ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗದ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಕಾರ‍್ಯಗಾರ- ’ಸ್ನಾತಕೋತ್ತರ ಪದವಿಯ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ’ ವಿಎಸ್ ಆಚಾರ‍್ಯ ಸಭಾಂಗಣದಲ್ಲಿ ಸಮಾರೋಪಗೊಂಡಿತು. ಸಮಾರೋಪ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಂಶೋಧನಾ ಕ್ಷೇತ್ರದ ನಾವಿನ್ಯತೆಗಳ ಕುರಿತು ತಿಳಿದುಕೊಳ್ಳಲು ಆಯೋಜಿಸಿದ ಈ ಕಾರ‍್ಯಗಾರವು ಹೆಚ್ಚು ಅರ್ಥಪೂರ್ಣವಾಗಬೇಕಾದರೆ, ಭಾಗವಹಿಸಿದ ಫಲಾನುಭವಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಗಹನವಾಗಿ ಅಧ್ಯಯನ ನಡೆಸಿ, ಸಂಶೋಧನೆಯನ್ನು ಇನ್ನಷ್ಟು ಮೌಲ್ಯಯುತಗೊಳಿಸಬೇಕು ಎಂದರು. ಇದಕ್ಕೆಲ್ಲಾ ಪ್ರೇರಣೆ ನಮ್ಮೊಳಗೆ ಮೂಡಬೇಕಿದೆ ಎಂದರು. ಜನರು ತಾವು ನಿರ್ಮಿಸಿಕೊಂಡ ಆರಾಮವಲಯದಿಂದ ಹೊರಬರಬೇಕಿದೆ. ಮಾನವ ಸಂಪತ್ತು ಭಾರತದ ದೊಡ್ಡ ಆಸ್ತಿ. ಇದರ ಸದುಪಯೋಗವಾಗಬೇಕಿದೆ ಎಂದರು. ಮೂರು ದಿನಗಳ ಕಾರ‍್ಯಗಾರದಲ್ಲಿ ಲೇಖನ ಪ್ರಕಟಣೆ, ಕ್ಲಿನಿಕಲ್ ಸಂಶೋಧನೆ, ಜೌಷಧ ಸಂಶೋಧನೆ, ಸಾಹಿತ್ಯ ಸಂಶೋಧನೆ ಹಾಗೂ ಪ್ರಾಣಿ ಪ್ರಯೋಗಗಳು, ಇವೇ ಮುಂತಾದ ವಿಷಯಗಳ ಕುರಿತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೃಷಿ ಕ್ಷೇತ್ರಕ್ಕೆ ಪ್ರಾಧ್ಯಾನ್ಯತೆ ನೀಡುವುದರೊಂದಿಗೆ, ಕೃಷಿ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಮರ್ಪಕವಾಗಿ ರೈತರುಗಳಿಗೆ ತಲುಪಿಸಿ, ಅವರುಗಳ ಜೀವನಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸುವ ದೃಷ್ಠಿಯಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ರೈತರುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಮಾಹಿತಿಗಳನ್ನು ಪಡೆದು ತಮ್ಮ ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಅಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ದಕ್ಷಿಣ ಕನ್ನಡ, ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಮಟ್ಟದ ಟಿ. ಸಿ. ಎಸ್. ಗ್ರಾಮೀಣ ಐ. ಟಿ.ಕ್ವಿಜ್ -2024 ರ ಸ್ಪರ್ಧೆಯಲ್ಲಿ ಕೋಟೇಶ್ವರ ಯಡಾಡಿ-ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ತನ್ಮಯ್ ರಾವ್ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ವಿದ್ಯಾರಣ್ಯ ಸಂಸ್ಥೆಯಲ್ಲಿ ಪ್ರಾಥಮಿಕ ತರಗತಿಯಿಂದಲೇ ಐ.