ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಮೊದಲ 10 ರ್ಯಾಂಕ್ನಲ್ಲಿ ಇಬ್ಬರು, ಮೊದಲ 50ರಲ್ಲಿ ಒಂಬತ್ತು, ಮೊದಲ 100ರಲ್ಲಿ 21, ಮೊದಲ 200ರಲ್ಲಿ 48, 200ರಲ್ಲಿ 85, 400ರಲ್ಲಿ 117, 500ರಲ್ಲಿ 157, 1000ದ ಒಳಗೆ 516, 2000ದ ಒಳಗೆ 1048, 2000ದ ಒಳಗೆ 1772, 4000ದ ಒಳಗೆ 2107, 5000ದ ಒಳಗೆ 2656 ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 1000 ರ್ಯಾಂಕ್ಗಳಲ್ಲಿ 24 ವಿದ್ಯಾರ್ಥಿಗಳು, ಮೊದಲ 5000 ರ್ಯಾಂಕ್ನ ಒಳಗೆ 273 ವಿದ್ಯಾರ್ಥಿಗಳು, ಮೊದಲ 10,000 ರ್ಯಾಂಕ್ಗಳಲ್ಲಿ ಒಟ್ಟು 738 ವಿದ್ಯಾರ್ಥಿಗಳು ರ್ಯಾಂಕ್ನ್ನು ಪಡೆದಿದ್ದು, ಇವೆರೆಲ್ಲರೂ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ. ವರುಣ್ ವಿ- ಪಶು ವೈದ್ಯಕೀಯದಲ್ಲಿ 3ನೇ ರ್ಯಾಂಕ್, ಕೃಷಿಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲೆಯ ಉನ್ನತಿಗೆ ಪೂರ್ವ ವಿದ್ಯಾರ್ಥಿಗಳ ಬೆಂಬಲ ಬೇಕು. ಶಾಲೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತದೆ. ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಆಧರಿಸಿ ಬದುಕು ರೂಪಿಸಿಕೊಳ್ಳುತ್ತಾರೆ. ಅವರು ಗಳಿಸುವ ಸಾಮರ್ಥ್ಯ ಪಡೆದಾಗ ತಮ್ಮನ್ನು ಬೆಳೆಸಿದ ಶಾಲೆಯ ಉನ್ನತೀಕರಣಕ್ಕೆ ಸಾಧ್ಯವಾದ ಬೆಂಬಲ ನೀಡಬೇಕು ಎಂದು ಮರವಂತೆಯ ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಹೇಳಿದರು. ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಮೊದಲ ವಿದ್ಯಾರ್ಥಿ ತಂಡ ರೂ 1.5 ಲಕ್ಷ ವೆಚ್ಚದಲ್ಲಿ ಶಾಲೆಗೆ ನೀಡಿದ ಪ್ರಯೋಗಾಲಯ ಪರಿಕರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿ ಕಲಿತ ಈ ವಿದ್ಯಾರ್ಥಿ ತಂಡದ ಉಪಕ್ರಮ ಅನ್ಯ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಬಳೆಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಪಟಗಾರ್, ಉದ್ಯಮಿ ಸತೀಶ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಅವರಿಗೆ ನಾಲ್ಕನೇ ಭಾರಿಗೆ ಭರ್ಜರಿ ಗೆಲುವು ದೊರೆತಿದೆ. ಮಧ್ಯಾಹ್ನ 2.45 ಗಂಟೆಯ ವೇಳೆಗೆ ಬಿ.