ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಆಯೋಜನೆಯಲ್ಲಿ ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಸಾಂಸ್ಕೃತಿಕ ಉತ್ಸವ ದಿಗಣ ಕಾರ್ಯಕ್ರಮ ಇತ್ತೀಚಿಗೆ ಜರುಗಿತು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರೋಟರಿ ಕ್ಲಬ್ ಬೈಂದೂರು ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾವಗೀತೆ, ಯುಗಳ ಗೀತೆ ಹಾಗೂ ಸಮೂಹ ನೃತ್ಯ ವಿಭಾಗದಲ್ಲಿ ಬೈಂದೂರು ರೋಟರಿ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ರೋಟರಿ ಕ್ಲಬ್ ಕುಂದಾಪುರ ರನ್ನರ್‌ಅಪ್ ಆಯಿತು.
ಪ್ರಶಸ್ತಿ ಸ್ವೀಕರಿಸುವ ವೇಳೆ ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷರಾದ ಮೋಹನ್ ರೇವಣ್ಕರ್, ಪೂರ್ವಾಧ್ಯಕ್ಷರುಗಳಾದ ಐ. ನಾರಾಯಣ, ಡಾ. ಪ್ರವೀಣ್ ಶೆಟ್ಟಿ, ಪ್ರಸಾದ್ ಪ್ರಭು, ಸುಧಾಕರ ಪಿ, ಮಂಜುನಾಥ ಮಹಾಲೆ, ಉದಯ್ ಆಚಾರ್, ಕಾರ್ಯದರ್ಶಿ ಸುನಿಲ್ ಹೆಚ್. ಜಿ., ವಿವಿಧ ಸ್ಪರ್ಧಿಗಳು ಹಾಗೂ ಬೈಂದೂರು ರೋಟರಿ ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಅಧ್ಯಕ್ಷ ಶೇಖರ್ ಎನ್. ಶೆಟ್ಟಿ ವಹಿಸಿದ್ದರು. ರೋಟರಿ ಜಿಲ್ಲಾ ಗವರ್ನರ್ ದೇವ್ ಆನಂದ್, ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ರೋಟರಿ ಜಿಲ್ಲಾ ತರಬೇತುದಾರ ರಾಜಾರಾಮ್ ಭಟ್, ಜಿಲ್ಲಾ ಕೌನ್ಸಿಲರ್ ಜ್ನಾನವಸಂತ ಶೆಟ್ಟಿ, ಜಿಲ್ಲಾ ಸಾಂಸ್ಕೃತಿಕ ಸಮಿತಿ ಛೇರ್ಮನ್ ಜಯಪ್ರಕಾಶ್ ಶೆಟ್ಟಿ ವೈ., ಸಹಾಯಕ ಗವರ್ನರ್ ಡಾ. ಬಿ. ರಾಜೇಂದ್ರ ಶೆಟ್ಟಿ, ಜಿಲ್ಲಾ ಸಾಂಸ್ಕೃತಿಕ ಸಮಿತಿ ವೈಸ್ ಛೇರ್ಮನ್ ಧರ್ಮೇಂದ್ರ ಸಿಂಗ್, ವಲಯ ಸೇನಾನಿಗಳಾದ ಮಹೇಂದ್ರ ಶೆಟ್ಟಿ, ವೆಂಕಟೇಶ್ ನಾವುಂದ, ಪ್ರದೀಪ್ ಡಿ.ಕೆ, ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ರವಿಶಂಕರ್ ಕೆ., ಝೋನ್ 1 ಕಲ್ಚರಲ್ ಕೋ-ಆರ್ಡಿನೇಟರ್ ಶಶಿಧರ್ ಶೆಟ್ಟಿ ಎಚ್., ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯದರ್ಶಿ ನಳೀನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕುಂದಾಪುರ ಮಿಟ್ಟೌನ್ ಕಾರ್ಯದರ್ಶಿ ಉದಯ ಶೆಟ್ಟಿ ಆಜ್ರಿ, ಸಚಿನ್ ಶೆಟ್ಟಿ ಹುಂಚನಿ ಕಾರ್ಯಕ್ರಮ ನಿರೂಪಿಸಿದರು.