Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಯುವ ಬಂಟರ ಸಂಘ ಕುಂದಾಪುರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ವಿತರಣೆ ಕಾರ್ಯಕ್ರಮ, ಬಂಟ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವು ಜ.11ರ ಶನಿವಾರ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಸೌತ್ ಫೀಲ್ಡ್ ಪೇಂಟ್ಸ್ ಆಡಳಿತ ನಿರ್ದೇಶಕರಾದ ಎಸ್. ಎಸ್. ಹೆಗ್ಡೆ ಉದ್ಘಾಟಿಸಲಿದ್ದಾರೆ. ಕುಂದಾಪುರದ ಹಿರಿಯ ಲೆಕ್ಕಪರಿಶೋಧಕರಾದ ಕೆ. ಸುಧಾಕರ ಹೆಗ್ಡೆ ಬಂಟ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿತೀಶ್ ಶೆಟ್ಟಿ ಬಸ್ರೂರು ವಹಿಸಿಕೊಳ್ಳಲಿದ್ದಾರೆ. ಕೆ.ಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸಾಧನಗಳ ವಿತರಣೆ ಕಾರ್ಯಕ್ರಮ, ಬಂಟ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಎ.ಜೆ. ಹಾಸ್ಪಿಟಲ್ ಆಡಳಿತ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರದ ಆಡಳಿತ ನಿರ್ದೆಶಕ ಡಾ. ರಂಜನ್ ಶೆಟ್ಟಿ, ಭದ್ರಾವತಿ ಬಂಟರ ಸಂಘದ ಅಧ್ಯಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ನಡೆಯಲಿರುವ ಜೀರ್ಣಾಷ್ಟಬಂಧ ಪುರಸ್ಸರ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಮುಹೂರ್ತ ದರ್ಶನ ಸೇವೆ ದೇವಸ್ಥಾನದಲ್ಲಿ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಫಲನ್ಯಾಸ ಪೂರ್ವಕ ಗುರುಗಣಪತಿ ಪೂಜೆ, ಸಂಕಲ್ಪ, ಪುಣ್ಯಾಹವಾಚನ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಮೊದಲಾದವುಗಳು ಪುರೋಹಿತರಾದ ರಾಘವೇಂದ್ರ ಅಡಿಗ ನೇತೃತ್ವದಲ್ಲಿ ನಡೆಯಿತು. ನಾಗದೇವರ ಪಾತ್ರಿ ರವಿರಾಜ್ ಭಟ್ ಅಂಪಾರು ಅವರಿಂದ ದರ್ಶನ ಸೇವೆ ನಡೆಯಿತು. ನಾಗಮಂಡಲೋತ್ಸವದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿರುವ ಪ್ರಮುಖರಿಗೆ ಪ್ರಸಾದ ನೀಡಲಾಯಿತು. ಶ್ರೀ ನಾಗ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಮೇಸ್ತ, ಗೌರವಾಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ಶ್ರೀಧರ ಮೇಸ್ತ, ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಅಧ್ಯಕ್ಷ ರಾಮಚಂದ್ರ ಶಿರೂರ್‌ಕರ್, ಬೆಣ್ಗೆರೆ ಶ್ರೀ ಸುಬ್ರಹ್ಮಣ್ಯೇಶ್ವರ ಯುತ್ ಕ್ಲಬ್ ಅಧ್ಯಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಬಿ.ಎಡ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನ ಸೌಲಭ್ಯ ಪಡೆಯಲು ಸೇವಾ-ಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 8277799990 ಗೆ ಅಥವಾ ಉಡುಪಿ ದೂ.ಸಂಖ್ಯೆ: 0820-2574596, ಕುಂದಾಪುರ ದೂ.ಸಂಖ್ಯೆ: 08254-23070 ಹಾಗೂ ಕಾರ್ಕಳ ದೂ.ಸಂಖ್ಯೆ: 08258-231101 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಕುಂಭಾಶಿಯ ಶ್ರೀಧರ್ ಆಚಾರ್ ಮತ್ತು ಹೇಮಲತಾ ಅವರ ಪುತ್ರನಾದ ಸಚಿನ್ ಆಚಾರ್, ದ್ವಿತೀಯ ಬಿ.ಸಿ.