ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ವಾರದ ಸಭೆ – ಕುಟುಂಬ ಸಮ್ಮಿಲನ ಕಾರ್ಯಕ್ರಮ ಇತ್ತಿಚಿಗೆ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವೀರಣ್ಣ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ಮೆರಡಿ ಸುಖಮಯ ದಾಂಪತ್ಯ ಜೀವನದ ಬಗ್ಗೆ ಬಹಳ ಸುಂದರವಾಗಿ ಮಾತನಾಡಿದರು ಹಾಗೆ ವಿಶೇಷ ಆಹ್ವಾನಿತರಾದ ಹೆಸರಾಂತ ಹೃದ್ರೋಗ ತಜ್ಞರಾದ ಡಾ. ಜೈ ಶಂಕರ್ ಮಾರ್ಲ ಇವರು ಮುತ್ತಯ್ಯಶೆಟ್ಟಿಯವರ ಹಾಗೂ ಅವರ ಸೇವೆ ಬಗ್ಗೆ ಮಾತನಾಡಿದರು. ಆವರ್ಶೆ ಮತ್ತಯ್ಯ ಶೆಟ್ಟಿ ಮತ್ತು ಉಷಾ ಮುತ್ತಯ್ಯ ಶೆಟ್ಟಿ ದಂಪತಿಯರಿಗೆ 50ರ ಸಂಭ್ರಮವನ್ನು ಬಹಳ ಸರಳ, ಸುಂದರವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಕುರಿತು ತಮ್ಮ ಅನುಭವವನ್ನು ಆವರ್ಶೆ ಮುತ್ತಯ್ಯ ಶೆಟ್ಟಿ ಹಂಚಿಕೊಂಡರು ಹಂಚಿಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ ಅಧ್ಯಕ್ಷ ನುಡಿಯನಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರದ ಎಲ್ಲಾ ಸದಸ್ಯರು ಹಾಗೂ ಆನ್ಸ್ ಕ್ಲಬ್ಬಿನ ಅಧ್ಯಕ್ಷ ಸ್ಮಿತಾ ವೆಂಕಟೇಶ ಮತ್ತು ಎಲ್ಲಾ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಹಿಂಬದಿ ಸವಾರ ಮೃತಪಟ್ಟ ಘಟನೆ ತ್ರಾಸಿ ಗ್ರಾಮದ ಆನಗೋಡು ಸಮೀಪ ನಡೆದಿದೆ. ಕುಂದಾಪುರದ ನಿವಾಸಿ ಭಾಸ್ಕರ (33) ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟ ದುರ್ದೈವಿ. ಭಾನುವಾರ ತಡರಾತ್ರಿ ವೇಳೆಗೆ ಮೊವಾಡಿ-ತ್ರಾಸಿ ರಸ್ತೆಯಲ್ಲಿ ರಿಕ್ಷಾ ಚಾಲಕ ಗುರುರಾಜ ಪೂಜಾರಿ ಎನ್ನುವರು ಭಾಸ್ಕರ ಅವರನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದಾಗ ವೇಗದಲ್ಲಿದ್ದ ರಿಕ್ಷದ ಬ್ರೇಕ್ ಒಮ್ಮೆಲೆ ಹಾಕಿದ್ದು ರಸ್ತೆ ಸಮೀಪದ ತೆಂಗಿನ ಮರಕ್ಕೆ ರಿಕ್ಷಾ ಡಿಕ್ಕಿಯಾಗಿದೆ. ಈ ಸಂದರ್ಭ ರಿಕ್ಷಾ ಹಿಂಭಾಗ ಕುಳಿತ ಭಾಸ್ಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರ ಸಹಕಾರದಲ್ಲಿ ಗಂಗೊಳ್ಳಿ ಆಪತ್ಬಾಂಧವ 24*7 ಅಂಬುಲೆನ್ಸ್ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಡಿದ್ದಾರೆ ಎಂದು ತಿಳಿದುಬಂದಿದೆ. ರಿಕ್ಷಾ ಚಾಲಕ ಗುರುರಾಜ ಪೂಜಾರಿ ಅವರಿಗೂ ಗಾಯಗಳಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಮೇ 29: ನಿರೀಕ್ಷೆಯಂತೆ ಉದ್ಯೋಗ ದೊರಕದ ಕಾರಣ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಲ್ತೋಡು ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸಿಗೇಅಡಿ ನಿವಾಸಿ ಪ್ರಮೋದಾ ಶೆಟ್ಟಿ ಅವರ ಪುತ್ರಿ ಗೌತಮಿ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಎಂ.ಕಾಂ. ಪದವೀಧರೆಯಾದ ಗೌತಮಿ ಇತ್ತೀಚೆಗೆ ಬ್ಯಾಂಕ್ ಪರೀಕ್ಷೆ ಮತ್ತು ಕಂಪೆನಿಯಲ್ಲಿ ಉದ್ಯೋಗ ಪಡೆಯಲು ಪರೀಕ್ಷೆಗಳನ್ನು ಬರೆದರೂ ಕೂಡ ಆಕೆಗೆ ಉದ್ಯೋಗ ದೊರೆತಿರಲಿಲ್ಲ. ಹೀಗಾಗಿ ಯುವತಿ ಮನನೊಂದು ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣಿಗೆ ಶರಣಾಗಿದ್ದ ಗೌತಮಿ ಅವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಯೊಬ್ಬ ಪ್ರಜೆಯು ತನ್ನ ವೃತ್ತಿ ಪ್ರವೃತ್ತಿಯಲ್ಲಿ ಸಮಾಜಕ್ಕೆ ಅನುಕೂಲವಾಗುವ ಸಹಕಾರ ನೀಡಿದರೆ ಸಮಾಜದ ಅಭಿವೃದ್ಧಿಗೆ ಆತ ಕೊಡುಗೆ ನೀಡಿದಂತಾಗುತ್ತದೆ. ಇದರಿಂದ ಸರಕಾರದ ಸಹಾಯ ನಿರೀಕ್ಷೆ ಮಾಡದೇ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಹೇಳಿದರು. ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಏರ್ಪಡಿಸಲಾದ ಸಮಾಜಕ್ಕೆ ನಮ್ಮ ಕೊಡುಗೆ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಆರ್ಥಿಕ, ಸಾಮಾಜಿಕ ತೊಂದರೆ ಗೊಳಗಾದವರಿಗೆ ಸಹಾಯ ಮಾಡುವು ದರೊಂದಿಗೆ ಅಸಹಾಯಕ ಜೀವನ ನಡೆಸುವವರಿಗೆ ಮುನ್ನಡೆಯಲು ಮಾರ್ಗದರ್ಶನ ಮಾಡಿದರೆ ಅದೇ ದೊಡ್ಡ ಕೊಡುಗೆಯಾಗುತ್ತದೆ ಎಂದು ಹಲವು ಘಟನೆಗಳನ್ನು ಉದಾಹರಿಸಿ ಅವರು ಹೇಳಿದರು. ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಕೆ.ಪಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ವೈಯಕ್ತಿಕವಾಗಿಯೂ, ಸಂಘ ಸಂಸ್ಥೆಗಳ ಮೂಲಕವೂ ಅರ್ಹರನ್ನು ಗುರುತಿಸಿ ಸಹಾಯ ಮಾಡಿದಾಗ, ಸಹಾಯ ಪಡೆದವರು ಏಳಿಗೆ ಹೊಂದಿದಾಗ ಸಂತಸವಾಗುತ್ತದೆ ಎಂದರು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ವಾಸುದೇವ ಕಾರಂತ ಮಾತನಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸುಂದರ ಬೈಂದೂರನ್ನು ಸಮೃದ್ಧ ಬೈಂದೂರನ್ನಾಗಿ ರೂಪಿಸಲು ಅಧಿಕಾರಿಗಳ ಸಹಕಾರ ಬಹುಮುಖ್ಯವಾಗಿದ್ದು, ಎಲ್ಲರೂ ಜೊತೆಯಾಗಿ ಹೊಸ ಕಲ್ಪನೆಯನ್ನು ಕಟ್ಟಿ ಬೈಂದೂರು ಅಭಿವೃದ್ಧಿಗೆ ಶ್ರಮಿಸಬೇಕಿದೆ. ಸಿಬ್ಬಂದಿ ಕೊರತೆ, ಅಧಿಕಾರ ವ್ಯಾಪ್ತಿಯನ್ನು ನೆಪವಾಗಿಸಿಕೊಂಡು ಅಭಿವೃದ್ಧಿಗೆ ಕುಂಠಿತವಾಗಲು ಬಿಡಬಾರದು. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ, ನಿಮ ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಬೆಳಕು ಚೆಲ್ಲುವ ಜವಾಬ್ದಾರಿ ನನ್ನದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಬೈಂದೂರು ಪಟ್ಟಣ ಪಂಚಾಯತ್ ಕಛೇರಿಯಲ್ಲಿ ಶುಕ್ರವಾರ ಹಮಿಕೊಂಡಿದ್ದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಂದೂರು ವಿಧಾನಸಭಾ ಕ್ಷೇತ್ರ ನೈಸರ್ಗಿಕವಾಗಿ ಸಮೃದ್ಧವಾದ ಪ್ರದೇಶ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇದು ಮುಂದೆ ಆಗಬಾರದು. ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ಜೊತೆ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಆದ್ಯತೆ, ಆರೋಗ್ಯ, ನಿವೇಶನ, ಹಕ್ಕುಪತ್ರ, ಮೀನುಗಾರಿಕೆ, ಕೃಷಿ, ಪಶಸಂಗೋಪನೆಗೆ ಸಂಬಂಧಿತ ಸಮಸ್ಯೆಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2022-23ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಗುಣಾತ್ಮಕ ಫಲಿತಾಂಶದಲ್ಲಿ ಕುಂದಾಪುರ ವಲಯ ಮಟ್ಟದಲ್ಲಿ ಶಂಕರನಾರಾಯಣದ ಮದರ್ ತೆರೆಸಾ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶಂಕರನಾರಾಯಣ ಮದರ್ ತೆರೆಸಾ ಮೆಮೋರಿಯಲ್ ಸಂಸ್ಥೆಯು ಕಳೆದ 25ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದೆ. ಹತ್ತನೇ ತರಗತಿಯಲ್ಲಿ ಅನೇಕ ವರ್ಷಗಳಿಂದ ಉತ್ತಮ ಫಲಿತಾಂಶವನ್ನು ನೀಡುತ್ತಾ ಬಂದಿದ್ದು ಈ ವರ್ಷವೂ ಸಹ ಶೇಕಡ 100 ಫಲಿತಾಂಶದೊಂದಿಗೆ ಶೇಕಡ 95.17 ಗುಣಾತ್ಮಕ ಫಲಿತಾಂಶ ದಾಖಲಿಸುವುದರೊಂದಿಗೆ ಕುಂದಾಪುರ ವಲಯ ಮಟ್ಟದಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮಂಗಳೂರು: ಅರುಣ್ಯ ಫೌಂಡೇಶನ್ ಮತ್ತು ದಾಸ್ ಕುಡ್ಲ ಇವೆಂಟ್ಸ್ ಸಹಯೋಗದಲ್ಲಿ ಎಲ್ಲಾ ವಯೋಮಿತಿಯ ಸ್ಪರ್ಧಿಗಳನ್ನು ಹೊಂದಿರುವಂತಹ ಜಗತ್ತಿನ ಪ್ರಪ್ರಥಮ ಪ್ರಯೋಗ, ಕರಾವಳಿ ಕರ್ನಾಟಕ ಮೆಗಾ ಮ್ಯೂಸಿಕಲ್ ರಿಯಾಲಿಟಿ ಶೋ, ’ಸಿಂಗರ್ಸ್ ಪ್ರೀಮಿಯರ್ ಲೀಗ್ (ಎಸ್ಪಿಎಲ್ 23): ಕರಾವಳಿ ಕೋಯಲ್ ಚಾಂಪಿಯನ್ಸ್ 2023’ ಕಾರ್ಯಕ್ರಮವು ಮೇ 31 ಮತ್ತು ಜೂನ್ 1 ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಮೇ 31ರಂದು ಮೊದಲ ಸುತ್ತಿನ ಸಂಗೀತ ಕಾರ್ಯಕ್ರಮ ಹಾಗೂ ಎರಡನೇ ದಿನ ಜೂನ್ 1ರಂದು ಬೆಳಗ್ಗೆ 8:30ಕ್ಕೆ ಸೆಮಿಫೈನಲ್ ನಡೆಯಲಿದೆ. ಜೂ.1ರಂದು ಮಧ್ಯಾಹ್ನ 12:30ಕ್ಕೆ ಅಂತಿಮ ಸುತ್ತು ಹಾಗೂ ಸಂಜೆ, ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣಾ ಸಮಾರಂಭ, ’ಪಂಚಭಾಷಾ ರಸಮಂಜರಿ’ ನಡೆಯಲಿದೆ. ಎಸ್ಪಿಎಲ್ 23ರ ಆಯೋಜನೆ ಕಳೆದ ನವೆಂಬರಿನಿಂದ ನಡೆದಿದ್ದು, ರಾಜ್ಯದೆಲ್ಲೆಡೆಯಿಂದ ಒಟ್ಟು 453 ಸ್ಪರ್ಧಿಗಳು ಮೊದಲ ಹಾಗೂ ಮೆಗಾ ಅಡಿ?ನ್ನಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಒಟ್ಟು 72 ಸ್ಪರ್ಧಿಗಳು ಆಯ್ಕೆಯಾಗಿದ್ದು, 9 ತಂಡಗಳು ಚಾಂಪಿಯನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಹೋದ್ಯೋಗಿ ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಕುಂದಾಪುರ ಯುವಕನೋರ್ವನನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದ ರಘುರಾಮ್ ಬಂಧಿತ ಆರೋಪಿ. ನಿಸರ್ಗ ಗಾರ್ಡನ್ನಲ್ಲಿ ಕ್ಯಾಟರಿಂಗ್ ನಡೆಸುತ್ತಿದ್ದ ರಘುರಾಮ್, ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಬಾಗ್ ಮನೆ ಟೆಕ್ಪಾರ್ಕ್ ಹಾಗೂ ಮತ್ತಿತರ ಕಡೆಗಳಿಗೆ ಕ್ಯಾಟರಿಂಗ್ ವ್ಯವಸ್ಥೆ ಕಲ್ಪಿಸುತ್ತಿದ್ದ. ಸಂತ್ರಸ್ತೆ ಕ್ಯಾಟರಿಂಗ್ ನ ಕ್ಯಾಷಿಯರ್ ಆಗಿದ್ದರೆ, ಆಕೆಯ ಸ್ನೇಹಿತೆ ಕೌಂಟರ್ ಮ್ಯಾನೇಜರ್ ಆಗಿದ್ದರು. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತೆ ಹಾಗೂ ಆರೋಪಿ ರಘುರಾಮ್ ನಿಸರ್ಗ ಗಾರ್ಡನ್ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೇ 12ರಂದು ದೂರುದಾರೆ ಸ್ನಾನ ಮಾಡಲು ಬಾತ್ ರೂಮಿಗೆ ಹೋಗಿದ್ದು, ಆಗ ಆರೋಪಿಯು ಬಾತ್ ರೂಮಿನ ಗೋಡೆಯ ಮೇಲಿನಿಂದ ಆಕೆ ಸ್ನಾನ ಮಾಡುವ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ. ಅದನ್ನು ಗಮನಿಸಿದ ಆಕೆಯ ಸ್ನೇಹಿತೆ ಜೋರಾಗಿ ಕೂಗಿಕೊಂಡಿದ್ದಾಳೆ. ನಂತರ ಆರೋಪಿಯ ಮೊಬೈಲ್ ಕಸಿದುಕೊಂಡಾಗ ಇಬ್ಬರು ಯುವತಿಯರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು, ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ನೂತನ ಶಾಸಕ ಬೈಂದೂರಿನ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮನವಿ ಮಾಡಿದ್ದು ಮನವಿಗೆ ಮಂಗಳೂರು ವಿ.ವಿ. ಸ್ಪಂದಿಸಿದೆ. ಪದವೀಧರ ತನ್ನ 6 ಸೆಮಿಸ್ಟರ್ಗಳ ಅಂಕಪಟ್ಟಿಗಳನ್ನು ಪರಿಶೀಲಿಸಲು 9 ಸಾವಿರ ರೂ. ಮೂಲ ಶುಲ್ಕ ಹಾಗೂ ಇತರ ಶುಲ್ಕ ಸೇರಿ ಒಟ್ಟು 10,800 ರೂ. ಪಾವತಿಸಬೇಕಾಗುತ್ತದೆ. ಇದು ಮಂಗಳೂರು ವಿ.ವಿ.ಯಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರಮುಖವಾಗಿ ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಹೊರೆಯಾಗಿತ್ತು. ತುಮಕೂರು ರಾಜ್ಯದಲ್ಲಿಯೇ 6 ವಿಷಯಗಳ ಅಂಕಪಟ್ಟಿಗೆ ಕೇವಲ 501 ರೂ. ಶುಲ್ಕವನ್ನಷ್ಟೇ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಮಂಗಳೂರು ವಿ.ವಿ.ಯ ಉಪ ಕುಲಪತಿಗಳು ಉತ್ತಮ ನಿರ್ಧಾರವನ್ನು ಕೈಗೊಂಡು, ಕರಾವಳಿಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕು ಅನುಕೂಲ ಎಂದು ಆಗ್ರಹಿಸಿದ್ದರು.…
ಕುಂದಾಪ್ರ ಡಾಟ್ ಕಾಮ ಸುದ್ದಿ.ಉಡುಪಿ,ಮೇ20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಿ.ಎಂ ಕಿಸಾನ್ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇ-ಕೆವೈಸಿ ಮಾಡಿಸಿಕೊಳ್ಳದ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತು ಬಿಡುಗಡೆಯಾಗುವುದಿಲ್ಲ. ಕೃಷಿ ಇಲಾಖೆಯ ವತಿಯಿಂದ ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದ್ದು, ಇದು ಕೊನೆಯ ಅವಕಾಶವಾಗಿದೆ. ಕೂಡಲೇ ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಕುಂದಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
