Author: ನ್ಯೂಸ್ ಬ್ಯೂರೋ

ಕುಂದಾಪುರ: ಶತಮಾನೋತ್ಸವದ ಸಂಭ್ರಮದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಮತ್ತು ಸಹೋದರರು ಅವರ ತಂದೆ ತಾಯಿ ದಿ. ಸುಬ್ರಹ್ಮಣ್ಯ ಮಂಜರು ಮತ್ತು ವಿಶಾಲಾಕ್ಷಿ ಮಂಜರ ಹೆಸರಿನಲ್ಲಿ ಕೊಡಮಾಡುವ ಸುಸಜ್ಜಿತ ಕಂಪ್ಯೂಟರ್ ಕೊಠಡಿಯ ಶಿಲಾನ್ಯಾಸ ಕಾರ್ಯಕ್ರಮ ಡಿ.೧೩ರಂದು ಶಾಲೆಯ ವಠಾರದಲ್ಲಿ ನಡೆಯಿತು. ಶತಮಾನೋತ್ಸವ ಕಟ್ಟಡ ದಾನಿಗಳಾದ ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಧರ್ಮದರ್ಶಿ ಸೀತಾರಾಮ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ತಾ.ಪಂ.ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಹರ್ಜಿ ಕರುಣಾಕರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ ನಾಯ್ಕ್ ರಾಯಪ್ಪನಡಿ, ಶಾಲಾ ಮುಖ್ಯೋಪಾಧ್ಯಾಯರಾದ ಮೋಹಿನಿ ಬಾ, ನಾಗರಾಜ ಮಂಜರು ಮಾರಣಕಟ್ಟೆ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಶ್ರೀನಿವಾಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿಗೆ ಸಮೀಪದ ಕಂಬದಕೋಣೆಯ ಹೊಳೆಬಾಗಿಲು ಎಂಬಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಪ್ರಭಾಕರ ದೇವಾಡಿಗ (25) ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಘಟನೆಯ ವಿವರ: ನಾಗೂರಿನ ಗ್ಯಾರೇಜ್ ಒಂದರಲ್ಲಿ ಮ್ಯಾಕ್ಯಾನಿಕ್ ಆಗಿರುವ ಪ್ರಭಾಕರ ದೇವಾಡಿಗ ಊಟಕ್ಕೆಂದು ಬಿಜೂರಿನ ತಮ್ಮ ಮನೆಗೆ ಬಂದಿದ್ದರು. ಊಟ ಮುಗಿಸಿ ಮತ್ತೆ ನಾಗೂರಿನ ಗ್ಯಾರೇಜಿಗೆ ಹಿಂತಿರುಗುತ್ತಿದ್ದ ವೇಳೆ ಕಂಬದಕೋಣೆಯ ಹೊಳೆಬಾಗಿಲು ಎಂಬಲ್ಲಿ ಕುಂದಾಪುರ ಕಡೆಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಟ್ಯಾಂಕರ್ ಮುಖಾಮುಖಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕುಂದಾಪ್ರ ಡಾಟ್ ಕಾಂ)

Read More

ಕುಂದಾಪುರ: ಪುತ್ತೂರಿನಲ್ಲಿ ನಡೆದ ರೋಟರಿ 3180 ಇದರ ಜಿಲ್ಲಾ ಕ್ರೀಡಾಕೂಟ ರೋಟಾ ಸ್ಫೋರ್ಟ್ಸ್‌ನಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರದ ಸದಸ್ಯ ಕಿಶೋರ್ ಕೋಟ್ಯಾನ್ ಡಿಸ್ಕಸ್ ತ್ರೋನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