ಎ. (ಬಿ) ಅವರು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ಅವರಿಗೆಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ದೀಪಾ ಪೂಜಾರಿ ಅವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ವಿದ್ಯಾರ್ಥಿಗಳು ಪಠ್ಯದಷ್ಟೇ ಆಸಕ್ತಿ ಪಠ್ಯೇತರ ಚಟುವಟಿಕೆಯಲ್ಲಿ ವಹಿಸಬೇಕು. ಅದರಲ್ಲೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮಾತ್ರವಲ್ಲದೆ ಅವರ ಮಾನಸಿಕ ವಿಕಸನಕ್ಕೂ ಪೂರಕವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ಕೌಟ್ಸ್ ಮತ್ತು ಗೈಡ್‌ನ ದ.ಕ.ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ. ಮೋಹನ್ ಆಳ್ವ ನುಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಗಾಗಿ ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡೋತ್ಸವ-2025ನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೌಹಾರ್ದ, ಸಾಮರಸ್ಯದ ಬದುಕನ್ನು ಕಲಿಸುವುದರ ಜೊತೆಗೆ ಹೋರಾಟ ಮನೋಭಾವವನ್ನು ಮೈಗೂಡಿಸಿಕೊಳ್ಳಲು ಸಹಕರಿಸುತ್ತದೆ.  ಇದೇ ಮೊದಲ ಬಾರಿಗೆ ಇಂತಹ ಕ್ರೀಡಾ ಕೂಟ ಆಯೋಜನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಏರ್ಪಡಿಸುವ ಉದ್ದೇಶವಿದೆ ಎಂದು ಆಶಯ ವ್ಯಕ್ತಪಡಿಸಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಬಿ ಮೊಹಮ್ಮದ್ ತುಂಬೆ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ನೋಂದಣಿ, ಉತ್ಪನ್ನದ ಗುಣಮಟ್ಟದ ಮಾರುಕಟ್ಟೆ ಕಲ್ಪಿಸುವ ಕಾರ್ಯಕ್ರಮಗಳಾದ ವೆಬ್‌ಸೈಟ್ ಜಾಹೀರಾತು, ಸಾಮಾಜಿಕ ಜಾಲತಾಣದ ಬಳಕೆ, ಕೃಷಿ ಆಪ್ಸ್ ಬಳಕೆ, ರಫ್ತಿಗೆ ಸಹಾಯಧನ, ವ್ಯಾಪಾರ ಮಳಿಗೆಗಳಲ್ಲಿ ಬಾಡಿಗೆ ಆಧಾರದಲ್ಲಿ ಶೆಲ್ಫ್ ಪಡೆಯುವುದು ಮತ್ತು ಪ್ಯಾಕೇಜಿಂಗ್ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಗರಿಷ್ಠ 5 ಲಕ್ಷ ರೂ. ವರೆಗೆ ಸಹಾಯಧನ ಪಡೆಯಲು ಅವಕಾಶವಿದೆ. ಈಗಾಗಲೇ ಸ್ಥಾಪಿಸಿ ಚಾಲನೆಯಲ್ಲಿರುವ ಮೌಲ್ಯವರ್ಧನೆ ಸರಪಳಿಯಲ್ಲಿನ ಚಟುವಟಿಕೆಗಳ ಉನ್ನತೀಕರಣ/ ಬಲವರ್ಧನೆ ಚಟುವಟಿಕೆಗಳಿಗೆ ಯೋಜನಾ ವರದಿಯ ಶೇ. 50 ರ ಸಹಾಯಧನದಲ್ಲಿ ಬ್ಯಾಂಕ್ ಸಾಲದ ಮುಖಾಂತರ ಗರಿಷ್ಠ 10 ಲಕ್ಷ ರೂ. ಮೀರದಂತೆ ಅನುಷ್ಠಾನಗೊಳಿಸಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ರೈತ ಗುಂಪುಗಳು ಮತ್ತು ರೈತ ಸಾವಯವ ಒಕ್ಕೂಟಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದಡಿ ರೈತ ಉತ್ಪಾದಕ ಸಂಸ್ಥೆಗಳ 2…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕ್ರಿಯೇಟಿವ್ ಪಪೂ ಕಾಲೇಜು, ಕಾರ್ಕಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ಸಿದ್ಧಾಪುರ, ಶೈಕ್ಷಣಿಕ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಶಿಬಿರ – 2025ರ ಉದ್ಘಾಟನೆಗೊಳಿಸಲಾಯಿತು. ಶಿರಸಿಯ ಸಿದ್ಧಾಪುರ ಕಾನಸೂರಿನಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶಿಬಿರಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಉದ್ಘಾಟಕರಾಗಿ ಆಗಮಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ಮಾತನಾಡಿ, ಹತ್ತನೆಯ ತರಗತಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏನಾಗಬೇಕೆಂದು ಕನಸು ಕಾಣುತ್ತಾರೋ ಅದನ್ನು ನನಸು ಮಾಡಲು ಮುಂದಿನ ಪಿ.