ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮಹಿಳೆ ಇಂದು ಸರ್ವಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ ಅಲ್ಲದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ತ್ರೀ ಮಾನ್ಯತೆಯ ಸಮಾಜದ ಕೊಡುಗೆ ಅನನ್ಯ ಎಂದು ಉಪನ್ಯಾಸಕಿ, ಸಾಹಿತಿ ಪಾರ್ವತಿ ಐತಾಳ್ ಹೇಳಿದರು. ಅವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಭಾಂಗಣದಲ್ಲಿ ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇವರ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆ ಮನೆಯ ಗಂಭೀರ ವಾತಾವರಣದಲ್ಲೂ ಹೊರ ಸಮಾಜದೊಂದಿಗೆ ಗುರುತಿಸಿಕೊಂಡಿದ್ದಾಳೆ. ಎಷ್ಟೆ ಸಂಕಷ್ಟದ ಸಮಯದಲ್ಲೂ ತಾನೇ ಹೊರೆ ಹೊತ್ತು ಸಂಸಾರವನ್ನು ಮುನ್ನೆಡೆಸುತ್ತಿದ್ದಾಳೆ. ಅಂತಹ ಮಹಿಳೆ ಸಮಾಜಕಟ್ಟುವ ಕಾಯಕಕ್ಕೂ ಸೈ ಎಸಿಕೊಂಡಿದ್ದಾಳೆ ಎಂದರು. ಈ ವೇಳೆ ಸಾಧಕ ಮಹಿಳೆ ಕೆ.ಎಂ.ಎಫ್ ಮಾಜಿ ನಿರ್ದೇಶಕಿ ಜಾನಕಿ ಹಂದೆ ಅವರನ್ನು ಗುರುತಿಸಿ ಗೌರವಿಸಲಾಯಿತು. ವಿಶೇಷವಾಗಿ ಮಹಾಲಿಂಗೇಶ್ವರ ವಿಪ್ರ ಮಹಿಳಾ ಭಜನಾ ಸಂಘವನ್ನು ಸನ್ಮಾನಿಸಲಾಯಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ. ಕೆ.ಎಸ್. ಕಾರಂತ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆ ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಅಧ್ಯಕ್ಷೆ ವನಿತಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೈಲಿನ ಬಾಗಿಲ ಬಳಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಯುವಕ ಮೃತಪಟ್ಟ ಘಟನೆ ತಾಲೂಕಿನ ಕಿರಿಮಂಜೇಶ್ವರದಲ್ಲಿ ಸಂಭವಿಸಿದೆ. ಕೊಲ್ಲಮ್ ಜಿಲ್ಲೆಯ ನಿವಾಸಿ ಸೇಪು ರಹೇಮಾನ್ (33) ಮೃತರು. ಅವರು ಸಂಬಂಧಿಕರೊಂದಿಗೆ ಗೋವಾ ಮಡಗಾಂವ್‌ನಿಂದ ತ್ರಿವೆಂಡ್ರಮ್ ನಾರ್ತ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದು, ಮೊಬೈಲ್ ನಲ್ಲಿ ಮಾತಾಡಿಕೊಂಡು ಸೀಟಿನಿಂದ ಹೊರಗಡೆ ಬಂದು ಬಾಗಿಲ ಸಮೀಪ ಮಾತಾಡಿಕೊಂಡಿದ್ದಾಗ ಬೈಂದೂರು ಕಿರಿಮಂಜೇಶ್ವರದ ಹೈಸ್ಕೂಲ್ ಹತ್ತಿರ ಚಲಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಕೆಳಗೆ ಟ್ರಾಕ್ ಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಲ್ಲುಕೋರೆ ಹೊಂಡಕ್ಕೆ ಬಿದ್ದು ಯುವಕ ಮೃತಪಟ್ಟ ಘಟನೆ ಗುರುವಾರ ಸಾಹೇಬ್ರಕಟ್ಟೆ ಸಮೀಪ ಗರಿಕೇಮಠದಲ್ಲಿ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ತಮಿಳುನಾಡು ಮೂಲದ ಅರುಣ್ (30) ಎಂದು ಗುರುತಿಸಲಾಗಿದೆ ಅವರು ಯಡ್ತಾಡಿ ಗ್ರಾಮದ ಗರಿಕೆಮಠದಲ್ಲಿ ಬಶಿರ್ ಮತ್ತು ಶರತ್ ಶೆಟ್ಟಿ ಅವರು ನಡೆಸುವ ಶಿಲೆಗಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಯೋರ್ವರನ್ನು ನೋಡಲು ಬಂದಿದ್ದರು. ಆಗ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ಮೃತಪಟ್ಟಿರುತ್ತಾರೆ. ಕಲ್ಲುಕೋರೆ ತುಂಬಾ ಆಳವಿದ್ದ ಕಾರಣ ಶವವನ್ನು ಈಶ್ವರ ಮಲೈ ಅವರನ್ನು ಕರೆಸಲಾಯಿತು. ಅವರು ಶವವನ್ನು ಮೇಲೆತ್ತಿದರು. ಬ್ರಹ್ಮಾವರ ಪೊಲೀಸ್ ಠಾಣೆ ಉಪನಿರೀಕ್ಷಕ ಅಶೋಕ್ ಮಲಬಾಗಿಲು ಹಾಗೂ ತಂಡದವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಮೃತರ ಸಂಬಂಧಿ ತಂಗವೇಲು ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಎಂಬ ಶೀರ್ಷಿಕೆಯಡಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು ಭಾಷಾ ವೈವಿಧ್ಯತೆ, ನೀತಿ ಅಸಮತೋಲನ ಹಾಗೂ ದ್ರಾವಿಡ ಭಾಷೆಗಳ ಭವಿಷ್ಯದ ಕುರಿತ ಪ್ರಮುಖ ಚರ್ಚೆಗಳಿಗೆ ವೇದಿಕೆಯಾಯಿತು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಹಂಪಿ ಕನ್ನಡ ವಿವಿಯ ಕುಲಪತಿಗಳಾದ ಡಾ ಡಿ. ವಿ. ಪರಮಶಿವಮೂರ್ತಿ, ಭಾಷೆ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಬಂಧಗಳನ್ನು ಬೆಸೆಯುವ ಪ್ರಮುಖ ಸಾಧನವಾಗಿದ್ದು, ಅದು ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಭಾಷೆಗಳು ಒಗ್ಗೂಡಿಸುವ ಬದಲು ಹಲವಾರು ಸಂದರ್ಭಗಳಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತಿರುವುದರ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿ, “ಭಾಷಾ ವೈವಿಧ್ಯತೆಯನ್ನು ಹೆಮ್ಮೆಯಿಂದ ಸ್ವೀಕರಿಸಬೇಕು; ಇರ್ಷ್ಯೆಯಿಂದಲ್ಲ,” ಎಂದು ಅಭಿಪ್ರಾಯಪಟ್ಟರು. ಭಾಷೆಯು ಜ್ಞಾನ ಮತ್ತು ಅರಿವಿನ ವಿಸ್ತರಣೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರಂಜಾನ್ ಮಾಸ ಪವಿತ್ರವಾದ ಮಾಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪಸರಿಸಿಕೊಂಡಿದೆ ಎಂದು ಹೂಡೆ ಐಡಿಯಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಇದ್ರಿಸ್ ಹೂಡೆ ಹೇಳಿದರು. ಅವರು ಶುಕ್ರವಾರ ರಂಜಾನ್ ಹಬ್ಬದ ಪ್ರಯುಕ್ತ ಕೋಟ ಜಾಮಿಯಾ ಮಸ್ಜಿದ್ ಇಲ್ಲಿ ರಮದಾನ್ ಈದ್ ಸಂದೇಶ 2026 ಅರ್ಹರಿಗೆ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಸಹಾಯಧನ ಚೆಕ್ ವಿತರಿಸಿ ಮಾತನಾಡಿದರು. ಕುರಾನ್ ಉದ್ದೇಶ ಜಗತ್ತದಲ್ಲಿ ಸೌಹಾರ್ದತೆ, ಶಾಂತಿ, ನೆಮ್ಮದಿಯ ವಾತಾವರಣದ ಜೊತೆಗೆ ಬೆರೆತು ಜೀವಿಸುವುದಾಗಿದೆ, ಈ ದಿಸೆಯಲ್ಲಿ ರಂಜಾನ್ ಮಾಸದ ಉಪವಾಸ ಅರ್ಥಪೂರ್ಣ ಭಕ್ತಿಯೊಂದಿಗೆ ಸಾಮರಸ್ಯದ ಬದುಕಿಗೆ ಮುನ್ನುಡಿ ಬರೆದಿದೆ ಇದಕ್ಕೆ ಕೋಟದ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ಇದೇ ವೇಳೆ ಆಯ್ದ ಹಿಂದೂ ಅಶಕ್ತ,ಅನಾರೋಗ್ಯ ಪೀಡಿತರಿಗೆ ನೆರವನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಕೋಟತಟ್ಟುವಿನ ಎಂಟು ಕೊರಗ ಕುಟುಂಬಗಳಿಗೆ ಚೇರ್ ಅನ್ನು ಹಸ್ತಾಂತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೋಟ ಜಾಮಿಯಾ ಮಸ್ಜಿದ್ ಅಧ್ಯಕ್ಷ ಪ್ಲೆಸೆಂಟ್ ಇಬ್ರಾಹಿಂ ಸಾಹೇಬ್ ಕೋಟ ವಹಿಸಿ ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳನ್ನಾಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೇಂದ್ರ ಸರಕಾರದ ರೂಪಿಸಿದ ಮಹತ್ವಕಾಂಕ್ಷೆ ಯೋಜನೆಯಾದ ವಿಶ್ವಕರ್ಮ ಯೋಜನೆ ಸಾಮಾನ್ಯ ವರ್ಗದ ಪಾಲಿನ ಆಶಾಕಿರಣ ಯೋಜನೆಯಾಗಿ ಹೊರಹೊಮ್ಮಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶುಕ್ರವಾರ ಕೋಟ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಉಡುಪಿ ಅಂಚೆ ವಿಭಾಗ ಇವರ ಸಹಕಾರದೊಂದಿಗೆ ವಿಶ್ವಕರ್ಮ ಯೋಜನೆಯ ಟೋಲ್ ಕಿಟ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರ ಈ ಯೋಜನೆಗಾಗಿ 17283 ಫಲಾನುಭವಿಗಳ ಅರ್ಜಿ ಅಂಗಿಕಾರಗೊಳಿಸಿದ್ದು 8250 ಜನ ತರಭೇತಿ ಪೂರ್ಣಗೊಳಿಸಿದ್ದಾರೆ, ಈಗಾಗಲೇ 6 ಸಾವಿರ ಕಿಟ್ ವಿತರಿಸಲಾಗಿದ್ದು, 36,66,4,000ರೂ. ಸಾಲ ನೀಡಲಾಗಿದ್ದು ಕೇಂದ್ರ ಸರಕಾರ ಈ ಯೋಜನೆಗಾಗಿ 12ಸಾವಿರ ಕೋಟಿ ರೂ ಗಳನ್ನು ಭದ್ರತೆಗಾಗಿ ಮಿಸಲಿರಿಸಿದೆ ಒಟ್ಟು 18ಕ್ಕೂ ಅಧಿಕ ಸಾಂಪ್ರದಾಯಿಕ ಕುಲಕಸಬುಗಳಿಗೆ ಈ ಯೋಜನೆ ಜೀವತುಂಬಲಿದೆ, ಯೋಜನೆಯ ಫಲಾನುಭವಿಗಳ ಕುಟುಂಬಗಳು ಆರ್ಥಿಕ ಬಲವರ್ಧನೆಗೆ ಪೂರಕ ವಾತಾವರಣ ಕಲ್ಪಿಸಿದೆ ಎಂದರು. ಕುಂದಾಪುರದ ಶಾಸಕ ಕಿರಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬೆಳದಿಂಗಳ ಚಿಂತನ ಉಪನ್ಯಾಸ ಮಾಲಿಕೆ-2ರಲ್ಲಿ “ಬದಲಾದ ಶಿಕ್ಷಣ ವ್ಯವಸ್ಥೆ: ಶಿಕ್ಷಕರಿಗಿರುವ ಸವಾಲುಗಳು” ಎನ್ನುವ ವಿಷಯದ ಕುರಿತು ಸಿಬ್ಬಂದಿ ಪುನಶ್ಚೇತನ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಕೋಡಿಯ ಹಾಜಿ ಕೆ. ಮೊಹಿದಿನ್ ಬ್ಯಾರಿ ಪ್ರೌಢ ಶಾಲೆ ಇಲ್ಲಿನ ಮುಖ್ಯ ಶಿಕ್ಷಕರಾದ ಡಾ| ಜಯಶೀಲ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಕ್ಕಳ ವರ್ತನೆ ಪರಿವರ್ತನೆ ಶಿಕ್ಷಣದ ಪ್ರಮುಖ ಗುರಿಯಾಗಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನವರ್ಧನೆಯ ಜೊತೆಗೆ ಕೌಶಲ್ಯ ಮತ್ತು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು. ಇದೇ ಸಂದರ್ಭ ಅವರು ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾತೃಭಾಷೆಗೆ ನೀಡಿದ ಮಹತ್ವ ಹಾಗೂ ಈ ಶಿಕ್ಷಣ ನೀತಿಯ ಅನನ್ಯತೆಗಳ ಕುರಿತು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಉಪ-ಪ್ರಾಂಶುಪಾಲ ಡಾ|…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಕುಸ್ತಿ ಸಂಘದ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಅಂತರ್ ಕಾಲೇಜು ಕಬ್ಬಡಿ (ಉಡುಪಿ ವಲಯ) ಪಂದ್ಯಾವಳಿಯ ಅಂತಿಮ ಪಂದ್ಯದ ಹಣಾಹಣಿಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಚಾಂಪಿಯನ್ ಪ್ರಶಸ್ತಿ ಪಡೆಯಿತು. ರನ್ನರ್ ಆಫ್ ಪ್ರಶಸ್ತಿಯನ್ನು ಜಿ.ಎಫ್.ಜಿ.ಸಿ ತೆಂಕನಿಡಿಯೂರು ಪಡೆಯಿತು. ತೃತೀಯ ಸ್ಥಾನವನ್ನು ಮಹಾವೀರ ಕಾಲೇಜು ಮೂಡುಬಿದರೆ ಪಡೆಯಿತು. ಚತುರ್ಥ ಸ್ಥಾನವನ್ನು ಆಥಿತೇಯ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಪಡೆಯಿತು. ಅತ್ತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಆತಿಥೇಯ ಭಂಡಾರ್ಕಾರ್ಸ್ ಕಾಲೇಜಿನ ನಿತಿನ್, ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಜಿ.ಎಫ್.ಜಿ.ಸಿ ತೆಂಕನಿಡಿಯೂರು ಇಲ್ಲಿನ ಅನಿಶ್, ಮತ್ತು ಅತ್ಯುತ್ತಮ ಅಲ್ ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ವರುಣ್ ಪಡೆದರು. ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ಮಾಜಿ ನಾಯಕ ರಾಜೇಂದ್ರ ಸುವರ್ಣ ಮಾತನಾಡಿ ಗ್ರಾಮೀಣ ಪ್ರತಿಭೆಗಳು ಕಬಡ್ಡಿ ಕ್ರೀಡೆಯಲ್ಲಿ ತಮ್ಮನ್ನು ತಾವು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆನ್ನಾಬೈಲ್ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತ್ರ್ ಪ್ರಾರ್ಥನೆಯು ಧರ್ಮಗುರು ಮೌಲಾನಾ ಅಬ್ದುಲ್ ಹಫೀಜ್ ರಜ್ವಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ರಂಜಾನ್ ತಿಂಗಳ ಉಪವಾಸ, ದಾನ, ಆರಾಧನೆಗಳೆಲ್ಲವೂ ಆರಾಧಕನನ್ನು ಆರಾಧ್ಯನ ಸಂಪರ್ಕಕ್ಕೆ ತಂದು ಸಂತುಷ್ಟಗೊಳಿಸುವ ಪ್ರಕ್ರಿಯೆಗಳು. ಆಧ್ಯಾತ್ಮದಲ್ಲಿ ದೇವನ ಸಂತೋಷ- ಸಂಪ್ರೀತಿಗಳು, ಆತನು ಸೃಷ್ಟಿಸಿದ ಸೃಷ್ಟಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಮತ್ತು ಸೃಷ್ಟಿಯ ಭಾಗವಾಗಿ ನಮ್ಮನ್ನು ಸೃಷ್ಟಿಸಿ ಸಲಹಿದ್ದಕ್ಕಾಗಿ ಕೃತಜ್ಞತೆಯನ್ನು ಹೇಗೆ ಅರ್ಪಿಸುತ್ತೇವೆ ಎಂಬುದರ ಮೇಲಿದೆ. ದೇವನೊಂದಿಗಿನ ಅನುಸಂಧಾನವು ಅನುಸರಣೆಯ ಪಕ್ವತೆಯನ್ನು ಅವಲಂಬಿಸಿದೆ. ದಾನದಿಂದ ಸಂಪತ್ತು ಬರಿದಾಗುವುದಿಲ್ಲ, ಅದು ಅವಘಡಗಳಿಂದಲೂ ಮನುಷ್ಯನನ್ನು ರಕ್ಷಿಸುತ್ತದೆ ಎನ್ನುವುದು ದೇವವಾಣಿ. ದಾನವನ್ನು ಇಸ್ಲಾಮ್ ಧರ್ಮ ಬೋಧಿಸಿದ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಿ ನೀಡಿದರೆ ಅದರ ಪ್ರತಿಫಲ ಪ್ರತ್ಯಕ್ಷವಾಗಿ ಕಾಣಬಹುದು. ದೇವನ ಅಸ್ತಿತ್ವ ಮತ್ತು ಪ್ರಭಾವವನ್ನು ಪ್ರಾಯೋಗಿಕವಾಗಿ ಅರಿಯಬೇಕಿದ್ದರೆ, ದೇವ ನಿಯಮಗಳನ್ನು ಸುಸೂತ್ರವಾಗಿ ಪಾಲಿಸುವುದು ಅಗತ್ಯವಾಗಿರುತ್ತದೆ. ಉಪವಾಸ ಕೇವಲ ದೇಹದ ಬಳಲಿಕೆಗೆ ಇರುವುದಲ್ಲ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಅಹಂಕಾರ ಇದ್ದರೂ, ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದರೂ ಕೊನೆಗೆ ಬರಬೇಕಾದುದು ಸ್ಮಶಾನಕ್ಕೆ. ಸ್ಮಶಾನದ ಬಗ್ಗೆ ಕೆಲವರಿಗೆ ಬೇರೆ ರೀತಿಯ ಭಾವನೆ ಇದ್ದು, ಸ್ಮಶಾನವನ್ನು ಯಾವ ರೀತಿ ಕಾಣಬೇಕೋ ಆ ರೀತಿಯಲ್ಲೇ ಕಾಣಬೇಕು. ಶಿವನ ಆಲಯ ಇರುವ ಸ್ಮಶಾನವನ್ನು ಅಭಿವೃದ್ಧಿಗೊಳಿಸಿ, ಸಂಪ್ರದಾಯದಂತೆ ಆ ಪವಿತ್ರ ಸ್ಥಳದಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ಉತ್ತಮ ಕಾರ್ಯ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಗ್ರಾಮ ಪಂಚಾಯತ್ ಗಂಗೊಳ್ಳಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದಾನಿಗಳ ಸಹಕಾರದಿಂದ ಪುನರ್ ನಿರ್ಮಾಗೊಂಡ ಗಂಗೊಳ್ಳಿಯ ಮಲ್ಯರಬೆಟ್ಟು ಸಾರ್ವಜನಿಕ ಹಿಂದು ರುದ್ರಭೂಮಿ ’ಮುಕ್ತಿ ಧಾಮವನ್ನು ಗುರುವಾರ ಲೋಕಾರ್ಪಣೆಗೊಳಿಸಿ, ನೂತನವಾಗಿ ನಿರ್ಮಿಸಿದ ಶಿವನ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಪುರೋಹಿತರಾದ ಜಿ. ರವೀಶ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಆಶೀರ್ವದಿಸಿದರು. ಜಿ. ರಾಮಪ್ಪ ಖಾರ್ವಿ ದಂಪತಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಗಂಗೊಳ್ಳಿ ಗ್ರಾಪಂ. ಅಧ್ಯಕ್ಷೆ…
