ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಳೆಯ ಪ್ರೇಯಸಿಯ ಹೆಸರಿನಲ್ಲಿ ಚಾಟ್ ಮಾಡಿ ಯುವಕನೊಬ್ಬನಿಂದ ಸುಮಾರು 1.80 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಇಲ್ಲಿನ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಹೊಸಂಗಡಿ ಗ್ರಾಮದ ನಿವಾಸಿ ರವಿಚಂದ್ರು (29) ಎಂಬುವವರು ಈ ಹಿಂದೆ ಹೊಸನಗರ ತಾಲೂಕಿನ ಅನುಷಾ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಇವರ ಪ್ರೇಮಕ್ಕೆ ಪೋಷಕರ ವಿರೋಧವಿದ್ದ ಕಾರಣ, ಮೂರು ವರ್ಷಗಳ ಹಿಂದೆ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯುವ ಮೂಲಕ ಈ ಪ್ರಕರಣ ಇತ್ಯರ್ಥಗೊಂಡಿತ್ತು. ಆದರೆ, ಕಳೆದ ಅಕ್ಟೋಬರ್ 24, 2025 ರಂದು ಅನುಷಾ ಹಿಂದೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯಿಂದ ರವಿಚಂದ್ರ ಅವರ ವಾಟ್ಸಾಪ್ಗೆ ಹುಟ್ಟುಹಬ್ಬದ ಶುಭಾಶಯ’ದ ಸಂದೇಶ ಬಂದಿದೆ. ಇದನ್ನು ಅನುಷಾಳೇ ಕಳುಹಿಸಿದ್ದಾಳೆಂದು ನಂಬಿದ ರವಿಚಂದ್ರ ಮರು ಸಂದೇಶ ಕಳುಹಿಸಿದ್ದು, ಇಬ್ಬರ ನಡುವೆ ಚಾಟಿಂಗ್ ಆರಂಭವಾಗಿದೆ. ಚಾಟಿಂಗ್ ಮಾಡುತ್ತಿದ್ದ ವ್ಯಕ್ತಿ ದಿವ್ಯಾ ತನಗೆ ಮನೆಯಲ್ಲಿ ತುಂಬಾ ಸಮಸ್ಯೆಯಿದೆ ಎಂದು ನಂಬಿಸಿ ಹಣದ ಅವಶ್ಯಕತೆ ಇದೆ ಎಂದು ಕೇಳಿಕೊಂಡಿದ್ದಾಳೆ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂಪಾರು ಸಂಜಯಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆ, ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು ಇವರ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಯಿತು. ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ವಿವಿಧ ವೈಜ್ಞಾನಿಕ ಪ್ರಯೋಗಗಳ ಮೂಲಕ ಪ್ರದರ್ಶನವನ್ನು ಉದ್ಘಾಟಿಸಿ, ಪ್ರತಿಯೊಂದು ಮಾದರಿಯ ಹಿಂದಿರುವ ವೈಜ್ಞಾನಿಕ ತತ್ವಗಳನ್ನು ಮೆಚ್ಚಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಬಳಿಕ ವೇದಿಕೆಯಲ್ಲಿ ದೀಪ ಪ್ರಜ್ವಲನೆ ನೆರವೇರಿಸಿ, ಮಾತನಾಡಿ, ಶಾಲೆಯ ಶೈಕ್ಷಣಿಕ ಪ್ರಗತಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಮುಂದಿನ ದಿನಗಳಲ್ಲಿ ಅಗತ್ಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಶೈಕ್ಷಣಿಕ ಸಂಚಾಲಕರಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ಶಾಲೆಯ ಧೈಯ ಉದ್ದೇಶಗಳನ್ನು