Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಾಲ್ಯವು ಒಂದು ಅಮೂಲ್ಯ ಸಂಪತ್ತಿನಂತೆ ಇದನ್ನು ಪ್ರತಿಕ್ಷಣವೂ ಸಂಭ್ರಮಿಸಬೇಕು ಎಂದು ರಂಗ ನಿರ್ದೇಶಕರಾದ ಡಾ ಶ್ರೀಪಾದ ಭಟ್ ಅವರು ಹೇಳಿದರು. ಅವರು ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ) ಕುಂದಾಪುರ ಸರಕಾರಿ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗಾಗಿ ಆಯೋಜಿಸಿದ ಉಚಿತ ರಂಗ ರಂಗು ಬೇಸಿಗೆ ರಜಾ ಮೇಳವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿವಿಧ ಕಥೆ ಕವನಗಳನ್ನು ವಿಸ್ತರಿಸುತ್ತಾ ಇಲ್ಲಿ ಹತ್ತು ದಿನಗಳ ಕಾಲ ವೈವಿಧ್ಯಮಯ ಚಟುವಟಿಕೆಗಳು ನಾಟಕ ಪ್ರದರ್ಶನ ಇತ್ಯಾದಿಗಳು ಇದ್ದು ಮಕ್ಕಳು ಇಲ್ಲಿನ ಎಲ್ಲಾ ಸೃಜನಶೀಲ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಪ್ರತಿ ವರ್ಷದಂತೆ ಈ ವರ್ಷವೂ ಇವರು ಹಮ್ಮಿಕೊಂಡಿರುತ್ತಾರೆ. ರಂಗ ನಿರ್ದೇಶಕ ವಾಸುದೇವ ಗಂಗೇರ ಮೇಳದ ನಿರ್ದೇಶಕರಾಗಿದ್ದಾರೆ. 80ಕ್ಕೂ ಹೆಚ್ಚು ಮಕ್ಕಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಸಂಪನ್ಮೂಲ ವ್ಯಕ್ತಿಗಳಾಗಿ ಚಿನ್ನ ವಿ ಗಂಗೇರ, ರೋಹಿತ್ ಬೈಕಾಡಿ, ಗಣೇಶ ಶೆಟ್ಟಿ, ಕೆ ಎಂ ಹೊಸೇರಿ, ಮನೋಹರ ಮಣಿಪಾಲ, ಬಾಲಕೃಷ್ಣ ಕೆ ಎಂ, ಉತ್ಕಲ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.10: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣಾ ಕಾರ್ಯಕ್ರಮವು ಸಂಘದ ಆಡಳಿತ ಕಚೇರಿಯಲ್ಲಿ ನಡೆಯಿತು. ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಿ ಮಾತನಾಡಿದ ಸಂಘದ ಮಹಾಪೋಷಕರಾದ ಆನಗಳ್ಳಿ ಕರುಣಾಕರ ಹೆಗ್ಡೆ ಮಾತನಾಡಿ ಸಂಘದ ವತಿಯಿಂದ ನೀಡುವ ಸಹಾಯಧನವನ್ನು ಸಮರ್ಪಕವಾಗಿ, ಸರಿಯಾದ ರೀತಿಯಲ್ಲಿ ತಾವು ಬಳಸಿಕೊಳ್ಳಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು , ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಹಿರಿಯ ಉಪಾಧ್ಯಕ್ಷರಾದ ರವಿಶಂಕರ್ ಹೆಗ್ಡೆ ದಬ್ಬಾಡಿ, ಕ್ರೀಡಾ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಉದಯ್ ಶೆಟ್ಟಿ ಹೊಸಂಗಡಿ ಮತ್ತು ಬೇರೆ ಬೇರೆ ಊರುಗಳಿಂದ ಬಂದ ಫಲಾನುಭವಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಭೀಮರಾವ್ ರಾಮ್ಜೀ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ ಹಾಗೂ ಇದಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಕೊಡುಗೆಯನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. ಡಾ.ಅಂಬೇಡ್ಕರ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಸ್ವಾತಂತ್ರ್ಯದ ನಂತರದ ಸುಧಾರಣೆಗಳಲ್ಲಿ ಕೊಡುಗೆ ನೀಡಿದ್ದಾರೆ ಎಂದು ಪತ್ರಕರ್ತ ಬಿ.ರಾಘವೇಂದ್ರ ಪೈ ಹೇಳಿದರು. ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಮತ್ತು ವಿಶ್ವನಾಥ ಯುವಕ ಮಂಡಲ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿ ಶ್ರೀ ಇಂದುಧರ ಸಭಾಭವನದಲ್ಲಿ ಭಾನುವಾರ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಗುರುರಾಜ್ ಕಾರ್ಯಕ್ರಮದ ಅಧ್ಯಕ್ಷತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಗುರುದತ್ ಹೆಗಡೆ ಅವರಿಗೆ ಗೀತಾ ಶಿವರಾಜಕುಮಾರ್ ಅವರು ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪತಿ ನಟ ಶಿವರಾಜಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಇದಕ್ಕೂ ಪೂರ್ವದಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ ಜರುಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 98.79 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 166 ವಿದ್ಯಾರ್ಥಿಗಳ ಪೈಕಿ, 164 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 51 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , 94 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ , 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಮಿತಾ ಡಿ.ಎಚ್ (576), ಸುದರ್ಶನ ಶೆಟ್ಟಿ (571), ಇಶಾ ಭಟ್( 568), ಮಹಾಲಕ್ಷ್ಮಿ (567), ರಜನಿ (566), ಶ್ರೀರಕ್ಷಾ (564) , ಕೋಮಲಾ.ಎನ್ (562), ಸುಬ್ರಹ್ಮಣ್ಯ .ವಿ (558), ದೀಕ್ಷಾ (558), ಆಶ್ರೀತಾ ಎನ್. ಜಿ (558), ನಿಶಾ (554), ಚಂದ್ರಿಕಾ (553), ಪ್ರಥ್ವಿ (552), ಅಂಕಿತಾ (551), ಪ್ರತ್ಯಕ್ಷಾ (550), ಆಕಾಶ್ ಕೆ.ಎಲ್ (549), ಸಹನಾ (545), ಸೃಜನಾ (544), ಪ್ರಣೀತಾ (539), ವಿಕಾಸ್ ಶೆಟ್ಟಿ (538), ಜೀವಿತಾ. ಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬಿಜೂರು ಬವಳಾಡಿ ಕೆಳಗಾಯಾಡಿ ಮನೆ ಸುಮತಿ ಬಿ. ಶೆಟ್ಟಿ (58) ಅವರು ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು ಪತಿ ಭಾಸ್ಕರ್ ಆರ್. ಶೆಟ್ಟಿ, ಸಹೋದರರಾದ ಶೇಖರ್ ಶೆಟ್ಟಿ, ಶಂಕರ್ ಶೆಟ್ಟಿ, ಮಕ್ಕಳಾದ ಸಾಯಿರಾಜ್ ಶೆಟ್ಟಿ ಹಾಗೂ ಶೈಲಶ್ರೀ ಶೆಟ್ಟಿ ಹಾಗೂ ಬಂಧು ಮಿತ್ರರರನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.13 : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಲಟ್ಟ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಆಗದ 6100 ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿ್ಲ್ಲಾಧಿಕಾರಿ ವಿದ್ಯಾಕುಮಾರಿ ಕೆ ರವರು ತಿಳಿಸಿದರು. ಅವರು ಇಂದು ಕಾಪು ತಾಲೂಕಿನ ಕಲ್ಯಾ ಗ್ರಾಮದ ವಯಸ್ಕ ಮತದಾನರ ಮನೆಯಲ್ಲಿ ನಡೆದ ಮತದಾನದ ಪ್ರಕ್ರಿಯನ್ನು ವಿಕ್ಷಿಸಿ ಮತಾನಾಡುತ್ತಿದ್ದರು.‌ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನ ಹಾಗೂ 85 ವರ್ಷ ಮೇಲ್ಪಟ 4474, ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1626 ಸೇರಿದಂತೆ ಒಟ್ಟು 6100 ಮತದಾರರಿಗೆ ಮತದಾನ ಮಾಡಲು ಏಪ್ರಿಲ್ 13 ರಿಂದ 17 ರವರೆಗೆ ಅವಕಾಶ ಕಲ್ಪಿಸಲಾಗುವುದು. ಎಂದರು ಉಡುಪಿ ಯಲ್ಲಿ 1057 ವಯಸ್ಕ ಮತದಾರರು 216 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16 ರವರೆಗೆ, ಕುಂದಾಪುರದಲ್ಲಿ 764 ವಯಸ್ಕ ಮತದಾರರು 197 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ 16, ರವರೆಗೆ, ಕಾಪು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಎಕ್ಸಲೆಂಟ್ ಪಿಯು ಕಾಲೇಜು ವಿಜ್ಞಾನ ವಿಭಾಗದ ಅವಳಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದಲ್ಲದೇ, ಇಬ್ಬರೂ ಪಿಸಿಎಂಬಿ ಕಾಂಬಿನೆಷನಲ್ಲಿ ಒಂದೇ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಶಂಕರನಾರಾಯಣದ ವಿದ್ಯಾರ್ಥಿಗಳಾದ ಉದಿತಾ ಕಾಮತ್ ಎಂ. ಹಾಗೂ ಹರ್ಷಿತ್ ಕಾಮತ್ ಎಂ ಈ ಸಾಧನೆಗೈದ ಅವಳಿ ವಿದ್ಯಾರ್ಥಿಗಳು. ಉದಿತಾ ಶೇ.93.8 ಫಲಿತಾಂಶ ಪಡೆದುಕೊಂಡಿದ್ದರೇ, ಹರ್ಷಿತ್ ಶೇ.93.4 ಫಲಿತಾಂಶ ಪಡೆದುಕೊಂಡಿದ್ದಾರೆ. ಪಿಸಿಎಂಬಿಯಲ್ಲಿ ಇಬ್ಬರೂ 375 ಅಂಕ ಗಳಿಸಿರುವುದು ವಿಶೇಷ. ಶಂಕರನಾರಾಯಣದ ಕಾಮತ್ ಶ್ರೀ ಹರಿ ಮೆಡಿಕಲ್ಸ್ʼನ ಎಂ. ಉದಯ ಕಾಮತ್ ಹಾಗೂ ಎಂ. ಗಾಯತ್ರಿ ಕಾಮತ್ ದಂಪತಿಗಳ ಮಕ್ಕಳಾಗಿರುವ ಅವಳಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ತೋರುತ್ತಲೇ ಬಂದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಸ್ಕೃತಿ-ಸಂಸ್ಕಾರಗಳು ಒಂದು ದಿನದ ಆಚರಣೆಗೆ ಸೀಮಿತವಾಗದೆ, ಬದುಕಿನಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಇನ್ನಷ್ಟು ಸಮೃದ್ಧಗೊಳಿಸಿಕೊಳ್ಳಿ ಎಂದು ಶ್ರೀ ಭವಾನಿ ಆಟೋಮೇಟ್ಸ್ ಸಂಸ್ಥಾಪಕ, ಸಮಾಜಸೇವಕ ಕರುಣಾಕರ ಹೆಗ್ಡೆ ಆನಗಳ್ಳಿ ಹೇಳಿದರು. ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿರುವ ಸಾಂಪ್ರದಾಯಿಕ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ನಮ್ಮ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಅವುಗಳ ಮೌಲ್ಯವನ್ನು ವಿದ್ಯಾರ್ಥಿಗಳು ಅರಿಯುವಂತಾದಾಗ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಎಂದರು. ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು. ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ನಿರೂಪಿಸಿದರು. ಈ ಸಂದರ್ಭ ಸಂಸ್ಕೃತಿ ಶೀರ್ಷಿಕೆಯಡಿಯಲ್ಲಿ ನಡೆಸಿದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಂಐಟಿಯಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಬ್ರಹ್ಮಾಸ್ ಇಂಜಿನಿಯರಿಂಗ್ ಮತ್ತು ಕನ್ಸ್ಟ್ರಕ್ಷನ್ಸ್ ಕಂಪನಿ ಲಿಮಿಟೆಡ್ ಮ್ಯಾನುಫ್ಯಾಕ್ಚರಿಂಗ್ ನಿರ್ದೇಶಕರಾದ ಆತ್ಮಿಕಾ ಅಮೀನ್ ಮಾತನಾಡಿ ಅವರು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಬದಲಾಗುತ್ತಿರುವ ಉದ್ಯಮದ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಸಲಹೆ ನೀಡಿದರು. ಯಾವುದೇ ಸಮಯದಲ್ಲಿ ಸ್ಪರ್ಧಾತ್ಮಕವಾಗಿರಲು ನಿರಂತರ ಕಲಿಕೆಯು ಮುಖ್ಯ ಎಂದರು. ಅವರು ತಮ್ಮದೇ ಆದ ಉದಾಹರಣೆಯನ್ನು ನೀಡುತ್ತಾ ಯಶಸ್ವಿ ಉದ್ಯಮಿಗಳಾಗಲು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು. ಮೂಡ್ಲಕಟ್ಟೆಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿರುವ ಆಡಳಿತ ಮಂಡಳಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ವಿದ್ಯಾರ್ಥಿಗಳು ವಿಭಾಗ ಹಾಗೂ ಸಂಸ್ಥೆ ನೀಡುವ ವಿವಿಧ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ವೇದಿಕೆಯಲ್ಲಿ ಐಎಂಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಎಂಐಟಿಕೆ ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ, ಡೀನ್ ಪ್ಲೇಸ್ಮೆಂಟ್, ಪ್ರೊ.ಅಮೃತಮಲಾ…

Read More