ಯಡಮೊಗೆ: ಅಂಗಡಿ ಪಕ್ಕ ಮಲಗಿದ್ದ ದನವನ್ನು ಕಾರಿನಲ್ಲಿ ಹೊತ್ತೊಯ್ದ ಕಳ್ಳರು

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ:
ಇಲ್ಲಿನ ಯಡಮೊಗ್ಗೆ ಗ್ರಾಮದ ರಾಘವೇಂದ್ರ ಅವರ ಮನೆಯ ವಠಾರದಲ್ಲಿರುವ ಅಂಗಡಿ ಪಕ್ಕ ಮಲಗಿದ್ದ ದನವನ್ನು ಮೂರು ಜನ ದನ ಕಳ್ಳರು ಬಿಳಿ ಕಾರಿನಲ್ಲಿ ಬಂದು ಅಪರಿಸಿರುವ ಘಟನೆ ಮೇ.02ರಂದು ನಡೆದಿದೆ.

Click Here

Call us

Click Here

ಯಡಮೊಗ್ಗೆ ಗ್ರಾಮದ ರಾಘವೇಂದ್ರ ಅವರ ಮನೆಯ ವಠಾರದಲ್ಲಿರುವ ಅಂಗಡಿ ಪಕ್ಕ ರಾತ್ರಿ ಮಲಗಿದ್ದ ದನವು ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ಕಂಡು ಬಾರದೇ ಇದ್ದಾಗ ಅವರು ತಮ್ಮ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮೆರಾಗಳನ್ನು ಚೆಕ್ ಮಾಡಿದ್ದರು. ಮೇ 3 ರಂದು ಬೆಳಗಿನ ಜಾವ 03:00 ಗಂಟೆಯಿಂದ 04:00 ಗಂಟೆಯ ಮಧ್ಯಾವದಿಯಲ್ಲಿ ಯಾರೋ 3 ಜನ ದನ ಕಳ್ಳರು ಬಿಳಿ ಕಾರಿನಲ್ಲಿ ಕಮಲಶಿಲೆ ಕಡೆಯಿಂದ ಬಂದು ಪಿರ್ಯಾದಿದಾರರ ಮನೆಯ ಅಂಗಡಿಯ ಎದುರಿಗೆ ಮಲಗಿದ್ದ ದನವನ್ನು ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ಹೊಸಂಗಡಿ ಕಡೆಗೆ ಹೋಗಿರುವುದು ಕಂಡುಬಂದಿದೆ.

ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply