ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ “ಕ್ರಿಯೇಟಿವ್ ಗುರುದೇವೋಭವ” ಕಾರ್ಯಕ್ರಮವನ್ನು ಶಿಕ್ಷಕರ ದಿನಾಚರಣೆಯಂದು ಹಮ್ಮಿಕೊಳ್ಳಲಾಯಿತು. ಜ್ಞಾನಜ್ಯೋತಿಯನ್ನು ಬೆಳಗಿ, ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು. ಗುರುವಂದನೆಯನ್ನು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ, ನಲ್ಲೂರಿನ ನಿವೃತ್ತ ಮುಖ್ಯ ಗುರುಗಳಾದ ಪೂರ್ಣಿಮಾ ರಮೇಶ್ ಶೆಣೈ ಅವರು ಮಾತನಾಡಿ, ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರು’ ಎಂದರು. ಕಾರ್ಕಳದ ಬೈಲೂರು ಹೊಸ ಬೆಳಕು ಸಂಸ್ಥೆಯ ವ್ಯವಸ್ಥಾಪಕರಾದ ತನುಲಾ ತರುಣ್ ಅವರು ಮಾತನಾಡಿ, ಗುರುವಿಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರದಾರನೇ ಶಿಕ್ಷಕ ’ ಎಂದು ನುಡಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸರಕಾರದ ಆದೇಶದಂತೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಾದ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿಗೆ ಪರಿಹಾರವನ್ನು ಪಾವತಿಸುವ ಕುರಿತಂತೆ ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರ್ಗಳ ಕಚೇರಿ, ಗ್ರಾಮ ಪಂಚಾಯತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ, ಸಂಬಂಧಿಸಿದ ತಹಶೀಲ್ದಾರ್ ಕಛೇರಿ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳಲ್ಲಿ 07 ದಿನದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಬಿ.ಎಂ. ಶ್ರೀ. ಪ್ರತಿಷ್ಠಾನ ನೀಡುವ “ಸಾವಿತ್ರಮ್ಮ-ಪ್ರೊ.ಎಂ.ವಿ.ಸೀ. ಸಾಹಿತ್ಯ ಪುರಸ್ಕಾರಕ್ಕೆ ಸಂಶೋಧಕರಾದ ಮಂಗಳೂರಿನ ಎ.ವಿ. ನಾವಡ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 30 ಸಾವಿರ ನಗದು, ಸ್ಮರಣ ಫಲಕ ಮತ್ತು ಅಭಿನಂದನಾ ಪತ್ರ ಒಳಗೊಂಡಿದೆ. ಮಲ್ಲೇಪುರಂ ಜಿ. ವೆಂಕಟೇಶ್, ಎಚ್.ಟಿ. ಪೋತೆ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ. ಸಂಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಪರಿಗಣಿಸಬೇಕೆಂಬ ನಿಬಂಧನೆಯಂತೆ ಈ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ತಿಳಿಸಿದ್ದಾರೆ. ಬೆಂಗಳೂರಿನ ಎನ್.ಆರ್. ಕಾಲೊನಿಯಲ್ಲಿರುವ ಬಿ.ಎಂ ಶ್ರೀ ಪ್ರತಿಷ್ಠಾನದಲ್ಲಿ ಸೆಪ್ಟೆಂಬರ್ 9ರಂದು ನಡೆಯುವ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಂಗ್ರಹಿಸಿದ ವಸ್ತುಗಳನ್ನು ಕೊಡುಗೆ ನೀಡುವುದು ಅಂತಕರಣದಿಂದ ಮಾಡುವ ದಾನ. ಸಂಗ್ರಹ ಹಾಗೂ ದಾನದ ಹಿಂದಿನ ಮೌಲ್ಯ ಮಹತ್ತರ’ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಗ್ರಂಥಾಲಯ ವಿಭಾಗವು ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮೆಸಪಟೋಮಿಯದಲ್ಲಿ ಮೊದಲ ಗ್ರಂಥಾಲಯ ಸ್ಥಾಪನೆಯಾಯಿತು ಎಂದು ಇತಿಹಾಸ ತಿಳಿಸಿದ ಅವರು, ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಹೆಚ್ಚಾಗುತ್ತಾರೆ. ಆದರೆ, ಗ್ರಂಥಾಲಯ ಕಟ್ಟಿದರೆ ವಿದ್ವಾಂಸರು ಹುಟ್ಟುತ್ತಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಮಾತನ್ನು