ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಕ್ಕಳು ಶಾಲೆಯಲ್ಲಿ ಪಠ್ಯದ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡರೆ ಉತ್ತಮ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಉಡುಪಿ ಜಿಲ್ಲಾ ಮುಖ್ಯ ಆಯುಕ್ತಾಗಿರುವ ಬಿ. ಜಯಕರ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು.ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರದ ಆರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣಕ್ಕಾಗಿ ಸರಕಾರವು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಆರಂಭಿಸಿದೆ. ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಅನಾವರಣಗೊಳಿಸುವ ಪ್ರಯತ್ನ ಆಗಬೇಕು. ಪಠ್ಯೇತರ ಚಟುವಟಿಕೆಗಳು ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗುತ್ತದೆ. ಬೇಸಿಗೆ ಶಿಬಿರಗಳು ಕೂಡ ಮಕ್ಕಳಿಗೆ ಉತ್ತಮ ವೇದಿಕೆಯಾಗಿದ್ದು ಅಲ್ಲಿ ಕಲಿಸಿಕೊಡುವ ಕೌಶಲಗಳು, ಸಂಸ್ಕಾರವನ್ನು ಮಕ್ಕಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಭವಿಷ್ಯದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು. ಅವರು ಶುಕ್ರವಾರ ಕೋಟದ ಕಾರಂತ ಥೀಮ್ ಪಾಕ್೯ನಲ್ಲಿ ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು, ಕೋಟ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಣ್ಮಣಿ ದಿ| ಕೆ.ಸಿ. ಕುಂದರ್ ಸ್ಮರಣಾರ್ಥ ಬೆಳ್ಳಿ ವರ್ಷಾಚರಣೆಯ ಹಿನ್ನಲ್ಲೆಯಲ್ಲಿ ವಿದ್ಯಾರ್ಥಿಗಳ ಬೇಸಿಗೆ ಶಿಬಿರ ವಿಕಸನ 2025 ಪ್ರತಿಭೆಗಳ ದಿಬ್ಬಣ ಶೀರ್ಷಿಕೆಯಡಿ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು. ಇಪ್ಪತೈದು ಸಂವತ್ಸರಗಳನ್ನು ಸಮಾಜಕ್ಕೆ ಶಿಬಿರದ ಮೂಲಕ ಒಂದಿಷ್ಟು ಪ್ರತಿಭೆಗಳನ್ನು ಸಮಾಜಕ್ಕೆ ಧಾರೆ ಎರೆಯುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಕಾರ್ಯ, ಶಿಬಿರದಲ್ಲಿ ಅರ್ಥಪೂರ್ಣ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರತಿಭೆಗಳು ಹೊರಹೊಮ್ಮಲಿದೆ ಎಂದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳ ನಾಲ್ಕು ತಂಡಗಳನ್ನು ವಿಗಂಡಿಸಿ ಅವರ ತಂಡದ ನಾಯಕರುಗಳಿಗೆ ದಾಖಲೆಗಳನ್ನು ಗಣ್ಯರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬಾರಕೂರು ಗ್ರಾಮಪಂಚಾಯತ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಗರಮಠ ಹಾಗೂ ಹೊಸಾಳ ಗ್ರಾಮದ ವಾಂಟೇಡ್ ಡ್ಯಾಮ್ ಬಳಿ ಮರಳುಗಾರಿಕೆ ನಡೆಸುವ ಸಂಬಂಧಿಸಿದಂತೆ ಸಾಕಷ್ಟು ಸಮಯಗಳಿಂದ ಸ್ಥಳೀಯರು ಆಕ್ಷೇಪಿಸಿ ಪ್ರತಿಭಟಿಸಿ ಶಾಸಕರಿಗೆ ಮನವಿ ಸಲ್ಲಿಸಿದ ಹಿನ್ನಲ್ಲೆಯಲ್ಲಿ ಸ್ಥಳಕ್ಕೆ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗಣಿ ಇಲಾಖೆ ಗುರುತುಪಡಿಸಿರುವ ಸ್ಥಳ ಮರಳುಗಾರಿಕೆಗೆ ಯೋಗ್ಯವಲ್ಲ ಈಗಾಗಲೇ ಕಿಂಡಿ ಅಣೆಕಟ್ಟು ಭಾಗದಲ್ಲಿ ಸಾಕಷ್ಟು ಕೃಷಿ ಕುಸಿದು ಹಾನಿಗೊಂಡಿರುವುದು ಶಾಸಕರಿಗೆ ಮನವರಿಕೆ ಮಾಡಿದ ಸ್ಥಳೀಯ ಗ್ರಾಮಸ್ಥರು ಮರಳುಗಾರಿಕೆಯ ಸ್ಟಾಕ್ ಯಾಡ್೯ಗೆ ಕೃಷಿ ಭೂಮಿ ಬಳಕೆ ಮಾಡಿರುವುದಕ್ಕೆ ಶಾಸಕರ ಸಮ್ಮುಖದಲ್ಲಿ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಇಲ್ಲಿನ ರಸ್ತೆಗಳು ಅಗಲಕಿರಿದಾಗಿದ್ದ ಬಗ್ಗೆ ಶಾಸಕರ ಪರಿಗಣನೆಗೆ ತಂದರು, ಈ ರೀತಿ ಮರಳುಗಾರಿಕೆಯನ್ನು ಗ್ರಾಮಸ್ಥರು ಶಾಸಕರ ಸಮ್ಮುಖ ವಿರೋಧ ವ್ಯಕ್ತಪಡಿಸಿದರು. ಈ ಎಲ್ಲಾ ಮಾಹಿತಿಯನ್ನು ಪಡೆದ ಶಾಸಕರು ಸ್ಥಳದಲ್ಲೆ ದೂರವಾಣಿಯ ಮೂಲಕ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರ ವಿರೋಧದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ವಡ್ಡರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಬಾಲವನದ ಉದ್ಘಾಟನಾ ಸಮಾರಂಭ ಇತ್ತೀಚಿಗೆ ನಡೆಯಿತು. ಬಾಲವನವನ್ನು ಶಾಲೆಗೆ ಕೊಡುಗೆಯಾಗಿ ನೀಡಿದ ಓಎನ್‌ಜಿಸಿ ಕಂಪನಿ ಮುಂಬೈ ಇದರ ನಿವೃತ್ತ ಚೀಪ್ ಜನರಲ್ ಮ್ಯಾನೇಜರ್ ನಾರಾಯಣ ಆಚಾರ್ ಬನ್ನಾಡಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಿ ದೈಹಿಕ ಬೆಳವಣಿಗೆಗೆ ಬಾಲವನ ಸಹಕಾರಿಯಾಗಲಿದೆ ಎಂದು ಶಾಲಾ ಸ್ಥಾಪಕ ಮುಖ್ಯೋಪಾಧ್ಯಾಯ ದಿ. ಶಶಿಧರ ಶೆಟ್ಟಿ ಅವರನ್ನು ಸ್ಮರಿಸಿಕೊಂಡರು. ದಾನಿಗಳಾದ ನಾರಾಯಣ ಆಚಾರ್ ಬನ್ನಾಡಿ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಆಚಾರ್, ದಾನಿಗಳಾದ ಸೀತಾರಾಮ್ ಆಚಾರ್ ಬನ್ನಾಡಿ, ಬಾಲಕೃಷ್ಣ ಶೆಟ್ಟಿ ವಡ್ದರ್ಸೆ, ಚಂದ್ರಶೇಖರ್ ಶೆಟ್ಟಿ ಯಾಳಹಕ್ಲು, ಶುಭೋದಯ ಶೆಟ್ಟಿ ವಡ್ಡರ್ಸೆ, ಹೇಮಲತಾ ಶೆಟ್ಟಿ ವಡ್ದರ್ಸೆ, ಉದಯ್ ಕುಮಾರ್ ಶೆಟ್ಟಿ ಕೊತ್ತಾಡಿ, ವಿಜಯ್ ಕುಮಾರ್ ಶೆಟ್ಟಿ ಕೊತ್ತಾಡಿ, ಪುಷ್ಪಲತಾ ನಾಯಿರಿ, ಇನ್ನರ್ ವೀಲ್ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷೆ ಅಮಿತಾ ಶೆಟ್ಟಿ ವಡ್ಡರ್ಸೆ, ಹಳೆ ವಿದ್ಯಾರ್ಥಿ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯುವಶಕ್ತಿ ಯುವಕ ಮಂಡಲ ಕಟ್ಕೆರೆ ಇವರ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ 5 ದಿನಗಳ ಕಾಲ ನಡೆಯಲಿರುವ ಅರಿವು 2025 ಒಂದಿಷ್ಟು ಜ್ಞಾನದ ಹರಿವು ಮಕ್ಕಳ ಉಚಿತ ಬೇಸಿಗೆ ಶಿಬಿರದ ಉದ್ಘಾಟನೆ ಜರುಗಿತು. ಉದ್ಘಾಟನೆಯನ್ನು ರಾಜಶೇಖರ್ ಹೊಳ್ಳ ನಾಗಪಾತ್ರಿಗಳು ಕಟ್ಕೆರೆ ಅವರು ನೆರವೆರಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಕಟ್ಕೆರೆ ಅವರು ವಹಿಸಿದ್ದರು. ಉದ್ಯಮಿಗಳಾದ ಸುಬೋದ್ ಹೆಗ್ಡೆ ಕಟ್ಕೆರೆ ಹಾಗೂ ಗೋಪಾಲ ಮಡಿವಾಳ ಪಾತ್ರಿಗಳು ಶ್ರೀ ಕಾಳಿಕಾಂಬಾ ದೇವಸ್ಥಾನ ಕಟ್ಕೆರೆ ಅವರುಗಳು ಶುಭ ಕೋರಿದರು. ಸಂಪನ್ಮೂಲ ವ್ಯಕ್ತಿಗಳಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು. ಗೌರವಧ್ಯಕ್ಷರಾದ ಗಣೇಶ್ ಶೆಟ್ಟಿ ಕಟ್ಕೆರೆ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕರಾದ ವಿಖ್ಯಾತ್ ಕಂಡ್ಲೊರ್ ಕಾರ್ಯಕ್ರಮ ಸಿರೂಪಿಸಿದರು. 5 ದಿನಗಳ ಈ ಶಿಬಿರದಲ್ಲಿ ಸ್ಥಳೀಯ 98 ವಿದ್ಯಾರ್ಥಿಗಳು ಭಾಗ ವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯ ಸರಕಾರದ ಪಂಚಗ್ಯಾರಂಟಿ ಯೋಜನೆಯಡಿ ಮಾರ್ಚ್ ತಿಂಗಳಿನಲ್ಲಿ ತಾಲೂಕಿನ ಪೂರ್ಣ ಅನುದಾನ ಬಿಡುಗಡೆಗೊಂಡಿದ್ದು, ಗೃಹಲಕ್ಷ್ಮೀ ಯೋಜನೆಗೆ 15.61 ಕೋಟಿ, ಗೃಹಜ್ಯೋತಿ ಯೋಜನೆಗೆ 4.08 ಕೋಟಿ, ಅನ್ನಭಾಗ್ಯ ಯೋಜನೆಗೆ 4.19 ಕೋಟಿ, ಶಕ್ತಿ ಯೋಜನೆಗೆ 2.51 ಕೋಟಿ ಬಿಡುಗಡೆಯಾಗಿದೆ. ಯುವ ನಿಧಿ ಯೋಜನೆಗೆ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ನೊಂದಾಯಿಸಿಕೊಳ್ಳಲಾಗುತ್ತಿದೆ ಎಂದು ಕುಂದಾಪುರ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು. ಅವರು ಬುಧವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕುಂದಾಪುರ ತಾಲೂಕಿಗೆ ಈತನಕ ಗ್ಯಾರೆಂಟಿ ಯೋಜನೆಯಡಿ 334 ಕೋಟಿ ಹಣ ಬಿಡುಗಡೆಯಾಗಿದೆ ಎಂದರು. ಕುಂಭಾಶಿಯ ಕೊರಗ ಕುಟುಂಬಗಳ ವಿದ್ಯುತ್ ಸಮಸ್ಯೆ, ನೂತನ ವಿದ್ಯುತ್ ಸಂಪರ್ಕಕ್ಕಾಗಿ ನಿರಾಪೇಕ್ಷಣ ಪತ್ರ ಪಡೆಯುವ ಬಗ್ಗೆ, ಓಡಾಟದಲ್ಲಿದ್ದ ಕೆಎಸ್ಆರ್ಟಿಸಿ ಬಸ್ಸುಗಳನ್ನು ಕೆಲವು ಭಾಗಗಳಲ್ಲಿ ನಿಲ್ಲಿಸಲಾಗಿರುವ ಬಗ್ಗೆ, ಪದವಿ ಪೂರ್ಣಗೊಳಿಸುವ ವಿದ್ಯಾರ್ಥಿಗಳನ್ನು ಯುವನಿಧಿ ಯೋಜನೆಯಡಿ ನೊಂದಾಯಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬೈಂದೂರು ಕಾಲ್ತೋಡಿನ ಬೊಳ್ಳಂಬಳ್ಳಿ ಮೂಲದ, ತೆಲಂಗಾಣದಲ್ಲಿ ವಾಸವಾಗಿರುವ ಇಂದ್ರಾಚಿತ 739ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಎಳವೆಯಿಂದಲೇ ಐಎಎಸ್ ಆಗುವ ಕನಸು ಹೊತ್ತಿದ್ದ ಇಂದ್ರಾಚಿತ ಅವರ ಕನಸಿಗೆ ನೀರೆರೆದು ಪೋಷಿಸಿದ ಪೋಷಕರು ಮಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಕೊಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಇರುವ ಕೋಚಿಂಗ್ ಕೊಡಿಸಿದ್ದಾರೆ. ದಿಲ್ಲಿಯಲ್ಲಿ ಕೋಚಿಂಗ್ ಹಾಗೂ ನೀತಿ ಆಯೋಗದೊಂದಿಗೆ ಇಂಟನ್ ೯ಶಿಪ್ ಮಾಡಿದ್ದಾರೆ. ಆರನೇ ಪಯತ್ನದಲ್ಲಿ ಯಶಸ್ಸು:ಆರಂಭದ ಮೂರು ಪ್ರಯತ್ನದಲ್ಲಿ ಪ್ರಾರಂಭಿಕ ಹಂತವನ್ನು (ಪ್ರಿಲಿಮ್ಸ್) ದಾಟಲು ವಿಫಲರಾದರೂ, ಛಲ ಬಿಡದೇ ನಾಲ್ಕನೇ ಬಾರಿ ಪರೀಕ್ಷೆ ಬರೆದು ಪ್ರಾರಂಭಿಕ ಹಂತವನ್ನು ದಾಟಿದ್ದು, ಮೈನ್ಸ್ ತೇರ್ಗಡೆಗೊಂಡಿರಲಿಲ್ಲ. ಐದನೇ ಬಾರಿ ಪ್ರಿಲಿಮ್ಸ್, ಮೈನ್ಸ್ ಉರ್ಕಿಣ್ರರಾಗಿ, ಸಂದರ್ಶನನೀಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಆರನೇ ಬಾರಿಗೆ ಎಲ್ಲಾ ಮಜಲುಗಳನ್ನು ದಾಟಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ. ಇಂದ್ರಾಚಿತ ಅವರು ರಾಘವೇಂದ್ರ ರಾವ್ ಹಾಗೂ ಮಮತಾ ಆರ್. ಶೆಟ್ಟಿ ಅವರ ಪುತ್ರಿಯಾಗಿದ್ದು ವಿದ್ಯಾಭಾಸವನ್ನು ತೆಲಂಗಾಣದಲ್ಲಿ ಪೂರ್ಣಗೊಳಿಸಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ದೃಶ್ಯಕಲೆಯಲ್ಲಿ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ-ನಾಲ್ಕು ವರ್ಷದ ಎಂಟು ಸೆಮಿಸ್ಟರ್ ಎನ್.ಇ.ಪಿ. ಪದ್ದತಿ) ಪ್ರಥಮ ಬಿ.ವಿ.ಎ. ಪದವಿ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಪದವಿಯಲ್ಲಿ 3 ನೇ ಸೆಮಿಸ್ಟರ್‌ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ (ಅಚ್ಚುಕಲೆ), ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ರಾಜ್ಯ ಸರ್ಕಾರದ ವೆಬ್‌ಸೈಟ್ htts://uucms.karnataka.gov.in ಅಥವಾ https://www.cavamysore.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶಾತಿಗಾಗಿ ಅರ್ಹತಾ ಪರೀಕ್ಷೆಯ ದಿನಾಂಕ ಮತ್ತು ಇತರೆ ಮಾಹಿತಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 0821-2438931 ಅನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟದ ಜನತಾ ಸಂಸ್ಥೆಯ ಅವರಣದಲ್ಲಿ ಸಂಸ್ಥೆಯ ಸಿಬ್ಬಂದಿಗಳಿಗಾಗಿ ಉದ್ಯೋಗಿ ಸುರಕ್ಷತಾ ಉಪಕರಣಗಳ ವಿತರಣಾ ಸಂಸ್ಥೆಯಿಂದ ಸುರಕ್ಷತಾ ಪರಿಕರಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರವನ್ನು ಇತ್ತೀಚಿಗೆ ಆಯೋಜಿಸಿತು. ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ. ಕುಂದರ್ ಉದ್ಘಾಟಿಸಿ ಮಾತನಾಡಿ, ಕಾರ್ಖಾನೆಗಳ ಸುರಕ್ಷಿತ ವಾತಾವರಣವೆ ಕಾರ್ಮಿಕನಿಗೆ ಶ್ರೀರಕ್ಷೆ ಹಾಗಾಗಿ ಎಲ್ಲರು ಒಂದಾಗಿ ಸುರಕ್ಷಿತ ವಾತಾವರಣವನ್ನು ಕಾರ್ಖಾನೆಯ ಒಳಗೆ ನಿರ್ಮಿಸಲು ಪಣ ತೋಡೋಣ ಎಂದರು. ಕಾರ್ಯಕ್ರಮದಲ್ಲಿ ಕಾರ್ಖಾನೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ಎ.ಜಿ.ಎಮ್ ಶ್ರೀನಿವಾಸ್ ಕುಂದರ್, ವ್ಯವಸ್ಥಾಪಕ ಮಿಥುನ್ ಕುಮಾರ್, ಸುರಕ್ಷಾತಧಿಕಾರಿ ಕಾರ್ತಿಕ ಆಚಾರ್ಯ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ಪ್ರಜ್ಞಾ 2025’ ರಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೊದಲನೇ ದಿನ ಶೈಕ್ಷಣಿಕ ಸ್ಪರ್ಧೆಯಲ್ಲಿ 15 ಬಹುಮಾನ, ಎರಡನೇ ದಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಯೋಜಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದು, ಒಟ್ಟು 24 ಬಹುಮಾನ ಪಡೆಯುವ ಮೂಲಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಎರಡೂ ವಿಭಾಗಗಳಲ್ಲಿ ಸಮಗ್ರ ಪುರಸ್ಕಾರದೊಂದಿಗೆ ಚಾಂಪಿಯನ್ನಾಗಿ ಮೂಡಿಬಂದಿದ್ದಾರೆ. ಇದೇ ಸಂದರ್ಭ ಪ್ರಾಧ್ಯಾಪಕರಿಗೆ ಆಯೋಜಿಸಿದ ಸಂಗೀತ ಸ್ಪರ್ಧೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ದೀಪಿಕಾ ಜಿ. ಪ್ರಥಮ ಸ್ಥಾನ ಪಡೆದಿದ್ದಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಐಕ್ಯೂಎಸಿ ಸಂಯೋಜಕಿ ಹಾಗೂ ಸಾಂಸ್ಕೃತಿಕ ತಂಡದ ಸಂಯೋಜಿಕಿ ದೀಪಿಕಾ ಜಿ.,…
