ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೆದೂರು ಗ್ರಾಮ ಪಂಚಾಯತ್, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಭಿನಂದನಾ ಸಮಾರಂಭವು ಕೆದೂರು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೆದೂರು ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ಬಿಜೆಪಿ. ಮಂಡಲ ಅಧ್ಯಕ್ಷರಾದ ಶಂಕರ್ ಅಂಕದ ಕಟ್ಟೆ, ಗೋಪಾಡಿ ಪಂಚಾಯತ್ ಅಧ್ಯಕ್ಷರಾದ ಸುರೇಶ ಶೆಟ್ಟಿ ಗೋಪಾಡಿ. ಬಿಜೆಪಿ. ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ ಪೂಜಾರಿ ವಕ್ವಾಡಿ, ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶರತ ಕುಮಾರ್ ಹೆಗ್ಡೆ ಶಾನಾಡಿ,ಕೋಟೇಶ್ವರ ವ್ಯ.ಸೇ.ಸ ಸಂಘದ ನಿರ್ದೇಶಕರಾದ ನವೀನ ಹೆಗ್ಡೆ ಶಾನಾಡಿ, ಕೆದೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಕೆ. ಭುಜಂಗ ಶೆಟ್ಟಿ ಹಾಗೂ ವಸಂತ ಶೆಟ್ಟಿ ಕೆದೂರು, ಮಾಜಿ ಎಪಿಎಂಸಿ ನಿರ್ದೇಶಕರು, ನೂತನ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಉಳ್ತೂರು, ಉಪಾಧ್ಯಕ್ಷೆ ಜ್ಯೋತಿ ದೇವಾಡಿಗ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಉಳ್ತೂರು ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ, ಅಭಿವೃದ್ಧಿ ಕಾರ್ಯಗಳನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಹಿರ್ಗಾನ ಗ್ರಾಮದಲ್ಲಿರುವ ʼಬೆಂಗಾಲ್ʼ ಕೃಷಿ ಭೂಮಿಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನದೊಂದಿಗೆ ಕೆಸರಿನಲ್ಲಿ ಜೀವನದ ಕಲಿಕೆ ಮತ್ತು ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು. ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ನೇಜಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಿರ್ಗಾನ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಇಂದು ನಮಗೆ ಧನ ಸಂಪಾದನೆಗೆ ಅನೇಕ ಮಾರ್ಗಗಳಿವೆ. ಆದರೆ ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ಭಾರತವು ಎಲ್ಲಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತಾಗಲಿ, ಹಾಳು ಬಿದ್ದಿರುವ ಕೃಷಿ ಜಮೀನು ಬೆಳೆ ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿ ʼಕೈಕೆಸರಾದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತದ ಚಂದ್ರಯಾನ – 3ರ ಮೈಲಿಗಲ್ಲು, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದ ಸಂಭ್ರಮ ದೇಶದೆಲ್ಲೆಡೆಯೂ ಮನೆಮಾಡಿದೆ. ಈ ವೈಜ್ಞಾನಿಕ ಪರಾಕ್ರಮದ ಹಿಂದೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳ ಪೈಕಿ, ಕುಂದಾಪುರ ಮೂಲದ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ತೊಡಗಿಸಿಕೊಂಡಿರುವುದು ಕರಾವಳಿಗರ ಸಂಭ್ರಮ ಹೆಚ್ಚಿಸಿದೆ. ತಾಲೂಕಿನ ಗುಜ್ಜಾಡಿ ಮಂಕಿ ಕೇಳಾಮನೆಯವರಾದ ಆಕಾಶ್ ಶೆಟ್ಟಿ ಅವರು ಇಸ್ರೋದಲ್ಲಿ ಯುವ ವಿಜ್ಞಾನಿಯಾಗಿದ್ದು, ಚಂದ್ರಯಾನ – 3ರ ಸ್ಪೇಸ್ ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪಿನ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಆಕಾಶ್ ಶೆಟ್ಟಿ ಅವರು ಕೋಟ ವಿವೇಕ ಹೈಸ್ಕೂಲ್ನಲ್ಲಿ ಪಿಯುಸಿ, ಬಳಿಕ ಇಂಜಿನಿಯರಿಂಗ್ ಹಾಗೂ ಎಂಟೆಕ್ ಪದವಿ ಪೂರ್ಣಗೊಳಿಸಿ 2015ರಲ್ಲಿ ಇಸ್ರೋಗೆ ಸೇರ್ಪಡೆಗೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಪ್ರಸ್ತುತ ಮುರುಡೇಶ್ವರದ ನಿವಾಸಿಯಾಗಿರುವ ಆಕಾಶ್ ಶೆಟ್ಟಿ ಅವರು, ಮಂಕಿ ಕೇಳಾಮನೆ ಪಾರ್ವತಿ ಶೆಟ್ಟಿ ಹಾಗೂ ಕೆರಾಡಿ ಚಪ್ಪರಮಕ್ಕಿ ದಿ. ಅಶೋಕ್ ಶೆಟ್ಟಿ ಅವರ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ 12 ವರ್ಷದಿಂದ ಸತತವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಿರುವ ಉದ್ಯಮಿ ಹಾಗೂ ಶ್ರೀ ವೆಂಕಟೇಶ್ವರ ಸ್ವೀಟ್ ನ ಮಾಲೀಕ ಪಿ ಲಕ್ಷ್ಮೀ ನಾರಾಯಣ ರಾವ್ ಅವರ ನೇತೃತ್ವದಲ್ಲಿ ಹಾಗೂ ಶ್ರೀಧರ ಪಿ. ಎಸ್. ಅವರ ಮುಂದಾಳತ್ವದಲ್ಲಿ 13ನೇ ವರ್ಷದ ತಿರುಪತಿ ಯಾತ್ರೆ ಆ.22ರಂದು ಸಾಸ್ತಾನದಿಂದ ಹೊರಟಿದೆ. ಸತತ 18 ದಿನಗಳ ಕಾಲ ಕ್ರಮಿಸಲಿರುವ ತಿರುಪತಿ ಯಾತ್ರೆಯಲ್ಲಿ ಮೊದಲ ದಿನ ಹಿರಿಯಡಕ ನಾರಾಯಣಗುರು ಸಭಾಭವನದಲ್ಲಿ ಉಳಿದು, ಮುಂದೆ ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ ಹೀಗೆ ಒಂದು ಊರಿನಲ್ಲಿ ತಂಗಿ ಕೊನೆಗೆ ತಿರುಪತಿ ತಲುಪುತ್ತಾರೆ. ಅಲ್ಲಿ ತಿರುಪತಿ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಲಾಗುತ್ತದೆ. ಈ ಪಾದಯಾತ್ರೆಯಲ್ಲಿ 200 ಮಂದಿ ಒಟ್ಟಿಗೆ ತೆರಳುತ್ತಿದ್ದಾರೆ. ಪ್ರತಿವರ್ಷ ಸಾಸ್ತಾನ ಮಾತ್ರವಲ್ಲದೇ ಉಡುಪಿ ಉತ್ತರ ಕನ್ನಡ ಜಿಲ್ಲೆಯ ಹಲವು ಭಕ್ತಾದಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತದ ಚಂದ್ರಯಾನ – 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಅದಕ್ಕೆ ಕಾರಣೀಕರ್ತರಾದ ಹೆಮ್ಮೆಯ ಇಸ್ರೋ ಸಂಸ್ಥೆಗೆ ಗೌರವ ಸೂಚಕವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ISRO ಎಂಬ ವಿನ್ಯಾಸವನ್ನು ರಚಿಸಿ ಅಭಿನಂದನೆ ಸಲ್ಲಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆಯು ಉಡುಪಿಯ ತ್ರಿಷಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಚದುರಂಗ (ಚೆಸ್) ಸ್ಪರ್ಧೆಯಲ್ಲಿ ವಿಜೇತಳಾದ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಛಾಯಾ ಸಿ. ಪೂಜಾರಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರು ಒದಗಿಸಲು ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನಿರ್ದೇಶನ ನೀಡಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಾರಾಹಿ ಕುಡಿಯುವ ನೀರು ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಅವರು ಈ ಸೂಚನೆ ನೀಡಿದರು. ವಾರಾಹಿ ಯೋಜನೆಯ ಶಿಂಬ್ರಾ, ಆರೂರು, ಕೊಕ್ಕರ್ಣೆ, ಆವರ್ಸೆ ಹಾಗೂ ಹಾಲಾಡಿ ಗಳಿಗೆ ಭೇಟಿ ನೀಡಿದ ಅವರು ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಕಾಮಗಾರಿಯ ಮಾಹಿತಿ ನೀಡಿ, ಪೂರ್ವನಿಗದಿಯಂತೆ 2023ರ ಡಿಸೆಂಬರ್ ತಿಂಗಳೊಳಗೆ ವಾರಾಹಿ ಕುಡಿಯುವ ನೀರು ಯೋಜನಾ ಕಾಮಗಾರಿ ಮುಗಿದು ನೀರು ಜನರಿಗೆ ಸಿಗಬೇಕಾಗಿತ್ತು. ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ತೀರಾ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕೇವಲ ಪೈಪ್ಲೈನ್ ಅಳವಡಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರಿನಲ್ಲಿ ಮೈಲಾರ (ಖಂಡೋಬ) ದೇವರ ಎರಡು ವಿಗ್ರಹ ಪತ್ತೆಯಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಆದರೆ ಬಸ್ರೂರಿನಲ್ಲಿ ಮೈಲಾರ ದೇವರ ಆರಾಧನೆ ಹಿಂದೆ ನಡೆಯುತ್ತಿದ್ದ ಬಗ್ಗೆ ಈ ವಿಗ್ರಹದ ಮೂಲಕ ದಾಖಲೆ ದೊರೆತಂತಾಗಿದೆ. 1.ಮೈಲಾರ ದೇವರ ವಿಗ್ರಹಕುದುರೆ ಏರಿದಂತ ವೀರ ಯೋಧನಂತೆ ಕಂಡು ಬಂದಿದ್ದು, ಕೈಯಲ್ಲಿ ಕಡ್ಗದಂತೆ ಕಂಡು ಬಂದಿದೆ. ಎದೆಗೆ ವೀರ ಯೋಧ ತೊಡುವಂತೆ ರಕ್ಷಾ ಕವಚ ಕೂಡಾ ಕಾಣಲ್ಪಟ್ಟಿದೆ. ಅಲಂಕಾರಗೊಂಡ ಕುದುರೆ ಕಾಲು ಸ್ವಲ್ಪ ಮಡಿಚಿದ ರೀತಿಯಲ್ಲಿದೆ .ಕ್ರಿ.ಶ 15 ರಿಂದ 16ನೇ ಶತಮಾನಕ್ಕೆ ಹೋಲುವಂತಿದೆ. 2.ಮೈಲಾರ ದೇವರ ಶಿಲಾ ಫಲಕಶ್ರೀ ದೇವಾನಂದ ಶೆಟ್ಟಿ ಹಳ್ನಾಡು ಇವರ ಕೆರೆಯ ಹೂಳು ಎತ್ತುವಾಗ ವಿಗ್ರಹ ಸಿಕ್ಕಿರುವ ವಿಚಾರ ತಿಳಿಸಿರುತ್ತಾರೆ. ಇದು ಮೈಲಾರ ದೇವರ ಶಿಲಾ ಫಲಕವಾಗಿದೆ.ಇಲ್ಲಿ ಸ್ತ್ರೀ ಪುರಷ ಕುದುರೆ ಏರಿ ಖಡ್ಗ ಹಿಡಿದ ಶಿಲ್ಪವಿದೆ. ಈ ಶಿಲ್ಪ ಕ್ರಿ.