ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಲೇಕ್ 2024 – 14ನೇ ದ್ವೈವಾರ್ಷಿಕ ವಿಚಾರ ಸಂಕಿರಣ ಎರಡನೇ ದಿನ ಒಟ್ಟು ತಾಂತ್ರಿಕ ಅವಧಿಯಲ್ಲಿ ನಗರ ವಿಭಾಗದ ಆರರಿಂದ ಒಂಬತ್ತನೇ ತರಗತಿಯ 83 ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ವಿಭಾಗದಿಂದ 45 ವಿದ್ಯಾರ್ಥಿಗಳ ಪ್ರಸ್ತುತಿ, 21 ಸಂಶೋಧಕರು ಮತ್ತು ಅಧ್ಯಾಪಕರಿಂದ ಪ್ರಸ್ತುತಿ, ಹತ್ತರಿಂದ ಹನ್ನೆರಡನೇ ತರಗತಿಯ 32 ವಿದ್ಯಾರ್ಥಿಗಳ ಪ್ರಸ್ತುತಿ, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳಿಂದ ಒಟ್ಟು 38 ಜನರ ವಿಚಾರ ಮಂಡನೆ ಕಾಲೇಜಿನ ವಿವಿಧ ಸಭಾಂಗಣದಲ್ಲಿ ನಡೆಯಿತು. ಜೊತೆಯಲ್ಲಿ, ಎಲ್ಲಾ ವರ್ಗಗಳಲ್ಲಿ ಒಟ್ಟು 63 ಸಂಶೋಧನಾ ಆಸಕ್ತರು ಪೋಸ್ಟರ್ ಪ್ರಸ್ತುತಿಯಲ್ಲಿ ಭಾಗಿಯಾದರು. ಮೈಕ್ರೋ ಪ್ಲಾಸ್ಟಿಕ್ ಕಾರಣಅಂತರರಾಷ್ಟ್ರೀಯ ಸಂಶೋಧನಾ ಪ್ರಸ್ತುತಿಯಲ್ಲಿ ರಷ್ಯಾದ ನಿಕೋಲಾಯ್ ಫಿಲೆಟೊವ್- ಹವಾಮಾನ ತಾಪಮಾನ ಮತ್ತು ಮಾನವಜನ್ಯ ಪರಿಣಾಮಗಳು: ರಷ್ಯಾದ ಕೆರೆಗಳ ಆಧುನಿಕ ಸ್ಥಿತಿ ಮತ್ತು ಬದಲಾವಣೆಗಳಲ್ಲಿ ಪರಿಸರ ಮತ್ತು ಸಾಮಾಜಿಕ, ಆರ್ಥಿಕ ಅಂಶಗಳ ಕುರಿತು ಮಾತನಾಡಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಎಳವೆಯಲ್ಲಿಯೇ ಮಕ್ಕಳಿಗೆ ಸಮರ್ಪಕ ವೇದಿಕೆ ಕಲ್ಪಿಸಿಕೊಡಬೇಕು, ಮಕ್ಕಳ ಪ್ರಥಮ ಪ್ರತಿಭೆ ಅನಾವರಣಕ್ಕೆ ಕೃಷ್ಣ ವೇಷ ಸ್ಪರ್ಧೆಗಳೇ ಬುನಾದಿ. ಕಾರಂತರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು ಅವರ ನೆನಪಿನಲ್ಲಿ ನಿರ್ಮಾಣವಾದ ಈ ಸ್ಥಳದಲ್ಲಿ ಮಕ್ಕಳಿಗಾಗಿಯೇ ಹೆಚ್ಚೆಚ್ಚು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಸಾಂಸ್ಕೃತಿಕ ಚಿಂತಕಿ ಗೀತಾ ಆನಂದ್ ಸಿ. ಕುಂದರ್ ಅವರು ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟತಟ್ಟು ಮಹಿಳಾ ಮಂಡಲ ಕೋಟ, ರೋಟರಿ ಕ್ಲಬ್ ಹಂಗಾರಕಟ್ಟೆ – ಸಾಸ್ತಾನ ಸಹಯೋಗದಲ್ಲಿ ಕಾರಂತ ಹುಟ್ಟೂರ ಪುರಸ್ಕಾರದ ವಿಂಶತಿ ಅಂಗವಾಗಿ, ಕಾರಂತ ಜನುಮದಿನದಂದು ಮುದ್ದು ಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್, ರೋಟರಿ ಕ್ಲಬ್ ಹಂಗಾರಕಟ್ಟೆ – ಸಾಸ್ತಾನದ ಅಧ್ಯಕ್ಷೆಯಾದ ಲೀಲಾವತಿ ಗಂಗಾಧರ, ಸಾಂಸ್ಕೃತಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ ವಿಭಾಗ) ಬೆಳಗಾವಿ, ಶಾಂತಿನಿಕೇತನ ಪದವಿಪೂರ್ವ ಕಾಲೇಜು ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಬಾಲಕ/ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ, ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪಂದ್ಯಕ್ಕೆ ಆಯ್ಕೆಯಾದ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಒಟ್ಟು 7 ವಿದ್ಯಾರ್ಥಿಗಳು ಪದಕಗಳನ್ನು ಪಡೆದು ಅದ್ವಿತೀಯ ಸಾಧನೆ ಮಾಡಿರುತ್ತಾರೆ. ಬಾಲಕಿಯರ 70ಕೆ.ಜಿ. ವಿಭಾಗದಲ್ಲಿ ವಿದ್ಯಾರ್ಥಿನಿ ಗಾಯತ್ರಿ ಚಿನ್ನದ ಪದಕ ಹಾಗೂ ಬಾಲಕರ 97+ಕೆ.ಜಿ. ವಿಭಾಗದಲ್ಲಿ ವಿದ್ಯಾರ್ಥಿ ಋತ್ವಿಕ್ ಚಿನ್ನದ ಪದಕ.ಈ ಮೂಲಕ ಈರ್ವರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಕ್ರಮವಾಗಿ, 50 ಕೆ.ಜಿ. ವಿಭಾಗದಲ್ಲಿ ಅನನ್ಯ ಬೆಳ್ಳಿಯ ಪದಕ, 97ಕೆ.ಜಿ.ವಿಭಾಗದಲ್ಲಿ ಪನ್ನಗ ಬೆಳ್ಳಿಯ ಪದಕ 72ಕೆ.ಜಿ. ವಿಭಾಗದಲ್ಲಿ ಅನುಷಾ ಕಂಚಿನ ಪದಕ, 68 ಕೆ.ಜಿ. ವಿಭಾಗದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದಲ್ಲಿ ಕಳೆದ ತಿಂಗಳು ಗಂಗೊಳ್ಳಿಯಲ್ಲಿ 10 ದಿನಗಳ ಕಾಲ ನಡೆಸಲಾದ ಆರಿ ಎಂಬ್ರಾಯ್ಡರಿ ತರಬೇತಿಯ ಫಲಾನುಭವಿಗಳು ಗಂಗೊಳ್ಳಿಯಲ್ಲಿ ಆರಂಭಿಸಿದ ಆಶ್ರಯ ಆರಿ ಎಂಬ್ರಾಯ್ಡರಿ ತರಬೇತಿ ಕೇಂದ್ರ ಎಂಬ ಸ್ವ ಉದ್ಯಮವನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ನ ರಾಘವೇಂದ್ರ ಆಚಾರ್ಯ ಕೆದೂರು ಗುರುವಾರ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳು ರಚಿಸಿಕೊಂಡಿರುವ ನೂತನ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು. ತರಬೇತುದಾರೆ ಆರತಿ ರಾಜ್, ತರಬೇತಿ ಕೇಂದ್ರದ ಮುಖ್ಯಸ್ಥರಾದ ರೇಖಾ ಖಾರ್ವಿ ಮತ್ತು ಶಾಂತಿ ಖಾರ್ವಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಬೆಂಗಳೂರು, ದೇವರಾಜ್ ಅರಸ್ ಪದವಿಪೂರ್ವ ಕಾಲೇಜು ಆರ್.ಎಲ್. ಜಾಲಪ್ಪ ಕ್ಯಾಂಪಸ್ ಕೊಡಿಗೇಹಳ್ಳಿ ದೊಡ್ಡಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಯೋಗಾಸನ ತಂಡವನ್ನು ಪ್ರತಿನಿಧಿಸಿದ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ನಿರೀಕ್ಷಾ ಮತ್ತು ತನ್ವಿತಾ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಹಾಗೂ ಪ್ರಮೋದ ಮಧ್ವರಾಜ್ ಅಭಿಮಾನಿ ಬಳಗ ಕುಂದಾಪುರ ಇವರ ಸಹಕಾರದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಗುರುವಾರದಂದು ಗೋ ಡಾ. ನರಸಿಂಹ ಶೆಟ್ಟಿ ಯಡ್ತರೆ ಸಭಾ ಮಂಚ್ ರೋಟರಿ ಕ್ಲಬ್ ಸಭಾಭವನದಲ್ಲಿ ಜರಗಿತು. ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೋಟ ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಆನಂದ್ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಪುರಸಭಾ ಅಧ್ಯಕ್ಷರಾದ ಮೋಹನ್ ದಾಸ್ ಶೆಣೈ, ಸರಕಾರಿ ಆಸ್ಪತ್ರೆಯ ಡಾ. ನಾಗೇಶ್ ಫಿಶಿಯನ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಪತಿಗಳಾದ ಜಯಕರ ಶೆಟ್ಟಿ, ಆನಗಳ್ಳಿ ಚೆನ್ನಕೇಶವ ಭಟ್ ವೇದಮೂರ್ತಿ ಗಾಯತ್ರಿ , ಹಂಗಳೂರು ಲಯನ್ ಕ್ಲಬ್ ಅಧ್ಯಕ್ಷರಾದ ರೋವನ್ ಡಿಕೋಸ್ಟಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ನಾಯ್ಕನಕಟ್ಟೆ ನಿವಾಸಿ ಲಕ್ಷ್ಮೀ (28) ಕುಂದಾಪುರದಿಂದ ಬಸ್ಸಿನಲ್ಲಿ ಮನೆಯ ಕಡೆಗೆ ಹೋದವರು ನಾಪತ್ತೆಯಾಗಿದ್ದಾರೆ. ಲಕ್ಷ್ಮೀ ನಾಯ್ಕನಕಟ್ಟೆಯ ನಂದನವನದಲ್ಲಿ ತನ್ನ ಅಕ್ಕ ಗೀತಾ ಅವರೊಂದಿಗೆ ವಾಸವಾಗಿದ್ದು, ಅಕ್ಟೋಬರ್ 15ರಂದು ಕುಂದಾಪುರ ವಡೇರ ಹೋಬಳಿ ಎಂಬಲ್ಲಿ ಇನ್ನೊಬ್ಬ ಅಕ್ಕ ಪಾರ್ವತಿ ಮನೆಗೆ ಬಂದಿದ್ದರು. ನಂತರ ಅವರ ಪತಿ ಶಂಕರ್ ಅದೇ ದಿನ ಅಪರಾಹ್ನ 3 ಗಂಟೆಗೆ ಕುಂದಾಪುರದಿಂದ ಬೈಂದೂರು ಕಡೆಗೆ ಹೋಗುವ ಬಸ್ಸಿಗೆ ಹತ್ತಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಅವರು ಮನೆಗೆ ತೆರಳದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ‘ಲೇಕ್ 2024’ಸಮ್ಮೇಳನವು ಪ್ರಸ್ತುತ ಜ್ವಲಂತ ಸಮಸ್ಯೆಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವ ಸುಸ್ಥಿರ ಹಾಗೂ ಸದುದ್ದೇಶಗಳನ್ನು ಹೊಂದಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಎನರ್ಜಿ ಆಂಡ್ ವೆಟ್ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಇವುಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ‘ಲೇಕ್ 2024- 14ನೇ ದ್ವೈವಾರ್ಷಿಕ ಕೆರೆ (ಸರೋವರ) ಸಮ್ಮೇಳನ’ವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಹಾನಿ, ಭೂಕುಸಿತ ಮತ್ತು ಜಲಪ್ರಳಯದ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಪ್ರಕೃತಿ, ಪ್ರಾಣಿಸಂಕುಲ, ಸಸ್ಯವರ್ಗ ನಾಶವಾಗುತ್ತಿವೆ. ಈ ನಿಟ್ಟಿನಲ್ಲಿ ಕೆರೆಗಳ ಕುರಿತು ಚಿಂತನ ನಡೆಸುವುದು ಬಹಳ ಅವಶ್ಯಕವಾಗಿದೆ ಎಂದು ಅವರು ವಿವರಿಸಿದರು. ಅಳಿವೆ ಉಳಿಸುವ ಕಾರ್ಯ, ಹಸಿರು ಬಜೆಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿ, ಕುಂದಾಪುರ ಇಲ್ಲಿಯ 9ನೇ ತರಗತಿಯ ವಿದ್ಯಾರ್ಥಿನಿ ರಿಷಿಕಾ ಆರ್. ದೇವಾಡಿಗ ಅವರು ಪರಂಪರಾ ಕಲ್ಚರಲ್ ಫೌಂಡೇಶನ್, ಬೆಂಗಳೂರು ಇವರು ನಡೆಸಿದ ರಾಜ್ಯಮಟ್ಟದ ದೇಶಭಕ್ತಿ ಗೀತಾ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ದೇಶ ಮತ್ತು ವಿದೇಶದ ಅನಿವಾಸಿ ಭಾರತೀಯ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 262 ಸ್ಪರ್ಧಾರ್ಥಿಗಳು ಪಾಲ್ಗೊಂಡಿರುತ್ತಾರೆ. ರಿಷಿಕಾ ಈಗಾಗಲೇ ಜಿಲ್ಲಾ ಮತ್ತು ರಾಜ್ಯಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ವಿಜೇತಳಾಗಿದ್ದಳು. ಅವಳಿಗೆ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಪ್ರಾಚಾರ್ಯರೂ ಆದ ಶರಣ ಕುಮಾರ ಅವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಮಂಗಳೂರು, ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಇಲ್ಲಿನ ಶಿಕ್ಷಕರಿಗೆ ಸೈoಟ್ ಅಲೋಷಿಯಸ್ ಕಾಲೇಜು ಡೀಮಡ್ ಟು ಬಿ ಯೂನಿವರ್ಸಿಟಿ ಮಂಗಳೂರು ಇಲ್ಲಿನ ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಅಲಿಟಾ ಡೇಸ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಆಂಗ್ಲ ಭಾಷೆ ಮತ್ತು ಸಂವಹನ ಕುರಿತು ಒಂದು ದಿನದ ಕಾರ್ಯಾಗಾರವನ್ನು ನಡೆಸಿದರು. ಆಂಗ್ಲ ಭಾಷೆಯ ಆಳ ಜ್ಞಾನವನ್ನು ಹೊಂದಿರುವ ಇವರು ಹಲವು ಪ್ರಾತ್ಯಕ್ಷಿಕೆಗಳ ಮೂಲಕ ಅತ್ಯಂತ ಕ್ರಿಯಾಶೀಲರಾಗಿ ಚಟುವಟಿಕೆಗಳ ಮೂಲಕ ಶಿಕ್ಷಕರಿಗೆ ಭಾಷೆಯಲ್ಲಿ ಗೊಂದಲ ಮತ್ತು ಪರಿಹಾರ, ಶಬ್ದಗಳ ಬಳಕೆ, ವ್ಯಾಕರಣ, ಉಚ್ಚಾರ ದೋಷ, ಸಾಮಾನ್ಯ ಪದಗಳ ಪ್ರಯೋಗ ಮತ್ತು ಸ್ಪಷ್ಟತೆ, ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಆಂಗ್ಲ ಭಾಷೆ ಸಂವಹನ ಇತ್ಯಾದಿಗಳ ಕುರಿತು ಉದಾಹರಣೆಯೊಂದಿಗೆ ಮನೋಜ್ಞವಾಗಿ ತಿಳಿಸಿದರು. ಎಲ್ಲಾ ಶಿಕ್ಷಕರು ತಮ್ಮನ್ನು ಸಂಪೂರ್ಣವಾಗಿ ಕ್ರಿಯಾಶೀಲತೆಯಿಂದ ಕಾರ್ಯಾಗಾರದಲ್ಲಿ ತೊಡಗಿಸಿಕೊಂಡು ಆಂಗ್ಲ ಭಾಷೆಯ ಕುರಿತು ಅತ್ಯಮೂಲ್ಯ ಮಾಹಿತಿಯನ್ನು ಪಡೆದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಶಮಿತಾ ರಾವ್, ರೆನಿಟಾ…
