Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.  ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ.ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಎಂಟರ್‌ಪ್ರಿನೋರ್‌ಶಿಪ್ ವಿಷಯದ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವುದು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಗರಿಷ್ಟ 5 ಲಕ್ಷ ರೂ. ಗಳ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಸದರಿ ತರಬೇತಿ ಹಾಗೂ ಸಹಾಯಧನಕ್ಕಾಗಿ ಜಿಲ್ಲೆಯ ಪ.ಜಾತಿಗೆ ಸೇರಿದ 04 ಅಭ್ಯರ್ಥಿಗಳಿಗೆ ಹಾಗೂ ಪ.ಪಂಗಡಕ್ಕೆ ಸೇರಿದ 03 ಅಭ್ಯರ್ಥಿಗಳ ಗುರಿಯನ್ನು ನಿಗಧಿಪಡಿಸಲಾಗಿರುತ್ತದೆ. ಸದರಿ ತರಬೇತಿಯನ್ನು ವಸತಿ ಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳ ಮೂಲಕ ಜಾರಿಗೊಳಿಸಲು ಉದ್ದೇಶಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಸದರಿ ತರಬೇತಿ ಪಡೆಯಲು 10 ನೇ ತರಗತಿ ಉತ್ತೀರ್ಣರಾಗಿರುವ 20 ರಿಂದ 45 ವರ್ಷದ ವಯೋಮಿತಿಯೊಳಗಿನ ಆಸಕ್ತಿ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಫೆಬ್ರವರಿ 3 ರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಕುಂದಾಪುರ ವತಿಯಿಂದ ನಡೆಸಲ್ಪಡುವ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ 2024-2025ರ ರಕ್ಷಕ – ಶಿಕ್ಷಕ ಸಭೆಯು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೈಣೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಡಾ. ಎ.ವಿ.ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸೌಜನ್ಯ ಶೆಟ್ಟಿ ಅವರು” ಪ್ರಭಾವಿ ಪೋಷಕತ್ವ” ದ ಕುರಿತು ತಿಳಿಸಿದರು. ಸಭೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿಯಾದ ಪ್ರಮೀಳಾ ಡಿಸೋಜ ಅವರು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೇಷ್ಮಾ ಡಿಸೋಜ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೈಲಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕಿಯರಾದ ಪುಷ್ಪಾ ಸರ್ವರನ್ನು ಸ್ವಾಗತಿಸಿ, ವಂದನಾ ಅವರು ವಂದನಾರ್ಪಣೆ ಗೈದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಅಂಚೆ ಇಲಾಖೆಯ ವತಿಯಿಂದ ಯು.ಪಿ.