Read More

ಕೊಲ್ಲೂರು: ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ನಿರಂತರ ಮೌಲ್ಯ ಮಾಪನ ಕಾರ್ಯದಲ್ಲಿ ಒಂದು ಉತ್ತಮ ಸಾಧನವಾಗಿದೆ. ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಅಧಿಕವಾಗಬೇಕು ಎಂದು ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ನಾಗರಾಜು ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೈಂದೂರು ಇವರ ನೇತೃತ್ವತ್ವದಲ್ಲಿ ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಜಯೇಂದ್ರ ನಗರದ ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್‌ನ ಆತಿಥ್ಯ ಮತ್ತು ಸಹಭಾಗಿತ್ವದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಟಲಾಂ ನಾಯಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮಾತನಾಡಿ ಮುಂದಿನ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆ ಇನ್ನೂ ಹೆಚ್ಚಾಗುವುದು ಅವಶ್ಯಕ ಹಾಗೂ ಅನಿವಾರ್ಯಎಂದರು. ಸ್ಥಳೀಯ ಸಂಸ್ಥೆ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಅಧ್ಯಕ್ಷತೆವಹಿಸಿದ್ದರು. ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ನರಸಿಂಹ ದೇವಾಡಿಗ, ಕಾರ್ಯದರ್ಶಿ ಮಂಜುನಾಥ ಹೆಗಡೆ, ಭಾರತ್…

Read More

ಬೈಂದೂರು: ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವು ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರೀಯೆ ಎಂಬುದನ್ನು ಸಾಧಿಸಿ ತೋರಿಸಬೇಕು. ಇಂತಹ ವಿಶೇಷ ಶಿಬಿರದಿಂದ ಪಡೆದ ಉತ್ತಮ ಅನುಭವಗಳು ಭವಿಷ್ಯದ ಬಾಳಿಗೆ ದಾರಿದೀಪವಾಗಬೇಕು ಎಂದು ಗೋಳಿಹೊಳೆ ಗ್ರಾಪಂ ಮಾಜಿ ಅಧ್ಯಕ್ಷ ಎಂ. ಆರ್. ಶೆಟ್ಟಿ ಹೇಳಿದರು. ಗೋಳಿಹೊಳೆ ಮಹಿಷಮರ್ಧಿನಿ ಸಭಾಂಗಣದಲ್ಲಿ ನಡೆದ ಕುಂದಾಪುರ ಬಿ. ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರದ ಮುಖ್ಯ ಸಂಯೋಜಕ ಹಾಗೂ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದ ಮೊಕ್ತೆಸರ ಶಿವರಾಜ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಅಧ್ಯಕ್ಷ ಮಂಜಯ್ಯ ಪೂಜಾರಿ ಎಳಜಿತ, ಶ್ರೀಯಕ್ಷೇಶ್ವರಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ನಾಗರಾಜ ಪೂಜಾರಿ, ಸಸಿಹಿತ್ಲು ಮಂಜು ಪೂಜಾರಿ ಕಳವಾಡಿ, ದಿಲೀಪ್‌ರಾಜ್ ಬೆಂಗಳೂರು, ಶೇಷು ಮರಾಠಿ ಹಾಲಾಡಿ, ರಘುರಾಮ ಶೆಟ್ಟಿ ಮುಂಡ್ಸಾಲು, ರಾಜು ನಾಯ್ಕ್, ಗುರುಚರಣ್ ಗೋಳಿಹೊಳೆ, ಬೈಂದೂರು ಪ್ರಥಮ ದರ್ಜೆ ಕಾಲೇಜಿನ…

Read More

ಕುಂದಾಪುರ: ಬೈಂದೂರು ವಲಯದ ಹಕ್ಲಾಡಿ ಯಳೂರು ತೊಪ್ಲುವಿನ ಪ್ರಾಥಮಿಕ ಶಾಲೆಗೆ 50 ವರ್ಷಗಳ ಸುವರ್ಣ ಸಂಭ್ರಮ. 1961ನೇ ಇಸವಿಯಲ್ಲಿ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಶಾಲೆ ಸಾರ್ಥಕ ೫೦ ವರ್ಷಗಳನ್ನು ಪೂರೈಸಿ ಡಿ.೧೭ ರಂದು ಸುವರ್ಣ ಸಂಭ್ರಮವನ್ನು ಆರಿಸಿಕೊಳ್ಳುತ್ತಿದೆ. ಶಾಲೆ ಹಿನ್ನಲೆ: 1961ರಲ್ಲಿ ಪ್ರಾರಂಭವಾದ ಯಳೂರು ತೊಪ್ಲುವಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಸರದ ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ನೀಡಿ ಅವರನ್ನು ಸುಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಪ್ರೇರಣೆ ನೀಡಿದ ವಿದ್ಯಾದೇಗುಲವಾಗಿದೆ. ಇಲ್ಲಿ ಶಿಕ್ಷಣ ಪಡೆದವರು ವಕೀಲರಾಗಿ, ಇಂಜಿನಿಯರ್‌ಗಳಾಗಿ, ವೈದ್ಯರುಗಳಾಗಿ ಉದ್ದಿಮೆದಾರರಾಗಿ ಕೀರ್ತಿಗಳಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ. 5 ಕೊಠಡಿಗಳು, ಶೌಚಾಲಯ, ಅಕ್ಷರ ದಾಸೋಹ ಕೊಠಡಿ, ಶಾಲಾ ಕೈತೋಟ, ವಾಚನಾಲಯ, ವಿದ್ಯಾರ್ಥಿ ಸಹಕಾರ ಸಂಘ, ಬಾವಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿರುವ ಶಾಲೆಗೆ ಸಹೃದಯರ ಸಹಾಯ ಹಸ್ತವೂ ಬೇಕಿದೆ. ಇಲ್ಲಿ ಪ್ರಮುಖವಾಗಿ ಆಟದ ವೈದಾನ, ಆವರಣಗೋಡೆ, ಕಂಪ್ಯೂಟರ್, ವಿಜ್ಞಾನ ಉಪಕರಣಗಳು, ಶಾಲಾ…

Read More

ಬೈಂದೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಇವರಿಗೆ ಹೆಚ್ಚಿನ ಮತ ದೊರಕುವಂತೆ ಮಾಡಬೇಕು. ಈ ಸಂದರ್ಭ ಅಪಪ್ರಚಾರವನ್ನೇ ಬಂಡವಾಳವಾಗಿಟ್ಟುಕೊಂಡು ಗೊಂದಲ ಸೃಷ್ಟಿಸುವವರನ್ನು ಸಾಧ್ಯವಾದಷ್ಟು ದೂರವಿಡಿ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಹೇರೆಂಜಾಲು ವಿಜಯ ಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿ, ಕೊಲ್ಲೂರು, ಕಾಲ್ತೋಡು, ಖಂಬದಕೋಣೆ, ಜಡ್ಕಲ್, ಗೋಳಿಹೊಳೆ ಮತ್ತು ಹೇರೂರು ಗ್ರಾಪಂ ವ್ಯಾಪ್ತಿಯ ಪಕ್ಷದ ಸ್ಥಳೀಯ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷದ ಅಧಿಕೃತ ಅಭ್ಯರ್ಥಿಗೆ ಗೆಲುವಿಗೆ ಬೇಕಾದಷ್ಟು ಮತಗಳಿದೆ. ಪಕ್ಷದಲ್ಲಿ ವರಿಷ್ಟರ ಹಾಗೂ ಅಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಹಾಗೂ ಕಾಂಗ್ರೇಸ್ ಪಕ್ಷ ಯಾರನ್ನೂ ಕಡೆಗಣಿಸಿಲ್ಲ ಎಂದರು. ಪ್ರತಾಪ್ಚಂದ್ರ ಶೆಟ್ಟಿಯವರು ವಾರಾಹಿ ಯೋಜನೆ, ಸಿಆರ್‌ಝೆಡ್ ಸಮಸ್ಯೆ, ಕುಡಿಯುವ ನೀರಿಗೆ ಶಾಶ್ವತ ಪರಿಹಾರವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಸ್ತೂರಿ ರಂಗನ್ ಹೋರಾಟಗಳಲ್ಲಿ ಮೂಂಚೂಣಿಯಲ್ಲಿದ್ದು, ರೈತರ…