ಟಿ. ವಿಷಯಕ್ಕೆ ಸಂಬಂಧಿಸಿದ ವಿಶೇಷ ಬೋಧನೆಯು ಮಕ್ಕಳ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಮತ್ತು ಶಾಲೆಯಲ್ಲಿನ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳು ಮಕ್ಕಳು ಕಲಿಕೆಯಲ್ಲಿ ಸ್ರಜನಶೀಲವಾಗಿ ಮತ್ತು ಆಸಕ್ತಿದಾಯಕವಾಗಿ ಕಲಿಕೆಯಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿದೆ. ಈಗಾಗಲೇ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟವನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಜೇತ ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿಗಳಾದ ಭರತ್ ಶೆಟ್ಟಿ, ಮುಖ್ಯ ಶಿಕ್ಷಕರಾದ ಪ್ರದೀಪ್ ಕೆ. ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಯುವ ನಾಯಕ ಶಬ್ಬೀರ್ ಬೈಂದೂರು ನೇಮಕ ಮಾಡಲಾಗಿದೆ. ಬೈಂದೂರು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ಶಿಪಾರಸ್ಸಿನ ಮೇರೆಗೆ, ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ಸೂಚನೆಯಂತೆ ಉಡುಪಿ ಜಿಲ್ಲಾಧ್ಯಕ್ಷ ಶರ್ಪುದ್ದೀನ್ ಶೇಕ್ ಅವರು ನೇಮಕ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ತಾಲೂಕಿನ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾಟೌನ್‌ಶಿಪ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಮಾರಾಡಕ್ಕೆ ಯತ್ನಿಸುತ್ತಿದ್ದ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಎಂಬಾತನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಗಾಂಜಾ – 2 ಕೆ.ಜಿ 344 ಗ್ರಾಂ ತೂಕ, ಮೌಲ್ಯ ರೂ, 1,87,500, ಸ್ಕೂಟರ್ -1 ಅಂದಾಜು ಮೌಲ್ಯ ರೂ, 1,00,000, ನಗದು ರೂ, 5.810, ಮೊಬೈಲ್ ಪೋನ್ ಅಂದಾಜು ಮೌಲ್ಯ ರೂ. 10,000, ವೆಯಿಂಗ್ ಮಿಶನ್ 1, ರೂ, 1,000, ಚೂರಿ-1, ರೂ, 300ರನ್ನು ಸೇರಿ ಒಟ್ಟು ರೂ, 3.04,610 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಳಾಗಿದೆ.. ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಪವನ್ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ವೆಂಕಟೇಶ್, ರಾಜೇಶ್, ಯತೀನ್ ಕುಮಾರ್, ಪ್ರಶಾಂತ್ ಮತ್ತು ಚರಣ್‌ರಾಜ್ ರವರನ್ನೊಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಸೆನ್ ಅಪರಾಧ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜಗತ್ತಿಗೆ ಗೋವುಗಳು ಒಂದು