ತಿಳಿಸಿ ಅತಿಥಿ ಗಣ್ಯರನ್ನು, ಪೋಷಕರನ್ನು, ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಶಾಲಾ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಅವರು ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ವಿವರಿಸಿ, ಈ ಕಾರ್ಯಕ್ರಮದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆರ್ಡಿ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದ ಅಭಿವೃದ್ಧಿ ಸಹಾಯಾರ್ಥವಾಗಿ ಕೆರ್ಜಾಡಿ ದೇವಸ್ಥಾನದ ಸಮೀಪ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ದುರ್ಗಾ ಭಜನಾ ಮಂಡಳಿ ಕೊಂಜಾಡಿ, ಯಕ್ಷಗಾನ ಕಲಾವಿದರಾದ ಚಂದ್ರಶೇಖರ ಶೆಟ್ಟಿ ಅರಳಿಸುರಳಿ, ಮಧುಕರ ಹೆಗ್ಡೆ ಮಡಾಮಕ್ಕಿ, ಅಕ್ಷಯ ಆಚಾರ್ಯ ಮಡಾಮಕ್ಕಿ ಮತ್ತು ಸಾಲಿಗ್ರಾಮ ಮೇಳದ ಟೆಂಟ್ ನಿರ್ಮಾಣ ಕಾರ್ಮಿಕರಾದ ಅಮಕುಸ ಯಾನೆ ಅಂಕುಶ ಗೌಡರನ್ನು ಅಭಿನಂದಿಸಲಾಯಿತು. ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಬಹುಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆ, ಶ್ರೀ ಗಣೇಶ ಕ್ಯಾಶೂಸ್ ಸಮೂಹ ಸಂಸ್ಥೆಗಳ ಮಾಲಕರಾದ ಗಣೇಶ ಕಿಣಿ ಬೆಳ್ವೆ, ಬಿ.ಚಂದ್ರಶೇಖರ್ ಶೆಟ್ಟಿ ಮೂಡ್ ಬೈಲ್, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ವೈ. ವಿಜಯ ಕುಮಾರ ಶೆಟ್ಟಿ ಯಳಂತೂರು, ಸೂರ್ಯ ಶೆಟ್ಟಿ ಆರ್ಡಿ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ. ಕುಂದಾಪುರದಲ್ಲಿ ಮಯೂರ ಮೆಡಿಕಲ್ ಶಾಪ್ ನಡೆಸುತ್ತಿದ್ದ ಶುಭಶ್ರೀ ಕಾರಂತ್ (53) ಸಾವನ್ನಪ್ಪಿದವರು. ಕುಂದಾಪುರದಲ್ಲಿ ಶುಭಶ್ರೀ ಅವರ ಜಿಮ್ ಕ್ಲಾಸಿನ ಸ್ನೇಹಿತರು 8-10 ಮಂದಿ ಒಟ್ಟಾಗಿ ಹೊಸಂಗಡಿಯ ಮೆಟ್ಕಲ್ ಗುಡ್ಡಕ್ಕೆ ಟ್ರೆಕ್ಕಿಂಗ್’ಗಾಗಿ ತೆರಳಿದ್ದರು. ಅಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಬಾಗಿಮನೆ ವರಾಹಿ ಹೊಳೆಯಲ್ಲಿ ವಾಯು ವಿಹಾರಕ್ಕೆ ಸ್ನೇಹಿತರೊಂದಿಗೆ ತೆರಳಿದ್ದರು. ಹೊಳೆಯ ಕಲ್ಲಿನ ಮೇಲೆ ಕುಳಿತಿದ್ದಾಗ ಒಮ್ಮೇಲೆ ನೀರು ಏರಿ ಬಂಡೆ ಕಲ್ಲಿನ ಮೇಲೆ ಕುಳಿತಿದ್ದ ಶುಭ ಕಾರಂತ್ ಆಕಸ್ಮಿಕ ಕಾಲು ಜಾರಿ ಹೊಳೆಯ ನೀರಿನಲ್ಲಿ ಬಿದ್ದು ನೀರಿನಲ್ಲಿ ಮುಳುಗಿದ್ದರು. ಕೂಡಲೇ ಜೊತೆಯಲ್ಲಿ ಇದ್ದವರು ಮೇಲಕ್ಕೆ ತಂದು ಹಾಲಾಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದನ್ನು ದೃಢಪಡಿಸಿದರು. ಅಲ್ಲಿಂದ ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದು ಪ್ರಕರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಗ್ರಾಮಾಂತರ ಪಿಎಸ್ಐ ನಾಸೀರ್ ಹುಸೇನ್ (58) ಅವರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಉಡುಪಿ ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಮ್ಮಪೊಲೀಸ್ ನಮ್ಮ ಹೆಮ್ಮೆ – ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್ಐ ನಾಸೀರ್ ಹುಸೇನ್ ಸೇರಿದಂತೆ ನೂರಾರು ಪೊಲೀಸರು ಪಾಲ್ಗೊಂಡಿದ್ದು, ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹೋದರೂ ಪ್ರಯೋಜನ ಆಗಲಿಲ್ಲ. ದಜನಾನುರಾಗಿ ಪೊಲೀಸ್ ಎನಿಸಿಕೊಂಡಿದ್ ನಾಸಿರ್ ಹುಸೇನ್ ಅವರು ಚಿಕ್ಕಮಗಳೂರು ಮೂಲದವರು. ಭಾರತೀಯ ಸೇನೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬಳಿಕ ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳುತ್ತಾರೆ. ಅವರು ಉಡುಪಿ ಜಿಲ್ಲೆಯ ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ, ಕೊಲ್ಲೂರು, ಕಾರ್ಕಳ ಗ್ರಾಮಾಂತರ ರಾಣೆ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅತಿಯಾದ ಭಾವನಾತ್ಮಕತೆ ಅಥವಾ ಅತಿಯಾದ ಪ್ರಾಯೋಗಿಕ ಮನೋಭಾವ ಇವೆರಡೂ ಸಾಧನೆಗೆ ಅಡ್ಡಿಯಾಗಬಹುದು. ಭಾವನೆ ಮತ್ತು ಪ್ರಾಯೋಗಿಕತೆಯನ್ನು ಸಮತೋಲನದಲ್ಲಿ ಅಳವಡಿಸಿಕೊಂಡು, ವಿಭಿನ್ನವಾಗಿ ಹಾಗೂ ಸೃಜನಾತ್ಮಕವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಸಾಧನೆ ಸಾಧ್ಯ ಎಂದು ಮಂಗಳೂರು ಶಾಖೆಯ ಎಮ್ಎಸ್ಎಮ್ಇ ಅಭಿವೃದ್ಧಿ ಘಟಕದ ಸಹಾಯಕ ನಿರ್ದೇಶಕ ಸುಂದರ್ ಎಸ್. ಮಾಳ ನುಡಿದರು. ಅವರು ಆಳ್ವಾಸ್ ಆಯುರ್ವೇದ ಕಾಲೇಜಿನ ಆತ್ಮ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಒಂದು ದಿನದ ವಿಚಾರ ಸಂಕಿರಣವನ್ನು ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಕೇರಳ ರಾಜ್ಯದ ಇಡುಕ್ಕಿಯ ನಾಗಾರ್ಜುನ ಹರ್ಬಲ್ ಕನ್ಸಂಟ್ರೇಟ್ಸ್ ಲಿಮಿಟೆಡ್ ಸಂಸ್ಥೆಯ ಉತ್ಪನ್ನ ವಿಭಾಗದ ಸಹಾಯಕ ವ್ಯವಸ್ಥಾಪಕ ಡಾ. ಅಶ್ವಿನ್ ಎ.ಎಸ್. ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿ ಗುಣಮಟ್ಟದ ಮಹತ್ವವನ್ನು ಒತ್ತಿಹೇಳಿದ ಅವರು, ಔಷಧ ಉತ್ಪನ್ನಗಳಲ್ಲಿ ರೋಗಿಗಳ ಸುರಕ್ಷತೆ, ಉನ್ನತ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ ಅತ್ಯಂತ ಪ್ರಮುಖ ಅಂಶಗಳಾಗಿವೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಆಧುನಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ (IMJISC) ಐಟಿ ಮತ್ತು ಕೋಡಿಂಗ್ ಕ್ಲಬ್ ನ ಅಡಿಯಲ್ಲಿ “ಚಿಂತನೆಗಳನ್ನು ಸಂಶೋಧನಾತ್ಮಕ ಪ್ರಕಟಣೆಗಳಾಗಿ ಪರಿವರ್ತಿಸುವುದು – ಸಂಶೋಧನಾ ಬರವಣಿಗೆಗೆ ಆರಂಭಿಕ ಮಾರ್ಗದರ್ಶಿ” ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಎಂಐಟಿಕೆ ಯ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ನ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಮಂಜುನಾಥ ರಾಮಣ್ಣ ಲಮಾಣಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅವರು ವಿದ್ಯಾರ್ಥಿಗಳಿಗೆ ಸಂಶೋಧನಾ ಬರವಣಿಗೆಯ ಮೂಲಭೂತ ಅಂಶಗಳು, ವಿಷಯಗಳ ಆಯ್ಕೆ, ಪ್ರಬಂಧ ರಚನೆ ಮತ್ತು ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟಣೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಅವರು ವಿದ್ಯಾರ್ಥಿಗಳಿಗೆ ವಿಚಾರಗಳನ್ನು ಸಂಶೋಧನಾತ್ಮಕ ಪ್ರಕಟಣೆಗಳಾಗಿ ಪರಿವರ್ತಿಸಲು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ವಹಿಸಿದ್ದರು. ಬಿಸಿಎ ವಿಭಾಗದ ಮುಖ್ಯಸ್ಥರಾದ ಸ್ವರ್ಣ ರಾಣಿ ಮತ್ತು ಉದ್ಯೋಗ ಮತ್ತು ತರಬೇತಿ ಅಧಿಕಾರಿ ನಾಫಿಯಾ ಅಕ್ತರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಸಿಂಚನಾ ಕಾರ್ಯಕ್ರಮವನ್ನು ನಿರೂಪಿಸಿ, ವಫಾ ನಾಜ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕವ್ವಾಲಿ ಕೇವಲ ಸಂಗೀತವಲ್ಲ; ಅದು ಆಧ್ಯಾತ್ಮಿಕ ಅನುಭವ. ಮನಸ್ಸಿಗೆ ಶಾಂತಿ, ಸಮಾಜಕ್ಕೆ ಏಕತೆ ಮತ್ತು ಸಂಸ್ಕೃತಿಗೆ ಶ್ರೀಮಂತಿಕೆ ನೀಡುವ ಪರಂಪರೆ ಎಂದು ಆಳ್ವಾಸ್ ಮಹಿಳಾ ಘಟಕ ‘ಸಕ್ಷಮ’ದ ಸಂಚಾಲಕಿ ಹಾಗೂ ಆಳ್ವಾ ಫಾರ್ಮಸಿಯ ನಿರ್ದೇಶಕಿ ಡಾ. ಗ್ರೀಷ್ಮ ವಿವೇಕ್ ಆಳ್ವ ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ ‘ಸಕ್ಷಮ’ದ ವತಿಯಿಂದ ಆಯೋಜಿಸಲಾದ ‘ಮೆಹಫಿಲ್-ಎ-ಕವ್ವಾಲಿ’ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಕಲೆಯು ಕಾಲಚಕ್ರದ ಪ್ರಭಾವಕ್ಕೆ ಒಳಗಾಗಿ ಬದಲಾವಣೆಗಳನ್ನು ಅನುಭವಿಸುವುದು ಸಹಜ; ಕವ್ವಾಲಿಯಲ್ಲಿಯೂ ಇಂತಹ ಪರಿವರ್ತನೆಗಳು ಸಂಭವಿಸಿವೆ. ಕವ್ವಾಲಿಗೆ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವ ಅಪೂರ್ವ ಶಕ್ತಿ ಇದೆ. ನಾವು