ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೀವನದಲ್ಲಿ ಪಡೆದ ಅನುಭವವನ್ನೇ ಸ್ವಾರಸ್ಯಕರ ಶೈಲಿಯಲ್ಲಿ ಬರೆಯುವುದರಿಂದ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ ಬರವಣಿಗೆ ಇಷ್ಟವಾಗುತ್ತದೆ . ಹಾಗಾಗಿ ಅವರ ನೆನಪಿನಾಳದಲ್ಲಿ, 20 ಕಥೆಗಳು, ಜಯಂತಣ್ಣನಿಗಾಗಿ ಕಾದಂಬರಿ ಓದುಗರನ್ನು ತಲುಪಿತು. ಹೊಸತನದ ಕಥೆಯೊಂದಿಗೆ ಹೀಗೂ ಕಾದಂಬರಿ ಬರೆಯಬಹುದು ಎಂದು ಜಾಲಿ ಮತ್ತು ಅಪ್ಪು ಕೃತಿಯಿಂದ ತೋರಿಸಿ ಕೊಟ್ಟಿದ್ದಾರೆ ಎಂದು ಖ್ಯಾತ ಪ್ರಸೂತಿ ತಜ್ಞ ಮಣಿಪಾಲದ ಸೋನಿಯಾ ಆಸ್ಪತ್ರೆಯ ಡಾ. ಗಿರಿಜಾ ರಾವ್ ಹೇಳಿದರು. ಅವರು ಭಂಡಾರ್‌ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂವಹನದ ಕೊರತೆ ಮತ್ತು ಪರಸ್ಪರ ಅಪನಂಬಿಕೆ ಡಾಕ್ಟರು ಮತ್ತು ರೋಗಿಗಳ ಸಂಬಂಧ ಕೆಡಲು ಕಾರಣ. ಜನರು ವೈದ್ಯರ ಮೇಲೆ ವಿಶ್ವಾಸವಿಡಬೇಕು. ಗೌರವದ ನಡವಳಿಕೆ ಇರಬೇಕು. ವೈದ್ಯರ ಸೇವೆಯ ವಿಷಯದಲ್ಲಿ ಎಂದೂ ಅಪ್ರಾಮಾಣಿಕರಾಗಿರಬಾರದು. ವೈದ್ಯಕೀಯ ಸೇವೆಯ ಒತ್ತಡದಲ್ಲಿ ರೋಗಿಗಳ ಪೋಷಕರಿಂದ ಬೆಂಬಲವನ್ನು ಪ್ರಾಮಾಣಿಕ ವೈದ್ಯರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಪ್ರತಿಷ್ಠಿತ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ನಾಗರಾಜ್ ಕಾಮಧೇನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸೊಸೈಟಿಯ ಉಪಾಧ್ಯಕ್ಷರಾಗಿ ಸತೀಶ್ ನರಸಿಂಹ ಶೇರಿಗಾರ್ ಆಯ್ಕೆಯಾದರು. ಈ ವೇಳೆ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಅಜೇಯ ಹವಾಲ್ದಾರ್, ಕೆ.ಅಶೋಕ್ ಬೆಟ್ಟಿನ್, ಕೃಷ್ಣಯ್ಯ ಪಿ. ಮದ್ದೋಡಿ, ಎಂ.ಜಿ. ರಾಜೇಶ್, ಬಿ. ಶ್ರೀಧರ್ ಬೇಲಿಮನೆ, ಶ್ರೀಧರ್ ಪಿ.ಎಸ್. ಕೆ. ಸೂರ್ಯಕಾಂತ್, ರಾಧಾಕೃಷ್ಣ ನಾಯಕ್ ರಶ್ಮಿರಾಜ್ ಮತ್ತು ಶಾರದಾ ವಿಜಯ ಕುಮಾರ್ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ್ ಕಾಮಧೇನು ಮಾತನಾಡಿ, ನಮ್ಮ ಸೊಸೈಟಿಯು ಒಂದು ಸಾವಿರ ಕೋಟಿ ರೂ. ವ್ಯವಹಾರ ಹೊಂದುವ ಗುರಿ ಇದ್ದು ಈ ನಿಟ್ಟಿನಲ್ಲಿ ಎಲ್ಲಾ ನಿರ್ದೆಶಕರ ಸಹಕಾರ ಕೋರಿದರು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಯನ್ನು ಸಹಕಾರ ಇಲಾಖೆಯ ಉಪ ನಿಬಂಧಕಿ ಸುಕನ್ಯಾ ಅವರು ನಿರ್ವಹಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ರಾಘವೇಂದ್ರ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪದಗ್ರಹಣ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಮುಖ್ಯ ಅತಿಥಿಯಾದ ವಂದನಾ ರೈ ಅವರು ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ಹಸ್ತಾಂತರಿಸಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಕರಾತ್ಮಕ ಚಿಂತನೆ ಹಾಗೂ ಹಣದ ಮೌಲ್ಯದ ಬಗ್ಗೆ ಅರಿವನ್ನು ಮೂಡಿಸಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಪೋಷಕರ ಸಹಕಾರವಿದ್ದಾಗ ಶಾಲೆಯು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಾಗ ಅವರ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ,ಆ ಮೂಲಕ ವಿದ್ಯಾರ್ಥಿಗಳು ಶಾಲೆ ಮತ್ತು ಪೋಷಕರಿಗೆ ಹೆಮ್ಮೆ ತರುವ ಕೆಲಸವನ್ನು ಮಾಡುತ್ತಾರೆ ಎಂದರು. ಜನತಾ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಉದಯ ನಾಯ್ಕ ಅವರು ಶಿಕ್ಷಣದ ಜೊತೆಗೆ ಭಾರತೀಯತೆ, ಶಿಸ್ತು, ಸಂಸ್ಕೃತಿ , ಸಂಪ್ರದಾಯವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉತ್ತಮ ಆಡಳಿತಗಾರನಾದ ಶಿವಾಜಿ ಶಿಸ್ತಿನೊಂದಿಗೆ ಮಹಿಳೆಯರನ್ನು ಗೌರವಿಸುವ ವ್ಯಕ್ತಿತ್ವ ಹೀಗಾಗಿ ಶಿವಾಜಿಯ ಬಗೆಗಿನ ಇತಿಹಾಸದ ಅಧ್ಯಯನ ಕೇವಲ ವ್ಯಕ್ತಿಯ ಅಧ್ಯಯನವಾಗದೇ ಆ ಕಾಲಘಟ್ಟದ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಜೀವನಕ್ರಮದ ಅಧ್ಯಯನ ಹೀಗಾಗಿ ಇತಿಹಾಸದ ಓದು ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಎಂದು ಇತಿಹಾಸ ತಜ್ಞ, ವಾಗ್ಮಿ, ಪ್ರಾಧ್ಯಾಪಕ ರವಿರಾಜ್ ಪರಾಡ್ಕರ್ ಹೇಳಿದರು. ಇಲ್ಲಿನ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಧ್ಯಯನ ಕೇಂದ್ರ, ಬಸ್ರೂರು ಇವರ ಸಯೋಗದೊಂದಿಗೆ ಕಾಲೇಜಿನ ಇಂಗ್ಲೀಷ್ ಮತ್ತು ಹಿಂದಿ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ‘ಶಿವಾಜಿ ಮಹಾರಾಜನ ಕರ್ನಾಟಕದೊಂದಿಗಿನ ಬಾಂಧವ್ಯದ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಾಮಾಜಿಕ ಚಿಂತಕ ದೇವು ಹನೆಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಇತಿಹಾಸ ಸಂಕಲನದ ಸಮಿತಿ ಕಿತ್ತೂರಿನ ಮುಖ್ಯಸ್ಥ ಡಾ. ಬಸವರಾಜ ಎನ್. ಮುಖ್ಯ ಅತಿಥಿ ನೆಲೆಯ ಮಾತುಗಳನ್ನಾಡಿದರು. …
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ. (258), ಬಿ. ಸುಹಾಸ್ ರಾವ್ (230), ವಂದನಾ ಎಸ್.ಸಿ. (213), ನಿತ್ಯಾ ಸಂಜೀವ ಕುಲಕರ್ಣಿ (204), ನಿಶಿತಾ ಸಿ. ಶೆಟ್ಟಿ (203) ಮತ್ತು ತಸ್ಮಯ್ ಎಮ್. (201) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ 1 ರಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಜೊತೆಯಲ್ಲಿ ಧನ್ವಿ ಹೆಚ್. ಪೈ (150) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ 2 ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಸಿ.ಎಸ್. ಸಂಯೋಜಕರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 3 ರಿಂದ 7ನೇ ತರಗತಿ ವಿದ್ಯಾರ್ಥಿಗಳು ಫೆ.28 ರಂದು ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆರಂಭ ಸಭಾಂಗಣದಲ್ಲಿ ಐಕೀ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಆಸೋಸಿಯೇಷನ್ ಚೀಫ್ ಇನ್ಸ್ಪೆಕ್ಟರ್, ಕೊಶಿ ಸಿ ಎ ವಿಜಯನ್ 8ನೇ ಡಾನ್ ಬ್ಲಾಕ್ ಬೆಲ್ಟ್ ಇವರ ಅಡಿಯಲ್ಲಿ ನಡೆದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿವಿಧ ಕರಾಟೆ ಬೆಲ್ಟ್ ಮತ್ತು ಸರ್ಟಿಫಿಕೇಟ್‌ಗಳನ್ನು ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಡಾI ರವಿದಾಸ್ ಶೆಟ್ಟಿ, ಕರಾಟೆ ಶಿಕ್ಷಕಿ ಮೇಘನಾ, ವಿದ್ಯಾರ್ಥಿಗಳು ಹಾಜರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮನುಷ್ಯನ ಜೀವದಲ್ಲಿರುವ ರಕ್ತ ಜಾತಿ ಧರ್ಮಾದಾರಿತವಲ್ಲ. ರಕ್ತದಾನದ ಮೂಲಕ ಅಪಾಯದಲ್ಲಿರುವ ರೋಗಿಯ ಜೀವರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಆದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ ಹೇಳಿದರು. ಬೈಂದೂರು ರೋಟರಿ ಭವನದಲ್ಲಿ ಭಾನುವಾರ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ, ಡಾ. ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ವಿಶ್ವಕರ್ಮ ಯುವಕ ಸಂಘ ಬಂದೂರು, ಜೆಸಿಐ ಬಂದೂರು ಸಿಟಿ, ರೋಟರಿ ಕ್ಲಬ್ ಬಂದೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ, ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡುವುದರಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ಓರ್ವ ವ್ಯಕ್ತಿ ರಕ್ತದಾನ ಮಾಡಿದ್ದಲ್ಲಿ ಮೂರು ಜನರ ಪ್ರಾಣವನ್ನು ಉಳಿಸಬಹುವುದಾಗಿದೆ ಹೀಗಾಗಿ ರಕ್ತದಾನ ಅತ್ಯಂತ ಶ್ರೇಷ್ಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಮಾಜದಲ್ಲಿ ದುರ್ಬಲರಾದ ಹೆಣ್ಣು ಮಕ್ಕಳು ಹಾಗೂ ಮಕ್ಕಳ ಮೇಲೆ ದೌರ್ಜನ್ಯವಾದಾಗ ನೋಂದ ಸಂತ್ರಸ್ತರಿಗೆ ಸಾಂತ್ವನ ಹೇಳುವುದರ ಜೊತೆಗೆ ಅಗತ್ಯವಿರುವ ಕಾನೂನಿನ ನೆರವು, ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಕೌಟುಂಬಿಕ ದೌರ್ಜನ್ಯ ಸಂತ್ರಸ್ತರಿಗೆ, ವಿಚ್ಚೇಧನ, ಬಹು ಪತ್ನಿತ್ವ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಿ, ಕಾನೂನು ನೆರವುಗಳನ್ನು ಒದಗಿಸಬೇಕು.