ಬದಲಾಗುತ್ತಿರುವ ಉದ್ಯಮದ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು ಮುಖ್ಯ: ಆತ್ಮಿಕಾ ಅಮೀನ್

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಎಂಐಟಿಯಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು.

Call us

Click Here

ಮುಖ್ಯ ಅತಿಥಿಯಾಗಿದ್ದ ಬ್ರಹ್ಮಾಸ್ ಇಂಜಿನಿಯರಿಂಗ್ ಮತ್ತು ಕನ್ಸ್ಟ್ರಕ್ಷನ್ಸ್ ಕಂಪನಿ ಲಿಮಿಟೆಡ್ ಮ್ಯಾನುಫ್ಯಾಕ್ಚರಿಂಗ್ ನಿರ್ದೇಶಕರಾದ ಆತ್ಮಿಕಾ ಅಮೀನ್ ಮಾತನಾಡಿ ಅವರು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಬದಲಾಗುತ್ತಿರುವ ಉದ್ಯಮದ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಸಲಹೆ ನೀಡಿದರು. ಯಾವುದೇ ಸಮಯದಲ್ಲಿ ಸ್ಪರ್ಧಾತ್ಮಕವಾಗಿರಲು ನಿರಂತರ ಕಲಿಕೆಯು ಮುಖ್ಯ ಎಂದರು.

ಅವರು ತಮ್ಮದೇ ಆದ ಉದಾಹರಣೆಯನ್ನು ನೀಡುತ್ತಾ ಯಶಸ್ವಿ ಉದ್ಯಮಿಗಳಾಗಲು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.

ಮೂಡ್ಲಕಟ್ಟೆಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿರುವ ಆಡಳಿತ ಮಂಡಳಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ವಿದ್ಯಾರ್ಥಿಗಳು ವಿಭಾಗ ಹಾಗೂ ಸಂಸ್ಥೆ ನೀಡುವ ವಿವಿಧ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

Click here

Click here

Click here

Click Here

Call us

Call us

ವೇದಿಕೆಯಲ್ಲಿ ಐಎಂಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಎಂಐಟಿಕೆ ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ, ಡೀನ್ ಪ್ಲೇಸ್ಮೆಂಟ್, ಪ್ರೊ.ಅಮೃತಮಲಾ ಉಪಸ್ಥಿತರಿದ್ದರು.

ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಮುತ್ತುಕುಮಾರ್ ಸ್ವಾಗತಿಸಿದರು. ಕಾವ್ಯ ಮುಖ್ಯ ಅತಿಥಿಯನ್ನು ಪರಿಚಯಿಸಿದರು, ಪ್ರೊ.ತಿಲಕಲಕ್ಷ್ಮಿ ವಂದಿಸಿದರು. ಸುಸ್ಮಿತಾ ಶೇಖರ್ ನಿರ್ವಹಿಸಿದರು.

Leave a Reply

Your email address will not be published. Required fields are marked *

13 − twelve =