Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ:  ಮನುಷ್ಯನ ಅನೇಕ ದುರಾಸೆಯ ಫಲವೇ ಹವಾಮಾನ ವೈಪರೀತ್ಯಕ್ಕೆ ಮೂಲ ಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ  ಸಂಸ್ಥೆ (ಎನ್‌ಐಎಎಸ್)ಯ ಇಸ್ರೋ ಮುಖ್ಯ ಪ್ರಾಧ್ಯಾಪಕ ಡಾ. ಪಿ. ಜಿ. ದಿವಾಕರ್ ಅಭಿಪ್ರಾಯಪಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು  ಎನ್‌ಐಎಎಸ್  ಜಂಟಿ ಆಶ್ರಯದಲ್ಲಿ ಉಳ್ಳಾಲದ ಬಿಎಂ ಶಾಲೆಯಲ್ಲಿ ಹಮ್ಮಿಕೊಂಡ ‘ವಿದ್ಯಾರ್ಥಿ- ವಿಜ್ಞಾನಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ತೀವ್ರ ಸಮಸ್ಯೆಯಾಗಿ ಬೆಳೆಯುತ್ತಿದೆ. ಅದರಲ್ಲೂ ,ಕರಾವಳಿ ಭಾಗದ ಜನರಿಗೆ ವಾತಾವರಣದಲ್ಲಾಗುವ ತೀವ್ರ ಮಾರ್ಪಾಡುಗಳು ಬಹುಬೇಗನೇ ತಿಳಿಯುವುದರಿಂದ, ಈ ಯೋಜನೆಯು ಇಲ್ಲಿನ ಜನರಿಗೆ ಅತಿಹೆಚ್ಚು ಪೂರಕವಾಗಲಿದೆ ಎಂದರು. ವಿದ್ಯಾರ್ಥಿಗಳಿಗೆ ವಿಜ್ಞಾನದ ಕಡೆಗೆ ಆಸಕ್ತಿ ಹೆಚ್ಚಿಸಿ, ಪರಿಣಾಮಕಾರಿ ವಿಜ್ಞಾನಿಗಳನ್ನಾಗಿ ಮಾಡಲು ಎನ್‌ಐಎಎಸ್ ಆಯೋಜಿಸಿರುವ ಕರಾವಳಿ ಭಾಗದ ಹವಾಮಾನ ಬದಲಾವಣೆ ಅಧ್ಯಯನ ಯೋಜನೆಯು ಸಹಕರಿಯಾಗಲಿದೆ ಎಂದು ಹೇಳಿದರು. ವೈಜ್ಞಾನಿಕ ಶಿಕ್ಷಣದ ಮೂಲಕ ಯುವ ಜನಾಂಗದಲ್ಲಿ ವಿಜ್ಞಾನ ಮತ್ತು ಅನ್ವೇಷಣೆಯತ್ತ ಒಲವು ಮೂಡಿಸುವುದು ಬಹಳ ಅವಶ್ಯಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ತೌಹೀದ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟ ಶಾಲಾ ಮೈದಾನದಲ್ಲಿ ಗುರುವಾರ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಇಬ್ರಾಹಿಂ ಚೌಗುಲೆ ವಹಿಸಿದ್ದರು. ಮುಖ್ಯ ಅತಿಥಿ ಶಿರೂರು ತೌಹೀದ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಶಬ್ಬೀರ್ ಅಹ್ಮದ್ ದಫೆದಾರ್ ಶುಭಾಶಂಸನೆಗೈದರು. ಅನಿವಾಸಿ ಭಾರತೀಯರಾದ ಅಬ್ದುಲ್ ಸತ್ತಾರ್ ಮಡಿಕಲ್, ಜಾವೀದ್ ಎಂ.ಎಚ್., ಅಬ್ದುಲ್ ಹಮೀದ್ ಮೌಲಾನ, ತೌಹೀದ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಇಕ್ಬಾಲ್ ಪಿ.ಎಂ., ವ್ಯವಸ್ಥಾಪಕ ತಾಹೀರ್ ಹಸನ್ ಹಾಗೂ ತೌಹೀದ್ ಮಹಿಳಾ ಕಾಲೇಜುಗಳ ಪ್ರಾಂಶುಪಾಲರಾದ ಆಶಾ ನಾಯ್ಕ, ಸಮೀನ ಬುಖಾರಿ, ತೌಹೀದ್ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಭಾ ಬಾನು ಉಪಸ್ಥಿತರಿದ್ದರು. ಶಬ್ಬೀರ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು. ಸಾರಿಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಮದಾ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಇಕ್ರಾ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ  ಬಿ.ಡ್ & ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹಧನ ಸೌಲಭ್ಯ ಪಡೆಯಲು ಸೇವಾ-ಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 25 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ 24*7 ಸಹಾಯವಾಣಿ ಸಂಖ್ಯೆ 8277799990 ಅಥವಾ ಉಡುಪಿ ದೂ.ಸಂಖ್ಯೆ: 0820-2574596, ಕುಂದಾಪುರ ದೂ.ಸಂಖ್ಯೆ: 08254-23070 ಹಾಗೂ ಕಾರ್ಕಳ ದೂ.ಸಂಖ್ಯೆ: 08258-231101 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2023 ರ ಡಿಸೆಂಬರ್ ಮಾಹೆಯಿಂದ 2025 ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಜಿಲ್ಲೆಯ ಕುಂದಾಪುರ ತಾಲೂಕಿನ 45-ಗಂಗೊಳ್ಳಿ ಗ್ರಾಮ ಪಂಚಾಯತಿಯ ಒಟ್ಟು 33 ಸ್ಥಾನಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 8 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆ ಶಾಂತಿ ಮತ್ತು ಸುವ್ಯಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಿಗೆ ಮತ ಹಾಕಲು ಅನುಕೂಲವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 36 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚುನಾವಣೆ ನಡೆಯುವ ದಿನದಂದು ಈ ಮೇಲ್ಕಂಡ ಗ್ರಾಮ ಪಂಚಾಯತ್‌ನ ಕ್ಷೇತ್ರ ವ್ಯಾಪ್ತಿಯಲ್ಲಿ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಆರ್ಥಿಕವಾಗಿ ಹಿಂದುಳಿದಿರುವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಬೈಂದೂರು ತಾಲೂಕಿನಲ್ಲಿ ಇದುವರೆಗೆ ಸುಮಾರು 140.74 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು. ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ ಗೃಹಲಕ್ಷ್ಮೀ ಯೋಜನೆಯಿಂದ 27,526 ಫಲಾನುಭವಿಗಳ ಸೆಪ್ಟೆಂಬರ್ ತಿಂಗಳ ತನಕ ಖಾತೆಗೆ ಪ್ರತಿತಿಂಗಂತೆ ಒಟ್ಟು ರೂ. 74.70 ಕೋಟಿ ಜಮಾ ಆಗಿದೆ. ತಾಂತ್ರಿಕ ಕಾರಣದಿಂದಾಗಿ 804 ಫಲಾನುಭವಿಗಳಿಗೆ ಬಾಕಿಯಿದೆ.  ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪಕೇಂದ್ರ ವ್ಯಾಪ್ತಿಯ 27,748 ಕುಟುಂಬಗಳಿಗೆ ನವೆಂಬರ್‌ ತಿಂಗಳ ತನಕ 26 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1899 ಕುಟುಂಬಗಳಿಗೆ 1.71 ಕೋಟಿ ರೂ. ಸೇರಿದಂತೆ ಒಟ್ಟು 27.71ಕೋಟಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಬೈಂದೂರು ತಾಲೂಕು ಲಾರಿ ಮತ್ತು ಕೋರೆ ಮಾಲಕರ ಸಂಘದ ನೇತೃತ್ವದಲ್ಲಿ ಮರಳು & ಕೆಂಪುಕಲ್ಲು ಸಮಸ್ಯೆಗೆ ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಡಿಸೆಂಬರ್‌ 7ರ ಶನಿವಾರ ಬೆಳಿಗ್ಗೆ 9-30ಕ್ಕೆ ಬೈಂದೂರಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೈಂದೂರು ಬೈಪಾಸ್‌ನಿಂದ ಪ್ರತಿಭಟನೆ ಹೊರಟು ತಾಲೂಕು ಆಡಳಿತ ಸೌಧದ ಎದುರು ಸೇರಿ ಪ್ರತಿಭಟನೆ ನಡೆಸಿ ಬಳಿಕ ಬೈಂದೂರು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಗುವುದು. ಈ ವೇಳೆ ಲಾರಿ ಮತ್ತು ಕೋರೆ ಮಾಲಕರ ಸಂಘದ ಸದಸ್ಯರು, ಕಟ್ಟಡ ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದು 5 ವರ್ಷದ ಹಿಂದೆ 3A