Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ನೂತನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳು, ಮೇಲ್ಸೇತುವೆ ಕಾಮಗಾರಿ, ಅಂಡರ್‌ಪಾಸ್ ಹಾಗೂ ಹೆದ್ದಾರಿ ನಿರ್ವಹಣೆ ಕಾಮಗಾರಿಗಳನ್ನು ವಿಳಂಬವಿಲ್ಲದೇ ತ್ವರಿತವಾಗಿ ಕೈಗೊಳ್ಳುವುದರೊಂದಿಗೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅವಶ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಭೂ ಮಾಲೀಕರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಹಣವನ್ನು ವಿಳಂಬವಿಲ್ಲದೇ ಒದಗಿಸಿ, ಹೆದ್ದಾರಿ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ನ್ಯಾಯಾಲಯದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥವಾಗುವ ರೀತಿಯಲ್ಲಿ ಕ್ರಮವಹಿಸಬೇಕು ಎಂದರು. ರಾ.ಹೆ 66 ರ ಸಂತೆಕಟ್ಟೆ ರಸ್ತೆ ಕಾಮಗಾರಿಯ ಉಡುಪಿ ಯಿಂದ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೇರೂರು ಗ್ರಾಮದ ನಿವಾಸಿ ಸಾಧು (59) ಬುಧವಾರದಂದು ಮಧ್ಯಾಹ್ನ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಮಾಡಿದರೂ ಕೂಡ ಗುಣಮುಖವಾಗದೇ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಿನಿ-ಕೈರಂಪಣಿ ದೊಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ದೋಣಿ ಮುಗುಚಿ ಮೀನುಗಾರ ಮೃತಪಟ್ಟ ಘಟನೆ ಬೀಜಾಡಿ ಚಾತ್ರಬೆಟ್ಟು ಎಂಬಲ್ಲಿ ನಡೆದಿದೆ. ಬೀಜಾಡಿ ಗ್ರಾಮದ ಸಂಜೀವ (58) ಎಂದು ಗುರುತಿಸಲಾಗಿದೆ. ಬೀಜಾಡಿ ಗ್ರಾಮದ ಚಾತ್ರಬೆಟ್ಟು ಎಂಬಲ್ಲಿ ಸಮುದ್ರದಲ್ಲಿ ಮಿನಿ-ಕೈರಂಪಣಿ ದೊಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರದ ನೀರಿನ ರಭಸಕ್ಕೆ ದೊಣಿ ಮಗುಚಿ ಮೀನುಗಾರಿಕೆ ಮಾಡುತ್ತಿದ್ದ ಸಂಜೀವ ಅವರು ಸಮುದ್ರದ ನೀರಿಗೆ ಬಿದ್ದು ಮುಳುಗಿದ್ದು ಅವರನ್ನು ಜೊತೆಯಲ್ಲಿರುವವರು ಮೇಲಕ್ಕೆ ಎತ್ತಿ ಕೋಟೇಶ್ವರ ಎನ್‌ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿದಾಗ ಸಂಜೀವ ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಬೆಂಗಳೂರಿನ “ಅಭಿಮಾನಿ ಪ್ರಕಾಶನ” ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ “ಸಾಮಾಜಿಕ ಸಮಸ್ಯೆ”ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ  “ಅಭಿಮಾನಿ ಪ್ರಶಸ್ತಿ” ಮೈಸೂರಿನ “ಮೈಸೂರು ದಿಗಂತ” ಪತ್ರಿಕಾ ಸಂಸ್ಥೆಯು “ಮಾನವೀಯ ಸಮಸ್ಯೆ” ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ  “ಮೈಸೂರು ದಿಗಂತ ಪ್ರಶಸ್ತಿ“,  ಬೆಂಗಳೂರಿನ ಅಭಿಮನ್ಯು  ಪತ್ರಿಕಾ ಸಂಸ್ಥೆಯು “ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿ ವರದಿಗೆ  ಅಭಿಮನ್ಯು ಪ್ರಶಸ್ತಿ,  ಬೆಂಗಳೂರಿನ  “ಪ್ರಜಾ ಸಂದೇಶ” ಪತ್ರಿಕಾ ಸಂಸ್ಥೆಯು  ಶೋಷಣೆಯನ್ನು ಪರಿಣಾಮ ಕಾರಿಯಾಗಿ  ಬಿಂಬಿಸುವ ಲೇಖನಕ್ಕೆ ” ಪ್ರಜಾ ಸಂದೇಶ  ದತ್ತಿ ಪ್ರಶಸ್ತಿ “ ಈ ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಸಂಸ್ಥೆಗಳು ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ. 