ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ ನಿಲ್ದಾಣದ ಬಳಿ ನಿಂತಿದ್ದ ಮಹಿಳೆಗೆ ಕುಂದಾಪುರ ಕಡೆಯಿಂದ ಬಂದ ಪಿಕ್ ಅಪ್ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ಮರವಂತೆ ಗ್ರಾಮದ ರಾ.ಹೆ-66ರಲ್ಲಿ ನಡೆದಿದೆ. ಘಟನೆಯಲ್ಲಿ ಯಳಜಿತದ ಬಾಬು ಎಂಬುವವರ ಪತ್ನಿ ಲಕ್ಷ್ಮೀ (45) ಅವರು ಮೃತಪಟ್ಟಿದ್ದಾರೆ.
ರಾ.ಹೆ-66ರಲ್ಲಿ ಭಾನುವಾರ ಮಧ್ಯಾಹ್ನ ತನ್ನ ಪತಿಯೊಂದಿಗೆ ರಸ್ತೆ ದಾಟಿ ಪುಟ್ ವಾಕ್ ಮೇಲೆ ಬಸ್ ನಿಲ್ದಾಣದ ಎದುರು ನಿಂತಿದ್ದ ವೇಳೆ ನಿಯಂತ್ರಿಣ ತಪ್ಪಿದ ಪಿಕ್‌ಅಪ್ ವಾಹನವು ಸೀದಾ ಪುಟ್ ವಾಕ್ ಏರಿ ಮಹಿಳೆಗೆ ಡಿಕ್ಕಿಯಾಗಿ ಚರಂಡಿಗಿಳಿದಿದೆ. ಡಿಕ್ಕಿ ಹೊಡೆದ ಪರಿಣಾಮ ಲಕ್ಷ್ಮೀ ಅವರ ಬೆನ್ನಿಗೆ, ಸೊಂಟಕ್ಕೆ ಹಾಗೂ ಎಡಕಾಲಿಗೆ ರಕ್ತ ಗಾಯವಾಗಿದ್ದು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.