Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಜಿಲ್ಲೆಯಲ್ಲಿ ಸಂಭವಿಸುವ ಜನನ – ಮರಣದ ನಿಖರ ಮಾಹಿತಿ ದಾಖಲಿಸಿ: ಜಿಲ್ಲಾಧಿಕಾರಿ
    ಉಡುಪಿ ಜಿಲ್ಲೆ

    ಜಿಲ್ಲೆಯಲ್ಲಿ ಸಂಭವಿಸುವ ಜನನ – ಮರಣದ ನಿಖರ ಮಾಹಿತಿ ದಾಖಲಿಸಿ: ಜಿಲ್ಲಾಧಿಕಾರಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಉಡುಪಿ:
    ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣದ ವಿವರಗಳನ್ನು ಯಾವುದೇ ತಪ್ಪುಗಳಿಗೆ ಆಸ್ಪದ ನೀಡದಂತೆ ನಿಖರವಾಗಿ ಮಾಹಿತಿ ದಾಖಲು ಮಾಡುವಂತೆ ನೋಂದಣಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು

    Click Here

    Call us

    Click Here

    ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ ಮತ್ತು ಮರಣ ನೋಂದಣಿಯು ಭವಿಷ್ಯದ ಕೆಲಸ ಕಾರ್ಯಗಳಿಗೆ ಇವುಗಳ ಪ್ರಮಾಣಪತ್ರವು ಅವಶ್ಯವಿದ್ದು, ಇದನ್ನು ಮನಗಂಡು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ಜನನ ಮತ್ತು ಮರಣದ ವಿವರಗಳನ್ನು ದಾಖಲು ಮಾಡುವ ಕಾರ್ಯವನ್ನು ನೋಂದಣಾಧಿಕಾರಿಗಳು ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ನೋಂದಣಿ ಸಮಯದಲ್ಲಿ ತಂದೆ-ತಾಯಿಯರ ಹೆಸರು ಲಿಂಗ ತಪ್ಪು ನಮೂದು, ಬದಲು, ಸ್ಥಳ ಮಹಜರು ಮಾಡದೇ ಮರಣ ಪ್ರಮಾಣಪತ್ರ ಸೃಜನೆ, ನೋಂದಣಿ ಘಟಕದ ವ್ಯಾಪ್ತಿ ಮೀರಿ ನೋಂದಣಿ, ಮೂಲ ದಾಖಲೆಗಳನ್ನು ಪರಿಶೀಲಿಸದೇ ಘಟನೆಗಳ ಹೆಸರು, ದಿನಾಂಕ ಮತ್ತು ವಿಳಾಸವನ್ನು ತಪ್ಪಾಗಿ ನಮೂದಿಸುವುದು ಸೇರಿದಂತೆ ಮತ್ತಿತರ ಸಾಮಾನ್ಯ ತಪ್ಪುಗಳು ನೋಂದಣಿ ಕಾರ್ಯದಲ್ಲಿ ಆಗುತ್ತಿವೆ ಎಂದರು.

    ಮಗುವಿನ ಹೆಸರು ಮತ್ತು ಜೈವಿಕ ತಂದೆ-ತಾಯಿಯ ಹೆಸರನ್ನು ಸೇರ್ಪಡೆ ಹಾಗೂ ತಿದ್ದುಪಡಿ ಮಾಡುವ  ಸಂದರ್ಭದಲ್ಲಿ ಜೈವಿಕ ತಂದೆ / ತಾಯಿಯ ಜಂಟಿ ಸಹಿ ಮತ್ತು ಅಗತ್ಯ ದಾಖಲೆಗಳನ್ನು ಖಾತರಿಪಡಿಸಿಕೊಂಡು ನಿಯಮಾನುಸಾರ ಮಾಹಿತಿಯನ್ನು ದಾಖಲಿಸಬೇಕು ಜನನ ಮರಣ ನೋಂದಣಿ ಸಮಯದಲ್ಲಿ ಸಾಧ್ಯವಾದಲ್ಲಿ ಕರಡು ಪ್ರತಿಯನ್ನು ಸಂಬಂಧಪಟ್ಟವರಿಗೆ ತೋರಿಸಿ, ಅನುಮೋದನೆ ಪಡೆಯುವುದು ಸೂಕ್ತ ಎಂದರು. 