ವೈ. ರಾಘವೇಂದ್ರ ಅವರು 7,78,721 ಮತಗಳನ್ನು ಪಡೆದಿದ್ದರೇ, ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಗೀತಾ ಶಿವರಾಜಕುಮಾರ್ ಅವರು 5,35,006 ಮತಗಳನ್ನು ಪಡೆದುಕೊಂಡಿದ್ದರು. ರಾಘವೇಂದ್ರ ಅವರು 2,43,715 ಮತಗಳ ಮುನ್ನಡೆ ಕಾಯ್ದುಕೊಂಡು ಗೆಲುವಿನ ಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು 30,050 ಮತಗಳನ್ನಷ್ಟೇ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ಕಛೇರಿಯಲ್ಲಿ ಗೆಲುವನ್ನು ಸಿಹಿ ಹಂಚಿ ಸಂಭ್ರಮಿಸಿದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸೇರಿದಂತೆ ಬಿಜೆಪಿ ಜೆಡಿಎಸ್ ಶಾಸಕರು, ಪಕ್ಷದ ನಾಯಕರು ಜೊತೆಗಿದ್ದರು. ಒಟ್ಟಾರೆ ಇಲ್ಲಿ23 ಅಭ್ಯರ್ಥಿಗಳಿದ್ದಾರೆ. ಕೆಎಸ್ ಈಶ್ವರಪ್ಪ ಜೊತೆಗೆ ಡಿಎಸ್ ಈಶ್ವರಪ್ಪ ಎಂಬ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯಿರುವುದು ವಿಶೇಷ. ಶಿವಮೊಗ್ಗವೂ ಸೇರಿದಂತೆ ಕರ್ನಾಟಕದ 14…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 2,19,695 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರು, 7,32,234 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ಅವರು 4,70,215 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕೋಟ ಶ್ರೀನಿವಾಸ್ ಪೂಜಾರಿ ಅವರು 2,59,175 ಮತಗಳ ಮುನ್ನಡೆ ಸಾಧಿದ್ದಾರೆ. ಜೊತೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 11,269 ರಷ್ಟು ಮತಗಳು ನೋಟಾ ಬಂದಿವೆ. ಕೋಟ ಶ್ರೀನಿವಾಸ ಪೂಜಾರಿ ಅವರು ಈ ವೇಳೆ ಪ್ರತಿಕ್ರಿಯಿಸಿ ನಾಯಕರು, ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಕೋಟ ಶ್ರೀನಿವಾಸ್ ಪೂಜಾರಿ ಅವರು ಗೆಲುವಿನ ನಗೆ ಬೀರಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಅವರನ್ನು ಮೇಲಕ್ಕೆತ್ತಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮತ್ತೆ ಬಿಜೆಪಿ ತೆಕ್ಕೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ:ಕಳೆದ ಬಾರಿ ಮೈತ್ರಿಯಡಿ ಜೆಡಿಎಸ್ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಕಾಂಗ್ರೆಸ್ ಈ ಬಾರಿ ತನ್ನ ಗತವೈಭವಕ್ಕೆ ಮರಳಲು ಕೆ ಜಯಪ್ರಕಾಶ್ ಹೆಗ್ಡೆ ಮೇಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಸ್ಪಷ್ಟ ಗೆಲುವು ದೊರೆಯುವುದು ಖಾತ್ರಿಯಾಗಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಬಿ.ವೈ. ರಾಘವೇಂದ್ರ ಅವರು 4,79,846 ಮತಗಳನ್ನು ಪಡೆದಿದ್ದರೇ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಗೀತಾ ಶಿವರಾಜಕುಮಾರ್ ಅವರು 3,42,379 ಮತಗಳನ್ನು ಪಡೆದುಕೊಂಡಿದ್ದಾರೆ. 