ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೊ. ಆಪರೇಟಿವ್ ಕಲ್ಯಾಣಪುರ ಶಾಖೆ ವತಿಯಿಂದ ಸೋಲಾಪುರ ಚಾದರ ಹಾಗೂ ಸಿಹಿ ತಿಂಡಿ ವಿತರಣೆ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಉದ್ಘಾಟಿಸಿ, ಮಾತನಾಡಿ, ಸಹಕಾರಿ ಸಂಘವೊಂದು ಸಾಮಾಜಿಕವಾಗಿ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಾಜದಲ್ಲಿ ಸರಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪಬೇಕೆಂಬ ಮಹದಾಸೆ ನಾವೆಲ್ಲರೂ ಕಾಣುತ್ತದೆ ಆದರೆ ಪ್ರಸ್ತುತ ದಿನಗಳಲ್ಲಿ ಅದು ಶ್ರೀಮಂತರ ಪಾಲಾಗುತ್ತಿದೆ. ಈ ನಿಟ್ಟಿನಲ್ಲಿ ಬಡ ಹಾಗೂ ಮಧ್ಯಮವರ್ಗ ಜನಸಾಮಾನ್ಯರು ಸಮಾಜದಲ್ಲಿ ಸೇವಾಮನೋಭಾವನೆಯಲ್ಲಿ ಕಾರ್ಯನಿರ್ವಹಿಸುವುದನ್ನು ಕಾಣುತ್ತಿದ್ದೇವೆ,ತುಳಿತ್ತಕ್ಕೊಳಗಾದವರಿಗೆ ನೆರವು ಹಾಗೂ ಆಶ್ರಮಗಳಿಗೆ ಧ್ಯೆರ್ಯ ತುಂಬಿ ಸಮಾಜದ ಉನ್ನತಿಯಲ್ಲಿ ತೊಡಗಿಕೊಳ್ಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಳಿಬೈಲುನ ಆಡಳಿತ ಮೊಕ್ತೇಸರರಾದ ಎಂ. ಸಿ. ಚಂದ್ರಶೇಖರ ವಹಿಸಿದ್ದರು.
ಈ ಸಂದರ್ಭದಲ್ಲಿ ಮಿಲಾಗ್ರಿಸ್ ಕ್ರೆಡಿಟ್ ಕೊ. ಸೊಸೈಟಿ ಕಲ್ಯಾಣಪುರ ಶಾಖೆ ವತಿಯಿಂದ ಪರಿಕರಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ನಡೂರು ವಿಖ್ಯಾತ್ ಶೆಟ್ಟಿ, ಪ್ರಜ್ಚಲ್ ಪೂಜಾರಿ, ಸಾಂಸ್ಕೃತಿಕ ಚಿಂತಕ ಅಲ್ವಿನ್ ಅಂದ್ರಾದೆ, ವಿಲಾಗ್ರಿಸ್ ಸಂಸ್ಥೆಯ ಸಾಲವಸೂಲಾತಿ ಅಧಿಕಾರಿ ಮಂಜುನಾಥ್ ಪೂಜಾರಿ, ಶಾಖಾ ವ್ಯವಸ್ಥಾಪಕ ಅಭಿಜಿತ್ ಪಾಂಡೇಶ್ವರ, ಹೊಸಬದುಕು ಆಶ್ರಮದ ಮುಖ್ಯಸ್ಥ ವಿಜಯಚಂದ್ರ ಸಾಸ್ತಾನ, ಪತ್ರಕರ್ತ ರವೀಂದ್ರ ಕೋಟ, ಸೊಸೈಟಿಯ ಅಭಿವೃದ್ಧಿ ಅಧಿಕಾರಿ ರೋಹಿತ್ ಮೊಗೇರ ಹಾಗೂ ಮಿಲಾಗ್ರಿಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಖಾ ಸಿಬ್ಬಂದಿ ನಾಗರಾಜ್ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ಮನಿಷಾ ಡಿಸೋಜ ವಂದಿಸಿದರು.















