Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಂಕರನಾರಾಯಣದ ಅಂಪಾರು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಗೆ ನುಗ್ಗಿ ಸೊತ್ತು ಕಳ್ಳತನ ಮಾಡಿದ್ದ ಬಾಲಕನನ್ನು ಬಾಲ ನ್ಯಾಯ ಮಂಡಳಿಯ ವಶಕ್ಕೆ ಒಪ್ಪಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಠಾಣೆ ಪಿ.ಎಸ್.ಐ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಈ ಕಳ್ಳತನ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆತನಿಂದ ಮೊಬೈಲ್ ಪೋನ್‌ಗಳು, ನಗದು ರೂ.2500, ಕಿವಿ ಓಲೆ, ಉಂಗುರ ಸಹಿತ ಒಟ್ಟು ರೂ. 87,890 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ತ್ವ ಸಿದ್ಧಾಂತಗಳ ಮಹತ್ವದ ಬಗ್ಗೆ, ವಿಶ್ಲೇಷಿಸಿ ಪಬಂಧವನ್ನು ಬರೆಯಲು ಅನುವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅಕ್ಟೋಬರ್ 31 ರ ಒಳಗಾಗಿ ಇ-ಮೇಲ್ kstaessay.kannada@gmail.com & kstaessay.english@gmail.com ಗೆ ಸಲ್ಲಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನವೆಂಬರ್ 12 ರಂದು ಅಕಾಡೆಮಿಯಲ್ಲಿ ಆಯೋಜಿಸಲಾಗುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಪ್ರಬಂಧವನ್ನು ಬರೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ ಮೂರ್ತಿ ಎಸ್. ಮೊ: 9686449019, 9686919019 ಹಾಗೂ ದೂ.ಸಂಖ್ಯೆ: 080-29721550 ಅಥವಾ ಅಕಾಡೆಮಿಯ ವೆಬ್‌ಸೈಟ್ www.kstacademy.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಸರಕಾರ, ಜಿಲ್ಲಾ ಆಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ 200ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಜನತಾ ಇಂಡಿಪೆಂಡೆಂಟ್ ಕಾಲೇಜ್ ಹೆಮ್ಮಾಡಿಯ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಧನ್ವಿ ಪೂಜಾರಿ ಮರವಂತೆ ಅವರ ಯೋಗ ಕಾರ್ಯಕ್ರಮ ನಡೆಯಿತು. ಧನ್ವಿ ಪೂಜಾರಿ ಮರವಂತೆ ಬಾಲ್ಯದಿಂದಲೇ ರಾಜ್ಯ ಮತ್ತು ರಾಷ್ಟ್ರಮಟ್ಟ ಅಂತರಾಷ್ಟ್ರ ಮಟ್ಟದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಸ್ನೇಹಿತರು ಮನೆಯ ಸಮೀಪದಲ್ಲಿ ಮಾತನಾಡುತ್ತಿದ್ದ ವೇಳೆ ಮಾರಕಾಯುಧಗಳಿಂದ ಬಂದ ದುಷ್ಕರ್ಮಿಗಳ ತಂಡವೊಂದು ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯ ಸಂಬಂಧ 20 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಲೂರು ಹೊಯ್ಯಾಣ ನಿವಾಸಿ ಸಚಿನ್ (24), ಆಲೂರು ರಾಮೇಶ್ವರ ನಗರ ನಿವಾಸಿ ಶರತ್ ದೇವಾಡಿಗ (24), ಕೆಂಬೈಲು ನಿವಾಸಿಗಳಾದ ಕಾರ್ತಿಕ್ (22) ಕೀರ್ತಿಕ್ (20), ಪಡುಕೋಣೆ ನಿವಾಸಿ ಪ್ರಕಾಶ್ (20), ಪಡುಕೋಣೆಯ ಹನುಮಂತ ನಗರ ನಿವಾಸಿ ಜಗದೀಶ್ (31), ಪಡುಕೋಣೆ ರಾಮಮಂದಿರ ನಿವಾಸಿ ಗೌತಮ್ (23), ಪಡುಕೋಣೆ ನಿವಾಸಿ ಮಹೇಂದ್ರ ಪೂಜಾರಿ, ಹಡವು ನಿವಾಸಿ ಸಂತೋಷ್ ಮೊಗವೀರ, ರೋಶನ್ ಫರ್ನಾಂಡಿಸ್, ಆಲೂರು ನಿವಾಸಿ ಪ್ರಸಾದ್ ಆಚಾರ್ (30) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಇಬ್ಬರು ಕಾನೂನಿನ ಜತೆ ಸಂಘರ್ಷಕ್ಕೊಳಗಾದ ಬಾಲಕರು ಸೇರಿದ್ದಾರೆ. ಬಂಧಿತ ಆರೋಪಿಗಳಿಂದ 1 ಏರ್ ಪಿಸ್ತೂಲ್, 4…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬ್ರಹ್ಮಾವರ, ತೀರ್ಥಹಳ್ಳಿ, ಕೊಪ್ಪ ಮತ್ತು ಕೊಕ್ಕರ್ಣೆಯಲ್ಲಿ ವಸ್ತ್ರ ವೈವಿಧ್ಯಗಳ ಮಾರಾಟ ಮತ್ತು ಸೇವೆಗೆ ಹೆಸರುವಾಸಿಯಾದ 75 ವರ್ಷಗಳಿಂದ ಗ್ರಾಹಕರ ಮನೆಮಾತಾಗಿರುವ  ಸತ್ಯನಾಥ ಸ್ಟೋರ್ಸ್​ನಲ್ಲಿ ದೀಪಾವಳಿ ಹಾಗೂ ಕ್ರಿಸ್ಮಸ್​ ಹಬ್ಬದ ಪ್ರಯುಕ್ತ ಡಿಸೆಂಬರ್ 31ರ ವರೆಗೆ  ಅದೃಷ್ಟಶಾಲಿ ಗ್ರಾಹಕರಿಗೆ ವಿಶೇಷ ಬಹುಮಾನ ಗೆಲ್ಲುವ ಅವಕಾಶವಿದೆ. ಪ್ರತಿ 500 ರೂ. ಖರೀದಿಗೆ ಕೂಪನ್​. ಅದೃಷ್ಟಶಾಲಿ ವಿಜೇತರಿಗೆ ಪ್ರಥಮ ದ್ವಿಚಕ್ರವಾಹನ, ದ್ವೀತಿಯ ಐಫೋನ್, ತೃತೀಯ ಲ್ಯಾಪ್​ ಟಾಪ್​ ಹಾಗೂ 75 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತಿದೆ. ವೈವಿಧ್ಯಮಯ ವಸ್ತ್ರಗಳ ಅಪಾರ ಸಂಗ್ರಹ:ವೈವಿಧ್ಯಮಯ ವಸ್ತ್ರಗಳ ಅಪಾರ ಸಂಗ್ರಹದ ಪರಿಪೂರ್ಣ ಮದುವೆ ಜವಳಿ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಕಾಂಚೀವರಂ, ಆರಣಿ, ಧರ್ಮಾವರಂ, ಸತ್ಯಮಂಗಳ, ಹಿಂದೂಪುರ, ಸೇಲಂ, ಬನಾರಸ್​, ಕೋಲ್ಕತಾ, ಸೂರತ್​, ಮಧುಬನಿ, ಚಾಪಾ, ಮೀನಾ, ಖಾತಾ, ಕೋಟಾ, ಪೋಚಂಪಲ್ಲಿ, ಇಕ್ಕತ್​, ಪೈತನಿ, ನಾರಾಯಣಪೇಟ್​ ಮುಂತಾದ ರೇಷ್ಮೆ ಸೀರೆಗಳ ಬೃಹತ್​ ಸಂಗ್ರಹವಿದೆ. ಮಹಿಳೆಯರ ಕುರ್ತಿಸ್​, ಬ್ರೈಡಲ್ ಲೆಹೆಂಗಾ, ಚೂಡಿದಾರ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಹಂಗಳೂರು ಬ್ರಹ್ಮ ದೇವಸ್ಥಾನ ರಸ್ತೆಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಸಹಿತ ಪರಾರಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ನಿವಾಸಿ ಜಗದೀಶ್ ಚಂದ್ರ ನಾಯರ್ ಎಂಬುವವರ ಮನೆಯಲ್ಲಿ‌ ಕಳವು ನಡೆದಿದೆ. ಜಗದೀಶ್ ರಾವ್ ಅವರು ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟ ಮಾಡಿ ತಮ್ಮ ಕೆಲಸಕ್ಕೆ ತೆರಳಿದ್ದರು. ಸುಮಾರು 4 ಗಂಟೆಗೆ ಜಗದೀಶ್ ಪತ್ನಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಗಲಲ್ಲಿಯೇ ಕಳ್ಳತನ ನಡೆದ ಬಗ್ಗೆ ಸುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಕೆ ಕೈಗೆತ್ತಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮಂಗಳೂರು,ಅ.24: ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರಕ್ಕೆ ನಡೆದ ವಿಧಾನ ಪರಿಷತ್‌ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು 1600 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಮಂಗಳೂರಿನ ಸಂತ ಅಲೋಷಿಯಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಆರಂಭಗೊಂಡಿತ್ತು. ಬಿಜೆಪಿ- 3654, ಕಾಂಗ್ರೆಸ್- 1957 ಮತ್ತು ಎಸ್‌ಡಿಪಿಐ-195 ಮತಗಳನ್ನು ಪಡೆಯುವುದರೊಂದಿಗೆ ಮತ ಎಣಿಕೆ ಮುಕ್ತಾಯಗೊಂಡಿದೆ. ಈ ವೇಳೆ ಕೇಂದ್ರ ಚುನಾವಣಾ ವೀಕ್ಷಕ ಪಂಕಜ್‌ ಕುಮಾರ್‌ ಪಾಂಡೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಅಂಪಾರು ಗ್ರಾಮದ ಅಕ್ಕಯ್ಯ ಅವರ ಮನೆಯಲ್ಲಿ ಕಳ್ಳರು ಅ. 10ರಿಂದ 21ರ ಮಧ್ಯೆ ಕಳ್ಳತನವಾದ ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕಯ್ಯ ಅವರು ತಮ್ಮ ಮಗಳೊಂದಿಗೆ ಅ. 10ರಂದು ಮನೆಯಿಂದ ಹೋರ ಹೋದವರು, ಅ. 21ರಂದು ಮನೆಗೆ ವಾಪಸು ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಳ್ಳರು ಮನೆಯ ಎದುರಿನ ಬೀಗ ಒಡೆದು ಒಳ ನುಗ್ಗಿದ್ದಾರೆ. ಮನೆಯ ಎದುರು ಕೋಣೆಯಲ್ಲಿದ್ದ 5 ದೇವರ ಕಾಣಿಕೆ ಡಬ್ಬಿಯಲ್ಲಿನ ಕಾಣಿಕೆ, 2 ಮೊಬೈಲು ಮತ್ತು ಚಾರ್ಜರನ್ನು ಕಳ್ಳತನ ಮಾಡಿದ್ದಾರೆ. ಮತ್ತೊಂದು ಕೋಣೆಯ ಕಬ್ಬಿಣದ ಕಪಾಟಿನ ಲಾಕ್ ಅನ್ನು ಮುರಿದು ಹಾನಿಕೊಳ್ಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಪ್ತಿ ಗ್ರಾಮದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ. ಜಾರ್ಖಂಡ್ ಲೋಹ ದರ್ಗಾನಾ ಜಿಲ್ಲೆಯ ಜೋಗಿಂದರ್ ಬರೋನ್ (29) ಮೃತಪಟ್ಟ ವ್ಯಕ್ತಿ. ಅವರು ಕೆಲಸಕ್ಕೆ ರಜೆ ಮಾಡಿ ಸರೋಜಾ ಬರೋನ್, ಶಬ್ಬೀರ್ ಹಾಗೂ ಮುನ್ನ ಬರೊನ್ ಜೊತೆ ಫ್ಯಾಕ್ಟರಿ ಕಟ್ಟಡದ ಸ್ಲಾಬ್ ನ ಮೇಲೆ ಮೊಬೈಲ್‌ನಲ್ಲಿ ಮಾತಾಡುತ್ತಿದ್ದಾಗ ಸುಮಾರು 15 ಅಡಿ ಎತ್ತರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಕ್ಟೋಬರ್ 20 ರಂದು ಭಟ್ಕಳ ದ  AKFA STRIKE ಅವರ  ನೇತೃತ್ವದಲ್ಲಿ ನಡೆದ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಕ್ಷಯ ಆರ್.  ಕುಮಟೆ  ವಿಭಾಗದಲ್ಲಿ ಚಿನ್ನ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದು ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Read More