ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಾಹಿತ್ಯಿಕ ಸಂಘ ‘ಮೆಟಾಫೋರಿಯಾ’ ದ ಉದ್ಘಾಟನೆ ಹಾಗೂ ವಿಭಾಗದ ಹೊಸ ಪಠ್ಯಪುಸ್ತಕಗಳಾದ ಇಕ್ವಿಟಿ, ಪೆನಾಂಬ್ರ, ರೆಸೊನೆನ್ಸ್ಸ್ ಬಿಡುಗಡೆ ಸಮಾರಂಭ ಕಾಲೇಜಿನ ಆಡಿಯೋ–ವಿಜುವಲ್ ಹಾಲ್‌ನಲ್ಲಿ ಶುಕ್ರವಾರ ನಡೆಯಿತು. ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ಆಳ್ವ, ಇಂತಹ ವೇದಿಕೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವನ್ನು ಉದ್ದೀಪನಗೊಳಿಸಬಲ್ಲದು. ಸಾರ್ವಜನಿಕ ಭಾಷಣ ಕೌಶಲ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆತ್ಮವಿಶ್ವಾಸವು ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಅದು ಅಭ್ಯಾಸದಿಂದ ಬೆಳೆಸಿಕೊಳ್ಳಬಹುದಾದ ಗುಣ. ಭಾಷಣದ ವೇಳೆ ಭಯಕ್ಕೆ ಒಳಗಾಗದೆ, ಸರಳ ಹಾಗೂ ಸ್ಪಷ್ಟ ಸಂವಹನಕ್ಕೆ ಒತ್ತು ನೀಡಬೇಕು ಎಂದು ಹೇಳಿದರು. ಭಾಷಣದ ಸಂಧರ್ಭದಲ್ಲಿ ಬಾಡಿ ಲಾಂಗ್ವೇಜ್, ಪೋಶ್ಚರ್, ಉಚ್ಚಾರಣೆ, ಶಬ್ದ ಸ್ಪಷ್ಟತೆ, ಧ್ವನಿಯ ಮೇಲೆ ಹಿಡಿತ ಮತ್ತು ಶ್ರೋತೃಗಳೊಂದಿಗೆ ನೇರ ಸಂವಾದದ ಮಹತ್ವವನ್ನು ವಿವರಿಸಿದರು. ನೀವು ಮಾತನಾಡುವ ವೇಳೆಯಲ್ಲಿ ಜನರು ನಿಮ್ಮ ಮಾತಿಗೆ ಹೇಗೆ ಸ್ಫಂದಿಸುತ್ತಾರೆ ಎಂಬುದು ಮುಖ್ಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಜೂನ್-1 ನೇ ತಾರೀಕಿನಿಂದ 8ನೇ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದುವ 14 ವರ್ಷದೊಳಗಿನ ಬಾಲಕ/ಬಾಲಕಿಯರನ್ನು ಕ್ರೀಡಾ ವಸತಿ ಶಾಲೆ/ನಿಲಯ ಪ್ರವೇಶಕ್ಕೆ ಆಯ್ಕೆ ಮಾಡಲಾಗುತ್ತಿದ್ದು, ಜನವರಿ 21ರಂದು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಕುಂದಾಪುರ ಗಾಂಧಿ ಮೈದಾನ, ಜನವರಿ 22ರಂದು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಮುನಿಯಾಲು ಕೆಪಿಎಸ್ ಹಾಗೂ ಜನವರಿ 23ರಂದು ಕಾಪು, ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನ ಕ್ರೀಡಾಪಟುಗಳಿಗೆ ಬೆಳಿಗ್ಗೆ 10.00 ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ವಿಬಾಗದ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ 18 ವರ್ಷ ವಯೋಮಿತಿಯೊಳಗಿನ ಪ್ರಥಮ ಪಿಯುಸಿ ಸೇರಲು ಅರ್ಹರಾಗಿರುವ ಆಸಕ್ತ ಕ್ರೀಡಾಪಟುಗಳು ನೇರ ಆಯ್ಕೆಗಾಗಿ ನಿಗದಿತ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ಹಾಗೂ ದೃಧೀಕರಿಸಿದ ಜನನ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಆಯ್ಕೆ ಪ್ರಕ್ರಿಯೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಾಗತಿಕ ಸವಾಲುಗಳಿಗೆ ಉತ್ತರ ನೀಡಲು ಖಾಸಗೀ ಶಿಕ್ಷಣ ಸಂಸ್ಥೆಗಳಿಂದ ಸಾದ್ಯವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಮತ್ತು ಅವರ ಫಲಿತಾಂಶಗಳ ಸುಧಾರಣೆಗೆ ಖಾಸಗೀ ಸಂಸ್ಥೆಗಳ ಪಾತ್ರ ದೊಡ್ಡದು. ಶಿಕ್ಷಣ ಸಂಸ್ಥೆಯೊಳಗೆ ವ್ಯಾಪಾರ ಮನೋಧರ್ಮದ ಬದಲಾಗಿ ಸೇವಾ ಮನೋಭಾವವೇ ಮೂಲವಾಗಬೇಕು. ಅನಗತ್ಯ ಟೀಕೆ ಟಿಪ್ಪಣಿಗಳಿಗೆ ಚಿಂತಿಸದೆ ಫಲಿತಾಂಶದ ಕಡೆಗೆ ದುಡಿಯುವ ಮನಸ್ಸು ನಮ್ಮದಾಗಬೇಕು. ಪ್ರತೀ ಜಿಲ್ಲೆಗಳಲ್ಲೂ ಕುಪ್ಮಾ ಸಂಘಟನೆ ಬಲವಾಗಬೇಕು ಎಂದು ಕುಪ್ಮಾ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಹೇಳಿದರು. ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಷ್ಮಾ) ಇದರ ಉಡುಪಿ ಜಿಲ್ಲಾ ಸಮಿತಿಯನ್ನು ಗುರುವಾರ ಕಡಿಯಾಳಿ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಉದ್ಘಾಟಿಸಿ, ಕುಷ್ಮಾ ಜಿಲ್ಲಾ ಸಮಿತಿಯ ಪದಗ್ರಹಣವನ್ನು ನೆರವೇರಿಸಿ ಗುರುವಾರ ಮಾತನಾಡಿದರು.. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ, ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ದ್ವನಿಯಾಗಿ ಕುಪ್ಮಾ ಕೆಲಸ ನಿರ್ವಹಿಸುತ್ತಿದೆ ಎಂದರು. ಕುಪ್ಮಾ ರಾಜ್ಯ ಸಮಿತಿಯ ಗೌರವಾಧ್ಯಕ್ಷರಾದ ರಾಧಾಕೃಷ್ಣ ಶೆಣೈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬ್ರಹ್ಮಾವರದ ಆಭರಣ ಜ್ಯುವೆಲ್ಲರ್ಸ್‌ನ ಮಳಿಗೆಯಲ್ಲಿ ಸೈನಿಕ ದಿನಾಚರಣೆಯ ಸಂಭ್ರಮದಿಂದ ಆಚರಿಸಲಾಯಿತು. ಮಳಿಗೆಯ ಪ್ರಬಂಧಕರಾದ ಗಣೇಶ್ ಪ್ರಭು ಅವರ ನೇತೃತ್ವದಲ್ಲಿ ಮಾಜಿ ಸೈನಿಕರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸನ್ಮಾನ ಸ್ವೀಕರಿಸಿದ ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಯ ಸುರೇಶ್ ಸಿ. ರಾವ್ ಅವರು ಮಾತನಾಡಿ, ಉಡುಪಿ ಜಿಲ್ಲೆಯ ಆಭರಣ ಜ್ಯುವೆಲ್ಲರ್ಸ್ ನವರು ಸೈನಿಕರನ್ನು ಗುರುತಿಸಿ ಅವರ ಕಾರ್ಯವನ್ನು ಗುರುತಿಸಿದ್ದು ತುಂಬಾ ವಿಶೇಷ ಸಂಗತಿಯಾಗಿದೆ. ಹಾಗೆಯೇ ದೇಶದ ರಕ್ಷಣೆಯಲ್ಲಿ ತೊಡಗಿರುವ ಎಲ್ಲಾ ಸೈನಿಕರನ್ನು ಕೂಡ ಸಂಸ್ಥೆಯವರು ಶ್ಲಾಘಿಸಿದ್ದು ಸಂತೋಷದ ವಿಚಾರವಾಗಿದೆ. ಸಂಸ್ಥೆಯು ತನ್ನ ವ್ಯವಹಾರದೊಂದಿಗೆ ಸೈನಿಕರನ್ನು ತನ್ನ ಅವಿಭಾಜ್ಯ ಅಂಗ ಎಂದು ತಿಳಿದು ಸನ್ಮಾನಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಸೈನಿಕರನ್ನು ಗುರುತಿಸುವ ಕೆಲಸ ನಿರಂತರತೆ ಸೇನೆಗೆ ಸೇರುವ ಯುವಕರನ್ನು ಪ್ರೋತ್ಸಾಹ ನೀಡಿ ಮುಂದಿನ ದಿನಗಳಲ್ಲಿ ಸೇನೆಗೆ ಸೇರುವುದಕ್ಕೆ ಹೊಸ ಆಯಾಮ ನೀಡಿದಂತೆ ತನ್ನ ವ್ಯವಹಾರದ ಜೊತೆಗೆ ದೇಶದ ರಕ್ಷಣೆಯೊಂದಿಗೆ ನಾವು ಕೂಡ ನಿಮ್ಮೊಂದಿಗೆ ಸದಾ ಇರುತ್ತೇವೆ ಎಂಬುದನ್ನು ಸಂಸ್ಥೆ ಮಾಡಿ ತೋರಿಸಿದೆ ಎಂದು ತಿಳಿಸಿದರು. ಆಭರಣ ಮಳಿಗೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2024 ನೇ ಕ್ಯಾಲೆಂಡರ್ ವರ್ಷದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಜ್ಯದ ಕ್ರೀಡಾಪಟುಗಳಿಂದ ಪ್ರೋತ್ಸಾಹಧನ ಸೌಲಭ್ಯ ಪಡೆಯಲು ವೆಬ್‌ಸೈಟ್ https://sevasindhu.karnataka.gov.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9845432303 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಪೌಂಡೇಶನ್ ಮಣೂರು, ಪಡುಕರೆ ರೋಟರಿ ಕ್ಲಬ್, ಹಂಗ ರಕಟ್ಟೆ ಸಾಸ್ತಾನ ನೆನಪು ಮೂವೀಸ್ ಕೋಟ, ಉಸಿರು ಕೋಟ, ಕೋಟ ಸಾರಥ್ಯದಲ್ಲಿ ಜನವರಿ 26ರಂದು ಕೋಟದ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯುವ ಸಮಗ್ರ ಶಿಕ್ಷಕರ ಸಾಹಿತ್ಯ ಸಮ್ಮೇಳನಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆ ಸಮಾಜ ಶಿಕ್ಷಕರಾದ ಸುರೇಶ್ ಮರಕಾಲ ಅವರನ್ನು ಆಯ್ಕೆ ಮಾಡಲಾಗಿದೆ. ಬಹುರೂಪಿ ಶಿಕ್ಷಕರಾಗಿರುವ ಅವರು ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಐದು ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ. ಇಬ್ಬರು ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ, ಕೊಂಡೊಯ್ದು ಅವರ ಪ್ರತಿಭೆಗೆ ಅವಕಾಶ ನೀಡಿದವರು. ಜೀವನ ಶಿಕ್ಷಣದ ವಿಶೇಷ ಶೈಕ್ಷಣಿಕ ಪ್ರಕಾರ ಪ್ರಕಾರದ ಹರಿಕಾರರು ಕಲಿಕೆಯನ್ನು ಲವಲವಿಕೆಯಿಂದ ಮೂಡಿಸುವ ಉದ್ದೇಶದಿಂದ ಔಪಚಾರಿಕ ಕಲಿಕೆಯ ಜೊತೆಗೆ ಶಾಡೋ ಪ್ಲೇ, ನಾಟಕ, ಪೇಪರ್ ಕ್ರಾಫ್ಟ್, ತೋಟಗಾರಿಕೆ, ಚಿತ್ರಕಲೆ ಕೊಳಲು ಕಲಿಕೆ, ವಿವೇಕ ರಾತ್ರಿ ತರಗತಿಗಳು ಮೊದಲಾದ ಕಲಿಕೆಯನ್ನು ವಿದ್ಯಾರ್ಥಿಯಲ್ಲಿ ಮೂಡಿಸಿದವರು. ಪ್ರಕಟಣೆಯಲ್ಲಿ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್, ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 58ನೇ ಮಾಲಿಕೆ ಶ್ರೀ ನಾರಾಯಣ ಗುರು ವಸತಿ ಶಾಲೆ ವಡ್ಡರ್ಸೆ ಇಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪ್ರಾಂಶುಪಾಲರಾದ ಸವಿತಾ ನಾರಾಯಣ್ ಅವರು ಉದ್ಘಾಟಿಸಿ ಕನ್ನಡ ನಮ್ಮ ತಾಯಿ, ನಮ್ಮ ತಾಯಿಗೆ ಬೆಲೆ ಕೊಡಿ ಎಂದು ಕೇಳುವ ಕನ್ನಡಿಗರು ನಾವಾಗಬಾರದು ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿ ಯಕ್ಷಗಾನ ಕಲಾವಿದ ಆದಿತ್ಯ ಹೆಗಡೆ ಅವರು ಶೃತಿ ಬದ್ಧವಾದ ಮಾತು, ನಿಖರ ಪುರಾಣ ಜ್ಞಾನದೊಂದಿಗೆ ಸನ್ನಿವೇಶಕ್ಕೆ ತಕ್ಕುದಾದ ರಸ ಭಾವದೊಂದಿಗೆ ಪಾತ್ರ ಚಿತ್ರಿಸಿ ಅಭಿನಯಿಸಿ ತೋರಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಅವರು ಕವನ ಹಾಗೂ ಕಥೆಗಳನ್ನು ಬರೆಯುವ ಹಾಗೂ ಹೇಳುವ ಕ್ರಮವನ್ನು ತಿಳಿಸಿದರು. ಭಾಗ್ಯೇಶ್ವರಿ ಮಯ್ಯ ಮತ್ತು ಶುಭ ಅಡಿಗ ಅವರು ಕನ್ನಡ ಭಾವಗೀತೆ ಹಾಗೂ…
ಸರಕಾರಗಳು ಗೇರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು: ಡಾ. ಎಂ. ಮೋಹನ ಆಳ್ವ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೇರು ಕಲ್ಪವೃಕ್ಷವೇ ಆಗಿದೆ. ವಿಪುಲ ಭವಿಷ್ಯವನ್ನು ಹೊಂದಿರುವ ಗೇರು ಕೃಷಿಗೆ ಸಿಗುತ್ತಿರುವ ಉತ್ತೇಜನ ತುಂಬಾ ಕಡಿಮೆ. ಗೇರು ಕೃಷಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಸರಕಾರಗಳು ಗೇರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಗೇರು ಉದ್ಯಮದ ಮೂಲಕ ಇಂದು ಸಂಪತ್ ಕುಮಾರ್ ಶೆಟ್ಟಿ ಅವರು ಹಲವಾರು ಜನರಿಗೆ ಉದ್ಯೋಗ ನೀಡುತ್ತಿರುವುದು ಶ್ಲಾಘನಾರ್ಹವಾದ ಕೆಲಸ ಎಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಹೇಳಿದರು. ಅವರು ಇಲ್ಲಿನ ವಂಡಾರು ಬೋರ್ಡ್‌ಲ್ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್, ಶ್ರೀ ಕೃಷ್ಣಪ್ರಸಾದ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಇದರ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಗೇರು ಕೃಷಿಯಲ್ಲಿ ಕೇವಲ ಗೇರು ಬೀಜ ಮಾತ್ರವಲ್ಲ, ಗೇರು ಹಣ್ಣು, ಗೇರು ಎಣ್ಣೆ, ಗೇರು ಸಿಪ್ಪೆಯ ಮೌಲ್ಯವರ್ಧನೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು, ಹೊಸ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೈವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಮ ನಾಮ ಕೋಟಿ ಜಪ ಯಜ್ಞಕ್ಕೆ ಇತ್ತೀಚಿಗೆ ಚಾಲನೆ ನೀಡಲಾಯಿತು. ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ಏಕಾಹ ಅಖಂಡ ಭಜನೋತ್ಸವ ಪ್ರಾರಂಭಿಸಿ ಐವತ್ತು ವರ್ಷಗಳು ಪೂರ್ಣಗೊಳ್ಳುವ ಸಂದರ್ಭದಲ್ಲಿ ಪರಿವಾರ ದೈವಗಳ, ನಾಗ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಭಜನಾ ಸುವರ್ಣ ಮಹೋತ್ಸವದ ಅಂಗವಾಗಿ ಕೋಟಿ ಜಪ ಯಜ್ಞ ನಡೆಯಿತು. ಶ್ರೀ ನಂದಿಕೇಶ್ವರ ದೇವರಿಗೆ ಹಾಗೂ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಶ್ರೀ ರಾಮ ನಾಮ ಕೋಟಿ ಜಪ ಯಜ್ಞ ಪ್ರಾರಂಭಿಸಲಾಯಿತು. ವೇ.ಮೂ. ಮಹಾಬಲ ಭಟ್ ಮತ್ತು ವೇ.ಮೂ. ತಿರುಮಲೇಶ್ವರ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಹಿರಿಯ ಭಜಕರಾದ ಗುಳೈ ಮಂಜಣ್ಣ ಉಪ್ಪುಂದ, ರವಿ ಖಾರ್ವಿ ಅಳ್ವಕೊಡಿ, ಗಣಪತಿ ಪೂಜಾರಿ, ಬಾಬು ದೇವಾಡಿಗ ಕಸಿನಮನೆ, ದೈವಸ್ಥಾನದ ಮಾಜಿ ಅಧ್ಯಕ್ಷ ಕ್ರಷ್ಣ ಮೂರ್ತಿ ದೇವಾಡಿಗ, ಬಿಜೂರು ಗ್ರಾಮ ಪಂಚಾಯಿತ ಸದಸ್ಯರಾದ ರಮೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರಚಾರದ ನೆಲೆಯಲ್ಲಿ ಸಹಕರಿಸುತ್ತಿರುವ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿವೃತ್ತ ಹಿರಿಯ ಕ್ರೀಡಾ ಸಂಪಾದಕ ಸ್ಟಾನ್ ರಾಯನ್ ವಿಶೇಷ ಉಪನ್ಯಾಸ ನೀಡಿದರು. ವಿಶ್ವದ ಅನೇಕ ದೇಶಗಳಿಗೆ ಪ್ರವಾಸ ಮಾಡಿ ಒಲಿಂಪಿಕ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ವರದಿ ಮಾಡಿದ ಅನುಭವವನ್ನು ಹಂಚಿಕೊಂಡ ಅವರು, ಕ್ರೀಡಾ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯೇ ವರದಿಯ ಮೂಲ ತತ್ವವಾಗಬೇಕು ಎಂದು ಹೇಳಿದರು. ಕ್ರೀಡಾ ವರದಿಗಾರರು ಸ್ಥಳೀಯ ಕ್ರೀಡಾ ಪಂದ್ಯಗಳಿಗೆ ಹಾಜರಾಗುವ ಮೂಲಕ ಕ್ರೀಡೆಯ ನೈಜ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಸಮಯದ ಪರಿಧಿಯೊಳಗೆ ಕೆಲಸ ನಿರ್ವಹಿಸುವ ಕಲೆಯನ್ನು ಮೊದಲು ಅರಿಯಬೇಕು. ಸರಳ ಹಾಗೂ ಸ್ಪಷ್ಟ ಬರವಣಿಗೆಗೆ ಆದ್ಯತೆ ನೀಡಬೇಕು. ಕ್ರೀಡಾ ವರದಿಗಳು ಜನರಿಗಾಗಿಯೇ ಹೊರತು ಯಾರನ್ನೂ ಮೆಚ್ಚಿಸಲು ಅಲ್ಲ ಎಂದು ತಿಳಿಸಿದರು. ಭಾರತದಲ್ಲಿ ಡೋಪಿಂಗ್ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪರಿಶುದ್ಧ ಕ್ರೀಡೆಯ…
