ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್’ನಲ್ಲಿ ‘ದೀಪಾವಳಿ’ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆಯೂ ಖಚಿತ ಕೊಡುಗೆಗಳು, ಇಎಂಐ ಸೌಲಭ್ಯ, ಜೊತೆಗೆ ಲಕ್ಕಿ ಕೂಪನ್, ಮೆಗಾ ಎಕ್ಸ್’ಚೆಂಚ್ ಆಫರ್, ಉಚಿತ ಸ್ಕ್ರೀನ್ ಬದಲಾವಣೆ ಸೇರಿದಂತೆ ಹಲವು ಕೊಡುಗೆಗಳನ್ನು ಒಳಗೊಂಡಿದೆ. ಲಕ್ಕಿ ಕೂಪನ್ನಲ್ಲಿ ಕಾರು, ಬೈಕ್, ಸ್ಮಾರ್ಟ್ ಟಿವಿ ಸಹಿತ ಹಲವು ಕೊಡುಗೆಗಳನ್ನು ಗೆಲ್ಲುವ ಅವಕಾಶವಿದೆ. ದೀಪಾವಳಿಯ ಅಂಗವಾಗಿ ಈ ಆಫರ್ ನ.30ರ ತನಕ ಇರಲಿದೆ. ಹೆಚ್ಚಿನ ಮಾಹಿತಿ ಹಾಗೂ ಖರೀದಿಗೆ ಬೈಂದೂರು ಪೊಲೀಸ್ ಸ್ಟೇಷನ್ ಎದುರಿನ ಪಂಚಾಯತ್ ಕಟ್ಟಡದಲ್ಲಿರುವ ‘ಪ್ರೀತಿ ಮೊಬೈಲ್ಸ್’ ಮಳಿಗೆ, ಬೈಂದೂರು ಬಂಕೇಶ್ವರ ರಸ್ತೆಯ ಪಂಚಾಯತ್ ಕಟ್ಟಡದಲ್ಲಿನ ಮಳಿಗೆ ಅಥವಾ ಆಂಜನೇಯ ದೇವಸ್ಥಾನದ ಬಳಿಕ ಶೇಷಾದ್ರಿ ಕಾಂಪ್ಲೆಕ್ಸ್ ಮಳಿಗೆಗೆ ಭೇಟಿ ನೀಡಬಹುದಾಗಿದೆ. ಇದು ಜಾಹೀರಾತು ಸುದ್ದಿಯಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ನೇಹಿತನ ಕುಟುಂಬದ ಮದುವೆಗೆಂದು ಬೆಂಗಳೂರಿನಿಂದ ಬಂದಿದ್ದ ಯುವಕರು ಈಜಲು ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಸಮುದ್ರ ಕಿನಾರೆಯಲ್ಲಿ ನಡೆದಿದೆ. ಘಟನೆಯಲ್ಲಿ ಬೆಂಗಳೂರಿನ ಯುವಕ ಸಂತೋಷ್ (24) ಮೃತಪಟ್ಟಿದ್ದು, ಕುಂದಾಪುರದ ಮೂಲಕ ಯುವಕ ಅಜೆಯ್ (24) ನಾಪತ್ತೆಯಾಗಿದ್ದಾನೆ. ಮದುವೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಯುವಕರು ಬೀಜಾಡಿ ಬೀಚ್ ಸಮೀಪದ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ನಾಲ್ವರು ಯುವಕರು ಸಮುದ್ರದಲ್ಲಿ ಈಜಲು ತೆರಳಿದ್ದು ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಕೊಚ್ಚಿ ಹೋಗಿದ್ದರು. ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಸಂತೋಷ್ ಎಂಬಾತನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದರಾದರೂ, ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು. ನಾಪತ್ತೆಯಾಗಿರುವ ಇನ್ನೋರ್ವ ಯುವಕ ಅಜೇಯನಿಗಾಗಿ ಸಮುದ್ರದಲ್ಲಿ ಸ್ಥಳೀಯ ಮುಳುಗು ತಜ್ಞರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರಿಂದ ಶೋಧ ನಡೆಸಲಾಗುತ್ತಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಾತೃಭೂಮಿ ಮಹಿಳಾ ಸಹಕಾರ ಸಂಘ ಬೈಂದೂರು ಇದರ ವತಿಯಿಂದ ಪಂಚಮಿ ಮಾಸಿಕ ಠೇವಣಿ ಎಂಬ ಹೊಸ ಉಳಿತಾಯ ಯೋಜನೆಯು ಇತ್ತೀಚಿಗೆ ಆರಂಭವಾಯಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅನಸೂಯ ಶೇಟ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ ಹಾಗೂ ಸಂಸ್ಥೆಯ ನಿರ್ದೇಶಕರುಗಳಾದ ಆಶಾ, ಗೀತಾ, ಎಸ್. ಲಕ್ಷ್ಮೀ ಬೈಂದೂರು, ಗಿರಿಜಾ, ಸಾವಿತ್ರಿ, ಮಾಲತಿ, ಪ್ರೇಮಾ, ಅಂಬಿಕಾ, ಶ್ಯಾಮಲಾ, ಅಲಿಯಾ ನಾಜ್, ನೇತ್ರಾವತಿ, ಸರಳಾ, ಸ್ಥಾಪಕರು ಹಾಗೂ ಪತ್ರಕರ್ತರಾದ ಅಂದುಕಾ, ಸಿಬ್ಬಂದಿಗಳಾದ ನಾಗರಾಜ್ ಪೂಜಾರಿ, ನಾಗಶ್ರೀ, ಪೂರ್ಣಿಮಾ ಮತ್ತು ಎಲ್ಲಾ ಗ್ರಾಹಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆ, ತಾಲೂಕು ಆಡಳಿತ ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ಪ್ರಥಮ ಬಾರಿ ಸಾಂಸ್ಕೃತಿಕ ಸಂಭ್ರಮ ಬೈಂದೂರು ಉತ್ಸವ ನ.1, 2, 3ರಂದು ನಡೆಯಲಿದೆ. ನ.1ರಂದು ಬೆಳಗ್ಗೆ ತಲ್ಲೂರಿನಿಂದ ಬೈಂದೂರಿಗೆ ಟ್ಯಾಬೊ ಜಾಥಾ ಹೊರಡಲಿದೆ. ಉಪ್ಪುಂದದಿಂದ ಬೈಂದೂರಿಗೆ ಭಜನಾ ಜಾಥಾ ನಡೆಯಲಿದೆ. ಕ್ಷೇತ್ರದ ವಿವಿಧ ಗ್ರಾಪಂ ಹಾಗೂ ಹಲವಾರು ಧಾರ್ಮಿಕ ಕೇಂದ್ರಗಳಿಂದ ಟ್ಯಾಬ್ಲೊ ಸಿದ್ಧಗೊಂಡಿದೆ. ಧಾರ್ಮಿಕ ಗೋಷ್ಠಿ, ಸಿನಿತಾರ ಸಂಗಮ, ಬೀಚ್ ಉತ್ಸವ, ಮೇಘನಾದ, ಸಾಂಸ್ಕೃತಿಕ ವೈಭವ, ಕಂಬಳ, ಗೊಂಬೆಯಾಟ, ಯಕ್ಷಗಾನ, ಆರೋಗ್ಯ ಮೇಳ, ರಂಗಗೀತೆ, ನೃತ್ಯೋತ್ಸವ, ಗಾನಲೋಕ, ಲೈವ್ ಸಂಗೀತ ಹಬ್ಬ, ಜಾದೂಲೋಕ, ಯೋಗ, ಭರತನಾಟ್ಯ, ಗೆಜ್ಜೆನಾದ, ಜಾಂಬೂರಿ, ಟ್ಯಾಬ್ಲೊ ಮೇಳ, ದೇಹದಾರ್ಡ್ಯ, ಪ್ರದರ್ಶನ, ನಾದನೂಪುರ, ಮೀನುಗಾರಿಕೆ, ಕೃಷಿ, ವೈದ್ಯರು, ವಕೀಲರು, ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಸಹಕಾರಿ ಕ್ಷೇತ್ರ ಸೇರಿ ವಿವಿಧ ಗೋಷ್ಠಿ ನಡೆಯಲಿದೆ. ಜನಪದ ಹಬ್ಬ, ಗೋಪೂಜೆ, ದೀಪ ವೈಭವ, ಸ್ಕೂಬಾಡೈವ್, ಆಹಾರ ಮೇಳ, ಕಾರ್ಟೂನ್ ಹಬ್ಬ, ಮನೋರಂಜನಾ ಪಾರ್ಕ್, ಕರಕುಶಲ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ ಉಪ್ಪುಂದ ಇದರ 2024-25 ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ ದೇವಾಡಿಗ ರಾಯರಡಿ ಅವರನ್ನು ಆಯ್ಕೆ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಅಕ್ಷಯ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಬಾಕಿಮನೆ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿ ಮಾಧವ ಜೆ. ಅರುಣ್ ಕೋಶಾಧಿಕಾರಿಯಾಗಿ ನಂದೀಶ್ ಮಣ್ಣಮನೆ, ಮಂಜುನಾಥ್ ಮೇಲ್ಮನೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ ಕೋಟೆಬೆಟ್ಟು, ರಾಘವೇಂದ್ರ ಮೇಲ್ಮನೆ, ಕ್ರೀಡಾ ಕಾರ್ಯದರ್ಶಿ ಕೇಶವ ಬಾಕಿಮನೆ, ಭರತ, ವಸಂತ, ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ವತಿಯಿಂದ ನವೆಂಬರ್ 1 ರಿಂದ 7ರ ವರೆಗೆ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಹಬ್ಬವಾಗಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು . ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನ.1ರಿಂದ ಪ್ರತಿದಿನ ಸಂಜೆ 7 ದಿನಗಳ ಕಾಲ ಸಂಜೆ 6 ಗಂಟೆಯಿಂದ ಸಭಾ ಕಾರ್ಯಕ್ರಮ, ಉಪನ್ಯಾಸ, ಮನೋರಂಜನೆ ನಡೆಯಲಿದೆ. ವಾರಗಳ ಕಾಲ ನಡೆ ಯುವ ಕನ್ನಡ ಹಬ್ಬಕ್ಕಾಗಿ ಧ್ವನಿ ಮತ್ತು ಬೆಳಕು ಸಂಘಟನೆ ಸಹಯೋಗದೊಂದಿಗೆ ಇಡಿ ಕುಂದಾಪುರ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು. ಪ್ರತಿ ಅಂಗಡಿ ಮುಂಗಟ್ಟುಗಳು ಅಲಂಕಾರಗೊಳ್ಳಲಿವೆ. ತೀರಾ ಅಪರೂಪ ಮತ್ತು ವಿಶಿಷ್ಟ ರೀತಿಯಲ್ಲಿ ಆಯೋಜನೆ ಗೊಂಡಿರುವ ಕನ್ನಡ ಹಬ್ಬದಲ್ಲಿ ಕನ್ನಡಿಗರು ಉತ್ಸಾಹದಿಂದ ಪಾಲ್ಗೊಳ್ಳಬೇಕೆಂಬು ವುದು ನಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದರು. ಅ.31ರಂದು ಕನ್ನಡ ರಥೋತ್ಸವ:ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಥಮ ಬಾರಿಗೆ ಅ.31ರಂದು ಮಧ್ಯಾಹ್ನ ಕನ್ನಡ ರಥೋತ್ಸವ ನಡೆಯಲಿದೆ. ಜಾತಿಮತಪಂಥ ಸಹಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ವಿನಾಯಕ ಸಿ.ಬಿ.ಎಸ್.ಸಿ. ಸ್ಕೂಲ್ ತೆಕ್ಕಟ್ಟೆಯಲ್ಲಿ ಪ್ಲೇ ಸ್ಕೂಲ್, ಎಲ್. ಕೆ. ಜಿ. ಹಾಗೂ ಯು. ಕೆ. ಜಿ. ಮಕ್ಕಳು ಎಲ್ಲೋ ಕಲರ್ ಡೇ ಯನ್ನು ಆಚರಿಸಿದರು. ಮಕ್ಕಳಲ್ಲಿ ಬಣ್ಣಗಳನ್ನು ಗುರುತಿಸಿ ನೆನಪಿನಲ್ಲಿಟ್ಟುಕೊಳ್ಳುವ ಕೌಶಲ್ಯವನ್ನು ವೃದ್ಧಿಸುವ ಸಲುವಾಗಿ ಪ್ರತಿ ತಿಂಗಳು ವಿವಿಧ ಬಣ್ಣಗಳ ದಿನಾಚರಣೆಯನ್ನು ಮಾಡಿ ಮಕ್ಕಳಿಗೆ ಬಣ್ಣಗಳ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆ ಪ್ರಯುಕ್ತ ವಿದ್ಯಾರ್ಥಿಗಳು ಹಳದಿ ಬಣ್ಣದ ವಿವಿಧ ತಿನಿಸುಗಳು ಹಾಗೂ ವಸ್ತುಗಳನ್ನು ಪ್ರದರ್ಶಿಸಿದರು. ತರಗತಿ ಕೋಣೆಗಳಲ್ಲಿ ಹಳದಿ ಬಣ್ಣದ ವಸ್ತುಗಳ ಅಲಂಕಾರವನ್ನು ಮಾಡಿ ವಿದ್ಯಾರ್ಥಿಗಳು ನಲಿದಾಡಿದರು. ವಿದ್ಯಾರ್ಥಿಗಳು ನೃತ್ಯ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಳದಿ ಬಣ್ಣದ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ್ ಶೆಟ್ಟಿ ಹೆಚ್., ಕಿಂಡರ್ ಗಾರ್ಟನ್ ಸಂಯೋಜಕಿ ವಿಲಾಸಿನಿ ಶೆಟ್ಟಿ, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯಾವುದಕ್ಕೂ ಸಮಯವಲ್ಲ ಎಂಬ ಆಧುನಿಕ ಜೀವನಶೈಲಿಯಿಂದ ಸಂಸ್ಕೃತಿ ನಾಶವಾಗುತ್ತಿದೆ. ಮೊಬೈಲ್ ಕಾರಣದಿಂದ ನಮ್ಮ ಸೃಜನಶೀಲತೆ, ತೊಡಗಿಕೊಳ್ಳುವಿಕೆ ಎಲ್ಲವೂ ಮಾಯವಾಗುತ್ತಿರುವ ಈ ಸಂದರ್ಭದ ನಡುವೆ, ಹೊರಕ್ಕೆ ಬಂದು