ಕುಂದಾಪುರ: ಕೆಲವಾರು ವರ್ಷಗಳ ಹಿಂದೆ ಡ್ರಾಯಿಂಗ್ ಹಾಳೆ, ಪೆನ್ನು, ಬ್ರಶ್ ಉಪಯೋಗಿಸಿಕೊಂಡು ಕಾರ್ಟೂನು ರಚಿಸಲಾಗುತ್ತಿತ್ತು. ಇಂದು ಕಂಪ್ಯೂಟರ್, ಮೌಸ್ ನಮ್ಮನ್ನು ಆವರಿಸಿಕೊಂಡಿದೆ. ಈ ಹೊಸ ಉಪಕಣಗಳಿಗೆ ನೀವು ಒಗ್ಗಿಕೊಂಡಿದ್ದೀರಾ? ಕಾರ್ಟೂನ್ ವೃತ್ತಿಯನ್ನಾಗಿ ಆರಿಸಿಕೊಳ್ಳುವವರಿಗೆ ಬದುಕಿದೆಯಾ? ಎಲ್ಲಾ ಕಾರ್ಟೂನಿಷ್ಠರನ್ನು ನೋಡುವ ಮತ್ತು ಪಿ. ಮಹಮ್ಮದರನ್ನು ನೋಡುವ ದೃಷ್ಠಿಕೋನಗಳು ಬೇರೆ ಬೇರೆ. ಇಲ್ಲಿ ಕಾರ್ಟೂನಿಷ್ಠರೇ ಅಸಹಿಷ್ಣುತೆಗೆ ಒಳಗಾಗುತ್ತಿದ್ದಾರಲ್ಲ! ಹೀಗೆ ಹತ್ತಾರು ಪ್ರಶ್ನೆಗಳು ಮಾಸ್ಟರ್ ಸ್ಟ್ರೋಕ್ಸ್ ಗಳಿಗೆ ಎದುರಾದವು.
ಕಾಲ ಬದಲಾದಂತೆ ಹೊಸತನಕ್ಕೆ ಒಗ್ಗಿಕೊಳ್ಳಬೇಕಾದ್ದು ಇಂದಿನ ಅನಿವಾರ್ಯತೆ ಅದಕ್ಕೆ ತಕ್ಕೆಂತೆ ನಾವು ಬದಲಾಗುತ್ತಿದ್ದೇವೆ. ನೇರವಾಗಿ ಕಂಪ್ಯೂಟರ್‌ನಲ್ಲಿ ಬಿಡಿಸಬಹುದು. ಸಾಧ್ಯವಿಲ್ಲದವರು, ಹಾಳೆಯಲ್ಲಿ ಚಿತ್ರಿಸಿ, ಸ್ಕ್ಯಾನ್ ಮಾಡಿ ಬಣ್ಣ ತುಂಬುತ್ತಾರೆ. ಆದರೆ ರಾಜಕೀಯ ಕಾರ್ಟೂನುಗಳು ಕಪ್ಪು ಬಿಳುಪಿನಲ್ಲಿ ಪ್ರಕಟಗೊಂಡರೆ ಅದು ಇನ್ನಷ್ಟು ಚಂದವಾಗಿ ಕಾಣುತ್ತದೆ ಎಂಬ ಅಭಿಪ್ರಾಯ ಹೊರಬಂತು. ಕಾರ್ಟೂನು, ಕಲೆಯಲ್ಲಿ ಆಸಕ್ತಿ ಇರುವವರಿಗೆ ಅವಕಾಶ ಖಂಡಿತ ಇದೆ. ಯಾವ ತಂತ್ರಾಂಶ ಬಳಸಿ ಕಾರ್ಟೂನು ರಚಿಸುತ್ತೀರಿ ಎಂಬುದರ ಬದಲಿಗೆ, ನನ್ನ ಕೈಯಿಂದ ಎಷ್ಟು ಚನ್ನಾಗಿ ಕಲೆ ಅರಳಬಲ್ಲದು ಎಂಬುದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರೇ ಅವಕಾಶಗಳು ಕಾರ್ಟೂನು ಲೋಕದಲ್ಲಿ ಅವಕಾಶಗಳು ಸಾಕಷ್ಟಿದೆ (ಕುಂದಾಪ್ರ ಡಾಟ್ ಕಾಂ ವರದಿ)
ಹಿಂದೆ ಇದ್ದದ್ದು ಅಸಹಿಷ್ಣುತೆಯಲ್ಲ, ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಷ್ಟೇ. ಈಗಿನ ಬೆಳವಣಿಗೆ ಆತಂಕಕಾರಿ. ಪೂರ್ವಾಗ್ರಹ ಪೀಡಿತ ವ್ಯಕ್ತಿನಿಂದನೆ ಒಳ್ಳೆಯದಲ್ಲ ಎಂದು ಪಿ. ಮಹಮ್ಮದ್ ಹೇಳಿದರು. ಅಸಹಿಷ್ಟುತೆ ಬಹಳ ವರ್ಷಗಳಿಂದಲೂ ಇದೆ. ಅದು ಬೇರೆ ಬೇರೆ ರೂಪದಲ್ಲಿ ಎದಿರುಗೊಳ್ಳುತ್ತಿದೆ ಎಂದು ಪ್ರಕಾಶ್ ಶೆಟ್ಟಿ ಹೇಳಿದರು. ಸತೀಶ್ ಆಚಾರ‍್ಯರೂ ಅಸಹಿಷ್ಣುತೆ ನನ್ನ ಗಮನಕ್ಕೂ ಬಂದಿದೆ ಎಂದು ಹೇಳುವ ಮೂಲಕ ಮೂವರು ವ್ಯಂಗ್ಯಚಿತ್ರಕಾರರು ಅಸಹಿಷ್ಣತೆ ಇದೆ ಅಥವಾ ಇಲ್ಲ ಎನ್ನುವ ತರ್ಕವನ್ನು ಕೇಳುಗನಿಗೆ ಬಿಟ್ಟರು.
ಇದು ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಟೂನು ಕುಂದಾಪ್ರ ನೃತೃತ್ವದಲ್ಲಿ ಆಯೋಜಿಸಲಾದ ’ಕಾರ್ಟೂನು ಹಬ್ಬ’ದಲ್ಲಿ ಮಾಸ್ಟರ್ ಸ್ಟ್ರೋಕ್ಸ್ ಮಾತುಕತೆಯ ತುಣುಕು.
ಕಾರ್ಯಕ್ರಮವನ್ನು ರಂಗಕರ್ಮಿ ಸುರೇಶ್ ಆನಗಳ್ಳಿ ಉದ್ಘಾಟಿಸಿದರು. ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ, ಕುಂದಾಪುರ ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಉಪಸ್ಥಿತರಿದ್ದರು.
ವ್ಯಂಗಚಿತ್ರಕಾರರಾದ ಪಿ. ಮಹಮ್ಮದ್, ಪ್ರಕಾಶ್ ಶೆಟ್ಟಿ, ಸತೀಶ್ ಆಚಾರ‍್ಯ ಮಾಸ್ಟರ್‌ಸ್ಟ್ರೋಕ್ಸ್‌ನಲ್ಲಿ ಭಾಗವಹಿಸಿದ್ದರು. ಅಸಹಿಷ್ಣತೆಯ ಬಗ್ಗೆ ವ್ಯಂಗ್ಯಚಿತ್ರ ರಚಿಸಿದ ಪ್ರಕಾಶ್ ಶೆಟ್ಟಿ ’ಅಸಹಿಷ್ಟುತೆ ಹಿಂದಿನಿಂದಲೂ ಇದೆ. ಈಗ ಸ್ವಲ್ಪ ಜಾಸ್ತಿ ಇದೆ ಎಂಬುದನ್ನು ಚಿತ್ರಿಸಿದರೇ, ಪಿ. ಮಹಮ್ಮದ್ ತೋಳ್ಬಲ ತೋರಿಸುವುದು ಅಸಹಿಷ್ಟುತೆ; ಸ್ನೇಹಹಸ್ತ ಚಾಚುವುದು ಸಹಿಷ್ಟುತೆ ಎಂಬುದನ್ನು ಬಿಂಬಿಸಿದ್ದರೇ, ಸತೀಶ್ ಆಚಾರ‍್ಯ ಅವರು ಸಹಿಷ್ಣುತೆ, ಅಸಹಿಷ್ಣುತೆಯ ಗೊಂದಲದಲ್ಲಿ ಜನಸಾಮಾನ್ಯನಿದ್ದಾನೆಂಬುದನ್ನು ಚಿತ್ರಿಸಿದರು. (ಕುಂದಾಪ್ರ ಡಾಟ್ ಕಾಂ ವರದಿ)
