೆಂಟ್ ಕೋರ್ಸ್ ಗಳ ಕುರಿತಾದ ಪರಿಚಯ  ಕಾರ್ಯಕ್ರಮವು ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಂಪನಿ ಸೆಕ್ರೆಟರಿ ಸಂತೋಷ್ ಪ್ರಭು ಅವರು ಕಂಪನಿ ಸೆಕ್ರೆಟರಿ ಕೋರ್ಸಿನ ಬಗ್ಗೆ ಮಾಹಿತಿಯನ್ನು ನೀಡುತ್ತಾ ಕಂಪನಿ ಸೆಕ್ರೆಟರಿ ಕೋರ್ಸ್ ಮಾಡುವುದರ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಇದು ಖಚಿತ ಉದ್ಯೋಗ ವನ್ನು ನೀಡುವುದು ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿನ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸಿ ಉನ್ನತ ಸ್ಥಾನಮಾನವನ್ನು ಮತ್ತು ಗಳಿಕೆಯನ್ನು ಪಡೆಯುವಂತೆ ಮಾಡುತ್ತದೆ ಎಂದು ಹೇಳಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ ಅಧ್ಯಕ್ಷತೆ ವಹಿಸಿದ್ದರು. ಐಸಿಎಸ್ಐ ನ ಮಂಗಳೂರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ:  ಇಲ್ಲಿನ  ಕಾರ್ಕಳ ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ 6/8ಕರ್ನಾಟಕ ಎನ್.ಸಿ.ಸಿ ಉಪನೌಕಾ ಘಟಕವನ್ನು ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ 6 ಕರ್ನಾಟಕ ಎನ್‌.ಸಿ.ಸಿ ನೌಕಾ ಘಟಕ ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ಅವರು ಮಾತನಾಡಿ, ಎನ್.ಸಿ.ಸಿ. ಯ ಶ್ರೇಷ್ಠತೆ, ಅದರಲ್ಲಿರುವ ಅವಕಾಶಗಳು, ಭಾರತೀಯ ರಕ್ಷಣಾ ಪಡೆಯೊಂದಿಗಿನ ನಂಟು, ಯುವಜನತೆಯ ಪಾತ್ರ ಮತ್ತು ದೇಶದ ಭವಿಷ್ಯ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಅವರು ಎನ್‌.ಸಿ.ಸಿ ಯ ಶಿಸ್ತು, ಸಮಯ ಪಾಲನೆ, ನಾಯಕತ್ವ ಹಾಗೂ ದೇಶಪ್ರೇಮದ ಕುರಿತು ಉಲ್ಲೇಖಿಸಿ, “ಯುವಜನತೆ ರಾಷ್ಟ್ರದ ಭವಿಷ್ಯ, ಅವರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ದೇಶ ಪ್ರಗತಿಯ ಮಾರ್ಗದಲ್ಲಿ ಸಾಗುತ್ತದೆ” ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಎಂ.ಎ ಮುಲ್ತಾನಿ, ಪಿ.ಐ ಸ್ಟಾಫ್ ವರ್ಗದವರು, ಕಾಲೇಜು ಎನ್.ಸಿ.ಸಿ ನೌಕಾ ಘಟಕದ ಸಿ.ಟಿ.ಒ ಆಗಿರುವ ಆಂಗ್ಲ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ‘ಮುಂಗಾರು ಪರ್ವ’ವನ್ನು ಆಚರಿಸಲಾಯಿತು. ‘ಹಸಿರೇ ಉಸಿರು ಎಂಬ ಧೈಯ ವಾಕ್ಯದೊಂದಿಗೆ ಪೂರ್ವ ಪ್ರಾಥಮಿಕ ‌ ವಿದ್ಯಾರ್ಥಿಗಳು ಹಾಡು ನರ್ತನದೊಂದಿಗೆ ಪರಿಸರವನ್ನು ಹಸಿರಾಗಿರಿಸಿದರು. ಕಾಗದದ ದೋಣಿಯಾಟವನ್ನಾಡಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಆಡಿಗರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರೇಷ್ಮಾ ಡಿ. ಸೋಜರವರು ವಿದ್ಯಾರ್ಥಿಗಳಿಗೆ ಮಳೆಗಾಲದ ಪ್ರಾಮುಖ್ಯತೆಯನ್ನು ವಿವರಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪ್ರಮೀಳಾ ಡಿ’ಸೋಜಾ, ಸಹಶಿಕ್ಷಕಿಯರು ಹಾಗೂ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೂಡುಕಟ್ಟಿಗೆ ಸೇರಿದ ವಕ್ವಾಡಿ ಮಾಗಣೆಯ ಸಭೆಯಲ್ಲಿ ದೇಗುಲದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರನ್ನು ಸನ್ಮಾನಿಸಲಾಯಿತು. ವಕ್ವಾಡಿ ಮಾಗಣೆಯ ವ್ಯಾಪ್ತಿಗೆ ಸೇರಿದ ಕುಂಭಾಶಿ, ಗೋಪಾಡಿ, ಹೂವಿನಕೆರೆ, ಅಸೋಡು, ಕೋಟೇಶ್ವರ, ಕಾಳಾವರ, ನೂಜಿ, ಹೆಸ್ಕುತ್ತೂರು, ಇದರ ಸಭೆಯು ಹೂವಿನಕೆರೆ ಭಾವಿಸಮೀರ ಗುರು ಸಾರ್ವಭೌಮ ವಾದಿರಾಜ ಮಠದ ಹತ್ತಿರ ವಾದೀಶ್ ಭಟ್ ಅವರ ಸಭಾಗ್ರಹದಲ್ಲಿ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ಮಾಗಣೆಯ ಕುಟುಂಬದವರಿಗೆ ಮೂಲ ಕ್ಷೇತ್ರದ ಪ್ರಸಾದ ವಿತರಿಸಲಾಯಿತು. ದೇವಸ್ಥಾನದಲ್ಲಿ ನಡೆಯಲಿರುವ ಶಾಶ್ವತ ಪೂಜೆ, ವಿವಿಧ ಪೂಜಾ ಕೈಂಕರ್ಯ, ಜಾತಿ ಗಣತಿ ಮತ್ತು ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿ, ಮಾಹಿತಿ ನೀಡಲಾಯಿತು. ಸಭೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಜಯರಾಮ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್.ಎ. ಗೋಪಾಲ್, ವೀರೇಶ್ವರ ಸಮಿತಿಯ ಅಧ್ಯಕ್ಷ…

Read More