2023 ನೇ ಸಾಲಿನ ಪ್ರಶಸ್ತಿಗಳು:2023 ಜನವರಿ ಯಿಂದ ಡಿಸೆಂಬರ್-2023 ರವರೆಗೆ, ಪ್ರಕಟವಾಗಿರುವ “ಸಾಮಾಜಿಕ ಸಮಸ್ಯೆ” ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಅಭಿಮಾನಿ ಪ್ರಶಸ್ತಿ-2023”, “ಮಾನವೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಕ್ಟೋಬರ್ 29 ಮತ್ತು 30ರಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಜತಾದ್ರಿ ಮಣಿಪಾಲ, ಉಡುಪಿ ಹಾಗೂ ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ 2024- 25 ರಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಿನಾನ್ ಎತ್ತರ ಜಿಗಿತದಲ್ಲಿ  ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ” ಕಾರ್ಯಕ್ರಮವು ಬುಧವಾರ ದಂದು ಜರುಗಿತು. ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, ಮಾಜಿ ಸಚಿವರು ಕರ್ನಾಟಕ ಸರ್ಕಾರ ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಯುವ ಲೇಖಕರು ತಮ್ಮಲ್ಲಿನ ಪ್ರತಿಭೆ, ಸೃಜನಶೀಲತೆಗಳನ್ನು ಬಳಸಿಕೊಂಡು ತಮ್ಮ ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಲು ಅಣಿಗೊಳ್ಳಬೇಕು ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಕಾಶ್ ಬೆಳವಾಡಿ, ಲೇಖಕರು, ನಟ ಮತ್ತು ನಿರ್ದೇಶಕರು ಬೆಂಗಳೂರು ಇವರು ಮಾತನಾಡಿ, ಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಅ.30: ಮಣ್ಣು ತುಂಬಿದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇದೆ ವೇಳೆ ಎದುರಿನಿಂದ ಸ್ಕೂಟಿ ಚಲಾಯಿಸಿಕೊಂಡು ಬರುತ್ತಿದ್ದ ಮಹಿಳೆಯು ವಾಹನ ಸಹಿತ ಲಾರಿಯಿಂದ ಬಿದ್ದ ಮಣ್ಣಿನಡಿ ಸಿಲುಕಿಕೊಂಡ ಘಟನೆ  ಕಿರಿಮಂಜೇಶ್ವರ ಗ್ರಾಮದ ನಾಗೂರು – ಉಪ್ರಳ್ಳಿ ರಸ್ತೆಯಲ್ಲಿನ ತಿರುವಿನಲ್ಲಿ ಬುಧವಾರ ನಡೆದಿದೆ. ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆ ಆರತಿ ಶೆಟ್ಟಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೇರೂರು ಕಡೆಯಿಂದ  ನಾಗೂರಿಗೆ ತೆರಳುತ್ತಿದ್ದ ಮಣ್ಣು ತುಂಬಿದ ಮಿನಿ ಲಾರಿಯೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿದೆ. ಇದೇ ವೇಳೆ ನಾಗೂರಿನಿಂದ ನೂಜಾಡಿಗೆ ತೆರಳುತ್ತಿದ್ದ ಮಹಿಳೆಯ ಮೇಲೆ ಲಾರಿಯಲ್ಲಿದ್ದ ಮಣ್ಣು ಬಿದ್ದಿದೆ. ಲಾರಿ ಬೀಳುವ ವೇಳೆ ಸ್ಕೂಟಿಯನ್ನು ಸಾಕಷ್ಟು ಎಡಬದಿಗೇ ತಿರುಗಿಸಿದ್ದರಿಂದ ಲಾರಿ ಮೈಮೇಲೆ ಬಿಳುವ ದೊಡ್ಡ ಅಪಾಯದಿಂದ ಮಹಿಳೆ ಪಾರಾದರು. ಘಟನೆಯ ಪ್ರತ್ಯಕ್ಷದರ್ಶಿ ಇನ್ನೊಂದು ವಾಹನದಲ್ಲಿದ್ದ ಕೋಡಿ ಅಶೋಕ ಪೂಜಾರಿ ಎಂಬುವವರು ತಕ್ಷಣ ಮಹಿಳೆಯ ಮೇಲೆ ಬಿದ್ದಿದ್ದ ಮಣ್ಣನ್ನು ಸರಿಸಿ ಅವರ ಮುಖವನ್ನು ಮೇಲಕ್ಕೆತ್ತಿದ್ದಾರೆ. ಅಷ್ಟರಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಆಧುನಿಕ ನಲಂದಾ ವಿಶ್ವವಿದ್ಯಾಲಯ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಬಣ್ಣಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾನೂನು ಕಾಲೇಜಿನ ’ಕಾನೂನು