Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರೀ ಮಳೆ ಹಿನ್ನೆಲೆ ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.4ರ ಗುರುವಾರ ರಜೆ ಘೋಷಿಸಲಾಗಿದೆ. ವಿಪರೀತ ಗಾಳಿ-ಮಳೆ ಹೆಚ್ಚಿರುವ ಕಾರಣ ಇಲ್ಲಿನ ನದಿಗಳು ತುಂಬಿ ಹರಿಯುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ, ಜಿಲ್ಲಾಧಿಕಾರಿಗಳು ಸೂಚನೆಯಂತೆ ರಜೆ ನೀಡಲಾಗಿದೆ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಇತರ ಭಾಗಗಳಲ್ಲಿ ಎಂದಿನಂತೆ ತರಗತಿ ನಡೆಯಲಿವೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಿಂದೂ ಧರ್ಮ ಎಂದರೆ ಹಿಂಸಾವಾದಿಗಳು ಮೊದಲಾದ ಆರೋಪಮಾಡಿದ್ದು ಇದು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಸಂಸದ ರಾಹುಲ್ ಗಾಂಧಿ ಅವರು ಈ ಕೂಡಲೇ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು ಮತ್ತು ಹಿಂದೂ ಧರ್ಮದ ಜನತೆಯ ಕ್ಷಮೆಯನ್ನು ಯಾಚಿಸಬೇಕು ಎಂದು ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ. ಎಸ್ ಬೇಲೆಮನೆ ಆಗ್ರಹಿಸಿದರು. ತ್ರಾಸಿಯಲ್ಲಿ ಬೈಂದೂರು ಬಿಜೆಪಿ ಯುವಮೋರ್ಚಾ ಪ್ರತಿಭಟನೆ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಸುಧಾಕರ್ ಶೆಟ್ಟಿ ನೆಲ್ಯಾಡಿ ಮೊದಲಾದವರು ಈ ವೇಳೆ ಮಾತನಾಡಿ ಕೇಂದ್ರದ ಪ್ರತಿಪಕ್ಷ ನಾಯಕನ ಹೇಳಿಕೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷರಾದ ರಾಘವೇಂದ್ರ ನೆಂಪು, ಪ್ರವೀಣ್ ಕೊಡ್ಲಾಡಿ, ಬೈಂದೂರು ಮಹಿಳಾಮೋರ್ಚ ಅಧ್ಯಕ್ಷೆ ಶ್ಯಾಮಲ ಕುಂದರ್ , ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಅನಿತಾ ಆರ್ ಕೆ, ಮಾಜಿ ಜಿ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಅಮಾಸೆಬೈಲು ಗ್ರಾಮದ ರಟ್ಟಾಡಿ, ಕೊಳಂಜೆ, ಜಡ್ಡಿನಗದ್ದೆ ಮೊದಲಾದೆಡೆಗಳಲ್ಲಿ ಬುಧವಾರ ಬೀಸಿದ ಸುಂಟರಗಾಳಿಗೆ ಮನೆ, ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸಿದ್ದು ಲಕ್ಷಾಂತರ ಮೌಲ್ಯದ ಮರಗಿಡಗಳು ಧರಾಶಾಹಿಯಾಗಿದೆ. ಮನೆಗಳ ಹೆಂಚು ಹಾರಿಹೋಗಿರುವುದು, ಮನೆ ಕೊಟ್ಟಿಗೆ ಮೇಲೆ ಮರಬಿದ್ದಿರುವುದು, ಮೆಸ್ಕಾಂ ಕಂಬಗಳ ನೆಲಕ್ಕುರುಳಿರುವುದು ಸೇರಿದಂತೆ ಅಪಾರ ನಷ್ಟ ಸಂಭವಿಸಿದೆ. ಇಂದು ಬೆಳಿಗ್ಗೆ ಮಳೆಯೊಂದಿಗೆ ಬೀಸಿದ ಸುಂಟರಗಾಳಿ ಮನೆ, ಕೊಟ್ಟಿಗೆ, ತೋಟಗಳನ್ನು ಹೊಕ್ಕು ಅಪಾರ ಹಾನಿಯನ್ನುಂಟುಮಾಡಿದೆ. ಗ್ರಾಮಿಣ ಭಾಗವಾದ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿ ಹಾಗೂ ಕೊಳಂಜೆ ಎಂಬಲ್ಲಿ ಕೃಷಿ ತೋಟಕ್ಕೆ ಅಪಾರ ಹಾನಿ ಸಂಭವಿಸಿದೆ. ಕೊಳಂಜೆಯಲ್ಲಿ ಸುಮಾರು ಮೂರೂವರೆ ಎಕರೆ ಕೃಷಿ ಭೂಮಿ ಸುಂಟರಗಾಳಿಯ ತೀವ್ರತೆಗೆ ಧ್ವಂಸವಾಗಿದೆ. ಹಲವಾರು ಮನೆಗಳಿಗೂ ಹಾನಿಯಾಗಿವೆ. ಜಡ್ಡಿನಗದ್ದೆ, ರಟ್ಟಾಡಿ, ಹೊರ್ಲಿಜೆಡ್ಡು ಭಾಗದ ಸುಮಾರು 3000ದಷ್ಟು ಅಡಿಕೆ ಮರಗಳು ನೆಲಕ್ಕುರುಳಿವೆ. ರಟ್ಟಾಡಿಯಲ್ಲಿ ಮರಗಳೂ ಸೇರಿದಂತೆ ತೋಟಗಳಿಗೆ ನುಗ್ಗಿದ ಸುಂಟರಗಾಳಿಯಿಂದಾಗಿ ಕೃಷಿ ನಾಶವಾಗಿದೆ. ಅಲ್ಲದೇ ಮನಗಳ ಮೇಲ್ಛಾವಣಿಗಳೂ ಧರೆಗುರುಳಿವೆ. ಘಟನಾ ಸ್ಥಳಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲೆಡೆ ಅಗತ್ಯ ಎಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಸಾರ್ವಜನಿಕವಾಗಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರದ ಗುರುರಾಜ್ ಗಂಟಿಹೊಳೆ ನಿರ್ದೇಶನ ನೀಡಿದರು. ಉಪ್ಪುಂದದ ಕಾರ್ಯಕರ್ತದಲ್ಲಿಆರೋಗ್ಯ & ಆಯುಷ್ ಇಲಾಖೆ ವೈದ್ಯಾಧಿಕಾರಿಗಳು, ಕಂದಾಯ & ಸರ್ವೇ ಇಲಾಖೆ ಹಾಗೂ ಬಿಎಸ್ಎನ್ಎಲ್ ಮತ್ತು ಕೆಪಿಸಿಎಲ್ ಇಲಾಖೆ ಪ್ರಗತಿ ಪರಿಶೀಲನೆ ಹಾಗೂ ಈ ಇಲಾಖೆಗಳಲ್ಲಿ ಅನ್ಯ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ಕಡತಗಳ ವಿಲೇವಾರಿ ಕುರಿತಾದ ಜಂಟಿ ಇಲಾಖಾ ಸಭೆ ನಡೆಸಿ ಈ ಸೂಚನೆ ನೀಡಿದರು. ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು, ಆಸ್ಪತ್ರೆಗೆ ಅಗತ್ಯ ಕಟ್ಟಡ ವ್ಯವಸ್ಥೆ ಮಾಡಿಸುವುದು, ಕಟ್ಟಡಕ್ಕೆ ಬೇಕಾದ ಜಾಗ ಗುರುತಿಸುವುದು ಇತ್ಯಾದಿಗಳನ್ನು ತ್ವರಿತವಾಗಿ ಮಾಡಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು. ಆರೋಗ್ಯ ಇಲಾಖೆಯ ಎಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರದಿಂದಾಗಿ ಈ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 720 ಅಂಕಕ್ಕೆ 720 ಅಂಕವನ್ನು 67 ವಿದ್ಯಾರ್ಥಿಗಳು ಪಡೆದಿರುವುದು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಸ್ಪಷ್ಟ. ಉತ್ತರಭಾರತದವರೇ ಅವಕಾಶ ಪಡೆದಿದ್ದು ಇದರಿಂದ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿದಂತಾಗಿದೆ. ಇಂಥಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ನಿರ್ವಹಿಸಲಾಗದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಎನ್.ಎಸ್.ಯು.ಐ ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್ ಹೇಳಿದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್, ಎನ್.ಎಸ್.ಯು.ಐ ಕುಂದಾಪುರ ವಿಧಾನಸಭಾ ಕ್ಷೇತ್ರ ಇವರ ಜಂಟಿ ಆಶ್ರಯದಲ್ಲಿ ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರ ಖಂಡಿಸಿ ಕುಂದಾಪುರ ಶಾಸ್ತ್ರೀವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಎಲ್ಲರಿಗೂ ಸ್ಷಷ್ಟವಾಗಿದ್ದರೂ ಕೂಡಾ ಈ ಭಾಗದ ಯಾವುದೇ ಬಿಜೆಪಿ ಸಂಸದರಾಗಲಿ, ಶಾಸಕರಾಗಲಿ ಮಾತನಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ಬಗ್ಗೆ ಧ್ವನಿಯೆತ್ತುತ್ತಿಲ್ಲ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು ಈ ಬಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ’ಸಾಹಿತಿಕ ಕಥನದ ನಿರೂಪಣೆ ಮತ್ತು ಸಿನಿಮಾದ ನಿರೂಪಣೆಯು ವಿಭಿನ್ನ’ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಸಹಪ್ರಾಧ್ಯಾಪಕ ಸಾತ್ವಿಕ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಳ್ವಾಸ್ ಸಿನಿಮಾ ಸಮಾಜದ ಆಶ್ರಯದಲ್ಲಿ ನಡೆದ ‘ನಿರೂಪಣಾ ತಲ್ಲೀನತೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಿನಿಮಾಕ್ಕೆ ನಿರ್ದಿಷ್ಟ ಕತೆ ಮುಖ್ಯವಾಗುವುದಿಲ್ಲ. ಸಿನಿಮಾ ನಿರೂಪಣೆಯ ಕಥನ ಶೈಲಿಯೇ ಪ್ರಮುಖವಾಗುತ್ತದೆ. ಸಾಹಿತ್ಯಿಕ ಭಾಷೆ ಹಾಗೂ ಸಿನಿಮಾ ಭಾಷೆಗಳೆರಡೂ ವಿಭಿನ್ನ ಎಂದು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು. ಪ್ರತಿ ಸಿನಿಮಾವೂ ನೋಡುಗನ ದೃಷ್ಟಿಕೋನದಲ್ಲಿ ಬೇರೆ ಬೇರೆ ಅರ್ಥ ಕಲ್ಪಿಸಬಹುದು. ಆದರೆ, ಯಶಸ್ವಿ ನಿರ್ದೇಶಕನೊಬ್ಬ ತನ್ನ ಕಥಾ ಹಂದರವನ್ನು ಪರಿಣಾಮಕಾರಿಯಾಗಿ ನೋಡುಗರಿಗೆ ತಲುಪಿಸಿದಾಗ ಯಶಸ್ವಿ ಎನಿಸಿಕೊಳ್ಳುತ್ತಾನೆ ಎಂದರು. ಸಾಮಾನ್ಯ ವೀಕ್ಷಣೆಯಿಂದ ಸಿನಿಮಾ ಸೂಕ್ಷ್ಮತೆಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾವನ್ನು ಇತರ ಮಾಧ್ಯಮಕ್ಕೆ ಬದಲಾಯಿಸಿದರೆ ಸ್ವಾರಸ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಿನಿಮಾಗಳು ವಿಭಿನ್ನ ವಿಚಾರಗಳ ಸಮೀಕರಣ ಎಂದರು. ಸಿನಿಮಾ ಎಂದರೇನು? ಸಿನಿಮಾವನ್ನು ನೋಡುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಸಾಹಿತ್ಯ ಸ್ಪಂದನ ಎಂಬ ಹೆಸರಿನಲ್ಲಿ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯದ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಕಾದಂಬರಿಕಾರ, ಕವಿ,  ಪತ್ರಕರ್ತ ಹಾಗೂ ಚಲನಚಿತ್ರ ಬರಹಗಾರರಾದ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್, ಖ್ಯಾತ ಬರಹಗಾರರಾದ ಗೋಪಾಲಕೃಷ್ಣ ಕುಂಟಿನಿ, ಖ್ಯಾತ ಲೇಖಕರಾದ ರಾಜಶೇಖರ ಹಳೆಮನೆ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್., ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರು, ಪ್ರಖ್ಯಾತ ಲೇಖಕರೂ ಆಗಿರುವ ಅನುಬೆಳ್ಳೆ ನಾಮಾಂಕಿತ  ರಾಘವೇಂದ್ರ ಬಿ. ರಾವ್, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್. ಕೆ. ಎಸ್. ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರಮುಖ ಬರಹಗಾರರೂ ಆಗಿರುವ  ಮಹೇಶ್ ಕೆ. ಎನ್. ಪುತ್ತೂರು ಇನ್ನಿತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ನಿರ್ಮಿಸಲ್ಪಟ್ಟ ಪ್ರಮೋಶನಲ್ ವಿಡಿಯೋವನ್ನು ಪ್ರಸ್ತುತ ಪಡಿಸಲಾಯಿತು. ಕಾರ್ಯಕ್ರಮದಲ್ಲಿ  ಬೋಧಕ ಬೋಧಕೇತರ ವೃಂದದವರೂ ಪಾಲ್ಗೊಂಡಿದ್ದರು. ಕನ್ನಡ ಉಪನ್ಯಾಸಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2574892, ಅಥವಾ ಉಡುಪಿ ದೂ.ಸಂಖ್ಯೆ: 0820-2528884, ಕುಂದಾಪುರ ದೂ.ಸಂಖ್ಯೆ: 08254-230609/298089 ಹಾಗೂ ಕಾರ್ಕಳ ದೂ.ಸಂಖ್ಯೆ: 08258-232133/298134 ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿಗೆ ದೂರದಿಂದ ಆಗಮಿಸುವ 150 ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಹಳೇ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಸೀತಾರಾಮ ನಕ್ಕತ್ತಾಯ, ನಾರಾಯಣ, ಯು. ಎಸ್. ಶೆಣೈ ವಿದ್ಯಾರ್ಥಿಗಳಿಗೆ ಊಟ ಬಡಿಸುವುದರೊಂದಿಗೆ ಚಾಲನೆ ನೀಡಿದರು. ಕೆಲ ವರ್ಷಗಳಿಂದ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲರಾದ ಕಿರಣ್ ಹೆಗ್ಡೆ, ಊಟದ ಉಸ್ತುವಾರಿ ಉಪನ್ಯಾಸಕರಾದ ಉದಯ್ ಕುಮಾರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್‌ನ 2024-25ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ ಟಿ. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ  ಮಾಲಾಶ್ರೀ ಖಾರ್ವಿ, ಉಪಾಧ್ಯಕ್ಷರಾಗಿ ಉದಯಶಂಕರ ರಾವ್‌, ಜೊತೆ ಕಾರ್ಯದರ್ಶಿಯಾಗಿ ಫಿಲೋಮಿನಾ ಫೆರ್ನಾಂಡಿಸ್,  ನಿಕಟಪೂರ್ವ ಅಧ್ಯಕ್ಷರಾಗಿ ಜನಾರ್ದನ ಪೂಜಾರಿ,  ಪ್ರದೀಪ ಡಿ. ಕೆ, ಎಂ. ನಾಗೇಂದ್ರ ಪೈ, ನಿರ್ದೇಶಕರಾಗಿ ಎಚ್. ಗಣೇಶ ಕಾಮತ್, ಬಿ. ಲಕ್ಷ್ಮೀಕಾಂತ ಮಡಿವಾಳ, ಕೃಷ್ಣ ಪೂಜಾರಿ, ಗಿರೀಶ್ ಖಾರ್ವಿ, ಕೆ. ರಾಮನಾಥ ನಾಯಕ್, ಗೋಪಾಲ ಬಿಲ್ಲವ, ಸುಗುಣಾ ಆರ್. ಕೆ ಹಾಗೂ ಚೇರ್‌ಮೆನ್‌ಗಳಾಗಿ ಉಮೇಶ್ ಎಲ್. ಮೇಸ್ತ, ರಾಜೇಶ ಎಂ. ಜಿ., ದಿನಕರ ಶೆಣೈ ಟಿ., ಶಿವಾನಂದ ಪೂಜಾರಿ, ದಯಾನಂದ ಗಾಣಿಗ, ವಾಸುದೇವ ಶೇರುಗಾರ್, ನಾರಾಯಣ ಇ. ನಾಯ್ಕ್ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

Read More