ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜುಲೈ10: ಕುಂದಾಪುರ ಮಂಡಲ ಬಿಜೆಪಿ ವತಿಯಿಂದ ಕುಂದಾಪುರ ನಗರ ಸೆಂಟ್ರಲ್ ಶಕ್ತಿ ಕೇಂದ್ರಕ್ಕೆ ನೂತನ ಪದಾಧಿಕಾರಿಗಳನ್ನು ಗುರುವಾರ ಕುಂದಾಪುರ ನಗರದ ವಿಶ್ವಕರ್ಮ ಕನ್ವೆನ್ಷನ್ ಹಾಲ್‌ನಲ್ಲಿ ಆಯ್ಕೆ ಮಾಡಲಾಯಿತು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, ನೂತನ ತಂಡವು ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಪಕ್ಷದ ಕಾರ್ಯವೈಖರಿಯ ಬಗ್ಗೆ ಮನೆ ಮನೆಗೆ ತಲುಪಿಸಬೇಕು ಎಂದು ತಿಳಿಸಿದರು. ಚುನಾವಣಾ ಗೆಲುವಿನ ಮೂಲ ಬೂತ್ ಮಟ್ಟದಲ್ಲಿದೆ ಶಕ್ತಿಕೇಂದ್ರವೇ ನಮ್ಮ ಯುದ್ಧ ತಂತ್ರದ ಕೇಂದ್ರಬಿಂದು ಎಂದರು.

ಸಭೆಯ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿ ಮುಂಬರುವ ಸ್ಥಳೀಯ ಚುನಾವಣೆಯನ್ನು ಗಮನದಲ್ಲಿಟ್ಟು ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದೇ ನಮ್ಮ ಆದ್ಯತೆಯಾಗಿದೆ ಎಂದರು.
ಇದೆ ವೇಳೆ ಬೂತ್ ಸಂಖ್ಯೆ 10, 11 ಮತ್ತು13ನೇ ಬೂತ್‌ಗಳಿಗೆ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಉದಯ ಹೊನ್ನನಕೇರಿ ಹಾಗೂ ಕಾರ್ಯದರ್ಶಿಯಾಗಿ ನವೀನ್ ಪೂಜಾರಿ ಇವರನ್ನು ಆಯ್ಕೆ ಮಾಡುವುದರ ಜೊತೆಗೆ 3 ಬೂತ್‌ಗಳ ಅಧ್ಯಕ್ಷ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಯಿತು
ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳ ಜೊತೆಗೆ ಪಕ್ಷ ಸಂಘಟನೆಯ ವಿಚಾರದ ಬಗ್ಗೆ ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷರಾದ ರಾಜೇಶ್ ಕಾವೇರಿ ಅವರು ಸಂಘತಾತ್ಮಕ ವಿಚಾರದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಮೋಹನದಾಸ್ ಶೆಣೈ, ನಿಕಟ ಪೂರ್ವ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಪೂಜಾರಿ ಹಾಗೂ ಪುರಸಭೆಯ ಮಾಜಿ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಅನೇಕ ಕಾರ್ಯಕರ್ತರು ಉಪಸಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸುಧೀರ್ ಕೆ. ಎಸ್. ಸ್ವಾಗತಿಸಿದರು. ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಕಡ್ಗಿ ಅವರು ಧನ್ಯವಾದ ಗೈದರು.
















