ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಪ್ರಕರಣಗಳಾಗಿ ಸಾವು-ನೋವುಗಳು ಸಂಭವಿಸದಂತೆ ರಸ್ತೆಗಳಲ್ಲಿ ವಾಹನಗಳು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕ ಕಾಮಗಾರಿಗಳು ಹಾಗೂ ರಸ್ತೆ ಸೂಚನಾ ಫಲಕ ಅಳವಡಿಸಿ, ರಸ್ತೆ ಅಪಘಾತ ಪ್ರಕರಣಗಳು ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಪ್ರಾಧಿಕಾರ ನಿಗಧಿಪಡಿಸಿರುವ ವೇಗ ಮಿತಿಯೊಳಗೆ ಸಂಚರಿಸಿದಲ್ಲಿ ವಾಹನಗಳು ಸುಗಮವಾಗಿ ಹಾಗೂ ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗುತ್ತದೆ.ಇದಕ್ಕೆ ಒತ್ತು ನೀಡಬೇಕು ಎಂದರು. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬ್ಲಾಕ್ಸ್ಪಾಟ್ ಪ್ರದೇಶಗಳಲ್ಲಿ ವಾಹನಗಳ ಸುರಕ್ಷಿತ ಚಾಲನೆಗೆ ಅಗತ್ಯವಿರುವ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ಅವಶ್ಯವಿರುವ ಕಡೆಯಲ್ಲಿ ಹಂಪ್ಸ್ಗಳ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉತ್ತರಾಖಂಡದಲ್ಲಿ ಇತ್ತೀಚಿಗೆ ನಡೆದ ಏಷ್ಯನ್ ಪವರ್ ಲಿಪ್ಪಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಾಲೂಕಿನ ಉಪ್ಪಿನಕುದ್ರು ನಾಗಶ್ರೀ ಗಣೇಶ್ ಶೇರುಗಾರ್ ಅವರು ಮೂರು ಚಿನ್ನ ಒಂದು ಬೆಳ್ಳಿ ಪದಕ ಪಡೆಯುವುದರೊಂದಿಗೆ ಹೊಸ ದಾಖಲೆಯನ್ನು ನಿರ್ಮಿಸಿ ನ್ಯೂ ಏಷ್ಯನ್ ಚಾಂಪಿಯನ್ ಪಡೆದಿದ್ದಾರೆ. ಈಕೆ ಉಪ್ಪಿನಕುದ್ರು ದಿ. ಗಣೇಶ್ ಶೇರುಗಾರ್ ಹಾಗೂ ಪ್ರೇಮಲತಾ ಗಣೇಶ್ ಶೇರುಗಾರ್ ದಂಪತಿಯ ಪುತ್ರಿ. ಗ್ರಾಮೀಣ ಪ್ರದೇಶದ ಅವರು ಕಠಿಣ ಪರಿಶ್ರಮದಿಂದ ವೇಯ್ಟ್ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್ ಸಾಧನೆ ಮಾಡಿ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ► ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಉಪ್ಪಿನಕುದ್ರು ನಾಗಶ್ರೀಗೆ ಕಂಚಿನ ಪದಕ – https://kundapraa.com/?p=84466&
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಅಂಪಾರು ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿ ಬೈಕ್ ಡಿಕ್ಕಿ ಹೊಡೆದು ಸೈಕಲ್ ಸವಾರ ಮೃತಪಟ್ಟ ಘಟನೆ ಇತ್ತೀಚಿಗೆ ಸಂಭವಿಸಿದೆ. ಮೃತ ಪಟ್ಟ ವ್ಯಕ್ತಿ ಕಾವಾಡಿ ನಿವಾಸಿ ಕೊರಗ (77) ಎಂದು ಗುರುತಿಸಲಾಗಿದೆ. ಅವರ ಮಗನ ಮನೆಯಾದ ನೆಲ್ಲಿಕಟ್ಟೆಗೆ ಸೈಕಲ್ ನಲ್ಲಿ ಹೋಗಿ ವಾಪಸ್ ಬರುತ್ತಿರುವಾಗ ಅಂಪಾರಿನಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಬೈಕ್, ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸೈಕಲ್ಗೆ ಡಿಕ್ಕಿ ಹೊಡೆದಿದ್ದು, ಸೈಕಲ್ ಸವಾರ ಗಂಭೀರ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗ್ಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ಹಾಗೂ ಅವುಗಳ ಬಳಕೆಯಾಗುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ (Narco Co-ordination Center) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳಿಗೆ ಯುವ ಸಮುದಾಯ ಹೆಚ್ಚು ಆಕರ್ಷಿತವಾಗುತ್ತಿದೆ. ಇವುಗಳ ಬಳಕೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಇವುಗಳಿಂದ ದೂರ ಉಳಿಯುವಂತೆ ನೋಡಿಕೊಳ್ಳಲು ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಹೆಚ್ಚು ಹೆಚ್ಚು ವಿದ್ಯಾಸಂಸ್ಥೆಗಳಲ್ಲಿ ಮಾಡಬೇಕು ಎಂದು ಸೂಚನೆ ನೀಡಿದ ಅವರು, ಈಗಾಗಲೇ ಕೆಲವು ವಿದ್ಯಾಸಂಸ್ಥೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳು ಎಷ್ಟು ಪ್ರಮಾಣದಲ್ಲಿ ಉಪಯುಕ್ತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕು ಎಂದರು. ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಯಡಮೊಗ್ಗೆ ಗ್ರಾಮದ ರಾಘವೇಂದ್ರ ಅವರ ಮನೆಯ ವಠಾರದಲ್ಲಿರುವ ಅಂಗಡಿ ಪಕ್ಕ ಮಲಗಿದ್ದ ದನವನ್ನು ಮೂರು ಜನ ದನ ಕಳ್ಳರು ಬಿಳಿ ಕಾರಿನಲ್ಲಿ ಬಂದು ಅಪರಿಸಿರುವ ಘಟನೆ ಮೇ.02ರಂದು ನಡೆದಿದೆ. ಯಡಮೊಗ್ಗೆ ಗ್ರಾಮದ ರಾಘವೇಂದ್ರ ಅವರ ಮನೆಯ ವಠಾರದಲ್ಲಿರುವ ಅಂಗಡಿ ಪಕ್ಕ ರಾತ್ರಿ ಮಲಗಿದ್ದ ದನವು ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ಕಂಡು ಬಾರದೇ ಇದ್ದಾಗ ಅವರು ತಮ್ಮ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮೆರಾಗಳನ್ನು ಚೆಕ್ ಮಾಡಿದ್ದರು. ಮೇ 3 ರಂದು ಬೆಳಗಿನ ಜಾವ 03:00 ಗಂಟೆಯಿಂದ 04:00 ಗಂಟೆಯ ಮಧ್ಯಾವದಿಯಲ್ಲಿ ಯಾರೋ 3 ಜನ ದನ ಕಳ್ಳರು ಬಿಳಿ ಕಾರಿನಲ್ಲಿ ಕಮಲಶಿಲೆ ಕಡೆಯಿಂದ ಬಂದು ಪಿರ್ಯಾದಿದಾರರ ಮನೆಯ ಅಂಗಡಿಯ ಎದುರಿಗೆ ಮಲಗಿದ್ದ ದನವನ್ನು ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ಹೊಸಂಗಡಿ ಕಡೆಗೆ ಹೋಗಿರುವುದು ಕಂಡುಬಂದಿದೆ. ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಿಬಿಎಸ್ಇ ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ಐದನೇ ವರ್ಷ ಆಳ್ವಾಸ್ ಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 29 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಅಮೋಘ್ ಬಿಲ್ಲೂರ್, ದೀಕ್ಷಾ ಹೆಚ್ ಕೆ (98%), ಹರ್ಷಿತಾ ಎಸ್ ಪಾಟೀಲ್, ಪ್ರಜ್ವಲ್ ಕುಮಾರ್ ಬಿರಾದರ್, ಅದಿತಿ ಭಟ್, ಸಂದೀಪ್, ಶಿವನಂದ (97%), ಮನಸ್ವಿ, ದರ್ಶ ಧಾರ್ಮಿಕ್, ಚೇತನ್ ಎಸ್, ಚಿನ್ಮಯಿ ಎಂ, ನಿಸರ್ಗ ಎಸ್, ಅನ್ವಿತ್ ಆರ್, ಸಮರ್ಥ ಜೋಷಿ, ತುನುಶ್ರೀ ಜಿ ಆರ್, ಪೂನಮ್ ಸಾತಿ, ಅನುಷಾ ರಾಜೇಂದ್ರ (96%), ಕಿರಣ್ ಸಾರ್ವಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಸತತ 15ನೇ ಬಾರಿ ಸಿ.ಬಿ.ಎಸ್.ಸಿ. 10ನೇ ತರಗತಿ ಪರೀಕ್ಷೆಯಲ್ಲಿ ಶೇ100% ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 128 ವಿದ್ಯಾರ್ಥಿUಳಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 79 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ರಿತಿನ್ ಎಸ್. ಶೆಟ್ಟಿ 95.80%, ನಮಿಶ್ ಉದಯ ಬಿಲ್ಲವ 93.60%, ಅನ್ವೇಶ್ ಯು ಶೆಟ್ಟಿ 93.20%, ಧೃತಿ ಎಸ್. ಶೆಟ್ಟಿ 92.00%, ಎಸ್. ಎ. ಚೇತನ್ ಕುಮಾರ್ 91.80%, ರಿಶಾನ್ ಡಿ. ಅಲ್ಮೇಡ 91.80%, ಚಂದನಾ ಸಿ. ಕೆ. 