ಕಾರ್ಯಕ್ರಮ’ವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಳ್ವಾಸ್ ಆವರಣ ಕಂಡಾಗ ನಲಂದಾ ವಿಶ್ವವಿದ್ಯಾಲಯದ ನೆನಪು ಅನುರಣಿಸಿತು. ಆಳ್ವಾಸ್ ನಲ್ಲಿ ನಡೆಸುವ ಪ್ರತಿ ಕಾರ್ಯಕ್ರಮ ಅಭೂತಪೂರ್ವ, ಅದ್ವಿತೀಯ ಎಂದು ಶ್ಲಾಘಿಸಿದರು. ದೀಪಾವಳಿ ಸನಿಹದಲ್ಲಿ ಸಂಕ್ರಾಂತಿ ಬಂದ ಹಾಗೆ, ಈ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶವನ್ನು ನೀಡಿದ್ದಾರೆ. ಇದು ನನ್ನ ಬದುಕಿನ ಅನನ್ಯ ಅವಕಾಶ, ಆನಂದ ಭರಿತ ಸಂಭ್ರಮ ಎಂದರು. ಕಾನೂನು ಕಾಲೇಜು ಸ್ಥಾಪನೆಯಿಂದ ಕಾನೂನು ಜ್ಯೋತಿ ಬೆಳಗಲಿ, ಸರ್ವರಿಗೂ ಕೀರ್ತಿ ತರಲಿ. ಎಲ್ಲರಿಗೂ ಭರವಸೆ ಮತ್ತು ಅವಕಾಶ ಹೆಚ್ಚಿದೆ ಎಂದರು. ಯಶಸ್ಸು ಆಕಸ್ಮಿಕ ಅಲ್ಲ. ಅಧ್ಯಯನ, ಶ್ರದ್ಧೆ, ತಪಸ್ಸಿನ ಕಾಯಕದ ಫಲಶ್ರುತಿ. ಗುರಿ ಸಾಧಿಸಲು ಏಕಾಗ್ರತೆ ಮುಖ್ಯ ಎಂದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಬದುಕಿನ ಆಯಾಮದಲ್ಲಿ ಪುನೀತ್‌ ರಾಜ್‌ಕುಮಾರ್‌ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಆ ಮೂಲಕ ಜೀವನದಲ್ಲಿ ಸಾರ್ಥಕ ಕಾಣಲು ಸಾಧ್ಯ ಎಂದು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಹೇಳಿದರು. ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಸಾಮಾಜಿಕ ಹರಿಕಾರ ಚಿತ್ರನಟ ಪುನೀತ್‌ ರಾಜ್‌ಕುಮಾರ್‌ರವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ತೆರೆಯ ಮರೆಯಲ್ಲಿ ಸೇವೆಗೈದು ನಮ್ಮೆಲ್ಲರಿಗೂ ಮಾದರಿ ಬದುಕಿನ ಸಂದೇಶ ನೀಡಿದ ರಾಜ್‌ಕುಮಾರ್‌ ಜೀವನ ಚರಿತ್ರೆ ಇತಿಹಾಸ ಪುಟದಲ್ಲಿ ಸೇರಿಕೊಂಡಿದೆ ಅಂತಹ ವ್ಯಕ್ತಿಯ ಹೆಸರಿನಲ್ಲಿ ವಿದ್ಯಾನಿಧಿ ಯೋಜನೆ ರೂಪಿಸಿದ ಪಂಚವರ್ಣ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ, ಅವರ ಅಭಿಮಾನ ಹೊಂದಿದ ಸಂಸ್ಥೆಯ ಸದಸ್ಯ ದಿನೇಶ್ ಆಚಾರ್ ರವರ ಅಭಿಮಾನ ಎಲ್ಲರಿಗೂ ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್ ಪುನೀತ್‌ ರಾಜ್‌ಕುಮಾರ್‌…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಪಘಾತಗಳ ನಡೆದಾಗ ಯಾರನ್ನೋ ಹೊಣೆಯಾಗಿಸುವ ಬದಲು ರಸ್ತೆ ಸಂಚಾರ ನಿಯಮಗಳನ್ನು ಅರಿತು ಅದನ್ನು ಕಡ್ಡಾಯವಾಗಿ ಪಾಲಿಸುವುದು ಮುಖ್ಯ. ಬೈಂದೂರು ವಲಯದಲ್ಲಿ 26,000 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದು ಅವರೆಲ್ಲರ ರಕ್ಷಣೆ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವತಿಯಿಂದ ಕಂಬದಕೋಣೆ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಸೋಮವಾರ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಾಹನಗಳ ಚಾಲಕರು ಹಾಗೂ ಮುಖ್ಯಸ್ಥರಿಗೆ ಹಮ್ಮಿಕೊಂಡ ʼವಿದ್ಯಾರ್ಥಿ ಸುರಕ್ಷತಾ ತರಬೇತಿ ಕಾರ್ಯಾಗಾರʼ ಉದ್ಘಾಟಿಸಿ ಮಾತನಾಡಿದರು. ಬೈಂದೂರು ಪೊಲೀಸ್ ಉಪನಿರೀಕ್ಷಕ ನವೀನ್ ಬೋರ್ಕರ್ ಅವರು ಮಾತನಾಡಿ, ಸಂಚಾರಿ ಅಪಘಾತಗಳು ನಮ್ಮಿಂದಲೇ ನಿಯಂತ್ರಣ ಆಗಬೇಕು. ಸಾಮಾನ್ಯ ಸಂಚಾರಿ ನಿಯಮಗಳ ಅರಿವು ಅಗತ್ಯ. ಅವುಗಳನ್ನು ಪಾಲಿಸಿ ಅವಘಡ ಆಗದಂತೆ ಎಚ್ಚರ ವಹಿಸೋಣ. ಅಪಘಾತ ಆದ ಬಳಿಕದ ಪರಿಣಾಮಗಳು ಭಯಾನಕವಾಗಿರುತ್ತದೆ ಎಂದರು. ರೋಟರಿ ಕ್ಲಬ್…

Read More