ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ 2026-29ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆ ಚುನಾವಣೆಯನ್ನು ಬೆಂಗಳೂರು ಬಂಟರ ಸಂಘದ ಆವರಣ ಹಾಗೂ ಮುಲ್ಕಿ ಸುಂದರರಾಮ್ ಶೆಟ್ಟಿ ಮೆಮೋರಿಯಲ್ ಎಂ.ಎಸ್.ಆರ್.ಎಸ್. ನಗರ ಟ್ರಸ್ಟ್ ಹಾಲ್‌ನಲ್ಲಿ ಏಕಕಾಲದಲ್ಲಿ ನಡೆಸಲಾಯಿತು.

ಸಂಘದ ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಮಧುಕರ್ ಎಂ. ಶೆಟ್ಟಿ ಹಾಗೂ ಸೌಮ್ಯಪ್ರಿಯ ಹೆಗ್ಡೆ, ಗೌರವ ಕಾರ್ಯದರ್ಶಿಯವರಾಗಿ ಅಮರನಾಥ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸುರೇಖಾ ಶೆಟ್ಟಿ, ಖಜಾಂಚಿಯಾಗಿ ರಮಿತ್ ಬಿ. ಶೆಟ್ಟಿ ಅವರು ಆಯ್ಕೆಯಾಗಿರುತ್ತಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅನಿತಾ ಪಿ. ಭಂಡಾರಿ, ಅರುಣ್ ಕುಮಾರ್ ಶೆಟ್ಟಿ ಹೆಚ್., ಸಿಎ. ಚಂದ್ರಶೇಖರ್ ಶೆಟ್ಟಿ, ಹೀರಾ ಅನೂಪ್ ಹೆಗ್ಡೆ, ಕೀರ್ತನ್ ಶೆಟ್ಟಿ, ಸಿಎ. ಕಿಶೋರ್ ಶೆಟ್ಟಿ, ಮಾಲತಿ ಜೆ. ಶೆಟ್ಟಿ, ನಿತ್ಯರಂಜನ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಎಸ್. ಪ್ರತಾಪ್ ಶೆಟ್ಟಿ, ಶ್ರೀ ರಾಮ್‌ದಾಸ್ ಶೆಟ್ಟಿ ಕೆ.ಎಸ್., ಶಕುಂತಲ ಶೆಟ್ಟಿ, ಸುರೇಂದ್ರ ಶೆಟ್ಟಿ ಹೆಚ್. ಮತ್ತು ಉಮೇಶ್ ಪೂಂಜ ಡಿ. ಅವರು ಆಯ್ಕೆಯಾಗಿರುತ್ತಾರೆ.
ಸಂಘ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ವಿವಿಧ ಯೋಜನೆಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅಮೂಲ್ಯ ಸಹಕಾರ ಹಾಗೂ ಬೆಂಬಲ ನೀಡಿದ ಎಲ್ಲಾ ಸದಸ್ಯರಿಗೆ ಸಮಿತಿಯು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದೆ. ನೂತನ ಅವಧಿಯಲ್ಲಿಯೂ ಸದಸ್ಯರು ಇದೇ ರೀತಿಯ ಸಹಕಾರ ಹಾಗೂ ಬೆಂಬಲವನ್ನು ಮುಂದುವರಿಸುವಂತೆ ಮನವಿ ಮಾಡಿದೆ – ಅಮರನಾಥ ಶೆಟ್ಟಿ, ಗೌರವ ಕಾರ್ಯದರ್ಶಿ
