ಕಲಾವಿದರೊಂದಿಗೆ ಮುಖಾಮುಖಿಯಾಗುವುದು ಮುಖ್ಯ ಇಡುಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಸಂಚಲನ ರಿ. ಬೈಂದೂರು ನೇತೃತ್ವದಲ್ಲಿ ಗುರುವಾರ ಸುರಭಿ ರಜತಯಾನದ ಅಂಗವಾಗಿ ಆಯೋಜಿಸಲಾದ ಇಡುಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಪ್ರಸ್ತುತಿಯ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲೆಯನ್ನು ಕೇವಲ ಮನೋರಂಜನೆಯ ಸರಕಾಗಿ ನೋಡದೇ ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವುದು ಮುಖ್ಯ. ಕಲಾವಿದ ಅಧ್ಯಯನಶೀಲನಾದಾಗ ಕಲೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು. ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಕೆರಾಡಿ ವರಸಿದ್ಧಿವಿನಾಯಕ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಶೆಟ್ಟಿ, ಸಂಚಲನ ಹೊಸೂರು ಅಧ್ಯಕ್ಷ ಮಾದೇವ ಮರಾಠಿ, ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಂಕರನಾರಾಯಣದ ಅಂಪಾರು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಗೆ ನುಗ್ಗಿ ಸೊತ್ತು ಕಳ್ಳತನ ಮಾಡಿದ್ದ ಬಾಲಕನನ್ನು ಬಾಲ ನ್ಯಾಯ ಮಂಡಳಿಯ ವಶಕ್ಕೆ ಒಪ್ಪಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಠಾಣೆ ಪಿ.ಎಸ್.ಐ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಈ ಕಳ್ಳತನ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆತನಿಂದ ಮೊಬೈಲ್ ಪೋನ್ಗಳು, ನಗದು ರೂ.2500, ಕಿವಿ ಓಲೆ, ಉಂಗುರ ಸಹಿತ ಒಟ್ಟು ರೂ. 87,890 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ತ್ವ ಸಿದ್ಧಾಂತಗಳ ಮಹತ್ವದ ಬಗ್ಗೆ, ವಿಶ್ಲೇಷಿಸಿ ಪಬಂಧವನ್ನು ಬರೆಯಲು ಅನುವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅಕ್ಟೋಬರ್ 31 ರ ಒಳಗಾಗಿ ಇ-ಮೇಲ್ kstaessay.kannada@gmail.com & kstaessay.english@gmail.com ಗೆ ಸಲ್ಲಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನವೆಂಬರ್ 12 ರಂದು ಅಕಾಡೆಮಿಯಲ್ಲಿ ಆಯೋಜಿಸಲಾಗುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಪ್ರಬಂಧವನ್ನು ಬರೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ ಮೂರ್ತಿ ಎಸ್. ಮೊ: 9686449019, 9686919019 ಹಾಗೂ ದೂ.ಸಂಖ್ಯೆ: 080-29721550 ಅಥವಾ ಅಕಾಡೆಮಿಯ ವೆಬ್ಸೈಟ್ www.kstacademy.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
