ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾದಕ್ಕೆ ಎಲ್ಲ ಜೀವಿಗಳ ಮೇಲೂ ಧನಾತ್ಮಕ ಪರಿಣಾಮ ಬೀರುವ ಶಕ್ತಿ ಇದೆ. ಭಾರತೀಯ ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಶ್ರವಣದಿಂದ ಮನುಷ್ಯರಿಗೆ ವಿಶೇಷವಾದ ಅನುಭೂತಿ ಸಿದ್ಧಿಸುವುದರ ಜತೆಗೆ ಅವರ ಹೃದಯ ಸಂಸ್ಕಾರಗೊಳ್ಳುತ್ತದೆ ಎಂದು ಕೊಲ್ಲೂರಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಭಟ್ ಹೇಳಿದರು. ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಕುಂದಾಪುರದ ಗುರುಪರಂಪರಾ ಸಂಗೀತಸಭಾ ಆಶ್ರ್ರಯದಲ್ಲಿ ಭಾನುವಾರ ನಡೆದ ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮದಲ್ಲಿ. ಅವರು ಗೌರವ ಅತಿಥಿಯಾಗಿದ್ದರು. ಭಾರತೀಯ ಸಂಗೀತ ಪ್ರಕಾರಗಳು ಶಾಸ್ರ್ತಾಧಾರಿತವಾದುವುಗಳು. ಅವುಗಳನ್ನು ವೇದಗಳೊಂದಿಗೆ ಸಮೀಕರಿಸಲಾಗುತ್ತದೆ. ಅವುಗಳ ಅಧ್ಯಯನಕ್ಕೆ ಶಿಸ್ತು, ಸಂಯಮ, ಸಮರ್ಪಣಾಭಾವ ಮತ್ತು ತನ್ಮಯತೆ ಅಗತ್ಯ. ನಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಯಾವುದಾದರೊಂದು ಸಂಗೀತ ಪ್ರಕಾರದ ಅಧ್ಯಯನದಲ್ಲಿ ತೊಡಗಿಸುವುದರಿಂದ ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ಅವರು ಹೇಳಿದರು. ನೇಹಾ ಹೊಳ್ಳ ಸ್ವಾಗತಿಸಿದರು. ಸಾತ್ಯಕಿ ವಂದಿಸಿದರು. ಸಭ್ಯಾ ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಗೋವಿಂದ ಅಡಿಗ, ಕೋಟದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಲಂಚ ಸ್ವೀಕರಿಸುತ್ತಿದ್ದ ಲೈನ್ ಮ್ಯಾನ್ ಓರ್ವನನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಬೈಂದೂರು ಮೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿರುವ ರಮೇಶ್ ಬಡಿಗೇರ ಆಪಾದಿತನಾಗಿದ್ದು, ರೂ.2000 ಲಂಚ ಸ್ವೀಕರಿಸುವ ಸಂದರ್ಭ ಸಿಕ್ಕಿಬಿದ್ದಿದ್ದಾನೆ. ಮರ ಕಡಿಯುವ ಸಲುವಾಗಿ ವಿದ್ಯುತ್ ಕಂಬದ ಲೈನ್ ನಿಷ್ಕ್ರಿಯಗೊಳಿಸಲು ಕುಸುಮಾ ಎಂಬವರು ಮನವಿ ಮಾಡಿದ್ದರು. ಇದಕ್ಕೆ ಮೆಸ್ಕಾಂ ಸಿಬ್ಬಂದಿ ಲಂಚದ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ಈ ಸಂದರ್ಭ ಲಂಚ ಪಡೆಯುತ್ತಿದ್ದಾಗ ಡಿವೈಎಸ್ಪಿ ಪ್ರಕಾಶ್, ಇನ್ಸ್ಪೆಕ್ಟರ್ ಜಯರಾಮ್ ಗೌಡ ಅವರ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾನೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ದರ್ಶನಕ್ಕೆ ತೆರಳಿದ್ದ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ಕದ್ದಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. (32) ಬಂಧಿತ ಆರೋಪಿ. ಜೂ.4ರಂದು ಸುರತ್ಕಲ್ ನಿವಾಸಿ ಪ್ರವೀಣ್ ಎನ್ನುವರು ಪತ್ನಿಯೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದು, ಈ ವೇಳೆ ಚಿನ್ನಾಭರಣವನ್ನು ತಮ್ಮೊಂದಿಗೆ ಕೊಂಡೊಯ್ದುದ್ದಾರೆ. ಚಿನ್ನಾಭರಣಗಳನ್ನು ಚಿಕ್ಕ ಪರ್ಸ್ ನಲ್ಲಿ ಹಾಕಿ ವ್ಯಾನಟಿ ಬ್ಯಾಗ್ ನಲ್ಲಿಟ್ಟುಕೊಂಡಿದ್ದರು. ದೇವರ ದರ್ಶನ ಮಾಡಿ ಹೊರಗಡೆ ಬಂದಾಗ ವ್ಯಾನಟಿ ಬ್ಯಾಗ್ ಜೀಪ್ ಓಪನ್ ಆಗಿದ್ದು ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಕಳವಾಗಿತ್ತ. ಒಟ್ಟು 13 ½ ಪವನ್ ಚಿನ್ನ [4 ಲಕ್ಷದ 75 ಸಾವಿರ ರೂ. ಮೌಲ್ಯ] ಕಳವಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಕೊಲ್ಲೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. ದೇವಸ್ಥಾನಕ್ಕೆ ಬಂದಿದ್ದ ವೇಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಡಿಸ್ಟಿಕ್ 317ಸಿ ರೀಜನ್ 6, ವಲಯ 2ರ 2023-24ನೇ ಸಾಲಿನ ವಲಯಾಧ್ಯಕ್ಷರಾಗಿ ಶಂಕರ ಶೆಟ್ಟಿ ಬವಲಾಡಿ ಆಯ್ಕೆಯಾಗಿದ್ದಾರೆ. ಎಸ್ಸಿಡಿಸಿಸಿ ಬ್ಯಾಂಕ್ ಉಪ್ಪುಂದ ಶಾಖೆಯಲ್ಲಿ ಶಾಖಾ ಪ್ರಬಂಧಕರಾಗಿರುವ ಶಂಕರ ಶೆಟ್ಟಿ ಅವರು ತೆಕ್ಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಜಿಲ್ಲಾ ಕ್ಯಾಬಿನೆಟ್ನ ವಿಷನ್ ಕೇರ್ ಡಿಸ್ಟಿಕ್ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿರುತ್ತಾರೆ.
ಸಾಸ್ತಾನ ಕೋಡಿ, ಹಂಗಾರಕಟ್ಟೆ, ಕಾಪು ಮೂಳೂರು ಕಡಲಕೊರೆತ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಭೇಟಿ, ಪರಿಶೀಲನೆ. ಶಾಶ್ವತ ಯೋಜನೆ ರೂಪಿಸುವ ಆಶ್ವಾಸನೆ ಹಿಂದೂಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಸೊರಕೆ, ಮೊಗವೀರ ಸಮುದಾಯದ ಮುಖಂಡ ಜಿ. ಶಂಕರ್, ಇಲಾಖಾ ಅಧಿಕಾರಿಗಳ ಉಪಸ್ಥಿತಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 6 ತಿಂಗಳ ಅವಧಿಯಲ್ಲಿ ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ, ಸ್ವಚ್ಛತಾ ಅಭಿಯಾನ, ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಸನ್ಮಾನ, ಯುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹ, ಶಾಲಾ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಿ ಪ್ರೋತ್ಸಾಹ ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಮೆಚ್ಚುಗೆ ಪಡೆದ ಜೆಸಿಐ ಚಿತ್ತೂರು ಮಾರಣಕಟ್ಟೆ ವಲಯದ ಉತ್ತಮ ಘಟಕ ಪ್ರಶಸ್ತಿಯ ಜೊತೆಗೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಘಟಕದ ಅಧ್ಯಕ್ಷರಾದ ಜೆಸಿಐ ಗುರುಪ್ರಸಾದ್ ದೇವಾಡಿಗ ಮಾರಣಕಟ್ಟೆ ಹಾಗೂ ಕಾರ್ಯದರ್ಶಿ ವಿಜಯ ಆಚಾರ್ಯ ಮಾರಣಕಟ್ಟೆ ಪ್ರಶಸ್ತಿ ಪಡೆಯುವಲ್ಲಿ ಶ್ರಮಿಸಿದ ಸ್ಥಾಪಕ ಅಧ್ಯಕ್ಷರು, ಪೂರ್ವಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ನಮ್ಮ ಘಟಕದೊಂದಿಗೆ ಕೈ ಜೋಡಿಸಿದ ಸರ್ವರನ್ನು ಸ್ಮರಿಸಿದರು.
ರಾಜ್ಯದಲ್ಲಿ ವರ್ಗಾವಣೆ ದಂದೆ ಆರಂಭವಾಗಿದೆ. ಬಿಜೆಪಿ ಸರಕಾರದ ಮೇಲೆ ಗೂಬೆ ಕೂರಿಸೋದು ಬೇಡ – ಯಾವುದೇ ತನಿಕೆ ಎದುರಿಸಲು ಸಿದ್ದರಿದ್ದೇವೆ – ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿಗೆ ಸಮೀಪದ ನಾಗೋಡಿಯ ಕಂಚಿಕೆರೆ ಎಂಬಲ್ಲಿ ಸ್ಥಳೀಯ ನಿವಾಸಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಡೆದಿದೆ. ಕಂಚಿಕೆರೆಯ ಗಣೇಶ್ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಗಣೇಶ್ ಅವರ ಮನೆ ಅಂಗಳಕ್ಕೆ ಚಿರತೆ ಬಂದ ವೇಳೆ ನಾಯಿಗಳು ಏಕಾಏಕಿ ಬೊಗಳಲಾರಂಭಿಸಿವೆ. ನಾಯಿಯ ಕೂಗಾಟ ಕೇಳಿ ಗಣೇಶ್ ಮನೆಯಿಂದ ಹೊರ ಬಂದಾಗ ಆಕ್ರೋಶಗೊಂಡ ಚಿರತೆ ಗಣೇಶ್ ಮೇಲೆಯೇ ಎಗರಿದೆ.ಗಾಯಗೊಂಡ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯವರ ಕೂಗಾಟಕ್ಕೆ ಅಕ್ಕಪಕ್ಕದವರು ಓಡಿ ಬಂದಾಗ ಚಿರತೆ ಗಣೇಶ್ ಅವರನ್ನು ಬಿಟ್ಟು ಓಡಿ ಹೋಗಿದ್ದು ಇದುವರೆಗೆ ನಾಯಿ, ದನಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಇದೀಗ ಮನುಷ್ಯರ ಮೇಲೂ ಎರಗಲು ಆರಂಭಿಸಿದ್ದು ಜನತೆ ಕಂಗಾಲಾಗಿದ್ದಾರೆ. ಕಾಡುಪ್ರಾಣಿಗಳು ಆಹಾರ ಅರಸಿ ಕಾಡು ಬಿಟ್ಟು ನಾಡಿಗೆ ಬರುತ್ತಿದ್ದು, ಈ ಪೈಕಿ ಚಿರತೆ ಹೆಚ್ಚಿಗಿ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿಜೆಪಿ ಕುಂದಾಪುರ ಶಾಸಕರರಾದ ಎ. ಕಿರಣ್ ಕುಮಾರ್ ಕೊಡ್ಗಿ ಯವರ ಅಧಿಕೃತ ಕಛೇರಿ ಇಂದು ಕುಂದಾಪುರ ತಾಲ್ಲೂಕು ಪಂಚಾಯತ್ ಕಟ್ಟದದಲ್ಲಿ ಆರಂಭಗೊಂಡಿತು. ಮಾಜಿ ಶಾಸಕ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ ಅಪ್ಪಣ ಹೆಗ್ಗಡೆಯವರು ಕಛೇರಿಯನ್ನು ಉದ್ಘಾಟಿಸಿದರು. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂದಾಪುರ ಹೃದಯ ಭಾಗ ಶಾಸ್ತ್ರೀ ವೃತ್ತದಲ್ಲಿ ಶಾಸಕರ ಕಚೇರಿ ಉದ್ಘಾಟನೆಗೊಂಡಿದ್ದು ಕ್ಷೇತ್ರದ ಜನರಿಗೆ ಇಲ್ಲಿ ಭೇಟಿ ನೀಡಿ ಅಹವಾಲು ನೀಡಲು ಸುಲಭವಾಗುತ್ತದೆ. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭಿವೃದ್ಧಿ ಹಾದಿಯಲ್ಲಿ ಹಾಲಿ ಶಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಸಕರ ಕಚೇರಿಯ ಮೂಲಕ ಜನರ ಕಡತಗಳ ಸುಲಭ ವಿಲೇವಾರಿಯಾಗಿ ಸರಕಾರಿ ಕೆಲಸಗಳು ಶೀಘ್ರವಾಗಿ ನಡೆಯಬೇಕು. ಇದೊಂದು ಅಭಿವೃದ್ಧಿ ಕೇಂದ್ರವಾಗಿ ಸಾಮಾನ್ಯ ಜನರ ಕಾರ್ಯಾಲಯವಾಗಲಿ ಎಂದು ಆಶಿಸಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಯವರು ಮಾತನಾಡಿ, ಇದು ಸರಕಾರಿ ಕಚೇರಿಯಾಗಿದ್ದು ಜನ ಸಾಮಾನ್ಯರಿಗೆ ಆಗಬೇಕಾದ ಕೆಲಸ ಕಾರ್ಯಗಳು ಶೀಘ್ರವಾಗಿ ಪೂರೈಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು (ಈದುಲ್ ಅಝಾ) ಇಂದು ಸಂಭ್ರಮ ಸಡಗರದಿಂದ ಆಚರಿಸಿದರು. ಕುಂದಾಪುರ ಬೈಂದೂರು, ಹೆಬ್ರಿ, ಕಾರ್ಕಳ, ಉಡುಪಿ, ಕಾಪು, ಬ್ರಹ್ಮಾವರ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಂ ಬಾಂಧವರು ಬೆಳಗ್ಗೆ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಜ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಜ್ ಬಳಿಕ ಮುಸ್ಲಿಮ್ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್ ಮೆರವಣಿಗೆ ಹೊರಟು, ಕುಂದಾಪುರ ಮಸೀದಿಯ ಧರ್ಮಗುರು ಮೌಲಾನಾ ಕರಾರ್ ಹುಸೇನ್ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು. ಗಂಗೊಳ್ಳಿಯ ಜುಮ್ಮಾ ಮಸೀದಿಯಲ್ಲಿ ಮೌಲಾನ ಮುಝಮ್ಮಿಲ್ ನದ್ವಿ, ಮೋಹಿದೀನ್ ಜುಮ್ಮಾ ಮಸೀದಿಯಲ್ಲಿ ಖತೀಬ್ ಮೌಲಾನ ಅಬ್ದುಲ್ ಕರೀಂ ನದ್ವಿ, ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಮತಿನ್ ಸಿದ್ದಿಕಿ ಅವರ ನೇತೃತ್ವದಲ್ಲಿ ವಿಶೇಷ ನಮಾಝ್…
