ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಸವನ್ನು ಎಲ್ಲಿಂದರಲ್ಲಿ ಎಸೆಯುವ ಮನಸ್ಥಿತಿ ಬಿಟ್ಟು ಪರಿಸರವನ್ನು ಪ್ರೀತಿಸುವ ಕಾಯಕ ಮೈಗೂಡಿಸಿಕೊಳ್ಳಿ ಎಂದು ಸಾಮಾಜಿಕ ಚಿಂತಕ ಸಂತೋಷ್ ನಾಯಕ್ ತೆಕ್ಕಟ್ಟೆ ಹೇಳಿದರು.
ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ಸಹಯೋಗದೊಂದಿಗೆ ತೆಕ್ಕಟ್ಟೆ ಗ್ರಾಮಪಂಚಾಯತ್, ಎಸ್ ಎಲ್ ಆರ್ ಎಂ ಘಟಕದ ಸಂಯೋಜನೆಯೊಂದಿಗೆ 324ನೇ ಭಾನುವಾರದ ಅಂಗವಾಗಿ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸತತ 324 ಭಾನುವಾರ ಕ್ರಮಿಸಿಕೊಂಡ ಕೋಟದ ಪಂಚವರ್ಣ ಸಂಘಟನೆ ಕಾರ್ಯ ನಿಜಕ್ಕೂ ಶ್ಲಾಘನೀಯ ಸಮಾಜಮುಖಿ ಕಾರ್ಯದ ನಡುವೆ ನಿರಂತರ ಸ್ವಚ್ಛತಾ ಅಭಿಯಾನ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಸುಮಾರು 200ಕ್ಕೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆದ್ದಾರಿಯಿಂದ ಮುಕ್ತಿಗೊಳಿಸಲಾಯಿತು. ಸುಮಾರು 20ಕ್ಕೂ ಅಧಿಕ ಸ್ವಚ್ಛತಾ ಸೇನಾನಿಗಳ ತಂಡವನ್ನು ತೆಕ್ಕಟ್ಟೆ ಗ್ರಾಮಪಂಚಾಯತ್ ಅಭಿನಂದಿಸಿ ಕೃತಜ್ಞತೆಗಳನ್ನು ಸಲ್ಲಿಸಿತು.
ರೋಟರಿ ಕ್ಲಬ್ ನ ವಿಶ್ವನಾಥ ಆಚಾರ್ಯ, ತೆಕ್ಕಟ್ಟೆ ಗ್ರಾಮಪಂಚಾಯತ್ ಪಿಡಿಒ ಸಂತೋಷ್ ಕುಮಾರ್,ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ಯ, ಮಹಿಳಾಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಕಾರ್ಯದರ್ಶಿ ವಸಂತಿ ಹಂದಟ್ಟು ಹಾಗೂ ಇತರ ಸ್ವಚ್ಛತಾ ಸೇನಾನಿಗಳು ಉಪಸ್ಥಿತರಿದ್ದರು. ಸದಸ್ಯರಾದ ಪ್ರಭಾಕರ್ ಪಡುಕರೆ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

