ಸಂವಾದದಲ್ಲಿ ಕಾರ್ಟೂನಿಷ್ಠರ ಪ್ಯಾನೆಲ್‌ನಲ್ಲಿ ಜೇಮ್ಸ್ ವಾಜ್, ಜೀವನ್ ಶೆಟ್ಟಿ, ಜೈರಾಮ್ ಉಡುಪ, ನಟರಾಜ್ ಅರಳಸುರಳಿ, ಸುಬ್ರಹ್ಮಣ್ಯ ಮೆಗರಾವಳ್ಳಿ ಇದ್ದರೇ, ಪತ್ರಕರ್ತರ ಪ್ಯಾನಲ್‌ನಲ್ಲಿ ಅಂಬರೀಶ್ ಭಟ್, ಯು. ಎಸ್. ಭಟ್, ರಾಜಾರಾಂ ತಲ್ಲೂರು ಇದ್ದರೇ, ಚಿಂತರ ಪ್ಯಾನಲ್‌ನಲ್ಲಿ ಎಎಸ್‌ಎನ್ ಹೆಬ್ಬಾರ್, ಹಯವಧನ ಉಪಾಧ್ಯ, ಉದಯ ಗಾವ್ಕರ್ ಭಾಗವಹಿಸಿದ್ದರು. ಪತ್ರಕರ್ತ ರಾಮಕೃಷ್ಣ ಹೆರ್ಳೆ ನಿರೂಪಿಸಿದರು.
ವಿದ್ಯಾರ್ಥಿಗಳ ಕಾರ್ಟೂನು ಮೊಗ್ಗು
ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಟೂನು ಮೊಗ್ಗು ಎಂಬ ಕಾರ್ಟೂನು ಬಿಡಿಸೋ ಸ್ವರ್ಧೆ ಆಯೋಜಿಸಲಾಗಿತ್ತು. ಕೈರಾಲಿ ಸಹೃದೈದಿ ಅಧ್ಯಕ್ಷ ಕೆ. ಪಿ. ಶ್ರೀಷನ್ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಹಾಳೆ ನೀಡುವ ಮೂಲಕ ಕಾರ್ಟೂನು ಮೊಗ್ಗಿಗೆ ಚಾಲನೆ ನೀಡಿದರು.
ಟೋರ್ಪೆಡೋಸ್ ಸ್ಪೋರ್ಟ್ಸ ಕ್ಲಬ್‌ನ ಗೌತಮ್ ಶೆಟ್ಟಿ, ಕೋಟ ವಿವೇಕ ಹೈಸ್ಕೂಲ್ ಅಧ್ಯಾಪಕ ನರೇಂದ್ರಕುಮಾರ್ ಕೋಟ ವೇದಿಕೆಯಲ್ಲಿದ್ದರು. ಸತೀಶ್ ಆಚಾರ‍್ಯ ಸ್ವಾಗತಿಸಿಕೊಂಡರು. ಪತ್ರಕರ್ತ ಸುನಿಲ್ ಹೆಚ್. ಜಿ. ಕಾರ್ಯಕ್ರಮ ನಿರೂಪಿಸಿದರು. ನೂರಾರು ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಿ ಕಾರ್ಟೂನು ಪ್ರೀತಿಯನ್ನು ತೋರ್ಪಡಿಸಿದರು.