91.40%, ತನಿಷ್ 91.20%, ಧನುಷ್ 89.80%, ತನ್ಮಯ್ ಹೆಬ್ಬಾರ್ 89.80%, ಸಮರ್ಥ ಎಸ್. ಶೆಟ್ಟಿ 89.60%, ಏಕಾಂಶ್ ಸಂತೋಷ ಶೇರಿ 89.60%, ಅಮೃತಾ ಡಿ. 89.20%, ಶ್ರೇಯಾ 89.20%, ವರ್ಣಿತಾ ಕೆ. ಆರ್ 88.80, ಕೆ. ಆರ್. ಕೀರ್ತನ 88.60%,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸುವ ಜಲ ಜೀವನ್ ಮಿಷನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು. ಕೆಲವೊಂದು ಭಾಗಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಭೂಮಿಯಲ್ಲಿ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯ ಒಪ್ಪಿಗೆಗಳನ್ನು ಶೀಘ್ರದಲ್ಲಿಯೇ ಪಡೆದು ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಅರಣ್ಯ ಇಲಾಖೆಯವರು ಸಹ ಈ ಕಾರ್ಯಗಳಿಗೆ ಸ್ಪಂದಿಸಬೇಕೆಂದು ಸೂಚನೆ ನೀಡಿದರು. ಕುಡಿಯುವ ನೀರಿನ ಕೆಲವು ಕಾಮಗಾರಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಹಾಗೂ ಮೈಸೂರು ಕಂದಾಯ ವಿಭಾಗಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ ವಸತಿಯುತ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿ.ಎಸ್.ಐ) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡುವ ಸಂಬAಧ ಅರ್ಹ ಅಭ್ಯರ್ಥಿಗಳಿಂದ ಸೇವಾಸಿಂಧು ಪೋರ್ಟಲ್ http://sevasindhu.karnataka.gov.in/sevasindhu/DepartmentServices ಅಥವಾ http://dom.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: 8277799990 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಅಲೆವೂರು ರಸ್ತೆ, ಮಣಿಪಾಲ ದೂ.ಸಂಖ್ಯೆ: 0820-2573596 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ದೂ.ಸಂಖ್ಯೆ : 0820-2574596, ಕಾರ್ಕಳ ದೂ.ಸಂಖ್ಯೆ: 08258-231101 ಹಾಗೂ ಕುಂದಾಪುರ ದೂ.ಸಂಖ್ಯೆ: 08254-230370 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಾರಂಪಳ್ಳಿ ನರಸಿಂಹ ಐತಾಳರು ಸಾಹಿತ್ಯ, ಸಂಗೀತ, ನೃತ್ಯ, ಸಂಘಟನೆ, ರಂಗಭೂಮಿ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಐತಾಳರ ಸಾಧನೆ ಅನನ್ಯ ಇಂದಿನ ಯುವ ಸಮೂಹಕ್ಕೆ ದಾರಿದೀಪ ಅಲ್ಲದೆ ಮಕ್ಕಳ ಸ್ನೇಹಿಯಾಗಿ ಅವರು ನೀಡಿರುವ ಚಟುವಟಿಕೆಗಳು ಅನನ್ಯ. ಸುಪ್ರಭಾತ ಐತಾಳರೆಂದೇ ಪ್ರಸಿದ್ಧರಾಗಿರುವ ಅವರ ಸಾಧನೆಗಳು ವಿಶ್ವಕ್ಕೆ ಪ್ರಚಲಿತಗೊಳ್ಳಲಿ ಎಂದು ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು. ಅವರು ಇತ್ತೀಚಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಿತ್ರ ಮಂಡಳಿ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹುಟ್ಟೂರು ಸಾಧಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಮಿತ್ರ ಮಂಡಳಿಯ ಗಿಳಿಯಾರು ಶ್ರೀನಿವಾಸ ಅಡಿಗ ಅಭಿನಂದನಾ ಭಾಷಣ ಮಾಡಿದರು. ಪಾರಂಪಳ್ಳಿ ನರಸಿಂಹ ಐತಾಳರ ಬದುಕು ಬರಹ ಕೃತಿಗಳ ಕುರಿತು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕವಯಿತ್ರಿ ಸುಮನಾ…
