Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರು ಆಯೋಜಿಸಿದ ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಬುಲ್ ಬುಲ್ಸ್ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ರೋಟರಿ ಕ್ಲಬ್ ಕುಂದಾಪುರ ಮಿಡ್‌ ಟೌನ್‌ನಿಂದ ಸ್ವಂತ ಉದ್ಯೋಗ ಕಲ್ಪಿಸುವ ನೆಲೆಯಲ್ಲಿ ನ್ಯೂ ಮೆಡಿಕಲ್ ಸೆಂಟರ್‌ನ ಡಾ. ರಂಜನ್ ಶೆಟ್ಟಿ ಸಹಕಾರದೊಂದಿಗೆ ಹೇರಿಕುದ್ರು ನಿವಾಸಿ ಚಂದ್ರಶೇಖರ ಶೆಟ್ಟಿ ಅವರಿಗೆ ಹುಲ್ಲು ಕಟ್ಟಿಂಗ್ ಯಂತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಿಡ್‌ ಟೌನ್‌ ಅಧ್ಯಕ್ಷ ಶೇಖರ್ ಶೆಟ್ಟಿ ಕಾರ್ಯದರ್ಶಿ ಉದಯ್ ಶೆಟ್ಟಿ, ಕ್ಲಬ್‌ನ ಸದಸ್ಯರಾದ ರವಿರಾಜ್ ಶೆಟ್ಟಿ, ಸುನಿಲ್ ಶೆಟ್ಟಿ ಹೇರಿಕುದ್ರು, ಸ್ಥಳೀಯರಾದ ಮಹಾಬಲ ಪೂಜಾರಿ, ಸಂಜೀವ್ ಪೂಜಾರಿ, ಲಕ್ಷ್ಮಣ್ ಶೆಟ್ಟಿ, ದಿನಕರ್ ಶೆಟ್ಟಿ, ಮಹೇಂದ್ರ, ಪ್ರಫುಲ್, ಪ್ರಸನ್ನ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಟ್ರಸ್ಟ್ ಫಾರ್ ರೂರಲ್ ಅಪ್ಲಿಫ್ಟ ಮೆಂಟ್ ಸ್ಟ್ರಾಟಜೀಸ್ ಬೆಂಗಳೂರು ವತಿಯಿಂದ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಎಲ್. ಕೆ. ಜಿ. ಇಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ಕ್‌ನ ವಿದ್ಯಾರ್ಥಿನಿ ಅಮೂಲ್ಯ ತೃತೀಯ ಸ್ಥಾನಗಳಿಸಿದ್ದಾಳೆ. ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ/ ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: “ಸ್ಥಿರತೆ ಹಾಗೂ ಹೊಣೆಗಾರಿಕೆಯಿಂದ ಲೆಕ್ಕ ಪರಿಶೋಧಕರಾಗಿ” ಎಂದು ಘೋಷಿಸುತ್ತಾ, ಕುಂದಾಪುರ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ. ಎ ಮತ್ತು ಸಿ. ಎಸ್ ತರಗತಿಗಳನ್ನು ಮಂಗಳವಾರದಂದು ಗಣಪತಿ ಸ್ತುತಿ  ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಎಲ್ಲಾ ಗೌರವಾನ್ವಿತ ಅತಿಥಿ ಮಹಾಶಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಲೆಕ್ಕ ಪರಿಶೋಧಕರು ಹಾಗೂ ಸಿ. ಎಸ್ ತಜ್ಞರಾದ ಪ್ರದೀಪ್ ಜೋಗಿ ಚೇರ್ಮ್‍ನ್ ಆಫ್ ಐ. ಸಿ .ಎ. ಐ, ಉಡುಪಿ  ಇವರು ಸಿ. ಎ/ಸಿ. ಎಸ್ ತರಗತಿಗಳ ಪುನಶ್ಚೇತನ ಕಾರ್ಯಕ್ರದಲ್ಲಿ ವಾಣಿಜ್ಯ ವಿಭಾಗದ  ವಿದ್ಯಾರ್ಥಿಗಳಿಗೆ ಲೆಕ್ಕ  ಪರಿಶೋಧನೆಯ ಬಗ್ಗೆ ಮಾಹಿತಿಯ ಜೊತೆಗೆ ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿರುವ ವಿಪಲ ಅವಕಾಶಗಳು ಮತ್ತು ಪೂರ್ವ ತಯಾರಿಯ ಕುರಿತು ಅರಿವು ಮೂಡಿಸುವ  ಬಗ್ಗೆ ಮಾತನಾಡುತ್ತಾ, ನಿರಂತರ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಮುಂದುವರೆದಲ್ಲಿ ಸಿ. ಎ ಪರೀಕ್ಷೆಯಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 2024-25ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ 15 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರೌಢ  ಶಾಲಾ ಶಿಕ್ಷಕ ವಿಭಾಗದಲ್ಲಿ ಬೈಂದೂರು ವಲಯದಿಂದ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ಮಂಜುನಾಥ ಶೆಟ್ಟಿ, ಕುಂದಾಪುರ ವಲಯದಿಂದ ಬಿದ್ಕಲ್‌ಕಟ್ಟೆ ಕೆ. ಪಿ. ಎಸ್‌ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಕರುಣಾಕರ ಶೆಟ್ಟಿ, ಬ್ರಹ್ಮಾವರ ವಲಯದಿಂದ ಕೋಡಿಕನ್ಯಾನ ಸೋಮಬಂಗೇರ ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕಿಯಾದ ಜ್ಯೋತಿ ಕೃಷ್ಣ ಪೂಜಾರಿ, ಉಡುಪಿ ವಲಯದಿಂದ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜು ಸಹ ಶಿಕ್ಷಕಿಯಾದ ಮಾಲತಿ ವಕ್ವಾಡಿ ಹಾಗೂ ಕಾರ್ಕಳ ಶಿವಪುರ ಚಿತ್ರಕಲಾ ಶಿಕ್ಷಕರಾದ ಕಮಲ್‌ ಅಹ್ಮದ್‌ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098 ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಬೈಂದೂರು ವಲಯದಿಂದ ಹೆರಂಜಾಲು ಸರಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜಾಧ್ಯಕ್ಷರಾದ ದಿವಗಂತ ಪುಂಡಲಿಕ ಹಾಲಂಬಿಯವರ ನೆನಪಿಗಾಗಿ ಅವರ ಧರ್ಮಪತ್ನಿ ಸರೋಜ ಹಾಲಂಬಿ ಅವರು ಸ್ಥಾಪಿಸಿದ ಪುಂಡಲಿಕ ಹಾಲಂಬಿ ಯಕ್ಷ ಪುರಸ್ಕಾರಕ್ಕೆ ಹಿರಿಯ ಯಕ್ಷಗಾನ ಕಲಾವಿದರಾದ ಐರೋಡಿ ಗೋವಿಂದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರ 25,000 ನಗದು ಹಾಗೂ ಫಲಕ ಒಳಗೊಂಡಿರುತ್ತದೆ. ಸೆ. 15ರ ಸಂಜೆ 4.30ಕ್ಕೆ ಗುಂಡ್ಮಿ ಯಕ್ಷ ಕಲಾರಂಗದಲ್ಲಿ ವಿತರಿಸಲಾಗುವುದೆಂದು ಕ.ಸಾ.ಪ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹಾಗೂ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ್‌ ಸಂಪದ ಯೋಜನೆಯ-ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು/ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಗೆ ನಿಗದಿಪಡಿಸಲಾಗಿರುವ ಘಟಕವಾರು/ವರ್ಗವಾರು ಗುರಿಗಳ ವಿವರ ಇಂತಿದೆ :ಹೊಸ ಮೀನು ಕೃಪಿ ಕೊಳಗಳ ನಿರ್ಮಾಣ (Construction of Biofloc ponds for freshwater ares including Inputs of Rs.4lakhs/ha), ಕಡಲಚಿಪ್ಪು ಕೃಷಿ -ಮಸ್ಸೆಲ್ಸ್, ಕಲ್ಲ, ಕ್ಲಾಮ್ಸ್, ಮತ್ತು ಇತ್ಯಾದಿ (Bivalve cultivation ((mussels, clams, pearl etc.), ಬ್ಯಾಕ್ ಯಾರ್ಡ್ ಮಿನಿ ಆರ್.ಎ.ಎಸ್ ಘಟಕ ಸ್ಥಾಪನೆ (Establishment of Backyard mini RAS Units) 30 ಟನ್ ಸಾಮರ್ಥ್ಯದ ಐಸ್ ಪ್ಲಾöಯಂಟ್/ಕೋಲ್ಡ್ ಸ್ಟೋರೇಜ್ ನಿರ್ಮಾಣ (Construction of Ice plant/Cold storage of 30 ton capacity), ಐಸ್ ಪ್ಲಾöಯಂಟ್/ಕೋಲ್ಡ್ ಸ್ಟೋರೇಜ್ ಗಳ ನವೀಕರಣ ((Modernization of Ice plant/Cold storage),…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಟೇಬಲ್ ಟೆನಿಸ್ ತಂಡದ ವಿದ್ಯಾರ್ಥಿನಿಯರಾದ ವಿಜ್ಞಾನ ವಿಭಾಗದ ಕ್ಷಮಾ ಗೌತಮ್, ಅಂಕಿತಾ ಹಾಗೂ ವಾಣಿಜ್ಯ ವಿಭಾಗದ ದೀಪ್ತಿ ಅವರಿಗೆ ಕಾಲೇಜಿನ ಸಂಚಾಲಕರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. 

