ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭವು ಸಡಗರದಿಂದ ಸಂಪನ್ನಗೊಂಡಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಶ್ರೀದೇವಿ ಕಟ್ಟೆ ಅವರು ಮಕ್ಕಳಿಗೆ ಪದವಿ ಪ್ರಮಾಣಪತ್ರ ವಿತರಿಸಿ, ಮಾತನಾಡಿ, “ಮಕ್ಕಳು ದೇವರ ಉಡುಗೊರೆ, ಅವರಿಗೆ ಚಿಕ್ಕಂದಿನಿಂದಲೇ ಸಣ್ಣ-ಪುಟ್ಟ ಜವಾಬ್ದಾರಿಗಳನ್ನು ನೀಡಬೇಕು, ಆಗ ಮಾತ್ರ ತಮ್ಮ ಮುಂದಿನ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಎದೆಗುಂದದೆ ಎದುರಿಸಲು ಸಮರ್ಥರಾಗುತ್ತಾರೆ. ಮಕ್ಕಳಿಗೆ ಸ್ವನಿಯಂತ್ರಣದ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ಪರೀಕ್ಷೆಯ ಅಂಕಕ್ಕಿಂತ ಮೌಲ್ಯಯುತ ಜೀವನ ಬಹಳ ಮುಖ್ಯ, ಪೋಷಕರು ಮಕ್ಕಳಿಗೆ ಆಧ್ಯಾತ್ಮಿಕತೆಯ ಮಹತ್ವವನ್ನು ಸಾರುವ ಕಥೆಗಳನ್ನು ಹೇಳಿ, ಅವರಲ್ಲಿ ಆಧ್ಯಾತ್ಮಿಕತೆ ಬೆಳೆಸಬೇಕು” ಎಂದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ , “ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ ಪೋಷಕರ ಜವಾಬ್ದಾರಿ ಮುಗಿಯುತ್ತದೆ ಎಂದು ಭಾವಿಸದೆ, ಆ ಕ್ಷಣದಿಂದಲೇ ಪೋಷಕರ ಜವಾಬ್ದಾರಿ ಇಮ್ಮಡಿಯಾಗುತ್ತದೆಂದು ತಿಳಿಯಬೇಕು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಒಂದೂವರೆ ವರ್ಷದ ಅವಕಾಶವಿತ್ತರೂ ಕೇವಲ 188 ಹೋಮ್‌ಸ್ಟೇಗಳು ಮಾತ್ರ ನೋಂದಣಿಯಾಗಿದ್ದು, ಇನ್ನೊಂದು ತಿಂಗಳೊಳಗೆ ನೋಂದಣಿಯಾಗದ, ಸರಕಾರಿ ಜಾಗ/ಸಿಆರ್ ಝಡ್ ವ್ಯಾಪ್ತಿಯಲ್ಲಿರುವ ಹೋಂ ಸ್ಟೇ /ರೆಸಾರ್ಟ್‌ಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ. ಅವರು ಅಂದು ಮಣಿಪಾಲ ರಜತಾದ್ರಿಯ ಜಿಲ್ಲಾ ಇಲಾಖೆಗಳ ಸಂಕೀರ್ಣದಲ್ಲಿರುವ ಆಟಲ್‌ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪ್ರವಾಸಿಗರ ಭದ್ರತೆ ನಿಟ್ಟಿನಲ್ಲಿ ನಡೆದ ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳ ಮಾಲೀಕರ ಸಭೆಯಲ್ಲಿ ಮಾತನಾಡಿ, ಈಗಾಗಲೇ ನೋಂದಣಿಯಾದವರು ಮುನ್ನೆಚ್ಚರಿಕೆ ಕ್ರಮದ ಕುರಿತು 10 ದಿನಗಳೊಳಗೆ ಮುಚ್ಚಳಿಕೆ ಬರೆದು ಆನ್‌ಲೈನ್ ಮೂಲಕ ಸಲ್ಲಿಸಬೇಕು ಎಂದರು. ನಿರ್ಜನ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರವಾಸಿಗರು ಈಜುವ ಸಂದರ್ಭ ತಜ್ಞ ಈಜುಗಾರರು ರಕ್ಷಣೆಗಿರಬೇಕು. 24×7 ಹಾಗೂ ರಾತ್ರಿ ದೃಷ್ಟಿಯ ಸಿಸಿಟಿವಿ ಅಳವಡಿಸಬೇಕು ಎಂದರು. ಎಸ್ಪಿ ಡಾ.ಅರುಣ್ ಕೆ. ಮಾತನಾಡಿ, ನೋಂದಾಯಿತ ಹೋಮ್‌ಸ್ಟೇಗಳಿಗೆ ಬರುವವರಲ್ಲಿ ಪಾನ್, ಆಧಾರ್ ಅಥವಾ ಚಾಲನಾ ಪರವಾನಗಿಯ ದಾಖಲೆ ಪ್ರತಿ ಪಡೆದುಕೊಳ್ಳಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಟಿಪ್ಪರ್ ಲಾರಿಗೆ ಬೈಕ್ ಢಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಂಡ್ರೆ ಸಮೀಪದ ನೂಜಾಡಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಟಿಪ್ಪರ್ ಲಾರಿಯು ಬೈಕನ್ನು ಓವಟೇಕ್ ಮಾಡಿಕೊಂಡು ಹೋಗಿದ್ದು, ಆಗ ಅದಕ್ಕೆ ನಾಯಿ ಅಡ್ಡಬಂತು. ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟಿಪ್ಪರ್ ಚಾಲಕನು ಏಕಾಏಕಿ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಬರುತ್ತಿದ್ದ ಬೈಕ್ ಟಿಪ್ಪರ್‌ಗೆ ಢಿಕ್ಕಿ ಹೊಡೆಯಿತು. ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನಿಗೆ ಕುಂದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಣಿಪಾಲದ ದಾಖಲಿಸಲಾಗಿದೆ. ಟಿಪ್ಪರ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷತನ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್, ಸಾಲ ನೀಡಿಕೆ ಏಜನ್ಸಿ ಹಾಗೂ ಲೇವದೇವಿದಾರರು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ( ಬಲವಂತ ಕ್ರಮಗಳ ಪ್ರತಿ ಬಂಧಕ ) ಆದೇಶ 2025 ನಿಯಮದನ್ವಯ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ತಿಳಿಸಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳು, ಸಾಲ ನೀಡಿಕೆ ಎಜೇಂನ್ಸಿ ಹಾಗೂ ಲೇವಾ ದೇವಿ ದಾರರು ನೀಡುವ ದುಬಾರಿ ಬಡ್ಡಿಗಳಿಂದ ಜನರು ತೊಂದರೆ ಗೋಳಗಾಗುವುದರ ಜೊತೆಗೆ ಕೆಲವು ಸಂಸ್ಥೆಗಳು ಬಲವಂತ ವಾಗಿ ವಸೂಲಾತಿ ಅದರಲ್ಲೂ ವಿಶೇಷವಾಗಿ ರೈತರು, ಮಹಿಳೆಯರು ಆರ್ಥಿಕ ದುರ್ಬಲರು ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಸುವ ಪ್ರಕರಣಗಳು ಆಗುತ್ತಿರುವ ಹಿನ್ನೆಲೆ,ಇವುಗಳ …
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ- ಖೋ ಟೂರ್ನಮೆಂಟ್-2025ರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಪಿಯನ್ನು ಸತತ 17 ನೇ ಬಾರಿ ಹಾಗೂ ಮಹಿಳೆಯರ ತಂಡ ಹೆಚ್‌ವಿ ಕಮಲೇಶ್ ರೋಲಿಂಗ್ ಟ್ರೋಪಿಯನ್ನು ಸತತ 14ನೇ ಬಾರಿ ಪಡೆದು ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಆಳ್ವಾಸ್ ಪುರು?ರ ಖೋ-ಖೋ ತಂಡ 28-5 ಅಂಕಗಳ ಅಂತರದಿಂದ ಪುತ್ತೂರಿನ ವಿವೇಕಾನಂದ ಕಾಲೇಜು ವಿರುದ್ಧ ಗೆಲುವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ತಂಡ ಏಕಪಕ್ಷೀಯವಾಗಿ 18-0 ಅಂಕಗಳ ಅಂತರದಲ್ಲಿ ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜು ವಿರುದ್ಧ ಗೆಲುವು ಸಾಧಿಸಿ ಎರಡು ವಿಭಾಗದಲ್ಲಿ ”ಸಮಗ್ರ ಪ್ರಶಸ್ತಿ”ಗೆ ಭಾಜನವಾಯಿತು. ವೈಯಕ್ತಿಕ ಪುರುಷರ ಚಾಂಪಿಯನ್‌ಶಿಪ್‌ನಲ್ಲಿ “ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ”ಗೆ ಆಳ್ವಾಸ್ ಕಾಲೇಜಿನ ನಿಖಿಲ್ ಮತ್ತು”ಬೆಸ್ಟ್ ಡಿಫೆಂಡರ್ ಪ್ರಶಸ್ತಿ”ಗೆ ಪ್ರಮೋದ್ ಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕುಂದಾಪುರ ತಾಲೂಕು ಹವ್ಯಕ ಸಭಾ ರಿ. ಇದರ ವಾರ್ಷಿಕೋತ್ಸವ ಎಪ್ರಿಲ್ 6 ರಂದು ಉಪ್ಪುಂದ ಪಟೇಲರ ಮನೆಯಲ್ಲಿ ನಡೆಯಲಿದ್ದು ಪ್ರತಿಭಾ ಪುರಸ್ಕಾರವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕುಂದಾಪುರ-ಬೈಂದೂರು ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಹವ್ಯಕ ಸಮಾಜದ ವಿದ್ಯಾರ್ಥಿಗಳಿಗೆ 2022-23 ಮತ್ತು 2023-24 ರಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೇಯಲ್ಲಿ ಶೇಕಡಾ 90% ಗಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಅಂಕಪಟ್ಟಿ ಪ್ರತಿಯೊಂದಿಗೆ ಕೈ ಬರಹದ ಅರ್ಜಿಯನ್ನು ಯು. ಸಂದೇಶ್ ಭಟ್ ಪ್ರಧಾನ ಕಾರ್ಯದರ್ಶಿ ಪಟೇಲರ ಮನೆ ಉಪ್ಪುಂದ ಅಂಚೆ, ಬೈಂದೂರು ತಾಲೂಕು – 576232 (ಮೊಬೈಲ್ ನಂ : 9449616434) ಈ ವಿಳಾಸಕ್ಕೆ ಎಪ್ರಿಲ್ 1 ರ ಒಳಗೆ ಕಳುಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಸಭೆ ಅಧ್ಯಕ್ಷರ ಮನೆಯ ಮಹಡಿ ನಿರ್ಮಾಣಕ್ಕೆ ಪುರಸಭೆ ನೀಡಿದ ಪರವಾನಗೆಯ ಕಡತ ಕಾಣೆಯಾಗಿದೆಯಾ ಇಲ್ಲಾ ಅಕ್ರಮವಾಗಿ ಮಹಡಿ ನಿರ್ಮಾಣ ಮಾಡಿ ಈಗ ಹೊಸದಾಗಿ ಅಕ್ರಮವಾಗಿ ಪರವಾನಗೆಯ ಕಡತ ರಚನೆ ಮಾಡುವ ಹುನ್ನಾರ ನಡೆಯುತ್ತಿದೆಯಾ ಎನ್ನುವುದನ್ನು ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗೃಹಿಸಿದ್ದಾರೆ. ಪುರಸಭೆಯ ಕಡತ ಕಾಣೆಯಾಗುವುದು ಒಂದು ಗಂಭೀರ ಪ್ರಕರಣ. ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಆದರೆ ಪುರಸಭೆಯ ಮುಖ್ಯಾಧಿಕಾರಿಗಳು ಮಾಹಿತಿ ಹಕ್ಕಿನಲ್ಲಿ ನೀಡಿದ ಉತ್ತರದಲ್ಲಿ ಅಧ್ಯಕ್ಷರ ಮಹಡಿ ನಿರ್ಮಾಣದ ದಾಖಲೆಗಳು ಇಲ್ಲಾ ಎನ್ನುವ ಮಾಹಿತಿ ನೀಡಿದ್ದು ಈಗ ಕಡತ ಕಾಣೆಯಾಗಿದೆ ಎನ್ನುವ ಹೊಸ ಉತ್ತರ ಹಲವು ಅನುಮಾನಗಳಿಗೆ ಏಡೆ ಮಾಡಿದೆ. ಪುರಸಭೆ ಅಕ್ರಮ ನಿರ್ಮಾಣದ ಬಗ್ಗೆ ಸಾರ್ವಜನಿಕರಿಗೆ ಅನುಸರಿಸುವ ಕಾನೂನಿನ ಅಡಿಯಲ್ಲಿ ಅಧ್ಯಕ್ಷರು ಬರುವುದಿಲ್ಲವಾ? ಅಥವಾ ಅಧ್ಯಕ್ಷರಿಗೆ ವಿಶೇಷ ಕಾನೂನು ಇದೆಯಾ ಎನ್ನುವುದನ್ನು ಸಾರ್ವಜನಿಕವಾಗಿ ತಿಳಿಸಬೇಕು. ಅಧ್ಯಕ್ಷರು ಸಾರ್ವಜನಿಕ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ವ್ಯವಹಾರದ ಅರಿವು ಮಾಡಿಸಿಕೊಂಡರೆ ಭವಿಷ್ಯದ ದಿನಗಳಲ್ಲಿ ಶ್ರೇಷ್ಠ ಉದ್ಯಮಶೀಲರಾಗಬಹುದು. ಇದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆಯೆಂದು ಎಂದು ಮಹಿಳಾ ಉದ್ಯಮಿ ಹುಣ್ಸೆಮಕ್ಕಿ ವಸಂತಿ ಎಮ್. ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿರುವ “ವೀ-ಗ್ರೋ ಬ್ಯುಸಿನೆಸ್ ಡೇ” ಇದರ ಎರಡನೇ ಹಂತವಾದ ವ್ಯವಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ವಹಿಸಿದ್ದರು. ಅಂತಿಮ ಲೆಕ್ಕ ಪರಿಶೋಧಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಾಕ್ತನ ವಿದ್ಯಾರ್ಥಿಯಾದ ಶ್ರವಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ತೀರ್ಪುಗಾರರಾದ ನಿವೃತ್ತ ವಾಣಿಜ್ಯ ತೆರಿಗೆ ಪರಿವೀಕ್ಷಣಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತç ಉಪನ್ಯಾಸಕರಾದ ದಿನಕರ್ ಶೆಟ್ಟಿ ಉಪಸ್ಥಿತರಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸತೀಶ್ ಶೆಟ್ಟಿ ಹೆಸ್ಕತ್ತೂರು ನಿರೂಪಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಮಾಲತಿ ಕುಂದರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2022, 2023 ಮತ್ತು 2024ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿ ಯಿಂದ ಡಿಸೆಂಬರ್) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ “ಕನ್ನಡ ಪುಸ್ತಕ ಸೊಗಸು ಬಹುಮಾನ”ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಬಹುಮಾನಕ್ಕಾಗಿ ಆಸಕ್ತ ಪ್ರಕಾಶಕರು, ಮುದ್ರಕರು, ಕಲಾವಿದರು, ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದ್ದು, ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು / ಚಿತ್ರ ಕಲಾವಿದರ ಪೂರ್ಣ ವಿಳಾಸ / ದೂರವಾಣಿ ಸಂಖ್ಯೆ – ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಮಾರ್ಚ್ 29 ರ ಒಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ ಹಾಗೂ ಕೊನೆಯ ದಿನಾಂಕ ಮುಗಿದ ನಂತರ ಬಂದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಾಮ್ ಜಿ.ಎನ್.ಪೂಜಾರಿ ಅವರನ್ನು ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಮ್ ಜಿ.ಎನ್.ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಿದ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಅವರು ಶಾಮ್ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶಾಂತಿ ಡಿಕೋಸ್ಟ, ಶಾಲೆಯ ಶಿಕ್ಷಕರು, ಶಿಕ್ಷಕೇತರರು ಮೊದಲಾದವರು ಉಪಸ್ಥಿತರಿದ್ದರು.
