ಗಂಗೊಳ್ಳಿ: ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಆಶ್ರಯದಲ್ಲಿ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ, ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗ ಗಂಗೊಳ್ಳಿ, ಭಗತ್ ಸಿಂಗ್ ಅಭಿಮಾನಿಗಳ ಬಳಗ ಗಂಗೊಳ್ಳಿ ಹಾಗೂ ಸ್ವಾಮೀ ವಿವೇಕಾನಂದ ದೇಶಪ್ರೇಮಿ ಬಳಗ ಗಂಗೊಳ್ಳಿ ಇವರ ಸಹಕಾರದೊಂದಿಗೆ ಗಂಗೊಳ್ಳಿಯಲ್ಲಿ ಗೋ ಭಿಕ್ಷಾ ಯಾತ್ರೆ ಜರಗಿತು. ಗಂಗೊಳ್ಳಿಯ ಪೋರ್ಟ್ ಆಫೀಸಿನ ಬಳಿಯಿಂದ ಆರಂಭಗೊಂಡ ಗೋ ಭಿಕ್ಷಾ ಯಾತ್ರೆಯು ಗಂಗೊಳ್ಳಿ ಶ್ರೀ ರಾಮ ಮಂದಿರದ ಬಳಿ ಸಮಾಪನಗೊಂಡಿತು. ಮನುಷ್ಯನ ಬದುಕಿಗೆ ಆರ್ಥಿಕವಾಗಿ, ಧಾರ್ಮಿಕವಾಗಿ ಹಾಗೂ ಆರೋಗ್ಯದಾಯಕಳಾಗಿರುವ ಗೋಮಾತೆಯ ಸೇವೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಗೋ ರಕ್ಷಣೆಯ ಪವಿತ್ರ ಕಾರ್ಯಕ್ಕೆ ನೆರವಾಗುವ ದೃಷ್ಟಿಯಿಂದ ನಿಧಿಯನ್ನು ಸಂಗ್ರಹಿಸಿ ಗೋಶಾಲೆಗೆ ಹಸ್ತಾಂತರಿಸುವ ಉದ್ದೇಶದಿಂದ ಗಂಗೊಳ್ಳಿಯಲ್ಲಿ ಗೋ ಭಿಕ್ಷಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆ ಮೂಲಕ ಸಂಗ್ರಹಗೊಂಡಿರುವ ಹಣವನ್ನು ಗೋಪಾಡಿ ಹೂವಿನಕೆರೆಯಲ್ಲಿರುವ ಕಾಮಧೇನು ಗೋ ಸಂರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಸಂಘಟನೆಗಳ ಪ್ರಮುಖರಾದ ರಾಘವೇಂದ್ರ ಗಾಣಿಗ, ನವೀನ ಪಿ., ವಿಶ್ವನಾಥ ಖಾರ್ವಿ, ರಾಜ ಖಾರ್ವಿ, ಮಹೇಶ…
Author: ನ್ಯೂಸ್ ಬ್ಯೂರೋ
ಬೈಂದೂರು: ಗೋಳಿಹೊಳೆ ಶ್ರೀ ಮಹಿಷಮರ್ಧಿನಿ ಸಭಾಂಗಣದಲ್ಲಿ ನಡೆಯುತ್ತಿರುವ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸ್ವಯಂಸೇವಕರು ನಿರ್ಮಲ ಗ್ರಾಮ ಅಭಿಯಾನ ಮತ್ತು ಅಂಗದಾನದ ಅರಿವು ಕುರಿತ ಬೀದಿನಾಟಕ ಪ್ರದರ್ಶಸಿದರು. ಗೋಳಿಹೊಳೆ ಮೂರ್ಕೈಯಿಂದ ಅರೆಶಿರೂರು ಪೇಟೆವರೆಗೆ ನಡೆದ ನಿರ್ಮಲ ಗ್ರಾಮ ಅಭಿಯಾನ ಜಾಥಾಕ್ಕೆ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದ ಮೊಕ್ತೇಸರ ಶಿವರಾಜ ಪೂಜಾರಿ ಚಾಲನೆ ನೀಡಿದರು. ಅರೆಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎನ್ಎಸ್ಎಸ್ ಕಾರ್ಯಕರ್ತರು ಅಂಗದಾನದ ಕುರಿತ ಬೀದಿನಟಕ ಪ್ರದರ್ಶಿಸಿದರು. ಈ ಸಂದರ್ಭ ರಘುರಾಮ ಶೆಟ್ಟಿ ಮುಂಡ್ಸಾಲು, ಕಳವಾಡಿ ಮಂಜು ಪೂಜಾರಿ ಸಸಿಹಿತ್ಲು, ಚುಚ್ಚಿ ಕುಶಲ್ ಶೆಟ್ಟಿ, ಎನ್ಎಸ್ಎಸ್ ಯೋಜನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಶಿಬಿರಾಧಿಕಾರಿ ಚೇತನ್ ಶೆಟ್ಟಿ ಕೊವಾಡಿ, ಕಾಲೇಜು ಗ್ರಂಥಾಲಯಾಧಿಕಾರಿ ಮಹೇಶ್ ಬಾಬು, ರಾಜೇಶ್ ಶೆಟ್ಟಿ, ಪ್ರವೀಣ್ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ: ಪ್ಲೋರಾ ಎಂಡ್ ಫೌನಾ ಕ್ಲಬ್ಬಿನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಇಕೋಕ್ಲಬ್ಗಳ ಸಮ್ಮೇಳನದಲ್ಲಿ ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾದ ವಿ.ಎಲ್. ಉಪಾಧ್ಯರು ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಛಾಯಾಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಪ್ರಭೇದದ ಪಕ್ಷಿಗಳ ವಿವರ ನೀಡಿದರು. ಇದೇ ಸಮಾವೇಶದಲ್ಲಿ ಖ್ಯಾತಿ ಚಿತ್ರ ಕಲಾವಿದ ಬೋಜ ಹಾಂಡಾರವರ ಪಕ್ಷಿಗಳ ವರ್ಣಚಿತ್ರಗಳ ಪ್ರದರ್ಶನ ನಡೆಯಿತು. ಕ್ಲಬ್ಬಿನ ಉಪಾಧ್ಯಕ್ಷ ಪ್ರಶಾಂತ ತೋಳಾರ ಉಪಸ್ಥಿತರಿದ್ದರು. ಬಿ.ಇ.ಓ. ಶ್ರೀಮತಿ ಶೋಭಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಡಾ| ಭಾಸ್ಕರ ಆಚಾರ್ಯರು ಬಹುಮಾನ ವಿತರಿಸಿದರು.
ಕುಂದಾಪುರ: ಕೆಲವಾರು ವರ್ಷಗಳ ಹಿಂದೆ ಡ್ರಾಯಿಂಗ್ ಹಾಳೆ, ಪೆನ್ನು, ಬ್ರಶ್ ಉಪಯೋಗಿಸಿಕೊಂಡು ಕಾರ್ಟೂನು ರಚಿಸಲಾಗುತ್ತಿತ್ತು. ಇಂದು ಕಂಪ್ಯೂಟರ್, ಮೌಸ್ ನಮ್ಮನ್ನು ಆವರಿಸಿಕೊಂಡಿದೆ. ಈ ಹೊಸ ಉಪಕಣಗಳಿಗೆ ನೀವು ಒಗ್ಗಿಕೊಂಡಿದ್ದೀರಾ? ಕಾರ್ಟೂನ್ ವೃತ್ತಿಯನ್ನಾಗಿ ಆರಿಸಿಕೊಳ್ಳುವವರಿಗೆ ಬದುಕಿದೆಯಾ? ಎಲ್ಲಾ ಕಾರ್ಟೂನಿಷ್ಠರನ್ನು ನೋಡುವ ಮತ್ತು ಪಿ. ಮಹಮ್ಮದರನ್ನು ನೋಡುವ ದೃಷ್ಠಿಕೋನಗಳು ಬೇರೆ ಬೇರೆ. ಇಲ್ಲಿ ಕಾರ್ಟೂನಿಷ್ಠರೇ ಅಸಹಿಷ್ಣುತೆಗೆ ಒಳಗಾಗುತ್ತಿದ್ದಾರಲ್ಲ! ಹೀಗೆ ಹತ್ತಾರು ಪ್ರಶ್ನೆಗಳು ಮಾಸ್ಟರ್ ಸ್ಟ್ರೋಕ್ಸ್ ಗಳಿಗೆ ಎದುರಾದವು. ಕಾಲ ಬದಲಾದಂತೆ ಹೊಸತನಕ್ಕೆ ಒಗ್ಗಿಕೊಳ್ಳಬೇಕಾದ್ದು ಇಂದಿನ ಅನಿವಾರ್ಯತೆ ಅದಕ್ಕೆ ತಕ್ಕೆಂತೆ ನಾವು ಬದಲಾಗುತ್ತಿದ್ದೇವೆ. ನೇರವಾಗಿ ಕಂಪ್ಯೂಟರ್ನಲ್ಲಿ ಬಿಡಿಸಬಹುದು. ಸಾಧ್ಯವಿಲ್ಲದವರು, ಹಾಳೆಯಲ್ಲಿ ಚಿತ್ರಿಸಿ, ಸ್ಕ್ಯಾನ್ ಮಾಡಿ ಬಣ್ಣ ತುಂಬುತ್ತಾರೆ. ಆದರೆ ರಾಜಕೀಯ ಕಾರ್ಟೂನುಗಳು ಕಪ್ಪು ಬಿಳುಪಿನಲ್ಲಿ ಪ್ರಕಟಗೊಂಡರೆ ಅದು ಇನ್ನಷ್ಟು ಚಂದವಾಗಿ ಕಾಣುತ್ತದೆ ಎಂಬ ಅಭಿಪ್ರಾಯ ಹೊರಬಂತು. ಕಾರ್ಟೂನು, ಕಲೆಯಲ್ಲಿ ಆಸಕ್ತಿ ಇರುವವರಿಗೆ ಅವಕಾಶ ಖಂಡಿತ ಇದೆ. ಯಾವ ತಂತ್ರಾಂಶ ಬಳಸಿ ಕಾರ್ಟೂನು ರಚಿಸುತ್ತೀರಿ ಎಂಬುದರ ಬದಲಿಗೆ, ನನ್ನ ಕೈಯಿಂದ ಎಷ್ಟು ಚನ್ನಾಗಿ ಕಲೆ ಅರಳಬಲ್ಲದು ಎಂಬುದಕ್ಕೆ…
