Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಡತ ಕಾಣೆಯಾಗಿದೆಯಾ ಇಲ್ಲಾ ಹೊಸದಾಗಿ ಕಡತ ನಿರ್ಮಾಣವಾಗುತ್ತಿದೆಯಾ? ಕೆ. ವಿಕಾಸ್‌ ಹೆಗ್ಡೆ
    ಊರ್ಮನೆ ಸಮಾಚಾರ

    ಕಡತ ಕಾಣೆಯಾಗಿದೆಯಾ ಇಲ್ಲಾ ಹೊಸದಾಗಿ ಕಡತ ನಿರ್ಮಾಣವಾಗುತ್ತಿದೆಯಾ? ಕೆ. ವಿಕಾಸ್‌ ಹೆಗ್ಡೆ

    Updated:21/03/2025No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಪುರಸಭೆ ಅಧ್ಯಕ್ಷರ ಮನೆಯ ಮಹಡಿ ನಿರ್ಮಾಣಕ್ಕೆ ಪುರಸಭೆ ನೀಡಿದ ಪರವಾನಗೆಯ ಕಡತ ಕಾಣೆಯಾಗಿದೆಯಾ ಇಲ್ಲಾ ಅಕ್ರಮವಾಗಿ ಮಹಡಿ ನಿರ್ಮಾಣ ಮಾಡಿ ಈಗ ಹೊಸದಾಗಿ ಅಕ್ರಮವಾಗಿ ಪರವಾನಗೆಯ ಕಡತ ರಚನೆ ಮಾಡುವ ಹುನ್ನಾರ ನಡೆಯುತ್ತಿದೆಯಾ ಎನ್ನುವುದನ್ನು ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗೃಹಿಸಿದ್ದಾರೆ.

    Click Here

    Call us

    Click Here

    ಪುರಸಭೆಯ ಕಡತ ಕಾಣೆಯಾಗುವುದು ಒಂದು ಗಂಭೀರ ಪ್ರಕರಣ. ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಆದರೆ ಪುರಸಭೆಯ ಮುಖ್ಯಾಧಿಕಾರಿಗಳು ಮಾಹಿತಿ ಹಕ್ಕಿನಲ್ಲಿ ನೀಡಿದ ಉತ್ತರದಲ್ಲಿ ಅಧ್ಯಕ್ಷರ ಮಹಡಿ ನಿರ್ಮಾಣದ ದಾಖಲೆಗಳು ಇಲ್ಲಾ ಎನ್ನುವ ಮಾಹಿತಿ ನೀಡಿದ್ದು ಈಗ ಕಡತ ಕಾಣೆಯಾಗಿದೆ ಎನ್ನುವ ಹೊಸ ಉತ್ತರ ಹಲವು ಅನುಮಾನಗಳಿಗೆ ಏಡೆ ಮಾಡಿದೆ. ಪುರಸಭೆ ಅಕ್ರಮ ನಿರ್ಮಾಣದ ಬಗ್ಗೆ ಸಾರ್ವಜನಿಕರಿಗೆ ಅನುಸರಿಸುವ ಕಾನೂನಿನ ಅಡಿಯಲ್ಲಿ ಅಧ್ಯಕ್ಷರು ಬರುವುದಿಲ್ಲವಾ? ಅಥವಾ ಅಧ್ಯಕ್ಷರಿಗೆ ವಿಶೇಷ ಕಾನೂನು ಇದೆಯಾ ಎನ್ನುವುದನ್ನು ಸಾರ್ವಜನಿಕವಾಗಿ ತಿಳಿಸಬೇಕು.

    ಅಧ್ಯಕ್ಷರು ಸಾರ್ವಜನಿಕ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ಪರವಾನಗೆಯ ಕಡತ ಪುರಸಭೆಯಲ್ಲಿ ಕಾಣೆಯಾಗಿರ ಬಹುದು ಆದರೆ ಅದರ ಪ್ರತಿ ಅಧ್ಯಕ್ಷರ ಬಳಿ ಇರಲೇಬೇಕು ಅದನ್ನು ಅಧ್ಯಕ್ಷರು ಸಾರ್ವಜನಿಕವಾಗಿ ಬಹಿರಂಗ ಪಡಿಸಲಿ. ಅಧ್ಯಕ್ಷರು ಅಧಿಕಾರ ಪಡೆದ ದಿನದಿಂದ ತಾನೊಬ್ಬ ನಿರಂಕುಶ ಆಡಳಿತ ನಡೆಸುವವ ಎನ್ನುವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಗುತ್ತಿಗೆದಾರರ ಸಭೆ ನಡೆಸುವುದು, ಸದಸ್ಯರು ಅಕ್ರಮ ನಿರ್ಮಾಣದ ಬಗ್ಗೆ ಪ್ರಶ್ನೆ ಕೇಳಿದರೆ ಕುಳಿತು ಮಾತನಾಡುವ ಎನ್ನುವುದು, ಈಗ ಅಧ್ಯಕ್ಷರ ಮನೆ ಮಹಡಿ ನಿರ್ಮಾಣದ ಕಡತ ನಾಪತ್ತೆ ಇದೆಲ್ಲವೂ ಸಹ ಅಧಿಕಾರದ ದುರುಪಯೋಗವಾಗಿದೆ.

    ಪುರಸಭೆಯ ಮುಖ್ಯಾಧಿಕಾರಿಗಳು ಇದೆಲ್ಲದಕ್ಕೂ ಜವಾಬ್ದಾರರಾಗಿದ್ದು ಅವರು ಸಾರ್ವಜನಿಕವಾಗಿ ಇದಕ್ಕೆ ಉತ್ತರಿಸಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಅವರು  ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    five × five =

    Call us

    Click Here

    Call us

    Call us

    Call us
    Highest Viewed Recently
    • ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ
    • ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.