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ನೊಂದವರ ಧ್ವನಿಯಾಗಿ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿರುವ ನೇರ ನಡೆ ನುಡಿಯ ಉದಯ ಕುಮಾರ್ ತಲ್ಲೂರು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಅವರನ್ನು ಗೌರವಿಸಿರುವುದು ಅವರ ಸಾಮಾಜಿಕ ಸೇವೆಗೆ ಸಂದ ಗೌರವ ಹಾಗೂ ಇಡೀ ಸಮುದಾಯಕ್ಕೆ ನೀಡಿದ ಗೌರವವಾಗಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ ಹೇಳಿದರು. ಅಮೆರಿಕಾದ ಏಷ್ಯಾ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಂಶೋಧನಾ ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಉದಯ ಕುಮಾರ್ ತಲ್ಲೂರು ಅವರನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗೌರವಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಶಶಿಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಸದಸ್ಯ ಬಿ. ರಾಘವೇಂದ್ರ ಪೈ ಶುಭ ಹಾರೈಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಮಾಜಿ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ ಮಾಜಿ ಸದಸ್ಯೆ ಶಾಂತಿ ಖಾರ್ವಿ, ಗ್ರಾಪಂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಮಳೆಯಾಶ್ರಿತ ಕೃಷಿ ನೀತಿ ಅನ್ವಯ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪಶಮನ ಗುರಿಯನ್ನು ಹೊಂದಿ ಅನುಷ್ಠಾನಗೊಂಡಿರುವ ಕೃಷಿ ಭಾಗ್ಯ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮರುಜಾರಿಗೊಳಿಸಲಾಗಿರುತ್ತದೆ. ಅದೇ ರೀತಿ ಕೃಷಿ ಭಾಗ್ಯ-ಎಸ್.ಡಿ.ಎಂ.ಎಫ್ ಯೋಜನೆಯನ್ನು ಜಿಲ್ಲೆಯ ಬರ ಪೀಡಿತ ಬ್ರಹ್ಮಾವರ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗಿರುತ್ತದೆ. ಕೃಷಿ ಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಡೀಸೆಲ್/ ಪೆಟ್ರೋಲ್/ ಸೋಲಾರ್ ಪಂಪ್ ಸೆಟ್ ಘಟಕಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 80 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ, ಸೂಕ್ಷ್ಮ (ತುಂತುರು/ ಹನಿ) ನೀರಾವರಿ ಘಟಕದಡಿ ಎಲ್ಲಾ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯಧನ ಹಾಗೂ ಕೃಷಿ ಹೊಂಡದ…

Read More