Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ನಂತೆ ಮಿತ್ರ ಸಂಗಮ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಸಮಾಜದಲ್ಲಿ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಮನುಷ್ಯನ ಹುಟ್ಟು ಸಾವುಗಳ ನಡುವೆ ಕೇವಲವಾಗಿ ಬದುಕುವುದಕ್ಕಿಂತ ಸಮಾಜದಲ್ಲಿ ಬಡವರ ಕಣ್ಣೀರು ಒರೆಸುವ ಕೆಲಸಗಳನ್ನು ಮಾಡಬೇಕು. ಜನರ ಸೇವೆಯೇ ದೊಡ್ಡ ದೇವರ ಸೇವೆ. ನಾವು ಗಳಿಸಿದ ಸಂಪತ್ತಿನಲ್ಲಿ ಕೆಲವೊಂದು ಭಾಗವನ್ನು ಸಮಾಜಕ್ಕೆ ನೀಡಿದಾಗ ದೊಡ್ಡ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರಸಂಗಮದ ರಜತಮಹೋತ್ಸವ ಸಮಾರಂಭದ ರಜತಪಥ ನೆರಳು ಬೆಳಿಕಿನ ಸಹಯಾನ 3 ದಿನಗಳ ಕಾರ್ಯಕ್ರಮವನ್ನು ಶುಕ್ರವಾರ ಬೀಜಾಡಿಯ ಮಿತ್ರಸೌಧದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಸಂಸ್ಥೆಯ ವೆಬ್ಸೈಟ್ ನ್ನು ಬಿಡುಗಡೆಗೊಳಿಸಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಿಕ್ಷಣ ಪ್ರೇಮಿ ಬಿ.ಶೇಷಗಿರಿ ಗೋಟ, ಕೋಟಿಲಿಂಗೇಶ್ವರ ದೇವಳದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ನವದೆಹಲಿ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತು ಸಂಗ್ರಹಾಲಯ, ಬೆಂಗಳೂರು ಮತ್ತು ಕೇರಳ ಸರ್ಕಾರದ ಶಿಕ್ಷಣ ಸಚಿವಾಲಯವು ಕೇರಳದ ತ್ರಿಶೂರಿನಲ್ಲಿ ಜಂಟಿಯಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಸಿದ್ಧಾಪುರದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಪೂರ್ಣಿಮಾ ಭಟ್ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಸ್ತು ಪ್ರದರ್ಶನದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಪೂರ್ಣಿಮಾ ಭಟ್ ಅವರು ರೂಪಿಸಿದ ಗಣಿತದ ಸ್ವಕಲಿಕೆಯ ಸಾಮಗ್ರಿಗಳನ್ನು ಮೆಚ್ಚಿದ ತೀರ್ಪುಗಾರರು ಗಣಿತ ಕಲಿಕೆಯ ಕುರಿತು ಆಸಕ್ತಿ ಮತ್ತು ಪ್ರೀತಿ ಮೂಡಿಸಬಲ್ಲ ಈ ಸಾಮಗ್ರಿಗಳ ಬಳಕೆಯ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಸಂಕಲನ ಹಾಗೂ ಗುಣಾಕಾರದಲ್ಲಿ ಬರುವ ಚಿಹ್ನೆಗಳ ಪರಿಕಲ್ಪನೆ ಮೂಡಿಸುವುದು, ತ್ರಿಭುಜದ ಮೂರು ಕೋನಗಳ ಒಟ್ಟು ಮೊತ್ತ 180° ಎಂಬುದನ್ನು ಚಟುವಟಿಕೆಯ ಮೂಲಕ ತಿಳಿಸಿ ಕೊಡುವುದು, ಬೀಜೋಕ್ತಿಗಳ ಗುಣಾಕಾರ ಮಾಡುವುದು, ಬೀಜೋಕ್ತಿಗಳ ಸಾಮಾನ್ಯ ಅಪವರ್ತನ ಕಂಡು ಹಿಡಿಯುವುದು, ಭಿನ್ನರಾಶಿಗಳ ಕುರಿತು