Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ಸೇರಿದಂತೆ ಕುಂದಾಪುರ, ಬೈಂದೂರು, ಕೋಟ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮಂಗಳೂರು ನಂತೂರಿನ ಅರ್ಷಿತ್ ಅವಿನಾಶ್ ದೋಡ್ರೆ (23), ಬೈಂದೂರು ಪಡುವರಿಯ ರಿಲ್ವಾನ್ ಅಲಿಯಾಸ್ ರಿಝ್ವಾನ್ (24), ಯಡ್ತರೆಯ ಮಹಮ್ಮದ್ ಅರ್ಬಾಝ್ (23) ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಮೂವರು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ ಗ್ರಾಮದ ಶಾನ್ ಮೆಡಿಕಲ್ ಶಾಪ್, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರು ಎಂಬಲ್ಲಿ ಶ್ರೇಷ್ಠ ಮೆಡಿಕಲ್ ಶಾಪ್ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯಲ್ಲಿರುವ ಮಹಾಂಕಾಳಿ ಜನರಲ್ ಸ್ಟೋರ್ ಹಾಗೂ ಕೋಟಾ ಠಾಣಾ ವ್ಯಾಪ್ತಿಯ ಕೋಟ ಮೂರುಕೈ ಯಲ್ಲಿರುವ ವಿವೇಕ ಮೆಡಿಕಲ್ ಶಾಪ್, ಹಳ್ಳಾಡಿಯಲ್ಲಿರುವ ತಲ್ಲೂರು ಬಾರ್& ರೆಸ್ಟೋರೆಂಟ್, ಅಯ್ಯಂಗಾರ್ ಬೇಕರಿ, ಸಾಯಿಬ್ರಕಟ್ಟೆಯಲ್ಲಿರುವ ನಂದಿಕೇಶ್ವರ ಹೊಟೇಲಿನಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಆರೋಪಿಗಳಿಂದ ಒಟ್ಟು 36,000 ರೂಪಾಯಿ ಮೌಲ್ಯದ ಹಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಉದ್ಯಮಿ ದಿನೇಶ್ ಜಿ ಕಾಮತ್ ಆಯ್ಕೆಯಾಗಿದ್ದಾರೆ. ಜತೆ ಆಡಳಿತ ಮೊಕ್ತೇಸರರಾಗಿ ವೆಂಕಟೇಶ್ ಎಸ್ ಪೈ, ಕಾರ್ಯದರ್ಶಿಯಾಗಿ ಅಶೋಕ್ ಎಂ ಕಾಮತ್ ಖಜಾಂಚಿಯಾಗಿ ಶಂಕರ್ ವಿ ಕಾಮತ್ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಸದಸ್ಯರಾಗಿ ಅರವಿಂದ ಕೆ ಕಾಮತ್, ವಿಟ್ಠಲ ದಾಸ್ ಭಟ್, ಪದ್ಮನಾಭ ಎನ್ ಕಾಮತ್, ರತ್ನಾಕರ ವಿ ಕಾಮತ್, ಗಿರೀಶ್ ಎಂ ಪೈ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ದುರ್ಗಿಕೇರಿ ಪ್ರದೇಶದಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 2.5 ಲಕ್ಷ ರೂ. ದೇಣಿಗೆ ಮಂಜೂರು ಮಾಡಿದ್ದಾರೆ. ಸಹಾಯಧನದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ಸೇವಾ ಟ್ರಸ್ಟ್ನ ಪ್ರಮುಖರಿಗೆ ಗುರುವಾರ ಹಸ್ತಾಂತರಿಸಿದರು. ಯೋಜನೆಯ ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು, ವೀರೇಶ್ವರ ಸೇವಾ ಟ್ರಸ್ಟಿನ ಅಧ್ಯಕ್ಷ ಅಕ್ಷಯ್, ಉಪಾಧ್ಯಕ್ಷ ವಿವೇಕ್ ಬಿ., ಗುತ್ತಿಗೆದಾರ ರಾಜೇಂದ್ರ ಶೇರುಗಾರ್, ಕಾರ್ತಿಕ್, ರಾಘವೇಂದ್ರ ಗಾಣಿಗ, ಯಶವಂತ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಅನಿಲ್, ಪ್ರೀತೇಶ್, ವಿಘ್ನೇಶ್, ದಿಲೀಪ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿ ಗ್ರಾಮದ ದುರ್ಗಿಕೇರಿ ಸಾರ್ವಜನಿಕ ಹಿಂದೂ ರುದ್ರಭೂಮಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಕಳೆದ ಒಂದು