ಕುಂದಾಪುರ: ಸಾಹಿತ್ಯ ಮತ್ತು ಚಿತ್ರಕಲೆಯ ಮೂಲಕ ಏಕಕಾಲದಲ್ಲಿ ಜನರಿಗೆ ನಾಟುವ ಶಕ್ತಿ ಇರುವುದು ಕಾರ್ಟೂನಿಗೆ ಮಾತ್ರ. ಕಲಾತ್ಮಕ, ಸಾರ್ವಕಾಲಿಕ ಹಾಗೂ ತಕ್ಷಣಕ್ಕೆ ಸ್ಪಂದಿಸುವಂತೆ ಮಾಡುವ ಗುಣ ಇದರಲ್ಲಿದೆ ಎಂದು ರಂಗಕರ್ಮಿ ಸುರೇಶ್ ಆನಗಳ್ಳಿ ಹೇಳಿದರು ಅವರು ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಆಯೋಜಿಸಲಾದ ’ಕಾರ್ಟೂನು ಹಬ್ಬ’ದ ಮೂರನೇ ದಿನ ’ಮಾಸ್ಟರ್ ಸ್ಟ್ರೋಕ್ಸ್’ – ವ್ಯಂಗ್ಯಚಿತ್ರಕಾರರೊಂದಿಗಿನ ಸಂವಾದ ಉದ್ಘಾಟಿಸಿ ಮಾತನಾಡಿದರು. ಕಾರ್ಟೂನು ಕಲೆಯನ್ನು ಚಳುವಳಿಯ ಹಾಗೆ ಬೆಳೆಸುತ್ತಾ ಅಧ್ಯಯನ ಶಿಸ್ತಿಗೆ ಒಳಪಡಿಸುವುದಕ್ಕೆ ಅಡಿಪಾಯವನ್ನು ಸತೀಶ್ ಆಚಾರ್ಯ ಹಾಕುತ್ತಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಕಂಡಿದ್ದ ಕಾರ್ಟೂನು ಕಾಳಜಿ ಮತ್ತೆ ಕಾಣುವಂತಾಗಿದೆ ಎಂದವರು ಶ್ಲಾಘಿಸಿದರು. ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ ಮಾತನಾಡಿ ಕಾರ್ಟೂನು ಸಮಾಜವನ್ನು ಕೆರಳಿಸುವ ಬದಲಿಗೆ ಅರಳಿಸುವ ಕೆಲಸ ಮಾಡುತ್ತದೆ. ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಅದನ್ನು ಒಪ್ಪುವ ಮತ್ತು ತಿದ್ದಿಕೊಳ್ಳುವ ಬದ್ಧತೆ ನಮ್ಮಲ್ಲಿರಬೇಕು ಎಂದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಉಪಸ್ಥಿತರಿದ್ದರು. ವ್ಯಂಗಚಿತ್ರಕಾರರಾದ ಪಿ.…
ಕುಂದಾಪುರ: ಶ್ರೀ ಹಾಗುಳಿ ಸೇವಾ ಸಮಿತಿ ಬಾಳಿಕೆರೆ ನೇತೃತ್ವದಲ್ಲಿ ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೆಂಚನೂರು, ಯಕ್ಷಮಿತ್ರ ಬಳಗ ಕೆಂಚನೂರು ಇವರ ಸಂಯುಕ್ತ ಆಶ್ರಯದಲ್ಲಿ ಕೆಂಚನೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಾಲಿಗ್ರಾಮ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ದಿ.ಕಾಳಿಂಗ ನಾವಡರ ಒಡನಾಡಿ, ಎರಡು ದಶಕಗಳ ಹಿಂದೆ ಯಕ್ಷಗಾನ ಭಾಗವತರಾಗಿ, ವಿವಿಧ ಪ್ರಯೋಗಗಳನ್ನು ನಡೆಸಿದ ಸದಾಶಿವ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ ಇದರ ನರಸಿಂಹ ಪೂಜಾರಿ ಪಡುಕೋಣೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಬಾಳಿಕೆರೆ, ರವಿ ಗಾಣಿಗ ಕೆಂಚನೂರು, ಚಂದ್ರ ಬಾಳಿಕೆರೆ, ಗುರುರಾಜ್ ಭಟ್ ಶಂಕರಪ್ಪನಕೊಡ್ಲು ಉಪಸ್ಥಿತರಿದ್ದರು.ಕಲಾಭಿಮಾನಿಗಳ ನೆಚ್ಚಿನ ತಾಣವಾದ ಇಲ್ಲಿ ಯಕ್ಷಗಾನಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿದ್ದು, ವಜ್ರಮಾನಸಿ ಯಶಸ್ವಿ ಪ್ರದರ್ಶನಕ್ಕೆ ಸಹಕರಿಸಿದ ಮೇಳದ ಕಲಾವಿದರಿಗೂ, ಮೇಳದ ಯಜಮಾನರಿಗೂ, ನೆರೆದ…
