Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕು ಮಣಿಪಾಲದಲ್ಲಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಹಾಗೂ ಬೌದ್ಧ ವರ್ಗದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಾತಿಗೆ ನವೀಕರಣ ವಿದ್ಯಾರ್ಥಿಗಳ ಸೀಟು ಹಂಚಿಕೆಯಾಗಿ ಉಳಿಕೆ ಸೀಟುಗಳಿಗೆ ಸ್ಟೇಟ್ ಹಾಸ್ಟೆಲ್ ಪೋರ್ಟಲ್ ತಂತ್ರಾಂಶದ ಮೂಲಕ ಪಿ.ಯು.ಸಿ ಮತ್ತು ಪಿ.ಯು.ಸಿ ಸಮನಾಂತರ ಕೋರ್ಸಿನ ವಿದ್ಯಾರ್ಥಿಗಳಿಂದ ವೆಬ್‌ಸೈಟ್ https://shp.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕಛೇರಿ, ಮಣಿಪಾಲ, ಉಡುಪಿ ದೂ.ಸಂ: 0820-2573596, ಸಹಾಯವಾಣಿ ಸಂಖ್ಯೆ: 8277799990 ಅಥವಾ ಉಡುಪಿ ದೂ.ಸಂಖ್ಯೆ: 0820-2574596, ಕಾರ್ಕಳ ದೂ.ಸಂಖ್ಯೆ: 08258-231101 ಹಾಗೂ ಕುಂದಾಪುರ ದೂ.ಸಂಖ್ಯೆ: 08254-230370 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಮಳೆಯಿಂದ ಆಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸಾಕಷ್ಟು ಮನೆ, ಕೃಷಿ ಭೂಮಿಗಳಿಗೆ ಹಾನಿಯಾಗಿದ್ದು ಪರಿಹಾರಕ್ಕೆ ಸೂಕ್ತಕ್ರಮವಹಿಸಲಾಗುವುದು. ರಸ್ತೆಗಳು ದುರಸ್ತಿಯಾಗಬೇಕಿದ್ದು, ಅದಕ್ಕಾಗಿ ಕ್ರಮವಹಿಸಲಾಗುವುದು. ಸೋಮೇಶ್ವರ ಗುಡ್ಡ ಜರಿತ ಸೇರಿದಂತೆ ಮಳೆಹಾನಿಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅಗತ್ಯವಿರುವಲ್ಲಿ ತಕ್ಷಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಸಂತೃಸ್ಥರಿಗೂ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು. ಈ ವೇಳೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಎಸ್. ಆರ್. ರಶ್ಮಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಪೂಜಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ನಿರಂತರ ಮಳೆಯಿಂದಾಗಿ ಹಾನಿಗೊಳಗಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಶನಿವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಭೇಟಿ ನೀಡಿದರು. ಜಿಲ್ಲೆಯಲ್ಲಿ ಈ ಭಾರಿ ಅಧಿಕ ಮಳೆಯಾಗುತ್ತಿದ್ದು, ಬೈಂದೂರು ತಾಲೂಕಿನಲ್ಲಿಯೂ ಹೆಚ್ಚಿನ ಮಳೆ ಸುರಿದಿದೆ. ಬೈಂದೂರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ದೊಂಬೆ ಸಮೀಪದ ಸೋಮೇಶ್ವರದ ಶೇಡಿಗುಡ್ಡ ಜರಿತಗೊಂಡಿದ್ದು, ಮತ್ತಷ್ಟು ಹಾನಿಯ ಸೂಚನೆ ಇದೆ. ಈ ಭಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಜೆಡಿಮಣ್ಣು ನೀರಿನೊಂದಿಗೆ ಬೆರೆತು ಕುಸಿಯುವ ಸಂಭವ ಜಾಸ್ತಿ ಇರುವುದರಿಂದ ಅಧಿಕ ಜರಿತ ಇರುವ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಟಾರ್ಪಾಲ್‌ ಮುಚ್ಚಿ ಮೇಲಿನ ನೀರು ಜಾರಿಹೋಗುವಂತೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು. ಮಳೆಗಾಲದ ಬಳಿಕ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ ಜಿಲ್ಲಾಧಿಕಾರಿಗಳು, ಗುಡ್ಡ ಕಡಿದು ರಸ್ತೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಕಾನೂನು ಮೀರಿದ್ದರೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಇದೇ ವೇಳೆ ಒತ್ತಿನಣೆ ಪ್ರದೇಶದಲ್ಲಿರುವ ಕಸ ವಿಲೇವಾರಿ ಪ್ರದೇಶ, ಹೇನಬೇರು ತೆರಳುವ ರಸ್ತೆ, ದೊಂಬೆ ಪ್ರದೇಶದಲ್ಲಿ ಉಂಟಾಗಿರುವ ಕಡಲಕೊರೆತ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ:  ಬೆಂಗಳೂರು – ಮಂಗಳೂರು – ಕಾರವಾರ ನಡುವೆ ಭೂಕುಸಿತ ಹಾಗೂ ಹಲವು ರಸ್ತೆಗಳು ಬಂದ್ ಆಗಿರುವ ಕಾರಣ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದು, ಅದಕ್ಕಾಗಿ ಬೆಂಗಳೂರು ಮಂಗಳೂರು ರೈಲಿಗೆ ಲಿಂಕ್‌ ಆಗಿ ಮಡಗಾಂವ್ ಮಂಗಳೂರು ಜಂಕ್ಷನ್ ಮಧ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ಮಂಗಳೂರು ರೈಲಿಗೆ ಮಡಗಾಂವ್ ಮಂಗಳೂರು ಜಂಕ್ಷನ್ ಮದ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಡಗಾಂವ್ ಮಂಗಳೂರು ಜಂಕ್ಷನ್ ವಿಶೇಷ ಲಿಂಕ್‌ ರೈಲಿಗೆ ಉಡುಪಿ, ಬಾರ್ಕೂರು, ಕುಂದಾಪುರ, ಸೇನಾಪುರ, ಬಿಜೂರು, ಬೈಂದೂರು, ಶಿರೂರು, ಭಟ್ಕಳ, ಮುರುಡೇಶ್ವರ ಮೊದಲಾದ ಸ್ಟೇಷನ್‌ಗಳಲ್ಲಿ ನಿಲುಗಡೆ ಇರಲಿದೆ. ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಾವಣೆ, ನೀರು ತುಂಬುವಿಕೆಯಂತ ವಿಳಂಭಧ ಕಾರಣದಿಂದ ಪ್ರತ್ಯೇಕ ಲಿಂಕ್ ರೈಲಿಗಾಗಿ ಮಾಡಲಾಗಿದ್ದ ಸಂಸದರ ಪತ್ರಕ್ಕೆ ರೈಲ್ವೇ ಸಚಿವಾಲಯ ಸ್ಪಂದಿಸಿದೆ. ಇದರಿಂದಾಗಿ ಬೆಂಗಳೂರು ಮಂಗಳೂರು ವಿಶೇಷ ರೈಲು ಬಂದ ಕೆಲವೇ ಹೊತ್ತಲ್ಲಿ ಲಿಂಕ್ ರೈಲು ಉಡುಪಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಜೊತೆಗೆ ಪಠ್ಯೇತರ ಚಟುವಟಿಕೆ ಮಾತ್ರ ಅಲ್ಲ ವಿದ್ಯಾರ್ಥಿಗಳಿಗೆ ಇವತ್ತಿನ ಸಾಮಾಜಿಕವಾದ ಸವಾಲಿನ ಬಗ್ಗೆ ಅರಿವು ಮೂಡಿಸುವಂಥ ಅನೇಕ ಶಿಬಿರಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಿದ್ದೇವೆ. ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ನಶಮುಕ್ತ ಭಾರತ ಈ ವಿಷಯದ ಬಗ್ಗೆ ಮಾಹಿತಿ ಕೊಡಲು ಕೋಟ ಪೊಲೀಸ್ ಠಾಣೆಯ ಪಿ.ಎಸ್.ಐ ಗುರುನಾಥ್ ಬಿ. ಹಾದಿಮನಿ ಅವರು ಮಾಹಿತಿಯನ್ನು ನೀಡಿದರು. ಮಾದಕ ದ್ರವ್ಯದ ವ್ಯಸನದಿಂದ ಯಾವ ರೀತಿ ನಮ್ಮ ದೇಹದ ಮೇಲೆ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಯಾವೆಲ್ಲ ದುಷ್ಪರಿಣಾಮಗಳು ವ್ಯಕ್ತಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಆಗುತ್ತದೆ ಇದರ ಬಗ್ಗೆ ಸುಧೀರ್ಘ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಇವತ್ತಿನ ಯುವಜನತೆ ಮಾದಕ ದ್ರವ್ಯದ ವ್ಯಸನಗಳಿಗೆ ಅಧಿಕವಾಗಿ ಬಲಿಯಾಗುತ್ತಿದ್ದಾರೆ ನಾವು ಇವತ್ತು ವಿದ್ಯಾರ್ಥಿಗಳನ್ನು ಒಬ್ಬ ವೈದ್ಯ, ಇಂಜಿನಿಯರ್, ಕಂಪನಿ ಸೆಕ್ರೆಟರಿ, ಸಿಎ ಇಂಥ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಯೋಜನೆಯ 2024-25ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನ ವಿಶೇಷ ಗ್ರಾಮಸಭೆ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಮಧುಕರ, ಸರಕಾರದ ವಿವಿಧ ಇಲಾಖೆಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಮಾಡಬಹುದು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಕಾಮಗಾರಿಗಳಲ್ಲಾದ ಲೋಪದೋಷಗಳನ್ನು ತಿಳಿದುಕೊಳ್ಳಲು ಹಾಗೂ ಕಾಮಗಾರಿಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರ ಅಹವಾಲು ಆಲಿಸಲು ಈ ವಿಶೇಷ ಗ್ರಾಮಸಭೆ ಸಹಕಾರಿಯಾಗಲಿದೆ ಎಂದರು. ಕುಂದಾಪುರ ಅಮೂಲ್ಯ ಸಾಕ್ಷರತಾ ಕೇಂದ್ರದ ಆಶಾಲತಾ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶಶಿಕಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ, ಗ್ರಾಪಂ ಲೆಕ್ಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಮೇ 2023ರಲ್ಲಿ ನೆಡೆಸಿದ ಸಿಎ ಫೈನಲ್ ಮತ್ತು ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ ಶೆಟ್ಟಿ (333), ನಿಕೋಲಾ ರೋಶನಿ ಡಯಾಸ್ (329) ಅಂಕಗಳೊಂದಿಗೆ ಸಿಎ ಅಂತಿಮ ಪರೀಕ್ಷೆಯ ಎರಡು ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಆದಿತ್ಯ ಆರ್ ಶೆಟ್ಟಿ(194) ಅಂಕಗಳೊಂದಿಗೆ ಸಿಎ ಫೈನಲ್ ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಮಿತಾ ಶೇಟ್ 310 ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಎರಡು ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದುವುದರ ಮೂಲಕ ಸಿಎ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಶ್ರದ್ಧಾ ಬಿ (161), ರಕ್ಷಿತಾ (148), ಪಂಚಮಿ ಕಿಣಿ (146), ಸಂಪ್ರೀತ (124), ಬಂಗೇರ ಶಾಂಭವಿ (120), ರಂಜನ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಿದ್ದ ವಸ್ತ್ರ ಮಳಿಗೆ ಸತ್ಯನಾಥ್ ಸ್ಟೋರ್ಸ್ – ಅಮೃತ ಮಹೋತ್ಸವದ ಪ್ರಯುಕ್ತ ಗ್ರಾಹಕರಿಗೆ ಸೀಮಿತ ಅವಧಿಯ ವಿಶೇಷ ಆಫರ್ ನೀಡಲಾಗಿದೆ. ಒಂದು ಸೀರೆ ಖರೀದಿಸಿದಲ್ಲಿ ಇನ್ನೊಂದು ಸೀರೆಗೆ ಕೇವಲರೂ.75 ಮಾತ್ರ ಪಾವತಿಸುವುದು, ಒಂದು ಶರ್ಟ್ ಖರೀದಿಸಿದಲ್ಲಿ ಇನ್ನೊಂದು ಶರ್ಟಿಗೆ ರೂ.75 ಮಾತ್ರ ಪಾವತಿಸುವ ವಿಶೇಷ ಆಫರ್ ಜುಲೈ 16ರಿಂದ ಆರಂಭಗೊಂಡಿದೆ. ಕುರ್ತಿಸ್ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಆಯ್ದ ಉಡುಗೆಗಳ ಮೇಲೆ ಮಾತ್ರ ಈ ಆಫರ್‌ ಇರಲಿದೆ. ಸಂಸ್ಥೆಯ ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪ ಮಳಿಗೆಯಲ್ಲಿ ಜುಲೈ 16ರಿಂದ ಈ ವಿಶೇಷ ಆಫರ್ ಆರಂಭವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಹಾಗೂ ವಿದ್ಯಾರ್ಥಿ ಸಂಸತ್ ಉದ್ಘಾಟನೆಯನ್ನು ದೀಪ ಪ್ರಜ್ವಲಿಸುವ ಮೂಲಕ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ರಾಜೇಶ್ ನಾಯಕ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರದ್ದೆ, ಶಿಸ್ತು, ಸತತ ಪ್ರಯತ್ನದೊಂದಿಗೆ ಭಾವಿ ರಾಷ್ಟ್ರದ ಭಾಗ್ಯೋದಯ ಶಿಲ್ಪಿಗಳಾಬೇಕು ಜೊತೆಗೆ ಜೀವನದಲ್ಲಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ. ರಾಧಾ ಕೃಷ್ಣ ಶೆಣೈ ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕರಾದ ರಮಾ ಕಾಂತ್ ರೇವಣಕರ್ ಉಪಸ್ಥಿತರಿದ್ದರು. ಸತೀಶ್ ಹೆಮ್ಮಾಡಿ ಅವರಿಂದ ಜಾದು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಾದ ಅಮೂಲ್ಯ ಅತಿಥಿಗಳನ್ನು ಪರಿಚಯಿಸಿದರು, ವೈಷ್ಣವಿ ವಂದಿಸಿ, ಸಂಜನಾ ಸ್ವಾಗತಿಸಿ, ಸಿಂಚನಾ ಕಾರ್ಯಕ್ರಮವನ್ನು ನಿರೂಪಿಸಿದರು.

Read More