ಇದರ ಜೊತೆಯಲ್ಲಿಯೇ ಸ್ವ ಉದ್ಯೋಗ ಮಾಡಲು ಉತ್ತೇಜನ ನೀಡಿ, ಆರ್ಥಿಕವಾಗಿ ಸ್ವಾವಲಂಭಿಗಳಾಗಿಸಲು ಮುಂದಾಗಬೇಕು ಎಂದರು. ಜಿಲ್ಲೆಯಲ್ಲಿ ತಾಯಿ ಕಾರ್ಡ್ ಪಡೆದು ಹೆರಿಗೆಯಾದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಹಾಯಧನವನ್ನು ನೇರವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 9&10 ನೇ ತರಗತಿ ವಿದ್ಯಾರ್ಥಿಗಳಿಗೆ ಫ್ಯೂಷನ್ -2025 ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೋಭಾ ಎಸ್. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅತ್ತ್ಯುತ್ತಮವಾದ ಅವಕಾಶ ಅದೂ ಸಹ ತಮ್ಮ ಪಾಲಕರ ಉಪಸ್ಥಿತಿಯಲ್ಲಿ ಎಲ್ಲರಿಗೂ ಮನೋರಂಜನೆ ನೀಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ. ಹತ್ತನೇ ತರಗತಿ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ಸಾಕಷ್ಟು ಪೂರ್ವತಯಾರಿಯೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು. ತರಗತಿಯಲ್ಲಿ ಶಿಕ್ಷಕರಿಂದ ಕೇಳಿ ಕಲಿತ ಪಾಠ-ಪ್ರವಚನಗಳನ್ನು ಹಲವು ಸಲ ಓದಿ ಮತ್ತು ಬರೆದು ಪರೀಕ್ಷೆಗೆ ಸಿದ್ದರಾಗಬೇಕು. ನಿಯಮಿತವಾದ ಆಹಾರವನ್ನು ಸೇವಿಸಬೇಕು ಮತ್ತು ನಿದ್ರೆಬಿಟ್ಟು ಓದಬಾರದು. ಟಿವಿ ಮತ್ತು ಮೊಬೈಲ್ಗಳಿಂದ ದೂರವಿರಬೇಕು ಈ ಮೂಲಕ ಉತ್ತಮ ಗುಣಾತ್ಮಕ ಅಂಕಗಳೊಂದಿಗೆ ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಹಿಂದುತ್ವದ ಭದ್ರ ಕೋಟೆ ಉಡುಪಿ ಜಿಲ್ಲೆಗೆ ಸ್ವಾಗತ ಎನ್ನುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರಿಗೆ ಅನುಭವದ ಹಾಗೂ ಮಾಹಿತಿಯ ಕೊರತೆಯಿದೆ. ಅವರು ಅಭಿವೃದ್ಧಿಯ, ಜನಪರ ಕಾಳಜಿಯ ಮೂಲಕ ಶಾಸಕರಾದವರಲ್ಲಾ ಬದಲಾಗಿ ಧರ್ಮ ಧರ್ಮದ ನಡುವೆ, ಜಾತಿ ಜಾತಿಯ ನಡುವೆ ವಿಷ ಬೀಜ ಬಿತ್ತಿ ಶಾಸಕರಾದವರು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಅವರು ಹೇಳಿದರು. ಇವತ್ತು ಜಿಲ್ಲೆಯ ಐದು ಶಾಸಕರು, ಸಂಸದರು ಬಿಜೆಪಿಯವರು ಇರಬಹುದು ಆದರೆ ಕರಾವಳಿಯ ಜನತೆ ಬಿಜೆಪಿಗಿಂತ ಹೆಚ್ಚು ಅಧಿಕಾರ ಕೊಟ್ಟದ್ದು ಕಾಂಗ್ರೆಸ್ ನವರಿಗೆ ಎನ್ನುವ ಮಾಹಿತಿ ದೂರದ ಚಿಕ್ಕಮಗಳೂರು ಜಿಲ್ಲೆಯಿಂದ ಬಂದ ಸುನೀಲ್ ಕುಮಾರ್ ಅವರಿಗೆ ತಿಳಿದಿಲ್ಲಾ. ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಮನೋರಮಾ ಮದ್ವರಾಜ್, ಕೆ ಪ್ರತಾಪ್ ಚಂದ್ರ ಶೆಟ್ಟಿ, ವಸಂತ ಸಾಲ್ಯಾನ್, ಕೆ ಜಯಪ್ರಕಾಶ್ ಹೆಗ್ಡೆ, ಕೆ ಗೋಪಾಲ ಪೂಜಾರಿ, ಇವರೆಲ್ಲಾ ನಾಲ್ಕು, ಐದು ಅದಕ್ಕಿಂತ ಹೆಚ್ಚು…