ಅಡಿಯಲ್ಲಿ ಕೃಷಿ ಅಭಿವೃದ್ಧಿ ಮತ್ತು ಮನೆ ನಿರ್ಮಾಣಕ್ಕೆ ಕೆಂಪು ಕಲ್ಲು ಶಿಲೆ ಕಲ್ಲು ತೆಗೆದು ಸಾಗಾಟ ಮಾಡಲು ಪರವಾನಿಗೆ ನೀಡಲಾಗಿದೆ. ಪ್ರಸ್ತುತ ಕಳೆದ ಒಂದುವರೆ ವರ್ಷದಿಂದ ಯಾವುದೋ ಕಾರಣ ನೀಡಿ ಪರವಾನಿಗೆಗಳನ್ನು ರದ್ದು ಮಾಡಲಾಗಿದೆ. ಈ ಒಂದು ವರ್ಷದ ಹಿಂದೆ ಇದರ ಸಲುವಾಗಿ ಉಡುಪಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ನಾಗಮಂಗಲ ತಾಲೂಕು ಮಂಡ್ಯ ಜಿಲ್ಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 17ರ ವಯೋಮಾನದ ಬಾಲಕರ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ಪ್ರೌಢಶಾಲಾ ವಿಭಾಗದ ’ಸಿದ್ಧಿಸೌರಭ’ ವಾರ್ಷಿಕೋತ್ಸವ ಸಮಾರಂಭವು ಬಹಳ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮಕ್ಕೆ ತುರುವೆಕೆರೆ ಮಾದಿಹಳ್ಳಿಯ ರಾಮಕೃಷ್ಣ ಮಠದ ಶ್ರೀ ಧರ್ಮಾವೃತಾನಂದ ಸ್ವಾಮಿಗಳು ಮತ್ತು ದಾವಣಗೆರೆಯ ಶೈಕ್ಷಣಿಕ ಸಲಹೆಗಾರರೂ ಹಾಗೂ ತರಬೇತುದಾರರಾದ ಜಗನ್ನಾಥ ನಾಡಿಗೇರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ಹಲವಾರು ಸಂಸ್ಥೆಗಳನ್ನು ದಕ್ಷವಾಗಿ ಮುನ್ನೆಡೆಸಿದ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಮಾಜಿ ಉಪಾಧ್ಯಕ್ಷರಾಗಿದ್ದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಅಭಿವೃದ್ಧಿಗಾಗಿ ಬಹುವಾಗಿ ಶ್ರಮಿಸಿದ ’ಸ್ವಪ್ನ ಶಿಲ್ಪಿ’ಡಾ. ಹೆಚ್ ಶಾಂತಾರಾಮರನ್ನು ಸಂಸ್ಥೆಯ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎನ್. ಪಿ. ನಾರಾಯಣ ಶೆಟ್ಟಿ ಅವರು ಎಚ್ ಶಾಂತಾರಾಮರ ಬಗ್ಗೆ ತಿಳಿಸುತ್ತಾ, ಸಾಗರದಂತಹ ವ್ಯಕ್ತಿತ್ವವುಳ್ಳ ನಡೆದಾಡುವ ವಿಶ್ವಗ್ರಂಥ ಎಚ್. ಶಾಂತಾರಾಮರು. ಇವರು ಹಟ್ಟಿಅಂಗಡಿಯನ್ನು ಬಹಳವಾಗಿ ಪ್ರೀತಿಸುತ್ತಾರೆ. ಸಾಹಿತ್ಯಕ್ಕೆ ಬಹಳ ಕೊಡುಗೆಗಳನ್ನಿತ್ತವರು. ಹತ್ತಾರು ಸಂಸ್ಘಸಂಸ್ಥೆಗಳನ್ನು ದಕ್ಷವಾಗಿ ಮುನ್ನಡೆಸಿದವರು. ಈ ವಿದ್ಯಾಸಂಸ್ಥೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಮಲಶಿಲೆ ಗ್ರಾಮದ ನಿವಾಸಿ ಚಂದ್ರ ಬೋವಿ (55) ಅವರು ಎದೆ ನೋವು ಕಾಣಿಸಿಕೊಂಡು ಮೃತಪಟ್ಟಿ ದ್ದಾರೆ. ಬುಧವಾರ ಬೆಳಗ್ಗಿನ ಜಾವ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ಕೂಡಲೆ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಅಲ್ಪಾಡಿ ಅರಣ್ಯ ಘಟಕದ ಉಪವಲಯ ಅರಣ್ಯಾಧಿಕಾರಿ ಹೇಮಾ ಅವರು ಅರಣ್ಯ ಪಾಲಕ ರಾಘವೇಂದ್ರ ಅವರ ಬೈಕಿನ ಹಿಂಬದಿ ಕುಳಿತು, ಹೆಬ್ರಿ ತಾ। 9ನೇ ಮೈಲುಕಲ್ಲು ಬಳಿ ಅರಣ್ಯ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಗಣೇಶ ಅವರು ಚಲಾಯಿಸುತ್ತಿದ್ದ ಪಿಕಪ್, ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡರು. ಇಬ್ಬರನ್ನು ಸ್ಥಳೀಯರು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೋಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More