ಪ್ರೀತಿಯ ಅಮಲ ಏರಿದರೇ ಅವರ ನಡೆ-ನುಡಿಗಳ ಅಂಕೆಯಲ್ಲಿರುವುದಿಲ್ಲ ಎಂಬುದನ್ನು ಸಾಕಷ್ಟು ಪ್ರಕರಣಗಳು ಸಾಕ್ಷೀಕರಿಸಿವೆ. ಎದೆಯ ಮೇಲೆ ಟ್ಯಾಟೋ ಹಾಕಿಸಿಕೊಳ್ಳುವುದು, ಕೈಯಲ್ಲಿ ಬ್ಲೇಡಿನಿಂದ ಬರೆದುಕೊಳ್ಳುವುದು, ರಕ್ತದಲ್ಲಿ ಪ್ರೇಮಪತ್ರ ಬರೆದು ಪ್ರೇಮ ಪರಾಕಾಷ್ಟೆ ತೋರಿಸುವುದು ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ನೂರು ರೂಪಾಯಿ ನೋಟಿನ ಮೇಲೆ ತನ್ನ ಪ್ರಿಯತಮೆಯನ್ನು ಮದುವೆಯಾಗಲು ಅನುಮತಿ ಕೋಡಿ ಎಂದು ಬರೆದುಕೊಂಡು ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಬೇಡಿದ್ದಾನೆ. ಅಷ್ಟೇ ಅಲ್ಲದೇ ಈ ನೋಟು ಸಿಕ್ಕಿದವರು ನಮಗೆ ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾನೆ. ದೇವರು ಆಶಿರ್ವಾದ ಮಾಡಿದರೋ ಇಲ್ಲವೋ ಗೊತ್ತಿಲ್ಲ. ಅಷ್ಟಕ್ಕೂ ಅದು ಕಾಣಿಕೆ ಹುಂಡಿಗೆ ಹೋಗಿ ಬಂದ ನೋಟೋ ಅಥವಾ ತಮಾಷೆಗಾಗಿ ಯಾರೋ ಬರೆದದ್ದೋ ಗೊತ್ತಿಲ್ಲ ಆದರೆ ಪಿಗ್ಮಿ ಸಂಗ್ರಾಹಕರೊಬ್ಬರು ಈ ನೋಟನ್ನು ‘ಕುಂದಾಪ್ರ ಡಾಟ್ ಕಾಂ’ಗೆ ನೀಡಿದ್ದಾರೆ. ಅದೇನೇ ಇದ್ದರೂ ಸಹ ಭಾರತೀಯ ರಿಸರ್ವ ಬ್ಯಾಂಕಿನ ಚಲಾವಣೆಯಲ್ಲಿರುವ ನೋಟಿನ ಮೇಲೆ ಈ ರೀತಿ ಬರೆಯುವುದು ತಪ್ಪು ಎಂದು ತಿಳಿದಿದ್ದರೂ ಪ್ರೀತಿಯ ಅಮಲು ಹಾಗೆ ಮಾಡಿಸಿರಬೇಕು ಎಂದು ನೋಟು ಸಿಕ್ಕವರು…
ಕುಂದಾಪುರ: ಕಾರ್ಕಳದ ಬೈಲೂರಿನಲ್ಲಿ ನಡೆದ 2015-16ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಕುಂದಾಪುರ ತಾಲೂಕು ಆಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅನುಷಾ ೨೦೦ಮೀಟರ್ ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 100ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ’ಜಿಲ್ಲಾ ಚಾಂಪಿಯನ್’ ಕ್ರೀಡಾ ಪಟುವಾಗಿ ಹೊರಹೊಮ್ಮಿದ್ದಾರೆ. ಮುಂದೆ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಗುಲಾಬಿ ಮತ್ತು ನಾಗೇಶ ಪೂಜಾರಿ ನಾರ್ಕಳಿಯವರ ಪುತ್ರಿಯಾಗಿದ್ದು, ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿಯವರು ತರಬೇತಿ ನೀಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಾದ ಶಶಿಧರ ಶೆಟ್ಟಿ ವಂಡ್ಸೆ ಮತ್ತು ಶಿಕ್ಷಕವೃಂದದವರು ಸೂಕ್ತ ಪ್ರೋತ್ಸಾಹ ನೀಡಿದ್ದಾರೆ.
ಮರವಂತೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಲಾಡ್ಯರು, ಶ್ರೀಮಂತರು, ರಾಜಕೀಯ ಧುರೀಣ ಸ್ಥಾಪಿತ ಹಿತಾಶಕ್ತಿಗಳು ಸರಕಾರಿ ಜಾಗವನ್ನು ಅನಧೀಕೃತವಾಗಿ ಅತಿಕ್ರಮಿಸಿ, ಅಕ್ರಮವಾಗಿ ಸ್ಥಳ ಸ್ವಾಧೀನತೆ ಹೊಂದಿರುವುದನ್ನು ಈ ಕೂಡಲೇ ತೆರವುಗೊಳಿಸಿ-ಬಡತನ ರಹಿತರಿಗೆ ಮಂಜೂರು ಮಾಡಲು ಕಂದಾಯ ಇಲಾಖೆ ಕ್ರಮವಹಿಸಬೇಕು ಎಂದು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಸರಕಾರವನ್ನು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಆಶ್ರಯದಲ್ಲಿ ೫ ನವಂಬರ್ ೨೦೧೫ ರಂದು ಮರವಂತೆ ಸಾಧನಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿಐಟಿಯು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಟ ಶೆಟ್ಟಿ, ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಸುರೇಶ ಕಲ್ಲಾಗರ, ವೆಂಕಟೇಶ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಹಾಗು ಪಾರ್ವತಿ-ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು, ಮತ್ತು ಇತರ ಸ್ಥಳೀಯ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕೆದೂರು ಸರಕಾರಿ ಪ್ರೌಡಶಾಲೆಯಲ್ಲಿ ಉಚಿತ ಕಣ್ಣಿನ ಪೊರೆ ರೋಗ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಪಾರ್ವತಿ-ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಚೇರ್ಮೆನ್ ಜಯರಾಮ ಶೆಟ್ಟಿ ಉದ್ಘಾಟಿಸಿ, ಕಣ್ಣಿನ ಪೊರೆ ರೋಗ ಹಾಗು ಶಸ್ತ್ರ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಶಿಭಿರಾರ್ಥಿಗಳು ಉಚಿತವಾಗಿ ನೀಡಲಾಗುವ ಕಣ್ಣಿನ ಪೊರೆ ರೋಗ ಹಾಗು ಶಸ್ತ್ರ ಚಿಕಿತ್ಸೆ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಭ್-ಕುಂದಾಪುರ ಮಿಡ್ ಟೌನ್ ಅಧ್ಯಕ್ಷ ಕೆ.ಮಹೇಶ್ ಬೆಟ್ಟಿನ್ ವಹಿಸಿದ್ದರು. ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸೇವಾನಿರತೆ ಸಂಗೀತ, ಕೆದೂರು ಯುವಕ ಮಂಡಲ(ರಿ)ಯ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಕೋಟೇಶ್ವರದ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಕೆದೂರು ಪ್ರಾಥಮಿಕ…
