Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಸಂಗ್ರಹಿಸಿದ ವಸ್ತುಗಳನ್ನು ಕೊಡುಗೆ ನೀಡುವುದು ಅಂತಕರಣದಿಂದ ಮಾಡುವ ದಾನ. ಸಂಗ್ರಹ ಹಾಗೂ ದಾನದ ಹಿಂದಿನ ಮೌಲ್ಯ ಮಹತ್ತರ’ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಗ್ರಂಥಾಲಯ ವಿಭಾಗವು ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮೆಸಪಟೋಮಿಯದಲ್ಲಿ ಮೊದಲ ಗ್ರಂಥಾಲಯ ಸ್ಥಾಪನೆಯಾಯಿತು ಎಂದು ಇತಿಹಾಸ ತಿಳಿಸಿದ ಅವರು, ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಹೆಚ್ಚಾಗುತ್ತಾರೆ. ಆದರೆ, ಗ್ರಂಥಾಲಯ ಕಟ್ಟಿದರೆ ವಿದ್ವಾಂಸರು ಹುಟ್ಟುತ್ತಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಮಾತನ್ನು ನೆನಪಿಸಿದರು. ಪುಸ್ತಕಕ್ಕೆ ಮರಣ ಇಲ್ಲ. ಫುಸ್ತಕಗಳು ಜ್ಞಾನ ನೀಡುವ ದೇಗುಲ. ಜಾತಿ, ಧರ್ಮ ಮೀರಿದ ದೇವಾಲಯವೇ ಗ್ರಂಥಾಲಯ. ನಾಗರಿಕತೆ ಇತಿಹಾಸವೇ ಗ್ರಂಥದಲ್ಲಿವೆ. ಓದು ವ್ಯಕ್ತಿ ಬೆಳವಣಿಗೆಗೆ ಪೂರಕ ಎಂದರು. ದೇಶದ ಮೊದಲ ಗ್ರಂಥಾಲಯದಲ್ಲಿ ನಮ್ಮ ಸುರತ್ಕಲ್‌ನ ಮಹಿಳೆಯೊಬ್ಬರು ಸೇವೆ ಸಲ್ಲಿಸಿದ್ದರು’ಎಂದು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತೀಯ ಜನತಾ ಪಕ್ಷ ವಿಶ್ವದ ದೊಡ್ಡ ರಾಜಕೀಯ ಪಕ್ಷವಾಗಿದೆ. ಸದಸ್ಯತ್ವ ಅಭಿಯಾನದ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೊಂದಾವಣಿಯಾಗಬೇಕು ಈ ಮೂಲಕ ಈ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕೆಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕುಂದಾಪುರದ ಬಿಜೆಪಿಯ ಕಚೇರಿಯಲ್ಲಿ ಜರುಗಿದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ಸದಸ್ಯತ್ವ ಅಭಿಯಾನವು ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಿಂದ 15ರವರೆಗೆ ಎರಡು ಹಂತಗಳಲ್ಲಿ ಬಿಜೆಪಿ ಅಭಿಯಾನ ನಡೆಯಲಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಅಭಿಯಾನಕ್ಕೆ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಹಾಗೂ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಸದಸ್ಯತ್ವ ಪಡೆಯುವ ಮೂಲಕ ರಾಷ್ಟ್ರದಂತ ನಿನ್ನೆ ದಿವಸ ಸದಸ್ಯ ಅಭಿಯಾನಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 8ನೇ ತರಗತಿ ವಿದ್ಯಾರ್ಥಿ ಸಮರ್ಥ ಪಿ. ಹೆಗ್ಡೆ 14 ವರ್ಷ ಒಳಗಿನ ಮಕ್ಕಳ ಖೋಖೊ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ  ಆಯ್ಕೆಯಾಗಿದ್ದಾನೆ. ಅವರಿಗೆ ಆಡಳಿತಮಂಡಳಿ, ಮುಖ್ಯಶಿಕ್ಷಕರು ಬೋಧಕ ಮತ್ತು ಬೋಧಕೇತರ ವೃಂದ ಶುಭ ಕೋರಿರುತ್ತಾರೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಿಯುಸಿ ಬಳಿಕದ ವ್ಯಾಸಂಗಕ್ಕಾಗಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಸೀಟು ದೊರೆತ ಬಗ್ಗೆ ಬೇಸರಗೊಂಡ ವಿದ್ಯಾರ್ಥಿಯೊಬ್ಬ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪರ ತಾಲೂಕಿನ ಹಳ್ನಾಡು ಎಂಬಲ್ಲಿ ನಡೆದಿದೆ. ತಾಲೂಕಿನ ಹಳ್ನಾಡು ಗ್ರಾಮದ ಶಿವಪ್ರಸಾದ್ ಶೆಟ್ಟಿ ಎಂಬುವರ ಮಗ ಸುಪ್ರಜ್ ಶೆಟ್ಟಿ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕುಂದಾಪುರದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿಯು ವಿದ್ಯಾಭ್ಯಾಸ ಮಾಡಿದ್ದ ಸುಪ್ರಜ್ ಶೆಟ್ಟಿಗೆ ಕೌಸಿಲಿಂಗ್‌ನಲ್ಲಿ ಇಂಜಿನಿಯರಿಂಗ್‌ ಸೀಟು ದೊರೆತಿತ್ತು. ಬೆಂಗಳೂರಿನಲ್ಲಿ ಇಂಜಿನಿಯರ್ ಮಾಡಲು ಆತನಿಗೆ ಇಷ್ಟವಿರಲಿಲ್ಲ.. ಆತನ ಮನೆಯವರು ಮಗನಿಗೆ ಬುದ್ಧಿವಾದ ಹೇಳಿ ಬೆಂಗಳೂರಿಗೆ ಕಳುಹಿಸಲು ಬಟ್ಟೆಬರೆಗಳನ್ನು ಪ್ಯಾಕ್ ಮಾಡಿದ್ದರು ಎನ್ನಲಾಗಿದೆ. ಗುರುವಾರ ಆತ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಬುಧವಾರ ಸಂಜೆ ಹಳ್ನಾಡು ಮನೆಯ ಸಮೀಪದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬುಧಚಾರ ಸಂಜೆ ಹೊಳೆಯ ಬದಿಯಲ್ಲಿ ಬದಿಯಲ್ಲಿ ತನ್ನ ಚಪ್ಪಲಿ ಮತ್ತು ಮೊಬೈಲ್ ಬಿಟ್ಟಿರುವುದು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಮನೆಯವರು ಹಾಗೂ ಸ್ಥಳೀಯತು ಹುಡುಕಾಟ ನಡೆಸಿದ್ದರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉತ್ತಮ ಪ್ರಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಲು ಕೊನೆಯ ಕ್ಷಣದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯನ್ನು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ. ಇಂದು (ಸೆ.5) ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ನೀಡುವುದನ್ನು ಸರ್ಕಾರ ತಡೆ ಹಿಡಿದಿದೆ. ಸರಕಾರದ ಈ ನಡೆದ ಇದೀಗೆ ಟೀಕೆಗೆ ಕಾರಣವಾಗಿದೆ. ► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098 . ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಜಬ್ ವಿವಾದದ ಪರಿಣಾಮ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ ಎನ್ನಲಾಗಿದೆ. ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜು ಗೇಟ್ ಹೊರಕ್ಕೆ ನಿಲ್ಲಿಸಿದ್ದರು. ಆ ಫೋಟೊ ವೈರಲ್ ಆಗಿತ್ತು. ಪ್ರಾಂಶುಪಾಲರ ಪ್ರಶಸ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇತ್ತಿಚಿಗೆ ನಡೆಯಿತು. ಕಾರ್ಯಕ್ರಮವನ್ನು ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್. ವಿಶ್ವನಾಥ ಕರಬ ಅವರು ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ್ಯೋದ್ದೇಶಗಳು, ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸತ್ಯನಾರಾಯಣ ಹತ್ವಾರ್ ಇವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ಅಗತ್ಯತೆ ಬಗ್ಗೆ ತಿಳಿಸಿದರು.  ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ  ಅರುಣ್ ಏ. ಎಸ್, ರಾಮಚಂದ್ರ ಆಚಾರ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸ್ವಯಂಸೇವಕರಾದ ಸಮೀಕ್ಷಾ ಶೆಟ್ಟಿ ಸ್ವಾಗತಿಸಿದರು, ದೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಅಮಿತ್ ರಾಜ್ ವಂದಿಸಿದರು ಹಾಗೂ ವಿಗ್ನೇಶ್ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಆಯ್ಕೆಯಾದ ಕುಂದಾಪುರದ ಜ್ಯೂನಿಯರ್ ಕಾಲೇಜು ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡುವ ವಿಷಯದಲ್ಲಿ ತಾತ್ಕಾಲಿಕ ತಡೆ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಖಂಡಿಸಿದ್ದಾರೆ. ಇದನ್ನೂ ಓದಿ:► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098 . ಪಾಲರಾದ ಬಿ. ಜಿ. ರಾಮಕೃಷ್ಣ ಅವರ ಎಲ್ಲಾ ಅರ್ಹತೆಯನ್ನು ಗಮನಿಸಿ ಶಿಕ್ಷಣ ಇಲಾಖೆ ಪ್ರಶಸ್ತಿ ಆಯ್ಕೆ ಮಾಡಿದೆ. ಶಿಕ್ಷಣ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಇದು ಶಿಕ್ಷಣ ಇಲಾಖೆ ಮತ್ತು ದೇಶದಾದ್ಯಂತ ಇರುವ ಶಿಕ್ಷಕರಿಗೆ ಮಾಡಿದ ಅವಮಾನ. ರಾಜ್ಯ ಸರ್ಕಾರ ಈ ಕೂಡಲೇ ತಾತ್ಕಾಲಿಕ ತಡೆಯನ್ನು ತೆಗೆದು ಹಾಕಿ ಈ ಹಿಂದೆ ಆಯ್ಕೆಯಾದ ಗೌರವಾನ್ವಿತ ಶಿಕ್ಷಕರಿಗೆ ಪ್ರಶಸ್ತಿ ನೀಡಬೇಕು ಅವರು ಆಗ್ರಹಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಮಿಳುನಾಡಿನ ವೆಲಂಕಣಿಯಲ್ಲಿರುವ ಚರ್ಚಿಗೆ ತೆರಳು ಅನುಕೂಲವಾಗುವಂತೆ ಮಡಗಾಂವ್- ವೆಲಂಕಣಿ ನಡುವೆ ಸೆಪ್ಟೆಂಬರ್ 6ಕ್ಕೆ ವಿಶೇಷ ರೈಲು ಸಂಚರಿಸಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಮೇರೆಗೆ ಕೊಂಕಣ ರೈಲ್ವೆ ಈ ಆದೇಶ ಹೊರಡಿಸಿದೆ. ರೈಲು ಸೆಪ್ಟಂಬರ್ 6ರ ಮಧ್ಯಾಹ್ನ 12:30ಕ್ಕೆ ಮಡಗಾಂವ್ ನಿಂದ ಹೊರಡಲಿದ್ದು 3:36ಕ್ಕೆ ಬೈಂದೂರು, 4:18ಕ್ಕೆ ಕುಂದಾಪುರ, 4:42ಕ್ಕೆ ಉಡುಪಿ, 5:30ಕ್ಕೆ ಸುರತ್ಕಲ್, ಸಂಜೆ 6ಕ್ಕೆ ಮಂಗಳೂರು ಜಂಕ್ಷನ್ ಆಗಿ ಕಾಸರಗೋಡು ಪಯ್ಯನೂರು ಮೂಲಕ ರಾತ್ರಿ 11:14ಕ್ಕೆ ಶಿರೂರು ನಿಲ್ದಾಣ, ಸೆಪ್ಟೆಂಬರ್ 7ರ ಬೆಳಿಗ್ಗೆ 8:28ಕ್ಕೆ ತಿರುಚಿರಪಳ್ಳಿ ಮಧ್ಯಾಹ್ನ 12:25 ಕ್ಕೆ ವೆಲಂಕಣಿಗೆ ತಲುಪಲಿದೆ. ಸೆಪ್ಟೆಂಬರ್ 7ರ ರಾತ್ರಿ 11:55ಕ್ಕೆ ವೆಲಂಕಣಿಯಿಂದ ಹೊರಟು ಮಂಗಳೂರು, ಉಡುಪಿ, ಕುಂದಾಪುರ, ಕಾರಾವರ ಮೂಲಕ ಸಂಚರಿಸಲಿದೆ. ಈ ರೈಲು ಸಂಚಾರ ಆರಂಭದಿಂದ ಕರಾವಳಿ ಭಾಗದ ಕ್ರೈಸ್ತರಿಗೆ ವೆಲಂಕಣಿಯ ವಾರ್ಷಿಕ ಹಬ್ಬಕ್ಕೆ ತೆರಳಲು ಅನುಕೂಲವಾಗಲಿದೆ. ಅನೇಕ ಸಮಯಗಳಿಂದ ಮಡಗಾಂವ್- ವೆಲಂಕಣಿ ಮಧ್ಯೆ ರೈಲು ಸಂಚಾರ ಆರಂಭಕ್ಕೆ ಬೇಡಿಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ (ಕಿರು ಮಂತ್ರಾಲಯ) ಶ್ರೀ ಗುರು ಸಾರ್ವಭೌಮರ ನೂತನ ಶಿಲಾಮಯ ಗರ್ಭಗೃಹಕ್ಕೆ ಗುರುವಾರ ಶಿಲಾನ್ಯಾಸ ಮಾಡಲಾಯಿತು. ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಹಾಗೂ ಮಠದ ಪ್ರಧಾನ ಅರ್ಚಕರಾದ ಸುಬ್ರಾಯ ನಾವಡ ಇವರ ನೇತೃತ್ವದಲ್ಲಿ ಬೆಳಿಗ್ಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ, ಸದಸ್ಯರಾದ ಎಸ್‌. ರಾಜು ಪೂಜಾರಿ, ಮಂಜುನಾಥ ಶೆಟ್ಟಿ, ದಿನೇಶ್, ರವೀಂದ್ರ ಶ್ಯಾನುಭಾಗ್‌, ಗಿರೀಶ್ ಶೇಟ್‌, ರಾಜು ದೇವಾಡಿಗ, ಮಂಜುನಾಥ ಸೆಳಾಕುಳ್ಳಿ, ಜಗನ್ನಾಥ ಶೆಟ್ಟಿ, ಮಹೇಶ್ ಮೊಗೇ‌ರ್ ಕರಾವಳಿ, ದಿನಕರ ಶೆಟ್ಟಿ, ಅಣ್ಣಪ್ಪ ಪೂಜಾರಿ, ಶಿಲ್ಪಿಗಳಾದ ಗುರು ಭಟ್ಕಳ, ಅರ್ಚಕರಾದ ಮುರುಳಿ ನಾವಡ, ತಿರುಮಲ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಡಾ|| ಸರ್ವೇಪಳ್ಳಿ ರಾಧಾಕೃಷ್ಣನ್‌ರವರ ಜನ್ಮದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ , ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ, ಪೂರ್ವ ಪಾರ್ಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಹಾಗೂ ಶಾಲಾ ವಿದ್ಯಾರ್ಥಿ ಸಂಸತ್ತಿನ ಮಕ್ಕಳು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ವಿದ್ಯಾರ್ಥಿ ಮನ್ವಿತಾ ಎಸ್. ಅವರು ಶಿಕ್ಷಕರ ದಿನಾಚರಣೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಲೋನಾ ಡಿಸೋಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More