    ಜನನ ಸಮಯದಲ್ಲಿ ಮಗು ಮರಣ ಹೊಂದಿದ ಸಂದರ್ಭದಲ್ಲಿ ನೋಂದಣಿ ಮಾಡುವಾಗ ಮರಣದ ಕಾರಣ ಕುರಿತು ನಮೂದಿಸಲು ಪೋರ್ಟಲ್‌ನಲ್ಲಿ ಯಾವುದೇ ಆಯ್ಕೆಗೆ ನಮೂದು ಇಲ್ಲದೇ ಇರುವುದು ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪೋರ್ಟಲ್‌ನಲ್ಲಿ ಸೃಜಿಸಲು ಸರ್ಕಾರದ ಗಮನಕ್ಕೆ ತರಲು ಪತ್ರ ಬರೆಯುವಂತೆ ಸೂಚಿಸಿದರು.

    ಜನನ ಮರಣ ಘಟನೆಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸುವ ಬಗ್ಗೆ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನಂತರ ಅಂತಹ ಘಟನೆಗಳಿಗೆ ಮಾತ್ರ ಅಲಭ್ಯ ಪ್ರಮಾಣ ಪತ್ರ ನೀಡಬೇಕು. ಒಂದೊಮ್ಮೆ ಅರ್ಜಿದಾರರು ನೀಡಿರುವ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಸ್ಥಳೀಯ ಪೊಲೀಸರ ಪರಿಶೀಲನೆಯ ನಂತರವಷ್ಟೇ ಅಲಭ್ಯ ಪ್ರಮಾಣ ಪತ್ರ ನೀಡಬೇಕು ಎಂದರು. 

    Click here

    Click here

    Click here

    Call us

    Call us

    ನ್ಯಾಯಾಲಯದ ಜನನ – ಮರಣ ತಿದ್ದುಪಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಲಭ್ಯವಿರುವ ದಾಖಲೆಗಳೊಂದಿಗೆ ಹಾಜರಾಗಿ ನಿಲುವನ್ನು ಸಲ್ಲಿಸಬೇಕು. ಅಧಿಕಾರಿಗಳು ಹಾಜರಾಗಲು ಸಾಧ್ಯವಿಲ್ಲದಿದ್ದಲ್ಲಿ ಅವರುಗಳ ಪರವಾಗಿ ಪ್ರತಿನಿಧಿಯನ್ನು ನಿಯೋಜಿಸುವುದರೊಂದಿಗೆ ಗೈರು ಹಾಜರಾತಿಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದರು.

    ಜನನ ಮತ್ತು ಮರಣದ ನೋಂದಣಿ ಕಾರ್ಯಗಳು ಸುವ್ಯವಸ್ಥಿತವಾಗಿ ನಡೆಯುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಆಗಿಂದಾಗ್ಗೆ ಜನನ-ಮರಣ ನೋಂದಣಿ ಘಟಕಗಳ ತಪಾಸಣೆಯನ್ನು ಕೈಗೊಳ್ಳಬೇಕು ಎಂದ ಅವರು, ಎಲ್ಲಾ ಜನನ ಮರಣ ನೋಂದಣಾಧಿಕಾರಿಗಳು, ಉಪನೋಂದಣಾಧಿಕಾರಿಗಳು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ನೋಂದಣಿ ಕಾರ್ಯದ ಕುರಿತು ಸಮರ್ಪಕ ತರಬೇತಿ ನೀಡಿ, ನಂತರ ನೋಂದಣಿ ಕಾರ್ಯಕ್ಕೆ ನಿಯೋಜಿಸಬೇಕು ಎಂದರು.  