ಯು ಇಂಟರ್‌ನ್ಯಾಷನಲ್ ಲೆಟರ್ ರೈಟಿಂಗ್ ಕಾಂಫಿಟೇಶನ್ ಪ್ರಯುಕ್ತ 9 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇಮ್ಯಾಜಿನ್ ಯು ಆರ್ ದ ಓಷನ್. ರೈಟ್ ಎ ಲೆಟರ್ ಟು ಸಮ್‌ಒನ್ ಎಕ್ಸ್ಪ್ಲೇನಿಂಗ್ ವೈ ಅಂಡ್ ಹೌ ದೇ ಶುಡ್ ಟೇಕ್ ಗುಡ್ ಕೇರ್ ಆಫ್ ಯು ವಿಷಯದ ಕುರಿತು ಪತ್ರಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಪತ್ರಲೇಖನವನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ 800 ಶಬ್ದಗಳು ಮೀರದಂತೆ ಕೈಬರಹದಲ್ಲಿ ನಿಗಧಿಪಡಿಸಿದ ಕೇಂದ್ರದಲ್ಲಿ ಬರೆಯಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ತಮ್ಮ ಶಾಲೆಯ ಮುಖಾಂತರ ಫೆಬ್ರವರಿ 20 ರ ಒಳಗಾಗಿ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ-576101 ಇಲ್ಲಿಗೆ ಸಲ್ಲಿಸಬಹುದಾಗಿದೆ. ಅತ್ಯುತ್ತಮ ಮೂರು ಪತ್ರ ಲೇಖನಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 50,000 ರೂ., 25,000 ರೂ., 10,000 ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ 25,000, 10,000 ಮತ್ತು 5,000 ರೂ.ಗಳನ್ನು ನೀಡಲಾಗುವುದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ  ಕಾರ್ಯ ನಿರ್ವಹಿಸುತ್ತಿರುವ ಫೈನಾಸ್‌ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗಳು ನೀಡುವ ಮಾರ್ಗದರ್ಶನಗಳು ಹಾಗೂ ನಿಯಮಗಳನ್ನು ಚಾಚೂ ತಪ್ಪದೆ  ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದ ಗ್ರಾಹಕರಿಗೆ ಕಿರುಕುಳದಂತಹ ಪ್ರಕರಣಗಳು ಪತ್ರಿಕೆಗಳಲ್ಲಿ ಕೇಳಿ ಬರುತ್ತಿವೆ. ಇದಕ್ಕೆಲ್ಲಾ ಕಾರಣ ಮಾರ್ಗಸೂಚಿಗಳು ಹಾಗೂ ನಿಯಮಗಳ ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದರು. ಮೈಕ್ರೋ ಫೈನಾಸ್‌ಗಳು ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಸೇರಿದಂತೆ ಮತ್ತಿತರ ಪೂರ್ವಾಪರಗಳನ್ನು ಪರಿಶೀಲನೆಯನ್ನು ಮಾಡಿ, ಅವರ ಆದಾಯದ ಶೇ. 50 ರಷ್ಟು ಮಾತ್ರ ಸಾಲ ನೀಡಬೇಕು. ಆದರೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಹಳಗೇರಿ ಗ್ರಾಮದ ಶ್ರೀ ಗೆಂಡದ ಹೈಗುಳಿ ಶ್ರೀ ಗಣಪನಾಯಕ ಸಪರಿವಾರ ದೇವಸ್ಥಾನದ ಪುನರ್‌ ಪ್ರತಿಷ್ಠಾ ದ್ವಿತೀಯ ವರ್ಧತ್ಯೋತ್ಸವ, ವಾರ್ಷಿಕ ಗೆಂಡ ಹಾಗೂ ಮಂಡಲೋತ್ಸವ ಜ.31 ರಿಂದ ಫೆ.2ರ ತನಕ ನಡೆಯಲಿದೆ. ಜ.31ರ ಬೆಳಿಗ್ಗೆ 9.00 ರಿಂದ ಶ್ರೀ ಭೂನಾಗ ದೇವರಿಗೆ ನವಕ ಪ್ರಧಾನ ಕಲಾಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.00ರಿಂದ ಪುನರ್‌ ಪ್ರತಿಷ್ಠಾ ವರ್ಧತ್ಯೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಫೆ.1ರ ರಾತ್ರಿ 9.00ರಿಂದ ಗೆಂಡಸೇವೆ, 9.30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಫೆ.2ರ ಬೆಳಿಗ್ಗೆ 5.30ರಿಂದ ಮಂಡಲೋತ್ಸವ, 7.00ರಿಂದ ತುಲಭಾರ ಸೇವೆ ಹಾಗೂ ಅದೇ ದಿನ ರಾತ್ರಿ 7.00ರಿಂದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಕಲಾಮಂಡಳಿ ಇವರಿಂದ ಪೌರಣಿಕ ಕಥಾಪ್ರದರ್ಶನಗೊಳ್ಳಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲೆಯ ವಿವಿಧ ಪ್ರಾಕಾರಗಳನ್ನು ಕಲಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಸುರಭಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಪುಣ್ಯದ ಕಾರ್ಯದಲ್ಲಿ ತೊಡಗಿದೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಸಂಸ್ಥೆಯ ಸುರಭಿ ಜೈಸಿರಿ ಹಾಗೂ ಬೆಳಿಹಬ್ಬದ ಸಂಭ್ರಮಾಚರಣೆಯ 5 ದಿನಗಳ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕಲಾಸಂಸ್ಥೆಗಳನ್ನು ಮುನ್ನಡೆಸುವುದೇ ಸವಾಲಿನ ಕೆಲಸ. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಗಮನಿಸಿದರೆ ಇಲ್ಲಿನ ಪದಾಧಿಕಾರಿಗಳ ಶ್ರಮ, ತಾಳ್ಮೆ ಹಾಗೂ ಸಮರ್ಪಣಾ ಭಾವ ಕಾಣುತ್ತದೆ ಎಂದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅವರು ಡೋಲು ಭಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟೀನ ಮ್ಯಾನೇಜಿಂಗ್ ಟ್ರಸ್ಟೀ ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಎಲ್.ಐ.ಸಿ ಬೈಂದೂರು ಶಾಖೆಯ ಅಭಿವೃದ್ಧಿ ಅಧಿಕಾರಿ ಸೋಮನಾಥನ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಂಜು ದೇವಾಡಿಗ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಗುರುರಾಜ ಹೆಬ್ಬಾರ್, ಪ್ರಕಾಶ್ ಎಸ್. ಪೂಜಾರಿ, ರಾಜೇಶ ದೇವಾಡಿಗ, ದಿನೀತಾ ಶೆಟ್ಟಿ, ಕೆ.ಲಲಿತಾ ಪೂಜಾರಿ, ಉದಯಕುಮಾರ ಶೆಟ್ಟಿ, ಈಶ್ವರ ಹಕ್ಲತೋಡು, ಹೂವ ನಾಯ್ಕ, ಭರತ್‌ ದೇವಾಡಿಗ ಉಪಸ್ಥಿತರಿದ್ದರು. ಜ.30 ಗುರುವಾರ ನೂತನ ಅಧ್ಯಕ್ಷರು, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ರೋಹಿತ್ ಕುಮಾರ್‌ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್ ಪೈ. ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೆಂಗಳೂರಿನ ಟೌನ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವ‌ರ್ ಚಂದ್ ಗೆಹೋಟ್ ಅವರು ಬೈಂದೂರು ವಲಯದ ಆಲೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಉದಯ ಕುಮಾರ್ ಶೆಟ್ಟಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಮತದಾರ ಸಾಕ್ಷರತಾ ಕ್ಲಬ್ ಸಂಚಾಲಕ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಈ ವೇಳೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ ಮೀನಾ, ಬಿ.ಬಿ.ಎಂ.