ಶ 16ನೇ ಶತಮಾನಕ್ಕೆ ಹೋಲುವಂತಿದೆ. ಬಸ್ರೂರಿನಲ್ಲಿ ಸಿಕ್ಕಿರುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯತ್ನ 2ನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಚ್. ಕೆ. ಸವಿತಾ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ ಆಯ್ಕೆಯಾಗಿದ್ದಾರೆ. ಆನಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 8 ಸ್ಥಾನಗಳ ಪೈಕಿ 3 ಕಾಂಗ್ರೆಸ್ ಬೆಂಬಲಿತ, 3 ಬಿಜೆಪಿ ಬೆಂಬಲಿತ, 2 ಪಕ್ಷೇತರ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಹಿಂ.ವ.ಅ(ಮ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಆಭ್ಯರ್ಥಿಗೆ 4 ಮತ ಮತ್ತು ಬಿಜೆಪಿ ಬೆಂಬಲಿತ ಆಭ್ಯರ್ಥಿ 4 ಮತಗಳನ್ನು ಸಮಬಲವಾಗಿ ಪಡೆದುಕೊಂಡಿದ್ದರು. ಇಬ್ಬರು ಆಭ್ಯರ್ಥಿಗಳಿಗೂ ಸಮಬಲವಾಗಿ ಮತ ಚಲಾವಣೆಯಾದ್ದರಿಂದ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಪ್ರಕ್ರಿಯೆ ಕೈಗೊಂಡಾಗ ಅಧ್ಯಕ್ಷ ಸ್ಥಾನ ಎನ್ನುವುದು ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿ ಎಚ್ ಕೆ ಸವಿತಾ ಇವರ ಪಾಲಾಯಿತು. ಉಪಾಧ್ಯಕ್ಷರಾಗಿ ಉದಯ ಪೂಜಾರಿ ಇವರು ಅವಿರೋಧವಾಗಿ ಆಯ್ಕೆಯಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನೊಂದಿಗೆ ಸಂಗ್ರಹಿಸಲಾದ ಒಟ್ಟು ರೂ.71,110 ಮೊತ್ತದ ಸಹಾಯಧನವನ್ನು ಇಬ್ಬರು ಮಕ್ಕಳ ಚಿಕಿತ್ಸೆಗಾಗಿ ನೀಡಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಾಪುರ ಖಾರ್ವಿಕೇರಿಯ ಪುಟಾಣಿಯಾದ ಆರೂಷಿ ಹಾಗೂ ಕೋಟೇಶ್ವರದ ಆರ್ಯನ್ ಪಾಪು ಚಿಕಿತ್ಸೆಗಾಗಿ ತಲಾ 35,555 ರೂ ಗಳಂತೆ ರೂಪಾಯಿ ಸಹಾಯಧನ ವನ್ನು ಹೆಲ್ಪಿಂಗ್ ಹ್ಯಾಂಡ್ಸ್ ಟೃಸ್ಟ್ ನ ಪಧಾಧಿಕಾರಿಗಳು ಹಾಗೂ ಕೋಟಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಸದಸ್ಯರ ಸಮಕ್ಷಮದಲ್ಲಿ, ದೇವರಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಪೋಷಕರ ಚೆಕ್ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಶಾರದಾ ಹಳವಳ್ಳಿ, ಉಷಾ ಬಂಗೇರ ಮಾರ್ಕೊಡು ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ರವೀಂದ್ರ ರಟ್ಟಾಡಿ, ಜ್ಞಾನಾನಂದ ಐರೋಡಿ, ಅಧ್ಯಕ್ಷರಾದ ಪ್ರದೀಪ್ ಕೋಟೇಶ್ವರ, ಕೋಷಾಧಿಕಾರಿಗಳಾದ ಸುನೀಲ್ಖಾರ್ವಿ ತಲ್ಲೂರು, ಕಮಿಟಿಯ ಸದಸ್ಯರಾದ ಮಣೀಶ್ ಶ್ರೀಯಾನ್, ರಾಘವೇಂದ್ರ ಕೋಡಿ, ಅವಿನಾಶ್ ಹೇರಿಕುದ್ರು,ಶರತ್ ಹೊದ್ರಾಳಿ, ನಾಗರಾಜ್ ಹೊದ್ರಾಳಿ,ರತನ್ ಹೇರಿಕುದ್ರು, ಸಚಿನ್ ಕೋಡಿ, ಕಿಶೋರ್ ಕೋಡಿ ಉಪಸ್ಥಿತರಿದ್ದರು.