ಕಲಾವಿದರು, ಕಲಾಪೋಷಕರು ಅಥವಾ ಕಲಾಸಕ್ತರು ಇವುಗಳಲ್ಲಿ ಯಾವುದಾದರೂ ಒಂದು ವರ್ಗಕ್ಕೆ ಸೇರಿದವರಾಗಬೇಕು ಎಂದು ತಿಳಿಸಿದರು. ಕವ್ವಾಲಿಯು ಮನಸ್ಸನ್ನು ಶಾಂತಗೊಳಿಸಿ ಭಾವನಾತ್ಮಕ ಶುದ್ಧೀಕರಣಕ್ಕೆ ಕಾರಣವಾಗುತ್ತದೆ. ಜೊತೆಗೆ ಪ್ರೀತಿ, ಸಹಾನುಭೂತಿ ಮತ್ತು ಸಹೋದರತ್ವದ ಸಂದೇಶವನ್ನು ಸಮಾಜಕ್ಕೆ ಸಾರುವ ಸಾಮರ್ಥ್ಯ ಕವ್ವಾಲಿಗಿದೆ ಎಂದು ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಸಂವಿಧಾನ ಬದುಕಿನ ಕೈಪಿಡಿಯಾಗಬೇಕು. ವಿದ್ಯಾರ್ಥಿಗಳು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ= ಪಡೆದುಕೊಳ್ಳಬೇಕು. ದಿನನಿತ್ಯದ ಬದುಕಿನಲ್ಲಿ ಕಾನೂನಿನ ಅರಿವು ಅತ್ಯಂತ ಅಗತ್ಯ ಎಂದು ಕುಂದಾಪುರದ ನ್ಯಾಯವಾದಿ ಸಂದೇಶ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಶ್ರೀ ವಿನಾಯಕ ಸಭಾಭವನದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಾನೂನು ಅರಿವು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಯ್ಕಾಡಿಯ ಬಜಾಜ್ ಎಲಿಯನ್ಸ್ ಡೆವಲಪ್ಮೆಂಟ್ ಆಫೀಸರ್ ಸುದರ್ಶನ್ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ನ ನಿವೃತ್ತ ಮ್ಯಾನೇಜರ್ ರಮೇಶ್ ಮೊಗವೀರ ಗುಡ್ಡೆಯಂಗಡಿ, ಶಾರದೋತ್ಸವ ಸಮಿತಿಯ ಸದಸ್ಯ ಸುರೇಶ್ ಪೂಜಾರಿ ಹುಣ್ಸೆಮಕ್ಕಿ, ಸ.ಹಿ.ಪ್ರಾ. ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಮ್.ಸಿ. ಸದಸ್ಯರಾದ ಪವಿತ್ರ ಹಾಗೂ ಶಾಂತ, ದಿನೇಶ್ ಪೂಜಾರಿ ಹಳ್ನಿರು, ಶರತ್ ಕುಲಾಲ್ ಯಡಾಡಿ ಹಾಗೂ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶಿವರಾಮ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ತಾಲೂಕಿನ ಹಿರಿಯ ಪತ್ರಕರ್ತ ಹಾಗೂ ಖಾಸಗಿ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಭಟ್ (45) ಅವರು ಶನಿವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜಿನ ಉಪಪ್ರಾಂಶುಪಾಲರಾಗಿದ್ದ ಶೇಷಗಿರಿ ಭಟ್ ಅವರು ಆರೂರು ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದ್ದರೂ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಬ್ರಹ್ಮಾವರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಹೆಂಡತಿ, ಓರ್ವ ಪುತ್ರ ಹಾಗೂ ತಂದೆ – ತಾಯಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
