ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ತೋಟಗಾರಿಕಾ ಇಲಾಖೆಯ ವತಿಯಿಂದ ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕೆ ಕಸಿ ಹಾಗೂ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಉಡುಪಿ ತಾಲೂಕಿನ ಶಿವಳ್ಳಿ, ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಕುಂದಾಪುರ ತಾಲೂಕಿನ ಕುಂಭಾಶಿ ಮತ್ತು ಕೆದೂರು ಹಾಗೂ ಕಾರ್ಕಳ ತಾಲೂಕಿನ ರಾಮಸಮುದ್ರ ಹಾಗೂ ಕುಕ್ಕಂದೂರು ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆ (ರೂ.25), ಕಸಿಗೇರು (ರೂ.32), ಕಾಳುಮೆಣಸು (ರೂ.11) ಹಾಗೂ ತೆಂಗು (ರೂ.75) ಸಸಿಗಳನ್ನು ಉತ್ಪಾದಿಸಲಾಗಿದ್ದು, ಗಿಡಗಳನ್ನು ಖರೀದಿಸಲು ಸಂಬಂದಪಟ್ಟ ತೋಟಗಾರಿಕೆ ಕ್ಷೇತ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಗಿಡಗಳು ಲಭ್ಯವಿದ್ದು, ಮೊ.7892326323 ಅನ್ನು, ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಾಳುಮೆಣಸು ಹಾಗೂ ತೆಂಗು ಗಿಡಗಳು ಲಭ್ಯವಿದ್ದು, ಮೊ. 8527225123 ಅನ್ನು, ಕೆದೂರು ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಗಿಡಗಳು ಲಭ್ಯವಿದ್ದು, ಮೊ.9482166313 ಅನ್ನು, ಕುಂಭಾಶಿ ತೋಟಗಾರಿಕೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್‌ನ ಸೇವೆಯ ಧ್ಯೇಯದಿಂದ ವ್ಯಕ್ತಿ ನಿರ್ಮಾಣ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡದ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜೀವನಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಯಲು ಸಾಧ್ಯ. ಇಲ್ಲಿ ನಡೆಯುವ ಶಿಬಿರಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯವಾದ ಪಾಠಗಳನ್ನು ಹೇಳಿಕೊಡುತ್ತವೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಡಾ. ಮೋಹನ ಆಳ್ವ ಅವರ ಶ್ರಮದಿಂದ ಜಿಲ್ಲಾ ಘಟಕವು ಮುಂಚೂಣಿಯಲ್ಲಿದೆ. ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯು ಇಡೀ ವಿಶ್ವವೇ ಮೂಡುಬಿದಿರೆಯತ್ತ ಮುಖ ಮಾಡುವಂತೆ ಮಾಡಿತ್ತು ಎಂದರು. ಪಠ್ಯದ ಕಲಿಕೆಯ ಜೊತೆಗೆ ಪಠ್ಯತರ ಚಟುವಟಿಕೆಗಳು ಜೀವನದಲ್ಲಿ ಬಹು ಮುಖ್ಯ ಪಾತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಸೈಬರ್ ಸೆಕ್ಯೂರಿಟಿಯ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಷ್ಟಿçÃಯ ಶಿಕ್ಷಣ ನೀತಿ ವಿಷಯಾಧರಿತ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಟಿ.ವಿ. ದೇವರಾಜ್ ಅಡಿಷನಲ್ ಎಸ್. ಐ., ಸೈಬರ್ ಕ್ರೆöÊಮ್ ಡಿಪಾರ್ಟ್ಮೆಂಟ್ ಮಣಿಪಾಲ ಇವರು ವಿವಿಧ ರೀತಿಯ ಸೈಬರ್ ಅಪರಾಧವನ್ನು ತಡೆಗಟ್ಟುವುದು ಮತ್ತು ಅದರಿಂದ ತಪ್ಪಿಸಿಕೊಳ್ಳುವ ರೀತಿಯ ಬಗ್ಗೆ ಮಾತನಾಡುತ್ತಾ, ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಬುದ್ಧಿಯ ಜೊತೆಗೆ ಬೆರಳುಗಳ ಮೇಲೆ ಕೂಡ ನಿಯಂತ್ರಣ ಪಡೆದುಕೊಳ್ಳುವ ಅಗತ್ಯ ಇದೆ ಎಂದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದು, ಮೊಬೈಲ್ ಬಳಕೆ ಹಾಗೂ ಸಾಮಾಜಿಕ ಜಾಲಾತಾಣಗಳಲ್ಲಿ ತೊಡಗಿಸಿಕೊಳ್ಳುವಾಗ ವಿದ್ಯಾರ್ಥಿಗಳು ಪ್ರಜ್ಞಾವಂತಿಕೆ ಮರೆಯಬಾರದು ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಪ್ರಾಸ್ತಾವಿಸಿದರು. ಕಾರ್ಯಕ್ರಮದ ಸಂಯೋಜಕರಾದ ಜೋಸ್ಲಿನ್ ಅಲ್ಮೇಡಾ ಮತ್ತು ಪೂಜಾ ಕುಂದರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀನಾಭ ಸ್ವಾಗತಿಸಿ, ನೇಹಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯ ಸರ್ಕಾರಿ ಜಾಗಗಳಾದ ಸ.ನಂ.112 ರ 0.01 ಎಕ್ರೆ ಜಾಗದ ವಡೇರಹೋಬಳಿ ಶಿವಪ್ರಸಾದ್ ರಿಕ್ಷಾ ನಿಲ್ದಾಣದಲ್ಲಿ 8 ರಿಂದ 9 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ. 141/1ಎ ರ 0.01.50 ಎಕ್ರೆ ಪ್ರದೇಶದ ವಿನಯಾ ನರ್ಸಿಂಗ್ ಹೋಂ ರಿಕ್ಷಾ ನಿಲ್ದಾಣದಲ್ಲಿ 8 ರಿಂದ 10 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ.141 ರ 0.02 ಎಕ್ರೆ ಪ್ರದೇಶದ ಹೊಸ ಬಸ್ ನಿಲ್ದಾಣ ರಿಕ್ಷಾ ನಿಲ್ದಾಣದಲ್ಲಿ 12 ರಿಂದ 13 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ.182/1ಎ3ಎ1ಡಿ ಸ.ನಂ.112ರ 0.05 ಎಕ್ರೆ, 0.02 ಎಕ್ರೆ ಪ್ರದೇಶದ ವಡೇರಹೋಬಳಿಯ ಶಾಸ್ರೀ ಸರ್ಕಲ್ ರಿಕ್ಷಾ ನಿಲ್ದಾಣದಲ್ಲಿ 25 ರಿಂದ 28 ಆಟೋ ರಿಕ್ಷಾಗಳನ್ನು ನಿಲ್ಲಿಸಲು, ಸ.ನಂ. 145 ರ 0.03.50 ಎಕ್ರೆ ಪ್ರದೇಶದ ಚಿನ್ಮಯಿ ಆಟೋ ರಿಕ್ಷಾ ನಿಲ್ದಾಣದಲ್ಲಿ 6 ರಿಂದ 7 ಆಟೋ ರಿಕ್ಷಾಗಳನ್ನು ನಿಲ್ಲಿಸಲು ಹಾಗೂ ಸ.ನಂ.141/1ಎ ರ 0.02 ಎಕ್ರೆ ಪ್ರದೇಶದ ಪಾರಿಜಾತ ಟ್ಯಾಕ್ಸಿ ನಿಲ್ದಾಣದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಪುಟಾಣಿಗಳು ತಮ್ಮ ಪುಷ್ಪವಾಟಿಕಾದಲ್ಲಿ ಬಣ್ಣಗಳ ದಿನವನ್ನು ಅತ್ಯಂತ ಆಕರ್ಷಕವಾಗಿ ಆಚರಿಸಿದರು. ಬಣ್ಣಗಳ ದಿನಾಚರಣೆಯ ಅಂಗವಾಗಿ ಪುಟಾಣಿಗಳು ಬಣ್ಣಬಣ್ಣದ ಉಡುಗೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು. ಜೊತೆಗೆ ಬಣ್ಣಗಳ ಮಹತ್ವವನ್ನು ಶಿಕ್ಷಕಿಯರು ವಿವಿಧ ಹಾಡು ಹಾಗೂ ನೃತ್ಯದ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಸಿದರು. ಬಣ್ಣದ ಪೇಪರ್ ನಲ್ಲಿ ಪುಟಾಣಿಗಳಿಗೆ ಆಕರ್ಷಕ ಆಟಿಕೆಗಳನ್ನು ಮಾಡಿ ಕೊಡಲಾಯಿತು. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳ ಮೂಲಕ ಬಣ್ಣಗಳ ಮಹತ್ವವನ್ನು ಅರ್ಥಪೂರ್ಣವಾಗಿ ಅರಿತರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ.ಎಸ್. ಶೆಟ್ಟಿ ಪ್ರಾಂಶುಪಾಲರಾದ ಸುನಿಲ್, ಪ್ಯಾಟ್ರಿಕ್ ಸಂಯೋಜಕಿ ವಿಶಾಲ ಶೆಟ್ಟಿ ಮತ್ತು ಶಿಕ್ಷಕಿಯರು, ಮಕ್ಕಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ (ಪಿಯುಸಿ ಮತ್ತು ಪಿಯುಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಾತಿಗಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾತಿ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ವೆಬ್‌ಸೈಟ್ https://shp.karnataka.gov.in/bcwd ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳನ್ನು ಅಥವಾ ಸಹಾಯವಾಣಿ ಸಂಖ್ಯೆ: 8050770004 ಮತ್ತು 8050770005 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಲೇಖನ.ತಲೆ ಕೂದಲಿಗೆ ಮತ್ತು ಚರ್ಮಕ್ಕೆ ಜನರು ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಸೊಳ್ಳೆಗಳನ್ನು ದೂರವಿಡುವಲ್ಲಿ ಸಹ ಕೊಬ್ಬರಿ ಎಣ್ಣೆಯ ಬಳಕೆಯು ತುಂಬಾ ಸಹಾಯ ಮಾಡುತ್ತೆ. ತೆಂಗಿನ ಎಣ್ಣೆಯಿಂದ ಸೊಳ್ಳೆಗಳನ್ನು ದೂರವಿಡೋದು ಹೇಗೆ ಅನ್ನೋ ಸುಲಭ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ. ತೆಂಗಿನೆಣ್ಣೆಯಿಂದ ಲೋಷನ್ ತಯಾರಿಸಿ:ತೆಂಗಿನೆಣ್ಣೆಯಿಂದ ಸೊಳ್ಳೆ ನಿವಾರಕ ಲೋಷನ್ ತಯಾರಿಸೋದು ತುಂಬಾನೆ ಸುಲಭ. ಇದು ಸೊಳ್ಳೆ ಹತ್ತಿರವೂ ಬರದಂತೆ ನೋಡಿಕೊಳ್ಳುತ್ತೆ. ಅದಕ್ಕಾಗಿ ಮೊದಲು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ. ಎಣ್ಣೆ ಗಟ್ಟಿಯಾಗಿದ್ದರೆ, ಅದನ್ನು ಕಡಿಮೆ ಉರಿಯಲ್ಲಿ ಕರಗಿಸಿ. ಈಗ ಕೊಬ್ಬರಿ ಎಣ್ಣೆಯಲ್ಲಿ ನಿಮ್ಮ ನೆಚ್ಚಿನ ಎಸ್ಸೇನ್ಸಿಯಲ್ ಆಯಿಲ್ ಬೆರೆಸಿ, ಅದು ಯಾವುದೇ ಪರಿಮಳ ಇದ್ದರೂ ಒಳ್ಳೆಯದು. ಇದು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತೆ. ಅದನ್ನು ಸ್ಪೂನ್ನಿಂದ ಕಲಕಿ ಮತ್ತು ಎಣ್ಣೆ ದಪ್ಪಗಾದ ನಂತರ, ಅದನ್ನು ಬಾಟಲಿನಲ್ಲಿ ತುಂಬಿಸಿಡಿ. ತೆಂಗಿನೆಣ್ಣೆ ಲೋಷನ್ ಹಚ್ಚುವ ಪ್ರಯೋಜನಗಳು:ತೆಂಗಿನೆಣ್ಣೆ ಲೋಷನ್ ಹಚ್ಚೋದರಿಂದ ಸೊಳ್ಳೆಗಳು ನಿಮ್ಮ ಸುತ್ತಲೂ ಅಲೆದಾಡೋದನ್ನು ತಪ್ಪಿಸಬಹುದು. ವಾಸ್ತವವಾಗಿ, ಸೊಳ್ಳೆಗಳು ತೆಂಗಿನ ಲೋಷನ್ ನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜನೋಪಯೋಗಿ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ ಅನ್ನುವುದಕ್ಕಿಂದ ಅದರಿಂದ ಯಾರಿಗೆ ಉಪಯೋಗವಾಗುತ್ತದೆ ಎಂಬುದು ಬಹುಮುಖ್ಯ. ಕೈಗೊಳ್ಳುವ ಯೋಜನೆಗಳ ಫಲ ಕಟ್ಟ ಕಡೆಯ ಜನರಿಗೂ ತಲುಪಿದಾಗಲೇ ಅದರಲ್ಲೊಂದು ಸಾರ್ಥಕ ಭಾವ ಮೂಡುತ್ತದೆ ಎಂದು ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಪ್ರಸಾದ್ ಪ್ರಭು ಹೇಳಿದರು. ಅವರು ಶಿರೂರು ಕರಾವಳಿಯ ಕುಟುಂಬವೊದಕ್ಕೆ ರೋಟರಿ ಕ್ಲಬ್ ಬೈಂದೂರು ವತಿಯಿಂದ ನಿರ್ಮಿಸಲಾದ ಮನೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿಯ ಶಾಶ್ವತ ಯೋಜನೆಯಾಗಿ ಅರ್ಹ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿದೆ ಎಂದರು. ರೋಟರಿ ಜಿಲ್ಲೆ 3182 ಝೋನ್1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ ಅವರು ನೂತನ ಗೃಹವನ್ನು ಉದ್ಘಾಟಿಸಿ ಶುಭಹಾರೈಸಿದರು. ರೋಟರಿ ವಲಯ ಸೇನಾನಿ ರಂಜಿತ್ ಕುಮಾರ್ ಶೆಟ್ಟಿ, ಬೈಂದೂರು ರೋಟರಿ ಸದಸ್ಯರುಗಳಾದ ಐ. ನಾರಾಯಣ, ಹರೀಶ್ ಶೇಟ್, ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ, 2024-25 ಸಾಲಿನ ನಿಯೋಜಿತ ಅಧ್ಯಕ್ಷ ಮೋಹನ್ ರೇವಣ್ಕರ್, ನಿಯೋಜಿತ ಕಾರ್ಯದರ್ಶಿ ಸುನಿಲ್ ಹೆಚ್. ಜಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಇಂದು ರೋಟರಿ ಮೂಲಕ ನಾವು ಮಾಡುವ ಸೇವೆ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡಲಿದೆ ಎಂಬ ಹೆಮ್ಮ ನಮ್ಮದಾಗಿದೆ ಎಂದು ರೋಟರಿ ಝೋನ್1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ ಹೇಳಿದರು. ಅವರು ಶುಕ್ರವಾರ ರೋಟರಿ ಕ್ಲಬ್ ಬೈಂದೂರು ವತಿಯಿಂದ ರತ್ತೂಬಾಯಿ ಜನತಾ ಪ್ರೌಢಶಾಲಾಗೆ ಕೊಡುಗೆಯಾಗಿ ನೀಡಿದ 1.40ಲಕ್ಷ ಮೌಲ್ಯದ ಇಂಟರ್ಯಾಕ್ಟಿವ್ ಡಿಜಿಟಲ್ ಬೋರ್ಡ್‌ಗೆ ಚಾಲನೆ ನೀಡಿ ಮಾತನಾಡಿ ಬೈಂದೂರು ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈ ಶಾಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಗುಣಾತ್ಮಕ ಕಲಿಕೆಗೆ ಪೂರಕ ವ್ಯವಸ್ಥೆ ಕಲ್ಪಿಸುವುದು ಶ್ಲಾಘನೀಯ ಎಂದರು. ವಿವಿವಿ ಮಂಡಳಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಅವರು ಮಾತನಾಡಿ ನಮಗಾಗಿ ಬದುಕುವುದು ಮಾತ್ರವಲ್ಲದೇ ಸಮಾಜಕ್ಕಾಗಿ ಬದುಕುವುದು ಮುಖ್ಯ. ಉದ್ಯಮ ಹಾಗೂ ಬದುಕಿನ ನಿರಂತರ ಹೋರಾಟದ ನಡುವೆಯೂ ಸಮಾಜ ಸೇವೆಗಾಗಿ ಸಮಯ ಮೀಸಲಿಡುವವರು ನಿಜಕ್ಕೂ ಮಾದರಿ ವ್ಯಕ್ತಿಗಳು ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ್ ಪ್ರಭು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.28: ಹೊಸ್ಕೋಟೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ಆಡಳಿತ ಮಂಡಳಿ ಚುನಾವಣೆಯು ನ್ಯಾಯಸಮ್ಮತವಾಗಿ ನಡೆದಿಲ್ಲವೆಂದು, 2023ರ ಅಗಸ್ಟ್ 27ರಂದು ನಡೆದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯನ್ನು ರದ್ದುಗೊಳಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ತೀರ್ಪು ನೀಡಿದೆ. ಹೊಸ್ಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯು ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಹೊಸ್ಕೋಟೆ ನಿವಾಸಿ, ಸಂಘದ ಸದಸ್ಯ ಗೋಪಾಲ ಪೂಜಾರಿ ಎಂಬುವವರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ನೀಡಿದ್ದರು. 123 ಜನ ಅರ್ಹ ಮತದಾರರಿದ್ದರೂ ಮತದಾನದ ದಿನದಂದು ಕೇವಲ 75 ಜನರ ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಿದ್ದು, 43 ಜನರನ್ನು ಕೈಬಿಡಲಾಗಿತ್ತು. ಇದಕ್ಕೆ ಯಾವುದೇ ನೋಟಿಸು ನೀಡಿರಲಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿದ ಪ್ರಕ್ರಿಯೆ ಎಂದು ಹೊಸ್ಕೋಟೆಯ ಗೋಪಾಲ ಪೂಜಾರಿ ದೂರಿದ್ದರು. ಸಂಘದ ಆಡಳಿತ ಮಂಡಳಿಯ ಚುನಾವಣೆ ಪೂರ್ವದಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮ 13-ಡಿ ಪ್ರಕಾರ ನೋಟೀಸು ನೀಡಿಲ್ಲ. ಸಂಘದ ದಿ.27-08-2023ರಂದು ನಡೆದ…