ಯು.ಸಿ ಶಿಕ್ಷಣ ಅತ್ಯಂತ ಪ್ರಮುಖವಾದದ್ದು. ದೂರದರ್ಶಿತ್ವದೊಂದಿಗೆ ಮುಂದಿನ ಹೆಜ್ಜೆ ಇರಿಸಿ, ಉತ್ತಮ ಫಲಿತಾಂಶವೂ ಇಂತಹ ಶಿಬಿರಗಳಿಂದ ದೊರಕುತ್ತದೆ. ಶಿರಸಿ – ಸಿದ್ಧಾಪುರದ ಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್. ನಾಯ್ಕ ಅವರು ಮುಂದಿನ ಶೈಕ್ಷಣಿಕ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನಿಯಾಗಿ ಮೂಡಿಬರುವಂತೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕಾಪುವಿನಲ್ಲಿ ನಡೆದ ಶ್ರೀ ನಾರಾಯಣಗುರು ಟ್ರೋಫಿ, ಅಂತರ್‌ ಜಿಲ್ಲಾ ಮಟ್ಟದ 7ರ ವಯೋಮಿತಿ ವಿಭಾಗದ ಚೆಸ್ ಪಂದ್ಯಾಟದಲ್ಲಿ ಶುಭದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ (ಜನತಾ ನ್ಯೂ  ಇಂಗ್ಲೀಷ್ ಮೀಡಿಯಂ  ಸ್ಕೂಲ್) ಪ್ರಮುಖ್‌ ಬಿ. ಪೂಜಾರಿ (1ನೇ ತರಗತಿ) 5 ಪಂದ್ಯಗಳಲ್ಲಿ ಐದನ್ನು ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. ‎

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದರ ವತಿಯಿಂದ 2025ರ ಕ್ಯಾಲೆಂಡರ್ ಅನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯಕ್ ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷರು, ಬೈಂದೂರು ತಾಲೂಕು ನೌಕರ ಸಂಘದ ಅಧ್ಯಕ್ಷರಾದ ಶೇಕರ್ ಜಂಟಿಯಾಗಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ಆನಂದ ಗಾಣಿಗ, ಶಿಕ್ಷಣ ಸಂಯೋಜಕರಾದ ಚಂದ್ರ ದೇವಡಿಗ, ಸತ್ಯನ ಕೊಡೇರಿ, ಯೋಗೀಶ್, ಶಾಲಾ ಮುಖ್ಯೋಪಾಧ್ಯಾಯರಾದ ಜನಾರ್ಧನ್ ದೇವಾಡಿಗ, ಬಿ. ಆರ್. ಪಿ. ಮಂಜುನಾಥ ದೇವಾಡಿಗ, ಸಂಘದ ಖಜಾಂಚಿ ಅಚ್ಚುತ ಬಿಲ್ಲವ, ಗಣೇಶ್ ಪೂಜಾರಿ,  ಸಿಆರ್‌ಪಿ ಲಕ್ಷ್ಮಿ, ಬಿ. ರಾಮನಾಥ ಮೇಸ್ತ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಐಆರ್‌ಟಿ ನಾಗರತ್ನ ಸರ್ವರನ್ನು ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಗಣೇಶ್ ಪೂಜಾರಿ ಧನ್ಯವಾದ ಸಲ್ಲಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಬೈಂದೂರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರದ ಕಡೆಗೆ ಸಾಗುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇರ್ವರಿಗೆ ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಕಾರಿನಲ್ಲಿದ್ದ ಇರ್ವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕೇರಳ ಮೂಲದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿದರು. ಗಾಯಳುಗಳನ್ನು ಸ್ಥಳೀಯರ ಸಹಾಯದಿಂದ ತಕ್ಷಣ ಅಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್‌  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More