ಪಿ ಆಯುಕ್ತ ತುಷಾರ ಗಿರಿನಾಥ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ  ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‌ವತಿಯಿಂದ ಕುವೆಂಪು ಸಭಾಂಗಣದಲ್ಲಿ ಅಘನಾಶಿನಿ ಸ್ಪೀಕ್ಸ್ – ರಿವರ್ ರಿದಮ್ಸ್ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಘನಾಶಿನಿ ಸಾಕ್ಷ್ಯಚಿತ್ರ ನಿರ್ದೇಶಕ ಅಶ್ವಿನಿ ಕುಮಾರ್ ಭಟ್ ಮಾತನಾಡಿ, ಸಾಕ್ಷ್ಯಚಿತ್ರ ರಚನೆಯ ಸೂಕ್ಷ್ಮಗಳನ್ನು ವಿವರಿಸಿದರು. ಕಥೆ ಹೇಳುವ ಮಹತ್ವವನ್ನು ತಿಳಿಸಿದರು. “ಸಾಕ್ಷ್ಯಚಿತ್ರ ನಿರ್ಮಾಣ ಕೇವಲ ಕ್ಷಣಗಳನ್ನು ಸೆರೆಹಿಡಿಯುವುದೇ ಮುಖ್ಯ ಅಲ್ಲ, ಚಿತ್ರಕಥೆ, ಸಂಕಲನ ಮತ್ತು ಛಾಯಾಗ್ರಹಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ಸಮ್ಮಿಳಿತಗೊಂಡು ನೈಜ್ಯತೆಯ ಸಾಕ್ಷೀಕರಣವಾದಾಗ ಮನಸೆಳೆಯುವ ಸಾಕ್ಷ್ಯಚಿತ್ರ ಹೊರಹೊಮ್ಮಲು ಸಾಧ್ಯ ಎಂದರು. ಅಘನಾಶಿನಿ ಸಾಕ್ಷ್ಯಚಿತ್ರ ನಿರ್ಮಾಣ ನಂತರದ ಪ್ರಭಾವದ ಕುರಿತು ಮಾತನಾಡಿದ ಅವರು ಈ ಸಾಕ್ಷ್ಯಚಿತ್ರವು ನದಿಗಳನ್ನ ಅವುಗಳ ನೈಸರ್ಗಿಕ ಸ್ಥಿತಿಯಲ್ಲಿ ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿತು. ಅಘನಾಶಿನಿ ಅಳಿವೆ ಪ್ರದೇಶವನ್ನು ರಾಮ್ಸಾರ್ ಸೈಟ್ ಎಂದು ಪ್ರಸ್ತಾಪಿಸುವಲ್ಲಿ ಈ ಸಾಕ್ಷ್ಯಚಿತ್ರವು ಪ್ರಮುಖ ಪಾತ್ರ ವಹಿಸಿತು ಎಂದರು. ಸ್ಥಳೀಯ ನೇತ್ರಾವತಿ ನದಿಯನ್ನು ಸಂರಕ್ಷಿಸಲು ಹೇಗೆ ಕೊಡುಗೆ ನೀಡಬಹುದು ಎಂದು ವಿದ್ಯಾರ್ಥಿ ಕೇಳಿದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೂಟ ಮಹಾಜಗತ್ತು ಸಾಲಿಗ್ರಾಮ ರಿ. ಅಂಗಸಂಸ್ಥೆ ಕಿರಿಮಂಜೇಶ್ವರ ಇದರ ವತಿಯಿಂದ ಬೈಂದೂರು ತಾಲೂಕಿನ ಕಿರಿಮಂಜೇಶ್ವರದಲ್ಲಿ ನೂತನವಾಗಿ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಗುರುನರಸಿಂಹ ಸಭಾಭವನದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು. ಸಾಲಿಗ್ರಾಮದ ತಂತ್ರಿ ವೇದಮೂರ್ತಿ ಕೃಷ್ಣ ಸೋಮಯಾಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಭಗವಂತ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಆಶೀರ್ವದಿಸಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಎಸ್. ಕಾರಂತರು ಮಾತನಾಡಿ, ಈ ಭಾಗದ ವಿಪ್ರರು ವಿಶೇಷವಾಗಿ ಕೃಷಿ, ವೈದಿಕ ಕ್ಷೇತ್ರ, ಬಾಣಸಿಗರು ಹಲವು ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು ಇದ್ದು ಇದು ನಮಗೆ ಹೆಮ್ಮೆಯ ವಿಚಾರವಾಗಿದ್ದು ಕಿರಿಮಂಜೇಶ್ವರದಲ್ಲಿ ನಿರ್ಮಾಣವಾಗಿರುವ ಸಭಾಭವನದ ನಿರ್ಮಾಣದಲ್ಲಿ ಅಂಗಸಂಸ್ಥೆಯ ಪದಾಧಿಕಾರಿಗಳ ಐದು – ಆರು ವರ್ಷಗಳ ಸತತ ಪರಿಶ್ರಮದಿಂದ ಆಗಿರುತ್ತದೆ. ಸಭಾಭವನದ ಸದ್ಬಳಕೆ ಮುಂದಿನ ದಿನದಲ್ಲಿ ಆಗಲಿ ಎಂದು ಶುಭಹಾರೈಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಮಾತನಾಡಿ, ವಿಪ್ರ ಸಮೂದಾಯಕ್ಕೆ ಎಲ್ಲಾ…

Read More