ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಶ್ರೀ ರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ.ನ ಉಪಾಧ್ಯಕ್ಷರಾಗಿ ಉದ್ಯಮಿ ಸತೀಶ್ ಎನ್. ಶೇರೆಗಾರ್ ಆಯ್ಕೆಯಾಗಿದ್ದಾರೆ. ಶ್ರೀ ರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ.ನ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಸುನಿಲ್ ಕುಮಾರ್ ಅವರು ಮುಂದಿನ ಅವಧಿಗೆ ಉಪಾಧ್ಯಕ್ಷರನ್ನಾಗಿ ಸತೀಶ್ ಎನ್. ಶೇರೆಗಾರ್ ಅವರು ಅವಿರೋಧ ಆಯ್ಕೆಯಾಗಿರುವುದನ್ನು ಘೋಷಿಸಿದರು. ಸತೀಶ್ ಎನ್. ಶೇರೆಗಾರ್ ಅವರು ರೋಟರಿ ವಲಯ ೧ರ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಆಗಿ, ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಪೂರ್ವಾಧ್ಯಕ್ಷರಾಗಿ ಹಾಗೂ ಕುಂದಾಪುರ ತಾಲೂಕು ಐಸ್ ಪ್ಲ್ಯಾಂಟ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಶ್ರೀ ರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ.ಯ ಅಧ್ಯಕ್ಷ ಕೆ. ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ನಾಗರಾಜ ನಾಯ್ಕ್, ನಿರ್ದೇಶಕರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿವರ್ತನ ಪುನರ್ ವಸತಿ ಕೇಂದ್ರ , ಮನಸ್ಮಿತಾ ಫೌಂಡೇಶನ್ ,ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ 11ನೇ ಉಚಿತ ಮಾನಸಿಕ ಆರೋಗ್ಯ ತಪಾಸಣಿ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಸಾಸ್ತಾನದ ಭಾರ್ಗವಿ ಟ್ರಸ್ಟ್ನ ಟ್ರಸ್ಟಿ ಶ್ರೀಮತಿ ನಂದಿನಿ ರಾಜೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ಪರಿಸರದ ಜನರು ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಹಾರೈಸಿದರು. ಪರಿವರ್ತನ ಕೇಂದ್ರದ ವೈದ್ಯಕೀಯ ನಿದೇರ್ಶಕ ಡಾ. ಪ್ರಕಾಶ ಸಿ. ತೋಳರ್ ರವರು ಮಾತನಾಡಿ, ಈ ಶಿಬಿರವನ್ನು ಪ್ರತಿ ತಿಂಗಳು ಆಯೋಜಿಸಲಾಗುತ್ತಿದೆ. ಬಡ ರೋಗಿಗಳು ಔಷಧ ಮುಂದುವರಿಸಲು ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಮದರು. ಪರಿವರ್ತನ ಕೇಂದ್ರದ ನಿರ್ದೇಶಕ ಡಾ. ಸತೀಶ ಪೂಜಾರಿ ಅವರು ಪ್ರಾಸ್ತಾವಿಕವಾಕವಾಗಿ ಮಾತನಾಡಿದರು. ಮನಸ್ಮಿತ ಫೌಂಡೇಶನ್ನ ನಿರ್ದೇಶಕರಾದ ಸವಿತಾ. ಪಿ ತೋಳಾರ್, ನೇಹಾ ಎಸ್ ಪೂಜಾರಿ ಉಪಸ್ಥಿತರಿದ್ದರು. ಆಪ್ತ ಸಮಾಲೋಚಕರಾದ ವಿಧಾಯಕ ಸ್ವಾಗತಿಸಿದರು. ಅನುಷಾ ಶೆಟ್ಟ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಾತಿ, ಧರ್ಮ, ಲಿಂಗ ಭೇಧಗಳಿಲ್ಲದೇ ಎಲ್ಲರೂ ಸಮಾನರು ಎಂಬ ನೆಲೆಯಲ್ಲಿ ಸಂವಿಧಾನದ ಆಶಯದಂತೆ ನಡೆಯುತ್ತಿರುವ ಸಂಘಟನೆಗಳಲ್ಲಿ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಅಗ್ರಸ್ಥಾನದಲ್ಲಿದೆ ಎಂದು ಮೀನುಗಾರಿಕಾ, ಯುವಜನ ಸೇವೆ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಇಲ್ಲಿನ ರಾಜರಾಜೇಶ್ವರಿ ಸಭಾಭವನದಲ್ಲಿ ಬೈಂದೂರು ಎನ್ಎಸ್ಯುಐ ಘಟಕದ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿ ಸಮಾವೇಶ ಹಾಗೂ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಮಾತನಾಡಿ ಜಾತಿ, ಧರ್ಮ, ಭಾಷೆ ಎಂಬ ಹೆಸರಿನಲ್ಲಿ ಕೆಲವು ಸಂಘಟನೆಗಳು ದೇಶ ವಿಭಜಿಸುತ್ತಿರುವುದಲ್ಲದೇ ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಆದರೆ ಎನ್ಎಸ್ಯುಐ ಐಕ್ಯತೆಯಿಂದ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರನ್ನಾಗಿಸುತ್ತಿದೆ ಎಂದರು. ರಾಜ್ಯ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ಚೇತನ್ ಕೆ. ಅಧ್ಯಕ್ಷತೆವಹಿಸಿದ್ದರು. ಶಾಸಕ ಕೆ. ಗೋಪಾಲ ಪೂಜಾರಿ ಸಂಘಟನೆಯ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಬೈಂದೂರು ಬ್ಲಾಕ್ ಅಧ್ಯಕ್ಷ ಎಸ್. ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಸಂಪೀಗೇಡಿ ಸಂಜೀವ ಶೆಟ್ಟಿ, ಜಿಪಂ ಸದಸ್ಯೆ ಗೌರಿ ದೇವಾಡಿಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಸಾಲಿಗ್ರಾಮ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ, ಗುಂಡ್ಮಿ ಚಿತ್ರಪಾಡಿ ಹಾಗೂ ಪಾರಂಪಳ್ಳಿ ಗ್ರಾಮಗಳ ಬಡನಿವೇಶನ ರಹಿತರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ ಮನೆ, ನಿವೇಶನ ಹಕ್ಕು ಪತ್ರ ಕೋರಿ ಸಲಿಸಿದ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಬೇಕು. ಎಂದು ಒತ್ತಾಯಿಸಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಛೇರಿ ಎದುರು ಬೃಹತ್ ಪ್ರತಿಭಟನಾ ಮುಷ್ಕರ ಮಾಡಿದರು. ಮನೆ, ನಿವೇಶನ ರಹಿತ ಅರ್ಜಿದಾರರು ಪ್ರತಿಭಟನಾ ಮುಷ್ಕರ ಹೋರಾಟದ ಪೂರ್ವದಲ್ಲಿ ಸಾಲಿಗ್ರಾಮದ ಗಣೇಶ ಕೃಪಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದಲ್ಲಿ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕ ಭಾಷಣ ಮಾಡುತ್ತಾ- ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ೪ ಗ್ರಾಮಗಳ ಮನೆ, ನಿವೇಶನ ರಹಿತರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಸಲ್ಲಿಸಿದ ೮೩೮ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿ ೩ ತಿಂಗಳ…
ಕುಂದಾಪ್ರ ಡಾಟ್ ಕಾಂಸುದ್ದಿ. ಬೈಂದೂರು: ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯತ್ತಿನಲ್ಲಿ ಹಣಕಾಸಿನ ವಿಚಾರದಲ್ಲಿ ಎಡವದಂತೆ ಮಾರ್ಗದರ್ಶನ ಪಡೆಯುವುದು ಅಗತ್ಯವೆಂದು ನಿಟ್ಟೆ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ ಪ್ರಾಧ್ಯಾಪಕ ರಾಧಾಕೃಷ್ಣ ಶರ್ಮಾ ಹೇಳಿದರು. ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ’ಹಣಕಾಸು ಉಳಿಕೆ ಹಾಗೂ ಹೂಡಿಕೆ’ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥಡಾ. ಉಮೇಶ ಮಯ್ಯ ಇವರು ಸಂಯೋಜಿಸಿ ಸ್ವಾಗತಿಸಿದರು. ಅಂತಿಮ ಬಿ.ಕಾಂ ತರಗತಿಯ ಕಿರಣ್ ಧನ್ಯವಾದಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೊಡಗಿಸಿದ ಸಮಯ ನಮ್ಮ ಜೀವನವಿಡಿ ನಮ್ಮ ಜೊತೆ ಬರುತ್ತದೆ. ವಿದ್ಯೆಯೆಂಬ ಧನವನ್ನು ಯಾರಿದಂಲೂ ಕದಿಯಲು ಸಾಧ್ಯವಿಲ್ಲ. ವಿದ್ಯೆಯನ್ನು ಹಂಚಿದಷ್ಟು ಕಡಿಮೆಯಾಗುದಿಲ್ಲ. ಶಾಲೆಗಳಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗಬೇಕು, ವಿದ್ಯಾರ್ಥಿಗಳು ತಪ್ಪಿದಾಗ ಬುದ್ಧಿಹೇಳಿ ತಿದ್ದಬೇಕು. ವಿದ್ಯಾಭ್ಯಾಸದಲ್ಲಿ ಮಾನವೀಯ ಗುಣಗಳನ್ನು ಸದ್ಭುದ್ಧಿಗಳ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡುವುದರಲ್ಲಿ ಅಧ್ಯಾಪಕರ ಪಾತ್ರ ಹಿರಿದು ಎಂದು ದುಬೈನ ಕೊಂಚಾಡಿ ಸಬಿತಾ ಗಣಪತಿ ಶೆಣೈ ಹೇಳಿದರು. ಅವರು ಕುಂದಾಪುರ ತಾಲೂಕಿನ ಬೈಂದೂರು ವಲಯದ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಂಚಾಡಿ ರಾಧಾ ಶೆಣೈ ಮತ್ತು ಕೊಂಚಾಡಿ ಗೋಪಾಲಕೃಷ್ಣ ಶೆಣೈ ಸ್ಮರಣಾರ್ಥ ಕೊಂಚಾಡಿ ರಾಧಾ ಗೋಪಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು ಕೊಡುಗೆಯಾಗಿ ನೀಡಿರುವ ಸುಮಾರು ೧೬.