ಸ್ಪಷ್ಟ ಪರಿಕಲ್ಪನೆ ಮೂಡಿಸುವುದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇತ್ತಿಚಿಗೆ ತಾಲೂಕಿನ ಕಳವಾಡಿಯಲ್ಲಿ ಜರುಗಿದ ಫ್ರೆಂಡ್ಸ್ ಮಾರಿಕಾಂಬಾ ಟ್ರೋಪಿ 2023ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಉಚಿತ ಸೈಕಲ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿ, ನಿವೃತ್ತ ವಿಜಯ್ ಬ್ಯಾಂಕ್ ಅಧಿಕಾರಿ ಎಚ್ ವಸಂತ ಹೆಗ್ಡೆ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರು ರಾಜೀವ್ ಶೆಟ್ಟಿ ಅಧ್ಯಕ್ಷರಾದ ಆದೀಶ್ ದೇವಾಡಿಗ ಕಾರ್ಯದರ್ಶಿ ಪ್ರವೀಣ್ ಕುಮಾರ್ ಸಂಸ್ಥೆಯ ಸರ್ವ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಕ್ರಿಕೆಟ್ ಪಂದ್ಯಾಟದದಲ್ಲಿ ಪ್ರಥಮ ನ್ಯೂ ಫ್ರೆಂಡ್ಸ್ ಕೋಣಿ ಹಾಗೂ ದ್ವಿತೀಯ 8 ಸ್ಟಾರ್ ಉಪ್ಪುಂದ ವಿಜಯಿಶಾಲಿ ಆಗಿರುತ್ತದೆ. ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಬಿ ಎಸ್ ಎನ್ ಎಲ್ ನೌಕರರು ರಾಮ ಮೊಗವೀರ ಕೃಷ್ಣ ರೆಡ್ಡಿ ಮತ್ತು ಪ್ರಶಸ್ತಿಯನ್ನು ಹಸ್ತಾಂತರಿಸಿದ.ರು ಈ ಸಂದರ್ಭದಲ್ಲಿ ಫ್ರೆಂಡ್ಸ್ ಮಾರಿಕಾಂಬ ಕ್ರಿಕೆಟರ್ಸ್ ಸರ್ವ ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಿವೃತ್ತಿ ವಿಜ್ಞಾನ ಶಿಕ್ಷಕ ಬಸೂರು ಮೂರುಕೈ ಬಳಿ ನಿವಾಸಿ ಗಂಗಾಧರ ಐತಾಳ್ (76) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಹೊಂದಿದರು. ಮೂಲತಃ ಕೋಡಿ ಕನ್ಯಾನದವರಾದ ಗಂಗಾಧರ್ ಐತಾಳ್ ಅವರು, ಕುಂದಾಪುರ ಸೈಂಟ್ ಮೇರೀಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಜ್ಞಾನ ಮಾದರಿ ತಯಾರಿಸಿ, ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವರ ಕಾರ್ಯವಿಧಾನ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಐತಾಳ್ ಮಾಸ್ಟ್ರು ಎಂದೇ ಪ್ರಸಿದ್ಧರಾಗಿದ್ದರು. ಅವರು ನಿವೃತ್ತಿ ಅನಂತರ ಗುರುಕುಲ ಪಬ್ಲಿಕ್ ಶಾಲೆಯಲ್ಲೂ ಸೇವೆ ಸಲ್ಲಿಸಿದ್ದರು. ಮಕ್ಕಳಿಗಾಗಿ ಖಗೋಳ ವಿಜ್ಞಾನ ಎನ್ನುವ ಪುಸ್ತಕ ಬರೆದಿದ್ದರು. ಮೃತರು ಪತ್ನಿ ಸಾಹಿತಿ ಗಾಗೈ ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ. ಐತಾಳ್, ಪುತ್ರಿಯರಾದ ಕೆಎಂಸಿ ವೈದ್ಯೆ ಡಾ. ರಮ್ಯತಾ, ಎಂಜಿನಿಯರ್ ಸುಶ್ಮಿತಾ ಅವರನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ರಶ್ಮಿ ಎಸ್. ಆರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಮೂಲತಃ ಮಂಗಳೂರಿನವರಾದ ರಶ್ಮಿ ಅವರು 2014ನೇ ಬ್ಯಾಚ್ ಕೆ.ಎ.ಎಸ್ ಅಧಿಕಾರಿ. 2017ರಲ್ಲಿ ದ.ಕ ಜಿಲ್ಲೆಯಲ್ಲಿ ಪ್ರೊಬೇಷನರಿ ಮುಗಿಸಿ, 2019ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದು, ಪ್ರಸ್ತುತ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕುಂದಾಪುರದ ಉವವಿಭಾಗಾಧಿಕಾರಿಯಾಗಿದ್ದ ಕೆ. ರಾಜು ಅವರು ಮಂಗಳೂರು ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಮುದಾಯ ಕುಂದಾಪುರದ ತಿಂಗಳ ಓದು ಕಾರ್ಯಕ್ರಮ ಇತ್ತಿಚಿಗೆ ಜನಪ್ರತಿನಿಧಿ ಪತ್ರಿಕೆಯ ಸಹಯೋಗದೊಂದಿಗೆ ನಡೆಯಿತು. ಈ ತಿಂಗಳ ಓದು ಕಾರ್ಯಕ್ರಮ ನಮ್ಮನ್ನೆಲ್ಲಾ ಅಗಲಿರುವ ಸಂವೇದನಾಶೀಲ ಬರಹಗಾರ್ತಿ, ನಾಡೋಜ ಸಾರಾ ಅಬೂಬಕ್ಕರ್ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕಿ ಅಶ್ವಿನಿ ಕನ್ನಂತ ಸಾರಾ ಅಬೂಬಕ್ಕರ್ ಅವರ ನಿಯಮ ನಿಯಮಗಳ ನಡುವೆ ಎಂಬ ಕತೆಯನ್ನು ಓದಿನೊಂದಿಗೆ ಕಥೆಯ ತಿರುಳು ಕೇಳುಗರ ಮನದಲ್ಲಿ ಒಂದು ಸುಂದರ ಅನುಭವವಾಗುವಂತೆ ಓದಿದರು. ಸರಕಾರಿ ಪ್ರೌಢಶಾಲೆ ಹೆಸ್ಕತ್ತೂರ ಮುಖ್ಯೋಪಾಧ್ಯಾಯರಾದ ಅಬ್ದುಲ್ ರವೂಫ್ ರವರು ಸಾರಾ ಅಬೂಬಕ್ಕರ್ ಅವರ ಬದುಕು ಬರಹ ಕಥೆ ನಾಟಕ ಅವರ ಸಾಧನೆ ಇವುಗಳ ಬಗ್ಗೆ ಮಾತನಾಡಿದರು. ಹಾಲಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರೋಷನ್ ಬೀಬಿಯವರು ತಮ್ಮನ್ನು ಒಳಗೊಂಡಂತೆ ಮುಸ್ಲಿಂ ಸಮುದಾಯದ ಮಹಿಳಾ ಲೇಖಕಿಯರ ಮೇಲೆ ಹಾಗೂ ಎಲ್ಲಾ ವರ್ಗದ ಲೇಖಕ ಲೇಖಕಿಯರ ಮೇಲೆ ಸಾರಾ ಅಬೂಬಕ್ಕರ್ ಅವರ ಬರಹ ಬದುಕಿನ ಪ್ರಭಾವದ ಕುರಿತು ಮಾತನಾಡಿದರು. ಜನಪ್ರತಿನಿಧಿ ಪತ್ರಿಕಾ ಸಂಪಾದಕರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಇತ್ತಿಚಿಗೆ ಹಳೆಯ ವಿದ್ಯಾರ್ಥಿಗಳ ಸಮಾಗಮ ಜರುಗಿತು. ಈ ಸಂಭ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರು, ಶಿಕ್ಷಕರು, ಹಾಗೂ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. 25 ವರ್ಷಗಳನ್ನು ಪೂರೈಸಿದ ಸಂಸ್ಥೆಯ ಸಂಭ್ರಮಾಚರಣೆಗೆ ಈ ಕಾರ್ಯಕ್ರಮವು ಮುನ್ನುಡಿಯಾಯಿತು. ಸಂಸ್ಥೆಯಲ್ಲಿ ಕಟ್ಟಿಸಿರುವ ‘ರೌಪ್ಯ’ ನಾಮಾಂಕಿತ ನೂತನ ಸಭಾ ಮಂದಿರದ ಉದ್ಘಾಟನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು, ಹಳೆಯ ವಿದ್ಯಾರ್ಥಿಗಳ ಸಂಘ TERES-IAA ಇದರ ಲಾಂಛನ ಅನಾವರಣದೊಂದಿಗೆ ಮುಂದುವರೆಯಿತು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ನೇತೃತ್ವವನ್ನು ಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಅಕ್ಷಯ್ ಅವರಿಗೆ ಮುಂದಿನ ಎರಡು ವರ್ಷಗಳವರೆಗೆ ವಹಿಸಲಾಯಿತು. ಹಾಗೆಯೇ ಈ ಸಮಾಗಮದಲ್ಲಿ ಸಂಸ್ಥೆಯ ಏಳಿಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದಲ್ಲಿ ನೂತನ ಬದಲಾವಣೆಗಳ ಬಗ್ಗೆ ಚಿಂತನೆ ನಡೆಸಲಾಯಿತು. ನಂತರ ನೆರೆದ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮಗಳು ನೆರೆವೇರಿತು. ಇದರಲ್ಲಿ ಪ್ರಮುಖವಾಗಿ ನಂದನ್ ಉಡುಪ, ಚರಿತಾ, ಲಾಸ್ಯ, ಆದಿತ್ಯ ಇವರುಗಳು ತಮ್ಮ ಕಂಠಸಿರಿಯಿಂದ ಸರ್ವರನ್ನು ರಂಜಿಸಿದರು.ನಂತರ ಹಳೆಯ ವಿದ್ಯಾರ್ಥಿಗಳಿಗಾಗಿ ಅದೃಷ್ಟ ಕುರ್ಚಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ವಾಲಿಬಾಲ್ ತಂಡದ ನಾಯಕನಾಗಿ ಕುಂದಾಪುರದ ಅನೂಪ್ ಡಿ’ಕೋಸ್ಟಾ ಆಯ್ಕೆಯಾಗಿದ್ದಾರೆ. ಗುವಾಹಟಿಗೆ ತೆರಳಿರುವ 12 ಮಂದಿಯ ಕರ್ನಾಟಕ ತಂಡದಲ್ಲಿ ಕೋಟೇಶ್ವರ ಸಮೀಪದ ಕಟ್ಕೇರಿಯ ಚಂದನ್ ಆಚಾರ್ಯ ಹಾಗೂ ಭಟ್ಕಳದ ನವೀದ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ. ಪಂದ್ಯಾವಳಿಯು ಫೆಬ್ರವರಿ 8ರ ತನಕ ನಡೆಯಲಿದೆ. ವಾಲಿಬಾಲ್ ತಂಡದ ನಾಯಕನಾಗಿರುವ ಅನೂಪ್ ಡಿ’ಕೋಸ್ಟಾಹೈದರಾಬಾದ್ ನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಜೂನಿಯರ್ ತಂಡದ ನಾಯಕನಾಗಿ, ಸೀನಿ ಯರ್ ತಂಡದ ಆಟ ಗಾರನಾಗಿ ದೇಶವನ್ನು ಪ್ರತಿ ನಿಧಿಸಿರುವ ಅನುಭವ ಹೊಂದಿರುವ ಇವರು, ಕಳೆದ 15 ವರ್ಷಗಳಿಂದ ಕರ್ನಾಟಕ ತಂಡ ವನ್ನು ಪ್ರತಿನಿಧಿಸುತ್ತಿದ್ದಾರೆ. 13 ಬಾರಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ಯಲ್ಲಿ ಕರ್ನಾಟಕ ತಂಡದ ಪರ ಆಡಿರುವ ಹೆಗ್ಗಳಿಕೆ ಇವರದು. ರಾಷ್ಟ್ರೀಯ ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ತಂಡವನ್ನು ಮುನ್ನ ಡೆಸುವ ಅವಕಾಶ ಪಡೆದಿದ್ದಾರೆ. ಅತ್ಯುತ್ತಮ_ವಾಲಿಬಾಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೋದ ಮಠ ಸ್ವಾಮೀಜಿ ಅನುಗ್ರಹದಲ್ಲಿ ಗುರುಸಾರ್ವಭೌಮ ಶ್ರೀ ವಾದಿರಾಜ ಜೀವನ ಆಧಾರಿತ ಕನ್ನಡ ಚಲನಚಿತ್ರ ನಿರ್ಮಾಣವಾಗುತ್ತಿದ್ದು, ಅನುಭವಿ ನಿರ್ದೇಶಕ, ವಾದಿರಾಜರ ಭಕ್ತ ಹಯವದನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಚಿತ್ರಿಸುವ ಭರವಸೆ ಸಿಕ್ಕಿರುವುದರಿಂದ ಸಿನಿಮಾ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸೋದೆ ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಗುರುವಾರ ಹೂವಿನಕರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ವಾದಿರಾಜರು ಸಮಾಜಕ್ಕೆ ಕೊಟ್ಟ ಕೊಡುಗೆ, ಅವರ ವ್ಯಕ್ತಿತ್ವ ಹಾಗೂ ಹಿನ್ನೆಲೆಯಲ್ಲಿ ಇಟ್ಟುಕೊಂಡು ಸಿನಿಮಾ ನಿರ್ಮಾಣ ಆಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದಾಗ ನಿರ್ದೇಶಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ನಮಗೆ ಚಲನಚಿತ್ರದ ಬಗ್ಗೆ ಗಂಧಗಾಳಿಯೂ ಇಲ್ಲ, ಹೇಳಿಸಿದ ಕೆಲಸವೂ ಅಲ್ಲ. ಹೀಗೆ ಆಗಬೇಕು ಅಂಥ ಹೇಳಬಹುದು ಅಷ್ಟೇ ಎಂದರು. ಶ್ರೀ ವಾದಿರಾಜ ಗುರು ಸಾರ್ವಭೌಮರು 15, 16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ. 120 ವರ್ಷ ಜೀವಿಸಿದ್ದು, ಬಹುಮುಖ ವ್ಯಕ್ತಿತ್ವದ ಜತೆಗೆ ಸಂದೇಶ ನೀಡಿದ್ದಾರೆ. ಅನೇಕ ಭಾಷೆಗಳ ಪಾಂಡಿತ್ಯ, 120 ವರ್ಷದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದಾಗ ಮಾತ್ರ ಪ್ರತಿಯೊಂದು ಸಮಾಜವು ರಾಜಕೀಯವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಪ್ರೀತಿ, ವಿಶ್ವಾಸ, ಸಹಬಾಳ್ವೆಯ ಬದುಕು ಸಂಘಟನೆಗಳ ಧ್ಯೇಯವಾಗಬೇಕು. ಸಂಘಟಿತರಾಗಿ ಬಾಳುವುದರಿಂದ ಸಮಾಜದ ಏಳಿಗೆ ಸಾಧಿಸಬಹುದು ಎಂದು ಮಹಿಳಾ ಸಂರಕ್ಷಣಾ ಸಮಿತಿ ಮತ್ತು ರಾಜ್ಯ ಪ್ರಜಾತತ್ವ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷೆ ಪ್ರೇಮಾ ರಾಮಮೂರ್ತಿ ಹೇಳಿದರು. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ನೂತನ ಅಸ್ತಿತ್ವದ ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಬಲೀಕರಣದಿಂದ ಸ್ವಾವಲಂಬಿ ಜೀವನ ಸಾಧ್ಯ. ಸಮಾಜಮುಖಿ ವ್ಯಕ್ತಿತ್ವದೊಂದಿಗೆ ಮಾನವೀಯ ಗುಣದಿಂದ ಸಂಸ್ಕೃತಿ ರಕ್ಷಣೆ ಮಾಡಬಹುದು. ಮಹಿಳೆಯರು ಸಮಾಜ ಸೇವೆ ಮಾಡುವುದರ ಮೂಲಕ ಸಮಷ್ಠಿಯ ಹಿತ ಕಾಪಾಡುವ ಜವಾಬ್ದಾರಿಯ ಜ್ಞಾನ ಬೆಳೆಯುತ್ತದೆ ಎಂದರು. ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಮೋಹನ ಸುಬ್ರಾಯ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. 2021-22ನೇ ಸಾಲಿನ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ…

Read More