Read More

ಗಂಗೊಳ್ಳಿ: ಡಿ.27ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯು ಮುಂಬರುವ ತಾಪಂ., ಜಿಪಂ., ಹಾಗೂ ವಿಧಾನಸಭಾ ಚುನಾವಣೆಗೆ ಅಡಿಗಲ್ಲಾಗಿದ್ದು, ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿದ ಮತ ದೊರೆತು ಜಯಗಳಿಸಿದರೆ ಮುಂಬರುವ ಚುನಾವಣೆಗೆ ಹೆಚ್ಚಿನ ಸ್ಫೂರ್ತಿ, ಆತ್ಮವಿಶ್ವಾಸ ದೊರೆಯಲಿದೆ. ಹೀಗಾಗಿ ಈ ಚುನಾವಣೆಯನ್ನು ಯಾರೊಬ್ಬರೂ ಹಗುರವಾಗಿ ಪರಿಗಣಿಸದೆ ಬಿಜೆಪಿಯ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ತ್ರಾಸಿಯ ಪ್ರವಾಸಿ ಮಂದಿರದ ಬಳಿ ವಿಧಾನಪರಿಷತ್ ಚುನಾವಣೆಯ ಪೂರ್ವಭಾವಿಯಾಗಿ ನಡೆದ ತ್ರಾಸಿ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಪಂ. ಸದಸ್ಯರ ಹಾಗೂ ಪಕ್ಷದ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷವು ಒಂದು ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದ್ದು, ಎಲ್ಲಾ ಗ್ರಾಪಂ., ತಾಪಂ. ಹಾಗೂ ಜಿಪಂ ಸದಸ್ಯರು ಪಕ್ಷದ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು. ಇನ್ನುಳಿದ ಯಾವುದೇ ಅಭ್ಯರ್ಥಿಗೆ ಪ್ರಥಮ ಅಥವಾ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು…