1,40,000ಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು 18,494 ಮತಗಳನ್ನು ಪಡೆದುಕೊಂಡಿದ್ದಾರೆ. ಬಿ.ವೈ. ರಾಘವೇಂದ್ರ ಅವರ ಗೆಲುವಿನ ಮುನ್ಸೂಚನೆ ದೊರೆಯುತ್ತಿದ್ದಂತೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರೇ, ಅವರ ಕುಟುಂಬಿಕರು ಆರತಿ ಬೆಳಗಿ ಸ್ವಾಗತಿಸಿಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜು.03: ಮೆಸ್ಕಾಂನ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುವ ವೇಳೆ ವಿದ್ಯುತ್ ತಗುಲಿ ಲೈನ್ಮ್ಯಾನ್ ಮೃತಪಟ್ಟ ಘಟನೆ ಇಂದು ತಗ್ಗರ್ಸೆ ಗ್ರಾಮದಲ್ಲಿ ನಡೆದಿದೆ. ಅವಘಡದಲ್ಲಿ ಲೈನ್ಮ್ಯಾನ್ ಸಲೀಂ ಮೇ. ಅಗಸಿಮನೆ (38) ಸಾವನ್ನಪ್ಪಿದ್ದಾರೆ. ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಸೋಮವಾರ ಮದ್ಯಾಹ್ನದ ವೇಳೆ ಟ್ರಾನ್ಸ್ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಲೀಂ ಅವರು ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿ. ವಿವಾಹಿತರಾಗಿರುವ ಅವರು ಪತ್ನಿ ಹಾಗೂ ಎರಡು ತಿಂಗಳ ಮಗು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಸರಕಾರಿ ಅಸ್ಪತ್ರೆಯ ಆಡಳಿತಾಧಿಕಾರಿ ರಾಬರ್ಟ್ ರೆಬೆಲ್ಲೋ ರವರ ಮಾನಸಿಕ ಮತ್ತು ಲೈಂಗಿಕ ಕಿರುಕುಳ ಘಟನೆಯು ಈ ಆಸ್ಪತ್ರೆಗೆ ಕಪ್ಪುಚುಕ್ಕಿಯಾಗಿದ್ದು ಪ್ರಕರಣದ ಸತ್ಯತೆಯನ್ನು ಮರೆಮಾಚದೇ ಇಲಾಖಾ ವತಿಯಿಂದ ತನಿಖೆ ನಡೆಸಿ ಅವರ ಅಮಾನತಿಗೆ ಶಿಪಾರಸ್ಸು ಮಾಡಿ ಮೇಲಾಧಿಕಾರಿಗಳಿಗೆ ವಿಸ್ತ್ರತ ವರದಿಯನ್ನು ನೀಡಬೇಕೆಂದು ಕುಂದಾಪುರ ಸಾರ್ವಜನಿಕ ನಿಯೋಗ ಮನವಿ ಮಾಡಿದೆ. ಕುಂದಾಪುರ ತಾಲೂಕು ಸರಕಾರಿ ಅಸ್ಪತ್ರೆಯು ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದ್ದು ತಾಲೂಕು ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಕೂಡ ಚಿಕಿತ್ಸೆಗಾಗಿ ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದು ಇಲ್ಲಿನ ಕುಂದಾಪುರದ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಈಶ್ವರ್ ಗಢಾದ್ರವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಲತಾ, ಸಹಾಯಕ ಆಡಳಿತಾಧಿಕಾರಿ ಲಿನೋರಾ ಮಸ್ಕೇರನಾಸ್ ಕಚೇರಿ ಅಧೀಕ್ಷರಾದ ಶಾಲಿ ಉಪಸ್ಥಿತರಿದ್ದರು. ಕುಂದಾಪುರ ಸಾರ್ವಜನಿಕ ನಿಯೋಗದಲ್ಲಿ ರಾಜೇಶ್ ಕಾವೇರಿ, ಹೇರಿಕುದ್ರು ಸುನಿಲ್ ಶೆಟ್ಟಿ, ಬಲ್ಲಾಳ್ ಕಿಶೋರ್, ಪುರಸಭಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೂನ್ 01 ರಂದು ಶ್ರೀವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ ಓರಿಟೆಂಶನ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅವರು ವಹಿಸಿದ್ದರು. ಸಿಎ ಗೋಪಾಲ ಕೃಷ್ಣ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸಿಎ, ಸಿಎಸ್ ಕೋರ್ಸ್ ಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಹಾಗೆಯೇ ವಿದ್ಯಾರ್ಥಿಗಳಿಗೆ ಅಂಕಗಳಿಗಿಂತ ಕೌಶಲ್ಯ ಮುಖ್ಯ, ವಿದ್ಯಾರ್ಥಿಗಳು ಮನಸ್ಸಿನಲ್ಲಿ ಕೀಳರಿಮೆ ಬೆಳಸಿಕೊಳ್ಳದೇ ಸಾಧನೆಯ ಜೀವನ ನಿಮ್ಮದಾಗಬೇಕು ಎನ್ನುವ ಕಿವಿ ಮಾತನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಲತಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೆಕ್ಕ ಶಾಸ್ತ್ರ ಉಪನ್ಯಾಸಕ ಸುಶಾಂತ್ ನಾಯಕ್ ಸಿಎ ಗೋಪಾಲಕೃಷ್ಣ ಭಟ್ ಅವರನ್ನು ಪರಿಚಯಿಸಿದರು. ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಸ್ವಾಗತಿಸಿದರು , ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ನಿಧಿ ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ್ ಕಾರ್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ಸಾಹಿತ್ಯ ಸಹವಾಸ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಡಿಯೊ ಸರಣಿಯನ್ನು ಬಿಡುಗಡೆ ಮಾಡಿದ ನಾಡಿನ ಹಿರಿಯ ಸಾಹಿತಿ ಮತ್ತು ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಮಾತನಾಡಿ “ಮನಸ್ಸು ಮುಟ್ಟಬಹುದಾದ ಸೂಕ್ಷ್ಮಾತಿಸೂಕ್ಷ್ಮವಾದ ಲಹರಿಗಳನ್ನು, ಅಸ್ತಿತ್ವದ ಬಿಂದುಗಳನ್ನು ಈ ನೆಲದ ಮೂವರು ಮಹನೀಯರಾದ ಕಾರಂತರು, ಅನಂತಮೂರ್ತಿ ಮತ್ತು ಅಡಿಗರು ಮುಟ್ಟಿದವರು. ಅಡಿಗರು ಸಿದ್ಧಶೈಲಿಯಿಂದ ಹೊರಟು ಹೊಸಹುಟ್ಟು ಅಥವಾ ತಾವು ಪಡೆಯಬೇಕಾದ ನಾವೀನ್ಯತೆಯ ಅನುಕೂಲದ ಅನಿವಾರ್ಯತೆಯನ್ನು ತೋರಿಸಿಕೊಟ್ಟವರು ಎಂದು ಬಣ್ಣಿಸಿದರು.ಕಾರಂತರದು ಸ್ವಯಂಕೃತ ವ್ಯಕ್ತಿತ್ವ. ತಮ್ಮದಾರಿ ಮತ್ತು ಅಭಿವ್ಯಕ್ತಿಯನ್ನು ತಾನೇ ಕಂಡುಕೊಂಡವರು. ಅದೊಂದು ಚಾರಿತ್ರಿಕ ಸ್ಥಿತಿಯಷ್ಟೇ ಅಲ್ಲ, ಅದಕ್ಕೆ ಅವರ ವ್ಯಕ್ತಿತ್ವದ ಪ್ರಯೋಗಶೀಲತೆಯೂ ಕಾರಣ. ಅವರದು ಲಿಪಿಬದ್ಧ ಸಂಪ್ರದಾಯ ಕಡಿಮೆ. ಮೌಖಿಕ ಸಂಪ್ರದಾಯವೇ ಹೆಚ್ಚು. ವೇಗ, ತಾತ್ಕ್ಷಣಿತ ಪ್ರವೃತ್ತಿ ಅವರಲ್ಲಿ ಎದ್ದು ಕಾಣುವ ಗುಣಗಳು. ಅವರದು ಕಾಯುವಿಕೆಗೆ ಒಗ್ಗದ ಅಸಲು ಕಸುಬು. ಶಾಸ್ತ್ರಕ್ಕಿಂತ ಅವರಿಗೆ ಮನೋಧರ್ಮ ಪ್ರಧಾನವಾಗಿರುವ ಭಾವ…
