ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಕರಾವಳಿಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿದೆ ಎನ್ನಲಾದ 14ರಿಂದ 20 ಕೋಟಿ ರೂ. ಅವ್ಯವಹಾರ ಪ್ರಕರಣದ ಸಮಗ್ರ ತನಿಖೆಯೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಕಳೆದ 48 ದಿನಗಳಿಂದ ಕಾರ್ಖಾನೆ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ನಾಳೆ ಹಿಂದೆಗೆದುಕೊಳ್ಳಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ. ಧರಣಿ ಸ್ಥಳಕ್ಕೆ ಬುಧವಾರ ಸಂಜೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಧರಣಿ ನಿರತರ ಎಲ್ಲಾ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡಿರುವುದಾಗಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದ್ದು, ಧರಣಿಯನ್ನು ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಎಂದು ಅವರು ವಿವರಿಸಿದರು. ಪ್ರಕರಣದಲ್ಲಿ ಶಾಮೀಲಾಗಿರುವ ಮೂವರು ಹಿರಿಯ ಸಹಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಲೇಖನ.ಫೇಶಿಯಲ್ ಯೋಗ ಎನ್ನುವುದು ಇತ್ತೀಚಿನ ಟ್ರೆಂಡ್. ಮುಖಕ್ಕೆ ಸಂಬಂಧ ಪಟ್ಟ ಈ ನಿರ್ದಿಷ್ಟ ಕ್ರಿಯೆಯಿಂದ ಮುಖದ ಚರ್ಮದಲ್ಲಿ ಹೊಳಪು, ಮುಖದ ಮಾಂಸಖಂಡಗಳು ರಿಲ್ಯಾಕ್ಸ್ ಆಗುವ ಜತೆಗೆ ಸುಕ್ಕುಗಳು ಕಡಿಮೆ ಆಗುತ್ತವೆ. ಸಲೂನ್ ಹಾಗೂ ಚರ್ಮರೋಗ ತಜ್ಞರ ಹೊರತಾಗಿ ಮುಖದ ಯೋಗಾಸನವು ಸೌಂದರ್ಯವನ್ನು ಎತ್ತಿ ಹಿಡಿಯುತ್ತದೆ. ಫೇಶಿಯಲ್ ಯೋಗದಲ್ಲಿ ಹಲವು ವಿಧಗಳಿವೆ. ಮೀನಿನಂತೆ ಮುಖವನ್ನು ಉದ್ದ ಮಾಡುವುದು, ನಸುನಗುತ್ತ ಓಂ ಪಠಣ ಮಾಡುವುದು, ಹುಬ್ಬುಗಳನ್ನು ಮೇಲಕ್ಕೆ ಎತ್ತರಿಸುವುದು, ಕಣ್ಣಿನ ರೆಪ್ಪೆಗಳನ್ನು ಪಕ್ಕಕ್ಕೆ ಎಳೆದು ವಿಸ್ತರಿಸುವುದು . ಇದರ ಜೊತೆಗೆ ಉಸಿರಾಟದ ವ್ಯಾಯಾಮಗಳು ಮುಖಕ್ಕೆ ವಿಶೇಷ ಕಳೆ ನೀಡಬಲ್ಲವು. ಇವುಗಳಿಂದ ಮುಖದ ಚರ್ಮ ಕುಸಿಯುವುದಿಲ್ಲ, ನೆರಿಗೆ ಉಂಟಾಗುವುದಿಲ್ಲ. ಮುಖದ ಚರ್ಮ ಬಿಗಿಯನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ, ಮುಖದ ಮಾಂಸಖಂಡಗಳು ರಿಲ್ಯಾಕ್ಸ್ ಹೊಂದುತ್ತವೆ. ಫೇಶಿಯಲ್ ಯೋಗದಿಂದ ಹಲವಾರು ಪ್ರಯೋಜನಗಳಿವೆ. ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ. ಮುಖದ ಚರ್ಮದಲ್ಲಿ ಕಳೆ ತುಂಬುವ ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ನಾವು ದಿನವೂ ಮಾತನಾಡುವಾಗ, ನಗುವಾಗ, ವಿವಿಧ ಭಂಗಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಶರಾಬು ಕುಡಿಯಲು ಹಣವಿಲ್ಲದೆ ಯುವಕನೋರ್ವ ಅದೇ ಚಿಂತೆಯಲ್ಲಿ ಮನೆಯ ಜಂತಿಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಪಾರು ಗ್ರಾಮದಲ್ಲಿ ನಡೆದಿದೆ. ಸುಬ್ರಹ್ಮಣ್ಯ (33) ಆತ್ಮಹತ್ಯೆಗೆ ಶರಣಾದ ಯುವಕ. ಸುಬ್ರಹ್ಮಣ್ಯ ಮನೆಯಲ್ಲಿಯೇ ಇರುತ್ತಿದ್ದು, ಅಪರೂಪಕ್ಕೊಮ್ಮೆ ಬದಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಶರಾಬು ಸೇವನೆಯ ವ್ಯಸನ ಹೊಂದಿದ್ದರು. ಆತನ ಕುಡಿತ ಬಿಡಿಸಲು ಹಲವಾರು ಬಾರಿ ಮದ್ಯವರ್ಜನ ಶಿಬಿರಕ್ಕೆ ಸೇರಿಸಿದ್ದು, ಆದರೂ ಆತನು ವಿಪರೀತ ಶರಾಬು ಕುಡಿಯುತ್ತಿದ್ದು, ಕುಡಿಯಬಾರದಾಗಿ ಎಷ್ಟು ಸಲ ಬುದ್ದಿ ಹೇಳಿದರೂ ಆತನು ಮನೆಯಲ್ಲಿ ಯಾರ ಮಾತನ್ನು ಕೇಳುತ್ತಿರಲಿಲ್ಲ, ಹೀಗಿರುವಾಗ ಸುಬ್ರಹ್ಮಣ್ಯನು ಶರಾಬು ಕುಡಿಯಲು ಹಣ ಇಲ್ಲದೇ ಇದ್ದುದರಿಂದ ಅದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಮಾಡಿನ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮುಳ್ಳಿಕಟ್ಟೆಯಿಂದ ಬಂಟ್ವಾಡಿ ಕಡೆಗೆ ಅತಿ ವೇಗದಿಂದ ಚಲಿಸುತ್ತಿದ್ದ ಟಿಪ್ಪರ್ ಲಾರಿ ಬಂಟ್ವಾಡಿ ಸೇತುವೆ ಸಮೀಪ ಸಿಮೆಂಟ್ ತುಂಬಿದ ಲಾರಿಗೆ ಡಿಕ್ಕಿ ಹೊಡೆದು, ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿನ ಹೊಂಡಕ್ಕೆ ಬಿದ್ದ ಘಟನೆ ನಡೆಯಿತು. ಅಪಘಾತದಲ್ಲಿ ಟಿಪ್ಪರ್ ಚಾಲಕ ಪಾರಾಗಿದ್ದಾರೆ. ಲಾರಿ ನದಿಗೆ ಉರುಳ ಸಂಧರ್ಭದಲ್ಲಿ ಮರದ ಸಹಾಯದಿಂದ ಪೋದೆಯಲ್ಲಿ ಸಿಲುಕಿಕೊಂಡಿದ್ದರಿಂದ ಭಾರಿ ದೊಡ್ಡ ಅನಾಹುತ ತಪ್ಪಿದೆ. ಟಿಪ್ಪರ್ ಲಾರಿಗೆ ಹಾನಿಯಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 3 ದಿನಗಳ ಪಾರಂಪರಿಕ ಯೋಗ ಶಿಬಿರವು ಇತ್ತೀಚಿಗೆ ನಡೆಯಿತು. ಇಶಾ ಫೌಂಡೇಶನ್ ಸದ್ಗುರು ಗುರುಕುಲಂನ ಶಾಸ್ತ್ರೀಯ ಹಠ ಯೋಗದ ಶಿಕ್ಷಕರಾದ ಪ್ರವೀಣ್ ಕುಮಾರ್ ಪತಂಗಾಸನ, ಶಿಶುಪಾಲಾಸನ, ನಾಡಿ ವಿಭಜನಾಸನ, ಓಂಕಾರ ಪಠಣ ಸೂರ್ಯ ಶಕ್ತಿ ಆಸನ ಇತ್ಯಾದಿಗಳ ಕುರಿತಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರೆ ಸಹಾಯಕ ಸಿಬ್ಬಂದಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಭಾರತೀಯ ಪರಂಪರೆಯಲ್ಲಿ ಯೋಗಾಭ್ಯಾಸಕ್ಕೆ ಮಹತ್ವದ ಸ್ಥಾನ ನೀಡಲಾಗಿದ್ದು, ಯೋಗವು ನಮ್ಮ ಪ್ರಾಚೀನ ಋಷಿ ಮುನಿಗಳಿಂದ – ಸಾಧು ಸಂತರಿಂದ ಆರಂಭಗೊಂಡು ಇಂದು ಬಹುಮುಖಿ ಪ್ರಯೋಜನಗಳೊಂದಿಗೆ ಸರ್ವವ್ಯಾಪಿಯಾಗಿ ಬೆಳೆದು ನಿಂತಿದೆ. ನಿತ್ಯದ ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ದೇಹ ಮತ್ತು ಮನಸ್ಸುಗಳ ಮಧ್ಯೆ ಸಮತೋಲನ ಸಾಧಿಸಿದಾಗ ಮಾತ್ರ ಮಾನವ ಆರೋಗ್ಯಪೂರ್ಣ ಜೀವನವನ್ನು ನಡೆಸಲು ಸಾಧ್ಯ. ಇಂದು ಜಗತ್ತು ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಪರಿತಪಿಸುತ್ತಿದ್ದು, ನಿರಂತರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಾಲ್ತೋಡು ಗ್ರಾಮದ ಸನ್ನಿಧಿ ಎಮ್ ಅವರು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ 600 ರಲ್ಲಿ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಹಾಗೂ ಜಿಲ್ಲೆಗೆ ಐದನೇ ಸ್ಥಾನ ಪಡೆದಿದ್ದಾರೆ. ಕಾಲ್ತೋಡು ವಿನೋದ ಮತ್ತು ಮಂಜುನಾಥ ಶೆಟ್ಟಿ ದಂಪತಿಯ ಪುತ್ರಿಯಾದ ಈಕೆ ಕುಂದಾಪುರದ ಶ್ರೀ ವೆಂಕಟರಮಣ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಎ.12 ಮತ್ತು ಎ.13 ರಂದು 65ನೇ ವಾರ್ಷಿಕೋತ್ಸವ ನಡೆಯಲಿದೆ. ಎ. 12ನೇ ಶನಿವಾರ ಬೆಳಿಗ್ಗೆ ಗಣಹೋಮ, ಗುರುಹೋಮ, ಶ್ರೀ ಗುರುದ್ವಯರ ಮಾಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಎ. 13 ನೇ ಆದಿತ್ಯವಾರ ಬೆಳಿಗ್ಗೆ ಶ್ರೀ ನಾಗದೇವರ ಕಲ್ಲೋಕ್ತ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಶ್ರಮದ ಪ್ರತಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ-2025 ಸಮಾರಂಭದ ಬಹುಮಾನ ವಿತರಣಾ ಕಾರ್ಯಕ್ರಮ ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಗುರುವಾರ ನಡೆಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಉದ್ಯಮಿ ಎಚ್. ಗಣೇಶ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ಸದಸ್ಯರಾದ ಸುರೇಖಾ ಕಾನೋಜಿ, ಶ್ರೀನಾಥ ಖಾರ್ವಿ, ಗಂಗೊಳ್ಳಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಮಡಿ ಲೈಟ್ಹೌಸ್ ಹೋಳಿ ಉತ್ಸವ ಸಮಿತಿ ಅಧ್ಯಕ್ಷ ಲಿಂಗನ ರವಿ ಖಾರ್ವಿ, ಖಾರ್ವಿಕೇರಿ ಮಹಾಂಕಾಳಿ ಮಠ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ತಾರ್ಯ ಕೃಷ್ಣ ಖಾರ್ವಿ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ದಿವಾಕರ ಖಾರ್ವಿ, ಹಳೆ ವಿದ್ಯಾರ್ಥಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಚಂದ್ರಶೇಖರ್ ಅವರ ಕಿರಾಣಿ ಅಂಗಡಿಗೆ ಬುಧವಾರ ಬೆಳಗ್ಗೆ ಬೆಂಕಿ ಬಿದ್ದು 4 ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ. ಮಾಲಿಕರು ಬೆಳಿಗ್ಗೆ ಅಂಗಡಿಯ ಬಾಗಿಲನ್ನು ತೆರೆದು ದೇವರಿಗೆ ದೀಪವನ್ನು ಹಚ್ಚಿ ಹತ್ತಿರದ ಶ್ರೀ ಮೈಲಾರೇಶ್ವರ ದೇವಸ್ಥಾನಕ್ಕೆ ಹೋಗಿ ಕೆಲವೇ ನಿಮಿಷಗಳಲ್ಲಿ ಅಂಗಡಿಗೆ ವಾಪಾಸ್ಸು ಬರುವುದರೊಳಗೆ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಂಗಡಿಯೊಳಗಿದ್ದ ಫ್ರಿಡ್ಜ್, ಕಪಾಟು, ಶೋಕೇಸ್, ಮುಂತಾದ ಪೀಠೋಪಕರಣಗಳು , ಕಿರಾಣಿ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿ ಶಾಮಕದಳದವರು ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಮತ್ತು ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಗಂಗೊಳ್ಳಿಯ ಡಾ. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜರಗಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ ಟಿ. ಎಲ್. ಶುಭಾ ಶಂಸನೆಗೈದರು. ಗಂಗೊಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫೆರ್ನಾಂಡಿಸ್, ಶೇಷಮ್ಮ, ಶೋಭಾ ಎಸ್., ಕಮಲಾ, ರೇಖಾ ಕೆ., ಸಂಗೀತಾ, ಸಹನಾ ಹಾಗೂ ನಿಖಿತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗೋಪಾಲ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿ ರೇಖಾ ಕೆ., ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆ ಮುಖ್ಯ ಶಿಕ್ಷಕ ಗುರುರಾಜ್ ಆಚಾರ್ಯ, ಸಹಶಿಕ್ಷಕ ಯೋಗೀಶ್, ಜಿ.ವಿ.ಆರ್.ಲಕ್ಷ್ಮಣ ಪೂಜಾರಿ, ಎಸ್ಡಿಎಂಸಿ ಅಧ್ಯಕ್ಷೆ ಸವಿತಾ ಖಾರ್ವಿ, ಅರ್ಚನಾ ಮಹಿಳಾ ಮಂಡಲ ಅಧ್ಯಕ್ಷೆ ಜ್ಯೋತಿ…