೮೦ ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ವಿದ್ಯೆಯಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಜಿಲ್ಲಾ ಮಟ್ಟದಲ್ಲಿ ಈ ಬಾರಿ 2 ಪ್ರಶಸ್ತಿಗಳು ಲಭಿಸಿದೆ. ಲೆಕ್ಕಪರಿಶೋಧನಾ ಎ ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ 3 ಆಯ್ದ ಸಹಕಾರಿ ಸಂಘಗಳ ಪೈಕಿ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಒಂದಾಗಿದೆ. ಅದೇ ರೀತಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಮ್.ಎನ್. ರಾಜೇಂದ್ರಕುಮಾರ್ ಇವರು ಸಂಘದ ಅಧ್ಯಕ್ಷರಾದ ಪ್ರಕಾಶಚಂದ್ರ ಶೆಟ್ಟಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಮೋಹನ ಪೂಜಾರಿ, ಗುರುರಾಜ್ ಹೆಬ್ಬಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಅಶೋಕ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ, ವ್ಯವಸ್ಥಾಪಕರಾದ ಹಾವಳಿ ಬಿಲ್ಲವ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿಯ ವಿದ್ಯಾರ್ಥಿಗಳು ಸ. ಹಿ. ಪ್ರಾ. ಶಾಲೆ ಮರವಂತೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕರಾದ ಎನ್. ಕೆ. ಬಿಲ್ಲವ, ಆಡಳಿತ ಮಂಡಳಿಯವರಾದ ಬಿ.ಎ.ರಝಾಕ್, ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ., ದೈಹಿಕ ಶಿಕ್ಷಕರುಗಳಾದ ಕಿರಣ್ ಗೌಡ ಮತ್ತು ಗೋವಿಂದರಾಜು ಹಾಗೂ ಶಾಲಾ ಶಿಕ್ಷಕರುಗಳು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ಟಾಪ್ ಕ್ಲಬ್ನವರು ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು ಇದೀಗ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಶಿಕ್ಷಕರನ್ನು ಗೌರವಿಸಿ, ಪ್ರತಿಭೆ ಪುರಸ್ಕಾರಕ್ಕೆ ಅವಕಾಶ ಕಲ್ಪಿಸುತ್ತಿರುವುದು ಅರ್ಥಪೂರ್ಣವಾಗಿದೆ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಶ್ಲಾಘನೀಯ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೇಳಿದರು ಅವರು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಶಿಕ್ಷಕರ ಪ್ರತಿಭಾ ಸ್ಪರ್ಧೆ ಮತ್ತು ಮನೋರಂಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ.ಗೋಂಡ, ಹಳೆ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷರಾದ ಮಡಾಮಕ್ಕಿ ಶಶಿಧರ ಶೆಟ್ಟಿ, ರಾಘವೇಂದ್ರ ಚರಣ ನಾವಡ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಿಕ್ಷಕರ ಬಗೆಗಿನ ಗೌರವ ಮತ್ತು ಪ್ರೀತಿ ಕೇವಲ ತೋರಿಕೆ ಮತ್ತು ತಾತ್ಕಾಲಿಕವಾಗಿರಬಾರದು. ವಿದ್ಯಾರ್ಥಿಗಳು ನಿಜವಾದ ಗೌರವವನ್ನು ಬೆಳೆಸಿಕೊಳ್ಳಬೇಕು.ಶಿಕ್ಷಕರು ಕೂಡ ಗೌರವದ ವ್ಯಕ್ತಿತ್ವವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ರಸಾಯನ ಶಾಸ್ತ್ರ ಪ್ರಾಧ್ಯಾಪಕ ಆರ್ ಎನ್ ರೇವಣ್ಕರ್ ಹೇಳಿದರು. ಅವರು ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ಶಿಸ್ತುಬದ್ಧತೆ ಎನ್ನುವುದು ಎಲ್ಲರಲ್ಲೂ ಅಗತ್ಯ.ಉತ್ತಮ ಜೀವನಕ್ಕೆ ಗುರುವಿನ ಅಗತ್ಯತೆ ಇದೆ ಎಂದು ಅವರು ಹೇಳಿದರು. ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ಉಪನ್ಯಾಸಕರು ಉಪಸ್ಥಿರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗರಾಜ ನಾಯಕ್ ಸ್ವಾಗತಿಸಿದರು. ಅಶ್ಮಿತಾ ಮತ್ತು ಸುಪ್ರೀತ ಪ್ರಾರ್ಥಿಸಿದರು.ಸ್ವಾತಿ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು. ಸಾಯೀ ಪ್ರಸಾದ್ ವಂದಿಸಿದರು.