ವಾರದ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಚುನಾವಣಾ ಆಯೋಗ ನೀಡಿರುವ ಮಾರ್ಗದರ್ಶನವನ್ನು ಏಪ್ರಿಲ್ 26ರಂದು ನಡೆಯುವ ಮತದಾನ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಾಚು ತಪ್ಪದೇ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿಗೆ ಅವರು ತಿಳಿಸಿದರು. ಅವರು ಉಡುಪಿ ನಗರದ ಸೇಂಟ್ ಸಿಸಿಲಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ದಿನದಂದು ಕರ್ತವ್ಯಕ್ಕೆ ಆಯೋಜಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮೊದಲನೇ ಸುತ್ತಿನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಲೋಕಸಭಾ ಚುನಾವಣೆಯು ಪಾರದರ್ಶಕವಾಗಿ ಮತ್ತು ಮುಕ್ತ, ನ್ಯಾಯಸಮ್ಮತವಾಗಿ ನಡೆಯಬೇಕು ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಚಾಚು ತಪ್ಪದೆ ತಮಗೆ ವಹಿಸಿರುವ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು. ಚುನಾವಣಾ ಕರ್ತವ್ಯದಲ್ಲಿ ಯಾವುದೇ ಒಂದು ಸಣ್ಣ ದೋಷ ವಾಗದಂತೆ, ಜಾಗರೂಕತೆಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು.ಮತದಾನ ಕೇಂದ್ರದಲ್ಲಿ ಅಳವಡಿಸಿರುವ ವೆಬ್ ಕಾಸ್ಟ್ ನಿಂದ ವಿಡಿಯೋ ಚಿತ್ರೀಕರಣವನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ವೀಕ್ಷಣೆ ಮಾಡುತ್ತಿರುತ್ತಾರೆ . ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದರು. ರಾಜ್ಯಮಟ್ಟದ ಚುನಾವಣಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನ್ನಡ ನಾಡು-ನುಡಿ. ನೆಲ-ಜಲ ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಅನವರತವಾಗಿ ಶ್ರಮಿಸುತ್ತಿರುವ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಇತ್ತಿಚಿಗೆ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಸಂಗೀತ ಕ್ಷೇತ್ರದ ಸಾಧಕ ಅನುರಾಗ್ ನಾಯಕ್ ನಾಗರಮಠ ಇವರಿಗೆ ರಾಜ್ಯಮಟ್ಟದ ಬಾಲಜ್ಞಾನಶ್ರೀ ಪುರಸ್ಕಾರ ಪ್ರದಾನಿಸಲಾಯಿತು. ಅನುರಾಗ್ ಇವರು ಪ್ರಸ್ತುತ ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಉದ್ಯಮಿ ರಘುನಂದನ ನಾಯಕ್ ಹಾಗೂ ಅಂಜಲಿ ನಾಯಕ್ ಇವರ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನೊಂದ ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ, ಪಕ್ಷದ ಆಂತರಿಕ ಸಮಸ್ಯೆಯನ್ನು ಶುದ್ದೀಕರಣಗೊಳಿಸಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುವುದೇ ನನ್ನ ಗುರಿ. ಯಾರೇ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು. ಬೈಂದೂರು ಉಪ್ಪುಂದ ಪರಿಚಯ ಹೋಟೆಲ್ ದೇವಕಿ ಸಣ್ಣಯ ಸಭಾಂಗಣದಲ್ಲಿ ಬೈಂದೂರಿನ ರಾಷ್ಟ್ರಭಕ್ತರ ಬಳಗ ಆಯೋಜಿಸಿದ ಬೈಂದೂರು ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ ರಾಜ್ಯದಲ್ಲಿ ಯಡಿಯೂರಪ್ಪನವರ ಕಾರಣದಿಂದಾಗಿ ಬಿಜೆಪಿ ಹೊಂದಾಣಿಕೆ ರಾಜಕಾರಣ ನಡೆಸುತ್ತಿದೆ. ಅವರಿಗೆ ದೇಶದ ಹಾಗೂ ಕಾರ್ಯಕರ್ತರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಗಿದೆ. ಯಡಿಯೂರಪ್ಪ ಆಪ್ತರಿಗೆ ಕಾರ್ಯಕರ್ತರ ವಿರೋಧ ಇದ್ದರೂ ಟಿಕೆಟು ಸಿಗುತ್ತದೆ. ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಹೋರಾಟ ಮಾಡಿದವರನ್ನು ಮೂಲೆಗುಂಪು ಮಾಡಲಾಗುತ್ತದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡದೆ ಕುಟುಂಬ ರಾಜಕಾರಣವನ್ನು ಮುಂದುವರಿಸುವ ಪರಿಪಾಠ ಅಪಾಯಕಾರಿಯಾದುದು ಈ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿಯರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕನ್ನಡ ಸಾಹಿತ್ಯಲೋಕದಲ್ಲೇ ‘ಅತ್ಯಂತ ಪಾರದರ್ಶಕ ಸ್ಪರ್ಧೆ ಮತ್ತು ಪುರಸ್ಕಾರ’ವಾದ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ ಮತ್ತು ಕಾದಂಬರಿ ಪುರಸ್ಕಾರ- 2024’ಕ್ಕೆ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಈ ಸ್ಪರ್ಧೆಯಲ್ಲಿ ರೂ. 2 ಲಕ್ಷ 69 ಸಾವಿರ ಬಹುಮಾನವನ್ನೂ ಘೋಷಿಸಲಾಗಿದೆ. ತಾವುಗಳು ಈ ಸುದ್ದಿಯನ್ನು ನಿಮ್ಮ ಮಾಧ್ಯಮಗಳಲ್ಲಿ ಪ್ರಕಟಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ. ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ” ಹಾಗೂ 2023ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ. 2023ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ 3 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 2 ಸಾವಿರ ರೂಪಾಯಿಗಳನ್ನು ಪ್ರಕಾಶಕರಿಗೂ ನೀಡಲಾಗುವುದು. ಕಥಾ ಸ್ಪರ್ಧೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಏಳು ದಶಕಗಳಿಂದ ವಸ್ತ್ರ ವ್ಯಾಪಾರ ಮೂಲಕ ಕರಾವಳಿ, ಮಲೆನಾಡಿನಲ್ಲಿ ಮನ ಮಾತಾಗಿರುವ, ಗ್ರಾಹಕರ ಪ್ರೀತಿಗೆ ಪಾತ್ರವಾದ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ರುವ ಸತ್ಯನಾಥ ಸ್ಟೋರ್ಸ್ 75ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಅಮೃತ ಮಹೋತ್ಸವದ ಶುಭ ಘಳಿಗೆಯಲ್ಲಿ ಸಂಸ್ಥೆಯ ಎಲ್ಲ ವಸ್ತ್ರಮಳಿಗೆಗಳಲ್ಲಿ ಗ್ರಾಹಕರಿಗೆ “ದಂಪತಿಗಳ ಮಧುಚಂದ್ರ ಪ್ರವಾಸ ಕೂಪನ್” ಕೊಡುಗೆಯನ್ನು ಆಯೋಜಿಸಲಾಗಿದೆ. ಮದುವೆಯ ಜವಳಿ ಖರೀದಿಸುವ ಗ್ರಾಹಕರಿಗೆ ಕೂಪನ್ ನೀಡಲಾಗುತ್ತದೆ. ಅದೃಷ್ಟಶಾಲಿ ವಿಜೇತರಿಗೆ ಮಧುಚಂದ್ರ ಪ್ರವಾಸ ಯೋಜನೆಯನ್ನು ಕಲ್ಪಿಸಲಿದೆ. ಈ ವರ್ಷ ಜುಲೈ ತಿಂಗಳಲ್ಲಿ ಅದೃಷ್ಟಶಾಲಿಗಳ ಡ್ರಾ ನಡೆಯಲಿದೆ. ತೀರ್ಥಹಳ್ಳಿ, ಬ್ರಹ್ಮಾವರ, ಕೊಪ್ಪ ಎಲ್ಲ ಮಳಿಗೆಗಳಲ್ಲಿ ಕೂಪನ್ ನೀಡಲಾಗುತ್ತದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತ್ರಗಳಿಗೆ ಭರಪೂರ ರಿಯಾಯಿತಿ ನೀಡಲಾಗುತ್ತಿದೆ. ಪ್ರಮುಖ ಕಂಪನಿಗಳ ಬ್ರಾಂಡೆಡ್, ಸಾಂಪ್ರದಾಯಿಕ, ಆಧುನಿಕ ಶೈಲಿಯ ಬಟ್ಟೆಬರೆಗಳು ಎಲ್ಲ ವಯಸ್ಸಿನ ವರಿಗೆ ಒಪ್ಪುವ ನವೀನ ಬಟ್ಟೆಗಳ ಪರಿಪೂರ್ಣ ಮಳಿಗೆಗೆ ಸತ್ಯನಾಥ ಸ್ಟೋರ್ಸ್ ಪ್ರಖ್ಯಾತಿ ಪಡೆದಿದೆ. ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಅಪಾರ ಸಂಗ್ರಹದ ಪರಿಪೂರ್ಣ ಮದುವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್ʼನಲ್ಲಿ ಎಪ್ರಿಲ್ 1 ರಿಂದ ಚೆಸ್ ತರಬೇತಿ ಪುನರಾರಂಭಗೊಳ್ಳಲಿದ್ದು, ರಾಷ್ಟ್ರೀಯ ತರಬೇತುದಾರರಾದ ನರೇಶ್ ರಾವ್ ಮತ್ತು ಗುರುರಾಜ್ ಶೆಟ್ಟಿಯವರು ತರಬೇತಿಯನ್ನು ನೀಡಲಿದ್ದಾರೆ. ಈಗಾಗಲೇ ಕುಂದಾಪುರ ತಾಲ್ಲೂಕಿನ ಒಟ್ಟು 958 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು ಜಮ್ ಶೆಡ್ ಪುರದಲ್ಲಿ ನಡೆದ ಟಾಟಾ ಸ್ಟೀಲ್ ಏಷ್ಯನ್ ಜೂನಿಯರ್ ಓಪನ್ ಮತ್ತು ಗರ್ಲ್ಸ್ ಚೆಸ್ ಚಾಂಪಿಯನ್ಶಿಪ್-2023 ರಲ್ಲಿ ನಮ್ಮ ವಿದ್ಯಾರ್ಥಿಗಳಾದ ದಿಶಾ ಯು.ಎ ( ಉಡುಪಿ), ದಿವ್ಯಾ ( ಕುಂದಾಪುರ) ತೇಜಸ್ ಕೆ ( ಬೆಂಗಳೂರು)ಮತ್ತು ನಿಶಾಂತ್ ಡಿಸೋಜಾ (ಕೋಡಿ, ಕುಂದಾಪುರ) ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು ಪ್ರಸಕ್ತ ವರ್ಷದಲ್ಲಿ ಕ್ರಿಸಲ್ ವಿಯೊಲಾ ವಾಸ್ (ಮಂಗಳೂರು) ಪ್ರದೀಪ್ ಪಾಟೀಲ್(ಕಲಬುರಗಿ), ಓಸ್ವಿನ್ ಜೋಶುವಾ ಡಿಮೆಲ್ಲೊ (ಕೋಡಿ,ಕುಂದಾಪುರ) ತೇಜಸ್ ಎಂ ಶೆಣೈ (ತೀರ್ಥಹಳ್ಳಿ) ಕಾರ್ತಿಕ್ ಆರ್ (ಕುಂದಾಪುರ) ದಿಶಾ ಯು.ಎ ( ಉಡುಪಿ) ಮತ್ತು ಛಾಯ ಸಿ ಪೂಜಾರಿ (ಕುಂದಾಪುರ) ರಾಷ್ಟಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಕಾರಾತ್ಮಕ ಅಂಶಗಳೇ ಕೇಳಿಬರುತ್ತಿದ್ದ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಮೂಲಕ ಸುವರ್ಣ ಯಾತ್ರೆಯಲ್ಲಿ ಆರಂಭವಾಗಿದೆ. ಇಂದು ಜಗತ್ತು ಭಾರತವನ್ನು ನೋಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಜರುಗಿದ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ನೂತನ ಮಂಡಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿಯವರ ಸಂಕಲ್ಪ, ತಪಸ್ಸು ಮುಂದೆ ದೇಶಕ್ಕೆ ಮತ್ತಷ್ಟು ಒಳ್ಳೆಯದನ್ನೇ ಮಾಡಲಿದೆ. ಅವರು ದೇಶಕ್ಕಾಗಿ ಕಂಡ ಕನಸು ನನಸಾಗಬೇಕಿದ್ದರೆ ಪ್ರತಿ ಕಾರ್ಯಕರ್ತನೂ ನಿಷ್ಠೆಯಿಂದ ತೊಡಗಿಸಿಕೊಂಡ ಈ ಚುನಾವಣೆಯಲ್ಲಿ ಗೆದ್ದುಬರಬೇಕಾಗಿದೆ ಎಂದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಲಾಯಿತು. ಈ ವೇಳೆ ಮಂಡಲದ ನೂತನ ಅಧ್ಯಕ್ಷರಿಗೆ ಪಕ್ಷದ ಧ್ವಜ ಹಸ್ತಾಂತರಿಸಲಾಯಿತು. ಪದಾಧಿಕಾರಿಗಳನ್ನು ಶಾಲು ಹಾಕಿ ಅಭಿನಂದಿಸಲಾಯಿತು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು…

Read More