ಪ್ರಾಣಿಯಾದರೆ, ಭಾರತದಲ್ಲಿ ಅದು ಮಾತೆಯಾಗಿ ಪೂಜನೀಯ ಸ್ಥಾನ ಪಡೆದಿವೆ. ಅವುಗಳು ಸಂತೋಷದಲ್ಲಿರುವೆಡೆ ದೇವತೆಗಳು ಸಂತೋಷರಾಗುತ್ತಾರೆ ಎಂಬ ಮಾತಿದ್ದು, ಅಶಕ್ತ ಗೋವುಗಳ ರಕ್ಷಣೆ ಮಾಡುವುದು ಮಹಾನ್ ಪುಣ್ಯದ ಕಾರ್ಯವಾಗಿದೆ ಎಂದು ಹೃದಯ ವಿದ್ಯಾ ಫೌಂಡೇಷನ್ ಅಧ್ಯಕ್ಷ ವಿದ್ಯಾಸಾಗರ್ ಹೇಳಿದರು. ತಗ್ಗರ್ಸೆ ಗ್ರಾಮದ ವಸ್ರೆ ಮೈಕಳದಲ್ಲಿ ಶಾಸಕ ಗುರುರಾಜ ಗಂಟಿಹೊಳೆಯವರ ಪರಿಕಲ್ಪನೆಯಂತೆ ನಿರ್ಮಾಣಗೊಂಡ ಗಂಟಿಧಾಮ – ಅಶಕ್ತ ಗೋವುಗಳ ಪಾಲನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯದ ಪ್ರಮುಖ ಶರಣ ಪಂಪವೆಲ್ ಮಾತನಾಡಿ, ಅಸಕ್ತ ಗೋವುಗಳ ರಕ್ಷಣೆಗಾಗಿ ಶಾಸಕರು ಮಾಡುತ್ತಿರುವ ಕಾಯಕ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿ, ಇಂದು ಗ್ರಾಮೀಣ ಭಾಗ ಜೀವಂತವಾಗಿರುವುದೇ ಗೋವುಗಳಿಂದ, ದೇಶದಲ್ಲಿ ಋಷಿ ಪರಂಪರೆ ಉಳಿಯಬೇಕಾದರೆ ಅವುಗಳಿಗೆ ವಿಶೇ? ಸ್ಥಾನ ಕಲ್ಪಿಸಬೇಕಾದ ಅಗತ್ಯವಿದೆ. ಇಂದು ದೇಶದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಬೀಡಾಡಿ ಜಾನುವಾರುಗಳು ಕಟುಕರ ಪಾಲಾಗುತ್ತಿದೆ ಎಂದು ಕಿಡಿಕಾರಿದ ಅವರು ಗೋವುಗಳ ರಕ್ಷಣೆಗಾಗಿ ಇಡೀ ಹಿಂದೂ ಸಮಾಜ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂತರಾಷ್ಟ್ರೀಯ ಮನ್ನಣೆ ಪಡೆದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 100ನೇ ತಿಂಗಳ ಕಾರ್ಯಕ್ರಮವು ಅ.27ರ ಭಾನುವಾರ ಬೆಳಿಗ್ಗೆ 5-00 ಗಂಟೆಯಿಂದ ರಾತ್ರಿ 11-00 ಗಂಟೆಯ ತನಕ ಉಪ್ಪಿನಕುದ್ರು ಗೊಂಬೆಮನೆಯಲ್ಲಿ ನಡೆಯಲಿದೆ. ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಟ್ರಸ್ಟ್ ಮತ್ತು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಪ್ರತಿ ತಿಂಗಳು ಗೊಂಬೆಮನೆಯಲ್ಲಿ ಆಯೋಜಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು 100 ತಿಂಗಳು ತಲುಪಿದ್ದು, 100ನೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬೆಳಿಗ್ಗೆ 5ರಿಂದ ಉದಯರಾಗದಿಂದ ಆರಂಭಗೊಂಡು ಹಿಂದೂಸ್ತಾನಿ ಹಾಡುಗಳು, ಯಕ್ಷಗಾನದ ಹಾಡುಗಳ ಗಾಯನ, ಅಕಾಡೆಮಿಯ ವಿದ್ಯಾರ್ಥಿಗಳಿಂದ ಗೊಂಬೆಯಾಟ ಪ್ರಾತ್ಯಕ್ಷಿಕೆ, ಬೆಳಿಗ್ಗೆ 10ರಿಂದ ಭಕ್ತಿರಾಗ – ಭಕ್ತಿ ಸಂಗೀತ ಹಾಗೂ ಭಜನೆ, ಮಧ್ಯಾಹ್ನ 12-30ರಿಂದ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಪ್ರತಿಭಾನ್ವಿತರಿಂದ ಸಂಗೀತ, ಕೊಳಲು ವಾದನ, ಸಂಜೆ 5ರಿಂದ ಭಕ್ತಿ ಸಂಗೀತ, ಬಳಿಕ ಭಾವಗೀತೆ, ಸಂಜೆ 6ರಿಂದ 8:30ರ ತನಕ ಸಂಧ್ಯಾರಾಗ ಸಂಧ್ಯಾರಾಗ, ಬಳಿಕ ಯಕ್ಷಗಾನ ಪ್ರದರ್ಶನ ಇರಲಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ ಕ್ವಿಜ್ – 2024ರ ಸ್ಪರ್ಧೆಯಲ್ಲಿ ಮದರ್ ತೆರೇಸಾ ಪಿಯು ಕಾಲೇಜು ಶಂಕರನಾರಾಯಣ ಇಲ್ಲಿನ ವಿದ್ಯಾರ್ಥಿಗಳಾದ ಅಮೋಧ್ ಹಾಗೂ ಸುಜನ್ ಶೆಟ್ಟಿ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಆಡಳಿತಮಂಡಳಿ,ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭಕೋರಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಅಕ್ಟೋಬರ್ 24 ಹಾಗೂ 25 ರಂದು ನಡೆದ ನೋವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್ -2024 ಸಂಪನ್ನಗೊಂಡಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಕುಂದಾಪುರ ಶಾಖೆಯ ಪ್ರಬಂಧಕರುಗಳಾದ ನಿಶಿತ್ ಪಾರ್ಮರ್ ಹಾಗೂ ರವಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಪ್ರಾಧ್ಯಾಪಕರುಗಳಾದ ಅವಿತಾ ಕೊರೆಯಾ, ಹರೀಶ್ ಬಿ, ಪ್ರವೀಣ್ ಮೊಗವೀರ ಗಂಗೊಳ್ಳಿ, ಚೈತಾಲಿ ಉಪಸ್ಥಿತರಿದ್ದರು. ಟೀಮ್ ಪಯೋನಿಯರ್ ಸಮಗ್ರ ಚಾಂಪಿಯನ್ ಆಗಿ ಮೂಡಿಬಂತು. ಸಕ್ಸಸ್ ಸ್ಕ್ವಾಡ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ನಂದಾ ರೈ ಸ್ವಾಗತಿಸಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಯೋಜಕರಾದ ರಜತ್ ಬಂಗೇರ ವಿಜೇತರ ಪಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಕುಂದಾಪುರ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್, ರತ್ನಕುಮಾರ್ ಮತ್ತು ಪ್ರಿಯಾಂಕಾ ತರಬೇತಿ ನೀಡಿರುತ್ತಾರೆ. ಫಲಿತಾಂಶದ ಯಾದಿಧನ್ವಿತ್, 80 ಮೀಟರ್ ಹರ್ಡಲ್ಸ್ ದ್ವಿತೀಯ , ಉದ್ದಜಿಗಿತ, ದ್ವಿತೀಯ (ಜಿಲ್ಲಾಮಟ್ಟಕ್ಕೆ ಆಯ್ಕೆ)ನಿನಾದ್ 600 ಮೀಟರ್ ಓಟ, ತೃತೀಯ , 400 ಮೀಟರ್ ಓಟ ತೃತೀಯಸಂಪ್ರೀತ್ 100 ಮೀಟರ್ ಓಟ ತೃತೀಯಬೃಂದಾ 3000 ಮೀಟರ್ ನಡಿಗೆ ತೃತೀಯಆಕಾಶ್ 100 ಮೀಟರ್ ಓಟ ದ್ವಿತೀಯ,( ಜಿಲ್ಲಾಮಟ್ಟಕ್ಕೆ ಆಯ್ಕೆ) ರೋಷನ್ ಆರ್ 400 ಮೀಟರ್ ಓಟ ದ್ವಿತೀಯ (ಜಿಲ್ಲಾಮಟ್ಟಕ್ಕೆ ಆಯ್ಕೆ) ಬಾಲಕರ 4*100 ಮೀಟರ್ ರಿಲೇ ತೃತೀಯಶಮಂತ್ 100 ಮೀಟರ್ ಓಟ ದ್ವಿತೀಯ, 200ಮೀಟರ್ ಓಟ ದ್ವಿತೀಯಸಾಯಿಪ್ರಸಾದ್ 400*ಮೀಟರ್ ಓಟ ದ್ವಿತೀಯ, 600*ಓಟ ಪ್ರಥಮ*ಜಿಲ್ಲಾಮಟ್ಟಕ್ಕೆಆಯ್ಕೆರೋಷನ್200 ಮೀಟರ್ ಓಟ ಪ್ರಥಮ ಜಿಲ್ಲಾಮಟ್ಟಕ್ಕೆ ಆಯ್ಕೆ4*400 ರಿಲೇ ಬಾಲಕರು ತೃತೀಯಸಮಿತ್ ಗುಂಡು ಎಸೆತ ತೃತೀಯಲಿಖಿತ್ 80…
