ಅಂಪಾರು: ಶರಾಬು ಕುಡಿಯಲು ಹಣವಿಲ್ಲದೆ ಯುವಕ ನೇಣು ಬಿಗಿದು ಆತ್ಮಹತ್ಯೆ

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ
: ಶರಾಬು ಕುಡಿಯಲು ಹಣವಿಲ್ಲದೆ ಯುವಕನೋರ್ವ ಅದೇ ಚಿಂತೆಯಲ್ಲಿ ಮನೆಯ ಜಂತಿಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಪಾರು ಗ್ರಾಮದಲ್ಲಿ ನಡೆದಿದೆ. ಸುಬ್ರಹ್ಮಣ್ಯ (33) ಆತ್ಮಹತ್ಯೆಗೆ ಶರಣಾದ ಯುವಕ.

Click Here

Call us

Click Here

 ಸುಬ್ರಹ್ಮಣ್ಯ ಮನೆಯಲ್ಲಿಯೇ ಇರುತ್ತಿದ್ದು, ಅಪರೂಪಕ್ಕೊಮ್ಮೆ ಬದಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಶರಾಬು ಸೇವನೆಯ ವ್ಯಸನ ಹೊಂದಿದ್ದರು. ಆತನ ಕುಡಿತ ಬಿಡಿಸಲು ಹಲವಾರು ಬಾರಿ ಮದ್ಯವರ್ಜನ ಶಿಬಿರಕ್ಕೆ ಸೇರಿಸಿದ್ದು, ಆದರೂ ಆತನು ವಿಪರೀತ ಶರಾಬು ಕುಡಿಯುತ್ತಿದ್ದು, ಕುಡಿಯಬಾರದಾಗಿ ಎಷ್ಟು ಸಲ ಬುದ್ದಿ ಹೇಳಿದರೂ ಆತನು ಮನೆಯಲ್ಲಿ ಯಾರ ಮಾತನ್ನು ಕೇಳುತ್ತಿರಲಿಲ್ಲ, ಹೀಗಿರುವಾಗ ಸುಬ್ರಹ್ಮಣ್ಯನು ಶರಾಬು ಕುಡಿಯಲು ಹಣ ಇಲ್ಲದೇ ಇದ್ದುದರಿಂದ ಅದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಮಾಡಿನ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply