ಶಂಕರನಾರಾಯಣ: ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮಾಗಮ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಇತ್ತಿಚಿಗೆ ಹಳೆಯ ವಿದ್ಯಾರ್ಥಿಗಳ ಸಮಾಗಮ ಜರುಗಿತು. ಈ ಸಂಭ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರು, ಶಿಕ್ಷಕರು, ಹಾಗೂ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. 25 ವರ್ಷಗಳನ್ನು ಪೂರೈಸಿದ ಸಂಸ್ಥೆಯ ಸಂಭ್ರಮಾಚರಣೆಗೆ ಈ ಕಾರ್ಯಕ್ರಮವು ಮುನ್ನುಡಿಯಾಯಿತು.

Call us

Click Here

ಸಂಸ್ಥೆಯಲ್ಲಿ ಕಟ್ಟಿಸಿರುವ ‘ರೌಪ್ಯ’ ನಾಮಾಂಕಿತ ನೂತನ ಸಭಾ ಮಂದಿರದ ಉದ್ಘಾಟನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು, ಹಳೆಯ ವಿದ್ಯಾರ್ಥಿಗಳ ಸಂಘ TERES-IAA ಇದರ ಲಾಂಛನ ಅನಾವರಣದೊಂದಿಗೆ ಮುಂದುವರೆಯಿತು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ನೇತೃತ್ವವನ್ನು ಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಅಕ್ಷಯ್ ಅವರಿಗೆ ಮುಂದಿನ ಎರಡು ವರ್ಷಗಳವರೆಗೆ ವಹಿಸಲಾಯಿತು.

ಹಾಗೆಯೇ ಈ ಸಮಾಗಮದಲ್ಲಿ ಸಂಸ್ಥೆಯ ಏಳಿಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದಲ್ಲಿ ನೂತನ ಬದಲಾವಣೆಗಳ ಬಗ್ಗೆ ಚಿಂತನೆ ನಡೆಸಲಾಯಿತು. ನಂತರ ನೆರೆದ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮಗಳು ನೆರೆವೇರಿತು.

ಇದರಲ್ಲಿ ಪ್ರಮುಖವಾಗಿ ನಂದನ್ ಉಡುಪ, ಚರಿತಾ, ಲಾಸ್ಯ, ಆದಿತ್ಯ ಇವರುಗಳು ತಮ್ಮ ಕಂಠಸಿರಿಯಿಂದ ಸರ್ವರನ್ನು ರಂಜಿಸಿದರು.ನಂತರ ಹಳೆಯ ವಿದ್ಯಾರ್ಥಿಗಳಿಗಾಗಿ ಅದೃಷ್ಟ ಕುರ್ಚಿ, ಹೌಸಿ ಹೌಸಿ, ನಿಧಿ ಹುಡುಕಾಟದಂತಹ ಆಟಗಳನ್ನು ಆಡಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಆಂಗ್ಲ ಶಿಕ್ಷಕಿ ಅಲಿಟಾರವರು ವಹಿಸಿಕೊಂಡಿದ್ದರು. ಭೋಜನದ ನಂತರ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಸಭೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Click here

Click here

Click here

Click Here

Call us

Call us

Leave a Reply

Your email address will not be published. Required fields are marked *

nineteen − 13 =