Read More

ಕುಂದಾಪುರ: ಸ್ವಚ್ಛತೆಯ ಬಗ್ಗೆ ನಾವು ದೊಡ್ಡ ದೊಡ್ಡ ಮಾತನಾಡುತ್ತೇವೆ. ಭಾಷಣಗಳನ್ನು ಬಿಗಿಯುತ್ತೇವೆ. ಸರಕಾರವೂ ಸ್ವಚ್ಛತೆಯ ಅರಿವು ಮೂಡಿಸಲೆಂದೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ವಾಸ್ತವವಾಗಿ ಪರಿಸರ ಹಾಗೂ ಸ್ವಚ್ಚತೆಯ ಕಾಳಜಿ ಫೋಟೋಷ್ಟೇ ಸೀಮಿತವಾಗಿದೆ ಎಂಬುದನ್ನು ನಮ್ಮ ಸುತ್ತಮುತ್ತಲಿನ ಹಲವಾರು ನಿದರ್ಶನಗಳು ಸಾಕ್ಷೀಕರಿಸಿವೆ. ಆದರೆ ಕುಂದಾಪುರದ ನಗರದಲ್ಲೊಬ್ಬಳು ಮಹಿಳೆ ಸ್ವಚ್ಚ ಭಾರತ್‌ಗಾಗಿ ಸ್ವಹಿತಾಸಕ್ತಿಯಿಂದಲೇ ಪಣತೊಟ್ಟಿದ್ದಾಳೆ. ಯಾವ ಪ್ರಚಾರವೂ ಬಯಸದೆ, ತನ್ನಷ್ಟಕ್ಕೆ ತಾನು ಪೊರಕೆ ಹಿಡಿದು ಬೀದಿಗಳನ್ನು ಗುಡಿಸುತ್ತಾಳೆ. ಅಂಗಡಿ ಮುಂಗಟ್ಟುಗಳನ್ನು ಸ್ವಚ್ಚಗೊಳಿಸುತ್ತಾಳೆ ಮರು ಮಾತನಾಡದೇ, ಯಾವುದೇ ಪ್ರತಿಫಲಾಪೇಕ್ಷೆಯೂ ಇಲ್ಲದೇ ಮುಂದಕ್ಕೆ ಸಾಗುತ್ತಾಳೆ. [quote font_size=”14″ bgcolor=”#ffffff” arrow=”yes” align=”right”]ಆಕೆ ಯಾರೂ, ಏನು ಎಂಬುದು ತಿಳಿದಿಲ್ಲ. ಬೆಳಿಗ್ಗೆ ಬಂದು ಚರ್ಚ್ ರಸ್ತೆಯ ಬೀದಿಗಳನ್ನು ಗುಡಿಸುತ್ತಿದ್ದುದು ಕಂಡುಬಂತು. ಮಾತನಾಡಿಸಲೂ ಪ್ರಯತ್ನಿಸಿದೆ. ಆದರೆ ಅವಳ ಅಸ್ಪಷ್ಟವಾದ ಮಾತು ಅರ್ಥವಾಗಲಿಲ್ಲ. ಹಿಂದಿ ಮಾತನಾಡುವ ಶೈಲಿ ನೋಡಿದರೆ ಉತ್ತರ ಭಾರತದ ಕಡೆಯವಳು ಎಂದೆನ್ನಿಸುತ್ತದೆ. – ಜೋಯ್ ಜೆ. ಕರ್ವೆಲ್ಲೊ[/quote] ಹೌದು. ಅಂದು ಕುಂದಾಪುದ ಚರ್ಚ್ ರಸ್ತೆಯಲ್ಲಿ ಡಿಢೀರ್ ಪ್ರತ್ಯಕ್ಷಳಾದ ಆ…

Read More

ಕುಂದಾಪ್ರ ಡಾಟ್ ಕಾಂ. ಕುಂದಾಪುರ, ಡಿ15: ಸಪ್ತಕ್ಷೇತ್ರಗಳಲ್ಲೊಂದಾದ ತಾಲೂಕಿನ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಶನಿವಾರದಿಂದ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳು ಕಳೆದ ಮೂರು ದಿನಗಳಿಂದ ವಿಧಿವತ್ತಾಗಿ ನಡೆಯುತ್ತಿದ್ದು ನಡೆಯುತ್ತಿದ್ದು, ಇಂದು ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ನಾಳೀಕೇರ ಮಹಾಗಣಪತಿ ಯಾಗ ನಡೆಯಿತು. ಮೊಲದ ದಿನ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ಥಿವಾಚನ, ಗಣಪತಿ ಹೋಮ, ಅಥರ್ವ ಶೀರ್ಷ ಉಪನಿಷತ್ ಹೋಮ, ಸತ್ಯ ಗಣಪತಿ ವೃತ, ಮಹಾ ಪೂಜೆ, ರಾತ್ರಿ ರಂಗ ಪೂಜೆ, ಡೋಲಾರೋಹಣ, ಪಲ್ಲಕಿ ಉತ್ಸವ ನಡೆಯಿತು. ಎರಡನೇ ದಿನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯ ಗಣಪತಿ ವೃತ ಮಹಾಪೂಜೆ ನಡೆಯಿತು. ರಾತ್ರಿ ಪುರಮೆರವಣಿಗೆ ರಂಗ ಪೂಜೆ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಸಂಜೆ ಗಂಟೆಯಿಂದ ಲಯಾಭಿನಯ ನಾಟ್ಯಧಾಮ ಬೆಂಗಳೂರು ಇವರಿಂದ ಲಲಿತಾ ಸಹಸ್ರನಾಮ ನೃತ್ಯ ರೂಪಕ, ಮೂರನೇ ದಿನ ಮಾರ್ಗಶಿರ…

Read More