ನೆನಪಿಸಿದರು. ಪುಸ್ತಕಕ್ಕೆ ಮರಣ ಇಲ್ಲ. ಫುಸ್ತಕಗಳು ಜ್ಞಾನ ನೀಡುವ ದೇಗುಲ. ಜಾತಿ, ಧರ್ಮ ಮೀರಿದ ದೇವಾಲಯವೇ ಗ್ರಂಥಾಲಯ. ನಾಗರಿಕತೆ ಇತಿಹಾಸವೇ ಗ್ರಂಥದಲ್ಲಿವೆ. ಓದು ವ್ಯಕ್ತಿ ಬೆಳವಣಿಗೆಗೆ ಪೂರಕ ಎಂದರು. ದೇಶದ ಮೊದಲ ಗ್ರಂಥಾಲಯದಲ್ಲಿ ನಮ್ಮ ಸುರತ್ಕಲ್ನ ಮಹಿಳೆಯೊಬ್ಬರು ಸೇವೆ ಸಲ್ಲಿಸಿದ್ದರು’ಎಂದು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಜನತಾ ಪಕ್ಷ ವಿಶ್ವದ ದೊಡ್ಡ ರಾಜಕೀಯ ಪಕ್ಷವಾಗಿದೆ. ಸದಸ್ಯತ್ವ ಅಭಿಯಾನದ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೊಂದಾವಣಿಯಾಗಬೇಕು ಈ ಮೂಲಕ ಈ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕೆಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕುಂದಾಪುರದ ಬಿಜೆಪಿಯ ಕಚೇರಿಯಲ್ಲಿ ಜರುಗಿದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ಸದಸ್ಯತ್ವ ಅಭಿಯಾನವು ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಿಂದ 15ರವರೆಗೆ ಎರಡು ಹಂತಗಳಲ್ಲಿ ಬಿಜೆಪಿ ಅಭಿಯಾನ ನಡೆಯಲಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಅಭಿಯಾನಕ್ಕೆ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಹಾಗೂ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಸದಸ್ಯತ್ವ ಪಡೆಯುವ ಮೂಲಕ ರಾಷ್ಟ್ರದಂತ ನಿನ್ನೆ ದಿವಸ ಸದಸ್ಯ ಅಭಿಯಾನಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 8ನೇ ತರಗತಿ ವಿದ್ಯಾರ್ಥಿ ಸಮರ್ಥ ಪಿ. ಹೆಗ್ಡೆ 14 ವರ್ಷ ಒಳಗಿನ ಮಕ್ಕಳ ಖೋಖೊ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಅವರಿಗೆ ಆಡಳಿತಮಂಡಳಿ, ಮುಖ್ಯಶಿಕ್ಷಕರು ಬೋಧಕ ಮತ್ತು ಬೋಧಕೇತರ ವೃಂದ ಶುಭ ಕೋರಿರುತ್ತಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಿಯುಸಿ ಬಳಿಕದ ವ್ಯಾಸಂಗಕ್ಕಾಗಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಸೀಟು ದೊರೆತ ಬಗ್ಗೆ ಬೇಸರಗೊಂಡ ವಿದ್ಯಾರ್ಥಿಯೊಬ್ಬ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪರ ತಾಲೂಕಿನ ಹಳ್ನಾಡು ಎಂಬಲ್ಲಿ ನಡೆದಿದೆ. ತಾಲೂಕಿನ ಹಳ್ನಾಡು ಗ್ರಾಮದ ಶಿವಪ್ರಸಾದ್ ಶೆಟ್ಟಿ ಎಂಬುವರ ಮಗ ಸುಪ್ರಜ್ ಶೆಟ್ಟಿ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕುಂದಾಪುರದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿಯು ವಿದ್ಯಾಭ್ಯಾಸ ಮಾಡಿದ್ದ ಸುಪ್ರಜ್ ಶೆಟ್ಟಿಗೆ ಕೌಸಿಲಿಂಗ್ನಲ್ಲಿ ಇಂಜಿನಿಯರಿಂಗ್ ಸೀಟು ದೊರೆತಿತ್ತು. ಬೆಂಗಳೂರಿನಲ್ಲಿ ಇಂಜಿನಿಯರ್ ಮಾಡಲು ಆತನಿಗೆ ಇಷ್ಟವಿರಲಿಲ್ಲ.. ಆತನ ಮನೆಯವರು ಮಗನಿಗೆ ಬುದ್ಧಿವಾದ ಹೇಳಿ ಬೆಂಗಳೂರಿಗೆ ಕಳುಹಿಸಲು ಬಟ್ಟೆಬರೆಗಳನ್ನು ಪ್ಯಾಕ್ ಮಾಡಿದ್ದರು ಎನ್ನಲಾಗಿದೆ. ಗುರುವಾರ ಆತ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಬುಧವಾರ ಸಂಜೆ ಹಳ್ನಾಡು ಮನೆಯ ಸಮೀಪದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬುಧಚಾರ ಸಂಜೆ ಹೊಳೆಯ ಬದಿಯಲ್ಲಿ ಬದಿಯಲ್ಲಿ ತನ್ನ ಚಪ್ಪಲಿ ಮತ್ತು ಮೊಬೈಲ್ ಬಿಟ್ಟಿರುವುದು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಮನೆಯವರು ಹಾಗೂ ಸ್ಥಳೀಯತು ಹುಡುಕಾಟ ನಡೆಸಿದ್ದರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉತ್ತಮ ಪ್ರಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಲು ಕೊನೆಯ ಕ್ಷಣದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯನ್ನು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ. ಇಂದು (ಸೆ.5) ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ನೀಡುವುದನ್ನು ಸರ್ಕಾರ ತಡೆ ಹಿಡಿದಿದೆ. ಸರಕಾರದ ಈ ನಡೆದ ಇದೀಗೆ ಟೀಕೆಗೆ ಕಾರಣವಾಗಿದೆ. ► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098 . ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಜಬ್ ವಿವಾದದ ಪರಿಣಾಮ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ ಎನ್ನಲಾಗಿದೆ. ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜು ಗೇಟ್ ಹೊರಕ್ಕೆ ನಿಲ್ಲಿಸಿದ್ದರು. ಆ ಫೋಟೊ ವೈರಲ್ ಆಗಿತ್ತು. ಪ್ರಾಂಶುಪಾಲರ ಪ್ರಶಸ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇತ್ತಿಚಿಗೆ ನಡೆಯಿತು. ಕಾರ್ಯಕ್ರಮವನ್ನು ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್. ವಿಶ್ವನಾಥ ಕರಬ ಅವರು ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ್ಯೋದ್ದೇಶಗಳು, ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸತ್ಯನಾರಾಯಣ ಹತ್ವಾರ್ ಇವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ಅಗತ್ಯತೆ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಅರುಣ್ ಏ. ಎಸ್, ರಾಮಚಂದ್ರ ಆಚಾರ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸ್ವಯಂಸೇವಕರಾದ ಸಮೀಕ್ಷಾ ಶೆಟ್ಟಿ ಸ್ವಾಗತಿಸಿದರು, ದೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಅಮಿತ್ ರಾಜ್ ವಂದಿಸಿದರು ಹಾಗೂ ವಿಗ್ನೇಶ್ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಆಯ್ಕೆಯಾದ ಕುಂದಾಪುರದ ಜ್ಯೂನಿಯರ್ ಕಾಲೇಜು ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡುವ ವಿಷಯದಲ್ಲಿ ತಾತ್ಕಾಲಿಕ ತಡೆ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಖಂಡಿಸಿದ್ದಾರೆ. ಇದನ್ನೂ ಓದಿ:► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098 . ಪಾಲರಾದ ಬಿ. ಜಿ. ರಾಮಕೃಷ್ಣ ಅವರ ಎಲ್ಲಾ ಅರ್ಹತೆಯನ್ನು ಗಮನಿಸಿ ಶಿಕ್ಷಣ ಇಲಾಖೆ ಪ್ರಶಸ್ತಿ ಆಯ್ಕೆ ಮಾಡಿದೆ. ಶಿಕ್ಷಣ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಇದು ಶಿಕ್ಷಣ ಇಲಾಖೆ ಮತ್ತು ದೇಶದಾದ್ಯಂತ ಇರುವ ಶಿಕ್ಷಕರಿಗೆ ಮಾಡಿದ ಅವಮಾನ. ರಾಜ್ಯ ಸರ್ಕಾರ ಈ ಕೂಡಲೇ ತಾತ್ಕಾಲಿಕ ತಡೆಯನ್ನು ತೆಗೆದು ಹಾಕಿ ಈ ಹಿಂದೆ ಆಯ್ಕೆಯಾದ ಗೌರವಾನ್ವಿತ ಶಿಕ್ಷಕರಿಗೆ ಪ್ರಶಸ್ತಿ ನೀಡಬೇಕು ಅವರು ಆಗ್ರಹಿಸಿದ್ದಾರೆ.