    ಜಿಲ್ಲೆಯಲ್ಲಿ ಮುಂಗಾರು ಹಿಂಗಾರು ಹಾಗೂ ಬೇಸಿಗೆ ಋತುವಿನ ಬೆಳೆ ಸಮೀಕ್ಷೆ ಕ್ಷೇತ್ರ ಮರು ಹೊಂದಾಣಿಕೆ ವರದಿಯನ್ನು ನಿಗಧಿತ ಕಾಲದ ಒಳಗೆ ಪೂರ್ಣಗೊಳಿಸಿ, ತಾಲೂಕುವಾರು ವರದಿಯನ್ನು ಕ್ರೂಢಿಸಿ, ಅಂಕಿ- ಅಂಶಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಒಟ್ಟು 574 ಜನನ-ಮರಣ ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 2026 ರ ಜನವರಿಯಿಂದ ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ 1256, ನಗರ ವ್ಯಾಪ್ತಿಯಲ್ಲಿ 7095 ಸೇರಿದಂತೆ ಒಟ್ಟು 8351 ಜನನ ಘಟನೆಗಳು ನೋಂದಾವಣೆಯಾದರೆ, ಗ್ರಾಮೀಣ ಪ್ರದೇಶದಲ್ಲಿ 5399, ನಗರ ಪ್ರದೇಶದಲ್ಲಿ 3583 ಸೇರಿದಂತೆ ಒಟ್ಟು 8982 ಮರಣ ಘಟನೆಗಳು ನೋಂದಾವಣೆಯಾಗಿವೆ. 39 ನಿರ್ಜೀವ ಜನನಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತವು 912 ರಷ್ಟಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಮ್.ವ್ಹಿ ದೊಡಮನಿ ಸಭೆಗೆ ಮಾಹಿತಿ ನೀಡಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಡಿಹೆಚ್‌ಓ ಡಾ. ಬಸವರಾಜ್ ಹುಬ್ಬಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬಾಕಿ ಉಳಿದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ

    06/10/2026

    ಡಾ. ಶಿವರಾಮ ಕಾರಂತ ಜನ್ಮದಿನಾಚರಣೆ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ

    06/10/2026

    ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆಹ್ವಾನ

    06/10/2026
    Leave A Reply Cancel Reply

    sixteen + 4 =

    Call us

    Click Here

    Call us

    Call us

    Call us
    Highest Viewed Recently
    • ಹೊಸಬೇಂಗ್ರೆ ಅಂಗನವಾಡಿಯಲ್ಲಿ ಬ್ರಹ್ಮಾವರ ತಾಲ್ಲೂಕು ಮಟ್ಟದ ಪೋಷಣ್ ಅಭಿಯಾನ
    • ರಾಪಿಡ್ ಚೆಸ್ ಟೂರ್ನಮೆಂಟ್‌ನಲ್ಲಿ ಇತಿಹಾಸಿನಿ ಪಡುಕೋಣೆಗೆ ಪ್ರಥಮ ಸ್ಥಾನ
    • ಜಿಲ್ಲೆಯಲ್ಲಿ ಸಂಭವಿಸುವ ಜನನ – ಮರಣದ ನಿಖರ ಮಾಹಿತಿ ದಾಖಲಿಸಿ: ಜಿಲ್ಲಾಧಿಕಾರಿ
    • ನಾಡೋಜ ಡಾ. ಜಿ. ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ. ನವೆಂಬರ್ 06ರಂದು ಕೋಟದಲ್ಲಿ ಗೌರವ ಪ್ರದಾನ
    • ಸರಕಾರದ ಯೋಜನೆಯ ಮೂಲಕ ಮಹಿಳೆ ಸ್ವಾವಲಂಬಿ ಬದುಕಿಗೆ ಮುನ್ನುಡಿ: ರವೀಂದ್ರ ರಾವ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.