ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ರಿ. ಆಶ್ರಯದಲ್ಲಿ ಸಾಹಿತಿ ಕೆ. ಪ್ರಭಾಕರನ್ ಅವರು ಮಲಯಾಳಂನಿಂದ ಅನುವಾದಿಸಿದ ಮೂರು ಕೃತಿಗಳ ಅವಲೋಕನ ಕಾರ್ಯಕ್ರಮ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಬರಹಗಾರ್ತಿ, ಅನುವಾದಕಿ, ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ. ಐತಾಳ್ ಅವರು ಕೆ. ಪ್ರಭಾಕರನ್ ಅನುವಾದಿಸಿದ ‘ಯಮುನಾನದಿಯ ತೀರದಲ್ಲಿ ‘ ಕುರಿತು ಮಾತನಾಡಿ, ಮಲೆಯಾಳದ ಪ್ರಸಿದ್ದ ಕಥೆಗಾರ ಎಂ. ಮುಕುಂದನ್ ಅವರ ಕೃತಿಗಳ ವೈಶಿಷ್ಟ್ಯಗಳ ಕುರಿತು ಮೂಲ ಮಲೆಯಾಳದಲ್ಲಿ ಇ.ಎಂ.ಅಶ್ರಫ್ ಬರೆದ ಪುಸ್ತಕ ಇದು. ಎಂ. ಮುಕುಂದನ್ ಅವರ ಕೆಲವು ಕಾದಂಬರಿಗಳಲ್ಲಿ ಕಾಣುವ ಮಾದಕ ದ್ರವ್ಯ ವ್ಯಸನ ಮತ್ತು ಲೈಂಗಿಕ ವಿಚಾರಗಳ ಕುರಿತು ಮಲೆಯಾಳದ ಓದುಗರು ವ್ಯಕ್ತ ಪಡಿಸಿದ ಆಕ್ಷೇಪಗಳ ಹಿನ್ನೆಲೆಯಲ್ಲಿ ಆ ಕಾದಂಬರಿಗಳು ಹುಟ್ಟಿದ ಜಾಗವಾದ ದೆಹಲಿ ಮತ್ತು ಹರಿದ್ವಾರಗಳಿಗೆ ಮುಕುಂದನ್ ಜತೆಗೆ ಹೋಗಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸನ್ನಿವೇಶಗಳನ್ನು ಚಿತ್ರಿಸುವಲ್ಲಿ ಈ ಕೃತಿ ಹುಟ್ಟಿಕೊಂಡಿದೆ ಎಂದರು. ಅಸ್ತಿತ್ವವಾದಿ ನೆಲೆಯಲ್ಲಿ ರಚಿತವಾದ ‘ದೆಹಲಿ’ ಮತ್ತು ‘ಹರಿದ್ವಾರದಲ್ಲಿ ಗಂಟೆಗಳು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಯಡ್ತರೆ ಗ್ರಾಮದ ನಿವಾಸಿ ನಿಟ್ಟೆ ಕಾಲೇಜಿನ ಪದವಿ ವಿದ್ಯಾರ್ಥಿ ಅಭಿನಂದನ್ (20) ನಾಪತ್ತೆಯಾಗಿದ್ದಾನೆ. ಫೆ.21ರಂದು ಮನೆಗೆ ಬಂದು ಮರುದಿನ ಮನೆಯಿಂದ ಕಾಲೇಜಿಗೆ ಹೋದವನು ಒಂದೆರಡು ಬಾರಿ ಕರೆ ಮಾಡಿದ್ದನು. ಬಳಿಕ ಪೋನ್ ಮಾಡಿರಲಿಲ್ಲ. ನಿಟ್ಟೆ ಕಾಲೇಜಿನಲ್ಲಿ ದ್ವಿತಿಯ ವರ್ಷದ ವಿಎಲ್‌ಎಸ್‌ಐ ಪದವಿಯಲ್ಲಿ ವ್ಕಾಸಂಗ ಮಾಡುತ್ತಿದ್ದ ಅಭಿನಂದನ್ ಕಾಲೇಜಿನ ಹಾಸ್ಟೇಲ್‌ನಲ್ಲಿ ಉಳಿದುಕೊಂಡಿದ್ದನು. ರಜೆಯಲ್ಲಿ ಬೈಂದೂರು ಮನೆಗೆ ಬಂದು ಹೋಗುತ್ತಿದ್ದನು. ಕಾಲೇಜಿಗೆ ಹೋದವನು ಪೋನ್ ಮಾಡದ್ದರಿಂದ ಅನುಮಾನಗೊಂಡು ತಂದೆ ಮಹಾಬಲೇಶ್ವರ ಅವರು ಮಾ.26ರಂದು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಬಗ್ಗೆ ವಿಚಾರಿಸಿದಾಗ ಆತ ರಜೆಯಲ್ಲಿ ಹೋದವ ಕಾಲೇಜಿಗೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಪೋನ್ ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಕಾಣೆಯಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ದೇವಳ ಸಮೀಪದ ಸಭಾಭವನದ ಟೆರೇಸ್‌ನಲ್ಲಿ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ಮೃತರು ಉಳ್ಳೂರು ಗ್ರಾಮದ ನಿವಾಸಿ ಕೆ. ಶ್ರೀನಿವಾಸ (85) ಎಂದು ಗುರುತಿಸಲಾಗಿದೆ. ದೇವರ ಅಪಾರ ಭಕ್ತರಾಗಿದ್ದ ಅವರು ಆಗಾಗ್ಗೆ ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಮಾ.18ರಂದು ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ಯಾರಿಗೂ ಹೇಳದೆ ಹೊರಟು ಹೋಗಿದ್ದರು. ಹುಡುಕಾಡಿದರು ಪತ್ತೆಯಾಗದ ಕಾರಣ ಮನೆಯವರು ಕೋಟ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ಸಲ್ಲಿಸಿದ್ದರು. ಬುಧವಾರ ದೂರು ಸಂಜೆ ಸಭಾಭವನ ವಠಾರದಲ್ಲಿ ದುರ್ವಾಸನೆ ಕಂಡುಬಂದಿದ್ದು ಪರಿಶೀಲನೆ ನಡೆಸಿದಾಗ ಟೆರೇಸ್‌ನಲ್ಲಿ ಅಡಕೆ ಒಣಗಿಸಲು ಹಾಕಲಾದ ಪ್ಲಾಸ್ಟಿಕ್ ಶೆಡ್‌ನ ಒಳಗೆ ಬಿಸಿಲಿನ ಹೊಡೆತಕ್ಕೆ ಬೆಂದು ಕರಕಲಾಗಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಾಯಿಲೆಯಿಂದ ವಯೋಸಹಜ ಬಳಲುತ್ತಿದ್ದವರು ದೇವರ ಮೇಲಿನ ಅಪಾರ ಭಕ್ತಿಯ ಕಾರಣಕ್ಕೆ ಉಪವಾಸ ಮಾಡಿ ಅಸ್ವಸ್ಥರಾಗಿಯೋ ಅಥವಾ ಬೇರಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ಪುತ್ರಿ ಗೀತಾ ಉಳ್ಳೂರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ…
ಕುಂದಾಪ್ರ ಡಾಟ್ ಕಾಂ ಸುದ್ದಿ.|ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ ಆಯೋಜಿಸಿದ್ದ ಎರಡು ದಿನಗಳ ’ಆಗೋನ್-ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಯುಜಿ ಮತ್ತು ಪಿಜಿ ಫೆಸ್ಟ್‌ನ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಮಂಗಳೂರಿನ ಸಾಯಿ ಪ್ರೊಡಕ್ಷನ್ ನಿರ್ದೇಶಕ ಸಾಹಿಲ್ ಎಸ್. ರೈ, ಛಲ ಬಿಡದೆ ಪ್ರಯತ್ನಿಸಿದರೆ ಯಶಸ್ಸು ನಮ್ಮದಾಗಬಲ್ಲದು. ಯಶಸ್ಸನ್ನು ಗಳಿಸುವ ಹಾದಿಯ ಆರಂಭ ಬದುಕಿನಲ್ಲಿ ಏನಾಗಬೇಕು ಎಂದು ತಿಳಿದಿರುವುದಾಗಿದೆ. ಯಶಸ್ಸಿನ ಮೆಟ್ಟಿಲನ್ನು ಬರುವ ಅವಕಾಶವನ್ನು ಬಳಸಿಕೊಳ್ಳುವ ಮುಖಾಂತರ ಏರಬಲ್ಲೇವು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಂಸ್ಥೆಯ ವಿವಿಧ ಚಟುವಟಿಕೆಗಳಲ್ಲಿ ಎಂಬಿಎ ವಿದ್ಯಾರ್ಥಿಗಳ ತೊಡಗುವಿಕೆಯನ್ನು ಕೊಂಡಾಡಿದರು. ವಿಭಾಗದ ಮುಖ್ಯಸ್ಥೆ ಪ್ರಿಯ ಸಿಕ್ವೇರಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸುರತ್ಕಲ್‌ನ ಎನ್‌ಐಟಿಕೆ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಆಗೋನ್ ಫೆಸ್ಟ್‌ನ ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ಪಿಜಿ ವಿಭಾಗದ ಮುಖ್ಯಸ್ಥೆ ಪ್ರಿಯ ಸಿಕ್ವೇರಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಸಾಫ್ಟ್ ಬಾಲ್ ಪಂದ್ಯಾಟದ ಉದ್ಘಾಟನೆ ನಡೆಯಿತು. ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಸದಸ್ಯ, ಯುವ ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ವರ್ತಮಾನದ ತುರ್ತು ಎಂದರು. ಇದೇ ಸಂದರ್ಭ ಕಾಲೇಜಿನ ಕ್ರೀಡಾ ಸಾಧನೆಯನ್ನು ಪ್ರಶಂಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ| ಜರಾಲ್ಡ್ ಸಂತೋಷ್ ಡಿಸೋಜ, ಸಹಾಯಕ ನಿರ್ದೇಶಕರಾದ ಡಾ. ಪ್ರಸನ್ನ, ಆರ್. ಎನ್.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯನ ದೇಹ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವುದರೊಂದಿಗೆ ಉತ್ತಮ ಆರೋಗ್ಯ ಹೊಂದಿ ಪ್ರತಿದಿನ ಕ್ರಿಯಾಶೀಲರಾಗಿ ಇರಲು ಸಾಧ್ಯ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಅಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆಗಳ ಸಹಕಾರದೊಂದಿಗೆ ನಡೆದ 2023-24 ನೇ ಸಾಲಿನ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ದೈಹಿಕ ಶಿಕ್ಷಕರುಗಳಲ್ಲಿ ಉತ್ಸಾಹ ಮೂಡಿಸಲು ಅವರುಗಳಿಗೆ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡಾಕೂಟಗಳಿಂದ ಸದೃಢ ಆರೋಗ್ಯ ಹೊಂದಬಹುದಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ದೈಹಿಕ ಶಿಕ್ಷಕರುಗಳಿಗೆ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸದ ಸಂಗತಿ ಎಂದರು. ಮಕ್ಕಳನ್ನು ಕ್ರೀಡೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾಷೆ ಒಂದು ಜನಾಂಗ ಮತ್ತು ಸಂಸ್ಕೃತಿಯ ಅಸ್ಮಿತೆ. ಭಾಷೆಯ ಬಳಕೆಯಿಂದ ಅದರ ಉಳಿವು ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ. ವ್ಯಕ್ತಿಗೆ ಅಭಿವ್ಯಕ್ತಿಯಿಂದಲೇ ನೆಲೆ ಮತ್ತು ಬೆಲೆ. ಕಾಲೇಜು ಹಂತದಲ್ಲಿ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಸಮರ್ಥ ಸಂವಹನಕಾರರಾದಲ್ಲಿ ಉಜ್ವಲ ಭವಿಷ್ಯವನ್ನು ಹೊಂದಬಹುದೆಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾದ್ಯಾಪಕ ಸಂಜೀವ ಕುದ್ಪಾಜೆ ಹೇಳಿದರು. ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿ ಐಕ್ಯೂಎಸಿ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಭಾಷೆ ಮತ್ತು ಸಂವಹನ ಕಲೆ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ವಿದ್ಯಾರ್ಥಿಗಳು ಸಂವಹನ ಕಲೆಯನ್ನು ಕರಗತ ಮಾಡಿಕೊಂಡು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬಹುದಾಗಿದೆ ಎಂದರು. ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು., ವಿದ್ಯಾರ್ಥಿ ಪ್ರತಿನಿಧಿಗಳಾದ ರಶ್ಮಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯ ಹಾಗೂ ಅರಣ್ಯ ಆಧಾರಿತ ಆದಿವಾಸಿ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಂದ ಸೆಲ್ಫ್ ಎಂಪ್ಲಾಯಿಡ್ ಟೈಲರಿಂಗ್, ಅಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್, ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ಫ್ಯಾಷನ್ ಡಿಸೈನರ್ ಕೋರ್ಸುಗಳ ಕೌಶಲ್ಯಾಭಿವೃದ್ಧಿ (ತಾಂತ್ರಿಕ ನೈಪುಣ್ಯತೆ) ತರಬೇತಿಗೆ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574892 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಲಾಂಗಣ ರಾಜಧಾನಿ ನಗರ ಹೈದರಾಬಾದಿನಲ್ಲಿ ಮಾ. 30 ರಂದು ನಡೆಯಲಿರುವ ಕೊಂಕಣಿ ಬಂಧುಗಳ ’ಯುಗಾದಿ ಸಮ್ಮೇಳನ 2025’ ಕಾರ್ಯಕ್ರಮದಲ್ಲಿ ಈ ಬಾರಿ ’ಆಮ್ಮಿ ಆನಿ ಆಮ್ಚಿಗೆಲೆʼ (ನಾವು ಮತ್ತು ನಮ್ಮವರು) ವಿಷಯವಾಗಿ ಉಪನ್ಯಾಸಕ್ಕೆ ಚಿತ್ರನಟ ಜಾದೂಗಾರ ಓಂಗಣೇಶ್ ಉಪ್ಪುಂದ ಅವರನ್ನು ಆಹ್ವಾನಿಸಲಾಗಿದೆ. ಕನ್ನಡ ಕೊಂಕಣಿ ಭಾಷೆಗಳಲ್ಲಿ ಸಂಸ್ಕೃತಿ ಹಾಗೂ ಜೀವನಮೌಲ್ಯದ ಕುರಿತು ಉತ್ತಮ ವಾಗ್ಮಿಯಾಗಿ, ಹಲವು ಪ್ರವಾಸ ಕಥನ ಅಂಕಣ ಬರಹಗಳಲ್ಲದೇ ನಾಟಕ ಅನುವಾದಕರಾಗಿ ಕೊಂಕಣಿ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿಯಾಗಿ ಮಾನ್ಯರಾದ ಓಂಗಣೇಶ್ ತಮ್ಮ 45 ದೇಶದ ಪ್ರವಾಸಾನುಭವ ಹಾಗೂ ಸುದೀರ್ಘ ಸಾಂಸ್ಕೃತಿಕ ಹಿನ್ನೆಲೆಯಿಂದ ಹೈದರಾಬಾದಿನ ಈ ಯುಗಾದಿ ಸಮಾರಂಭಕ್ಕೆ ವಿಶೇಷ ಉಪನ್ಯಾಸಕರಾಗಿ ಗೌರವ ಪಡೆದಿದ್ದಾರೆ. ತಮ್ಮ ಮೂಲ ಪರಂಪರೆ ಭಾಷೆ ಸಂಸ್ಕೃತಿಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ 1964ರಲ್ಲಿ ಅಸ್ತಿತ್ವಕ್ಕೆ ಬಂದ ’ಹೈದರಾಬಾದ್ ಕೊಂಕಣಿ ಅಸೋಷಿಯೇಷನ್’ಪ್ರತಿವರ್ಷ ಆಚರಿಸಿಕೊಂಡು ಬಂದ ಈ ಯುಗಾದಿ ಉತ್ಸವ ಆಚರಣೆ ಈ ಸಾರಿ ಅಲ್ಲಿನ ಅಬಿಡ್ಸ್ ತಾಜಮಹಲ್ ಹೋಟೇಲ್ ಎರಡನೇ ಅಂತಸ್ತಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರನ್ನು ಭೇಟಿಯಾಗಿ ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿನ ಹೊಳೆ ಮತ್ತು ತೋಡುಗಳಲ್ಲಿ ತುಂಬಿರುವ ಹೂಳುಗಳನ್ನು ಮಳೆಗಾಲದ ಪೂರ್ವದಲ್ಲಿಯೇ ಜರೂರು ತೆರವು ಬಗ್ಗೆ ಸೂಕ್ತ ಕ್ರಮ ವಹಿಸುವಂತೆ, ಹಾಗೂ ವಾರಹಿ ಯೋಜನೆಗೆ ಭೂಸ್ವಾದೀನಗೂಂಡ ಜಾಗಗಳಿಗೆ ಪರಿಹಾರ ಒದಗಿಸುವು ಕುರಿತು ಮತ್ತು ಕುಂದಾಪುರ ಪುರಸಭೆಯಲ್ಲಿನ ಬರಗಾಲ ನಿಧಿಯ ಕಾಮಗಾರಿಯ ಮಂಜೂರಾತಿಯ ಬಗ್ಗೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಚರ್ಚಿಸಿದರು.
