Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಾಧನೆಯ ಹಾದಿಯಲ್ಲಿ ಸಾಧಕರ ಬದುಕು ನಮಗೆ ಮಾದರಿಯಾಗಲಿ: ಅನಂತ ಪದ್ಮನಾಭ ಭಟ್
    ಊರ್ಮನೆ ಸಮಾಚಾರ

    ಸಾಧನೆಯ ಹಾದಿಯಲ್ಲಿ ಸಾಧಕರ ಬದುಕು ನಮಗೆ ಮಾದರಿಯಾಗಲಿ: ಅನಂತ ಪದ್ಮನಾಭ ಭಟ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸದ್ದಿ.
    ಕೋಟ:
    ಪ್ರತಿಯೊಂದು ವಿದ್ಯಾರ್ಥಿಯು ತನ್ನದೇ ಆದ ಗುಣವಿಶೇಷತೆಗಳನ್ನು ಹೊಂದಿರುತ್ತಾನೆ. ಅದನ್ನು ಆತ ಅರಿತು ತನ್ನಲ್ಲಿ ಅವಿರತ ಪ್ರಯತ್ನ, ಪರಿಶ್ರಮ, ಅಧ್ಯಯನ ಶೀಲತೆ ಮೈಗೂಡಿಸಿಕೊಂಡರೆ ಸಾಧಕನಾಗಬಹುದು. ಈ ಸಾಧನೆಗೆ ನಿಮ್ಮ ಸುತ್ತಮುತ್ತಲಿನ ಪರಿಸರದ ವ್ಯಕ್ತಿಗಳು, ಪೋಷಕರು, ಶಿಕ್ಷಕರು ಪ್ರೇರಣೆಯಾಗಬಹುದು. ಶೈಕ್ಷಣಿಕ ಸಂತ ಕೆ.ಎಲ್. ಕಾರಂತರ ಬದುಕು ನಮಗೆ ಆದರ್ಶವಾಗಲಿ ಎಂದು ಪೂರ್ಣಪ್ರಜ್ಞ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ| ಅನಂತ ಪದ್ಮನಾಭ ಭಟ್ ನುಡಿದರು.

    Click Here

    Call us

    Click Here

    ಅವರು ಇತ್ತೀಚಿಗೆ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ಕೃಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ 89 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. 

    ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಪಿ. ಭಾಸ್ಕರ ಹಂದೆ ವಹಿಸಿದ್ದರು. ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ. ರಾಮದೇವ ಐತಾಳ್ ಶುಭಾಶಂಸನೆಗೈದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀಪತಿ ಹೇರ್ಳೆ, ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚೇಂಪಿ ರಮಾನಂದ ಭಟ್ ಹಿತನುಡಿಗೈದರು. ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಚೈತನ್ಯಶ್ರೀ ಉಡುಪ, ನಾಲ್ಕನೆಯ ಸ್ಥಾನವನ್ನು ಪಡೆದ ಸಂಕಲ್ಪ ಕುಮಾರ್ ಹಾಗೂ ಹತ್ತನೆಯ ಸ್ಥಾನವನ್ನು ಪಡೆದ ಅಭಯ ಸೋಮಯಾಜಿ, ಸಮೃದ್ಧಿ ಪೈ, ಸೃಜನಿ ಇವರನ್ನು ಪುರಸ್ಕರಿಸಲಾಯಿತು.

    ಜೊತೆ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ, ಆಡಳಿತ ಮಂಡಳಿಯ ಸದಸ್ಯರಾದ ವಸಂತ ಶೆಟ್ಟಿ, ಪ್ರಾಂಶುಪಾಲರಾದ ಜಗದೀಶ ನಾವಡ, ಮುಖ್ಯ ಶಿಕ್ಷಕರಾದ ವೆಂಕಟೇಶ ಉಡುಪ, ಪ್ರೇಮಾನಂದ ಉಪಸ್ಥಿತರಿದ್ದರು.

    ಶಿಕ್ಷಕಿ ಸುಜಾತ ಕಾರ್ಯಕ್ರಮವನ್ನು ನಿರೂಪಿಸಿ, ಮುಖ್ಯೋಪಾಧ್ಯಾಯಿನಿ ಪ್ರೀತಿರೇಖಾ ಸ್ವಾಗತಿಸಿ, ಶಿಕ್ಷಕಿ ಅನಿತಾ ಡಿಸೋಜ ವಂದಿಸಿದರು.

    Click here

    Click here

    Click here

    Call us

    Call us

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ ಆಚರಣೆ

    10/07/2026

    ಕುಂದಾಪುರ ತಹಶೀಲ್ದಾರರಾಗಿ ವಸಂತ ಕುಮಾರ ಅಧಿಕಾರ ಸ್ವೀಕಾರ

    10/07/2026

    ಶಕ್ತಿ ಕೇಂದ್ರದಲ್ಲಿ ಬಿಜೆಪಿಯ ಗೆಲುವಿನ ಶಕ್ತಿಯಿದೆ: ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ

    10/07/2026
    Leave A Reply Cancel Reply

    5 × three =

    Call us

    Click Here

    Call us

    Call us

    Call us
    Highest Viewed Recently
    • ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ ಆಚರಣೆ
    • ಸಾಧನೆಯ ಹಾದಿಯಲ್ಲಿ ಸಾಧಕರ ಬದುಕು ನಮಗೆ ಮಾದರಿಯಾಗಲಿ: ಅನಂತ ಪದ್ಮನಾಭ ಭಟ್
    • ಕುಂದಾಪುರ ತಹಶೀಲ್ದಾರರಾಗಿ ವಸಂತ ಕುಮಾರ ಅಧಿಕಾರ ಸ್ವೀಕಾರ
    • ಶಕ್ತಿ ಕೇಂದ್ರದಲ್ಲಿ ಬಿಜೆಪಿಯ ಗೆಲುವಿನ ಶಕ್ತಿಯಿದೆ: ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ
    • ಮಾಹೆಯಿಂದ ಸಂಗೀತಾ ಶೆಣೈಗೆ ಡಾಕ್ಟರ್ ಆಫ್‌ ಫಿಲಾಸಫಿ ಪದವಿ ಪ್ರದಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.